ಪಲಾವ್ ಎಂಬ ಫಾಸ್ಟ್ ಫುಡ್!
Team Udayavani, Nov 1, 2020, 4:53 PM IST
ಅರ್ಧ ಗಂಟೆಯಲ್ಲಿ ತಯಾರಿಸಬಹುದಾದ ರುಚಿಕರ ತಿಂಡಿ ಪಲಾವ್. ಮಾರ್ನಿಂಗ್ ಕ್ಲಾಸ್, ಟ್ಯೂಶನ್ ಕಾರಣಕ್ಕೆ ಮಕ್ಕಳು ಬೇಗ ಮನೆ ಬಿಡ್ತಾರೆ ಅನ್ನುವ ಸಂದರ್ಭದಲ್ಲಿ ಮತ್ತು ವಿಶೇಷ ದಿನಗಳಲ್ಲಿ ಫಟಾಫಟ್ ಅಂತ ಮಾಡಬಹುದಾದ ತಿನಿಸು ಇದು. ದೊಡ್ಡವರಿಂದ ಚಿಕ್ಕ ಮಕ್ಕಳು ಸಹ ಇಷ್ಟಪಟ್ಟು ತಿನ್ನುವ ಪಲಾವ್ ನ ವೈವಿಧ್ಯಮಯ ರೆಸಿಪಿಗಳು ಇಲ್ಲಿವೆ.
ಚನ್ನಾ ಪಲಾವ್
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಚನ್ನಾ- 1 ಕಪ್, ಬಾಸುಮತಿ ಅಕ್ಕಿ -1 ಕಪ್, ನೀರು- 2 ಕಪ್, ಉಪ್ಪು ರುಚಿಗೆ, ಕೊತ್ತಂಬರಿ ಸೊಪ್ಪು, ಈರುಳ್ಳಿ -2, ಟೊಮೇಟೊ- 2, ಶುಂಠಿ- ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಜೀರಿಗೆ- 1ಚಮಚ, ಆಮ್‌ಚೂರ್ ಪೌಡರ್- 1 ಚಮಚ, ಅರಿಸಿನ- ಕಾ ಲು ಚಮಚ, ಖಾರದ ಪುಡಿ- 1 ಚಮಚ, ದನಿಯ ಪುಡಿ- ಅರ್ಧ ಚಮಚ, ಜೀರಿಗೆ ಪುಡಿ- ಕಾಲು ಚಮಚ, ಕಸೂರಿ ಮೇತಿ- 1, ತುಪ್ಪ/ ಎಣ್ಣೆ -3 ಚಮಚ, ಪಲಾವ್ ಎಲೆ, ಲವಂಗ, ಚಕ್ಕೆ.
ಮಾಡುವ ವಿಧಾನ
ಚನ್ನಾವನ್ನು ಪ್ರತ್ಯೇಕವಾಗಿ ಬೇಯಿಸಿಕೊಳ್ಳಿ. ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೆನೆಸಿಡಿ. ಕುಕ್ಕರ್‌ನಲ್ಲಿ ತುಪ್ಪ ಹಾಕಿ, ಬಿಸಿ ಮಾಡಿ. ಪಲಾವ್ ಎಲೆ, ಜೀರಿಗೆ, ಲವಂಗ, ಚಕ್ಕೆ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಟೊಮೇಟೊ ಸೇರಿಸಿ ಹುರಿಯಿರಿ. ಮಸಾಲೆ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬಾಡಿಸಿ. ಚನ್ನಾ ಹಾಕಿ ಮಿಶ್ರಣ ಮಾಡಿ. ಬಾಸುಮತಿ ಅಕ್ಕಿ ಹಾಕಿ ಎಲ್ಲ ಪದಾರ್ಥಗಳನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ. ಅನಂತರ ಎರಡು ಕಪ್ ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಎರಡು ವಿಷಲ್ ಆಗುವವರೆಗೆ ಕುಕ್ಕರ್ ಕೂಗಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ.
ಆಲೂ ಮೇತಿ
ಬೇಕಾಗುವ ಸಾಮಗ್ರಿಗಳು
ಬಾಸುಮತಿ ಅಕ್ಕಿ- ಒಂದೂವರೆ ಕಪ್, ಮೆಂತ್ಯೆ ಸೊಪ್ಪು- 1ಕಟ್ಟು, ಈರುಳ್ಳಿ- 2, ಟೊಮೇಟೊ- 3, ಕತ್ತರಿಸಿದ ಆಲೂಗಡ್ಡೆ – 4, ಬಟಾಣಿ- ಅರ್ಧ ಕಪ್, ಜೀರಿಗೆ- 1 ಚಮಚ, ಕಾಳುಮೆಣಸು-10, ಪಲಾವ್ ಎಲೆ- 1, ಏಲಕ್ಕಿ- 2, ಲವಂಗ- 4, ಗರಂ ಮಸಾಲೆ- 1 ಚಮಚ, ಖಾರದ ಪುಡಿ- ಅರ್ಧ ಚಮಚ, ಹಸಿ ಮೆಣಸು-2, ಅರಿಸಿನ- ಅರ್ಧ ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಉಪ್ಪು ರುಚಿಗೆ, ನೀರು- 3 ಕಪ್, ತುಪ್ಪ- 4 ಚಮಚ ಮಾಡುವ ವಿಧಾನ ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಪಲಾವ್ ಎಲೆ, ಜೀರಿಗೆ, ಲವಂಗ, ಏಲಕ್ಕಿ, ಕಾಳುಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಆಲೂಗಡ್ಡೆ, ಈರುಳ್ಳಿಯನ್ನು ಕೆಂಬಣ್ಣ ಬರುವವರೆಗೆ ಹುರಿದು ಹಾಕಿ. (ಬೇಕಿದ್ದರೆ ಪಲಾವ್ ಬೆಂದ ಮೇಲೆ ಆಲೂಗಡ್ಡೆಯನ್ನು ಸೇರಿಸಬಹುದು) ಟೊಮೇಟೊ ಸೇರಿಸಿ ಚೆನ್ನಾಗಿ ಹುರಿಯಿರಿ. ಬಟಾಣಿ ಮತ್ತು ಹುರಿದ ಆಲೂಗಡ್ಡೆ, ಮೆಂತ್ಯೆ ಸೊಪ್ಪನ್ನು ಹಾಕಿ ಬಾಡಿಸಿ. ಅನಂತರ ಗರಂ ಮಸಾಲೆ, ಅರಿಸಿನ, ಖಾರದಪುಡಿ ಹಾಕಿ ಮಿಶ್ರಣ ಮಾಡಿ. ತೊಳೆದು, ನೆನೆಸಿದ ಬಾಸುಮತಿ ಅಕ್ಕಿಯನ್ನು ಮಸಾಲೆ ಪದಾರ್ಥಗಳ ಜತೆಗೆ ಸೇರಿಸಿ ಒಂದು ನಿಮಿಷ ಹುರಿಯಿರಿ. ಮೂರು ಕಪ್ ನೀರು ಹಾಕಿ, ಉಪ್ಪನ್ನು ಸೇರಿಸಿ, ಎರಡು ವಿಷಲ್ ಆಗುವವರೆಗೆ ಕುಕ್ಕರ್ ಕೂಗಿಸಿ. ಆಲೂಗಡ್ಡೆ ಬದಲು ಪನ್ನೀರ್ ಕೂಡ ಹಾಕಬಹುದು.
ಬಟಾಣಿ ಪಲಾವ್
ಬೇಕಾಗುವ ಸಾಮಗ್ರಿಗಳು
ನೆನೆಸಿದ ಬಾಸುಮತಿ ಅಕ್ಕಿ- ಒಂದೂವರೆ ಕಪ್, ಬಟಾಣಿ- 1 ಕಪ್, ಕತ್ತರಿಸಿದ ಈರುಳ್ಳಿ- 2, ಟೊಮೇಟೊ-2, ಪಲಾವ್ ಎಲೆ, ಗೋಡಂಬಿ, ಕಾಳುಮೆಣಸು-10, ಚಕ್ಕೆ, ಜೀರಿಗೆ -1, ಲವಂಗ- 4, ಗರಂಮಸಾಲೆ- ಅರ್ಧ ಚಮಚ, ಖಾರದ ಪುಡಿ- ಅರ್ಧ ಚಮಚ, ಅರಿಸಿನ ಪುಡಿ- ಅರ್ಧ ಚಮಚ, ಉಪ್ಪು, ತುಪ್ಪ- 4 ಚಮಚ, ಹಸಿಮೆಣಸು- 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ನೀರು -3 ಕಪ್.
ಮಾಡುವ ವಿಧಾನ
ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಜೀರಿಗೆ, ಪಲಾವ್ ಎಲೆ, ಚಕ್ಕೆ, ಕಾಳುಮೆಣಸು, ಲವಂಗ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಅನಂತರ ಈರುಳ್ಳಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿದು, ಟೊಮೇಟೊ ಸೇರಿಸಿ ಬಾಡಿಸಿ ಬ ಳಿಕ ಬಟಾಣಿ ಸೇರಿಸಿ. ಖಾರದ ಪುಡಿ, ಅರಿಸಿನ ಪುಡಿ, ಗರಂ ಮಸಾಲೆ ಜತೆಗೆ ಅಕ್ಕಿ ಹಾಕಿ ಅರ್ಧ ನಿಮಿಷ ಹುರಿಯಿರಿ. ಅದಕ್ಕೆ ನೀರು ಸೇರಿಸಿ. ಉಪ್ಪು ಹಾಕಿ, ಎರಡು ವಿಷಲ್ ಕೂಗಿಸಿದರೆ ಬಟಾಣಿ ಪಲಾವ್ ರೆಡಿ.
ವೆಜ್ ಪಲಾವ್
ಬೇಕಾಗುವ ಸಾಮಗ್ರಿಗಳು
ನೆನೆಸಿದ ಬಾಸುಮತಿ ಅಕ್ಕಿ- ಒಂದೂವರೆ ಕಪ್, ತುಪ್ಪ – 3 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಹಾಲು- 1 ಕಪ್, ನೀರು- 2 ಕಪ್, ಉಪ್ಪು, ಕಾಳುಮೆಣಸು- 10, ಗೋಡಂಬಿ, ಪಲಾವ್ ಎಲೆ, ಲವಂಗ, ಏಲಕ್ಕಿ, ಚಕ್ಕೆ, ಈರುಳ್ಳಿ- 2, ಹಸಿಮೆಣಸು- 3, ಕ್ಯಾರೆಟ್- 1, ಬೀನ್ಸ್ – 5, ಆಲೂಗಡ್ಡೆ- 2, ಬಟಾಣಿ- ಅರ್ಧ ಕಪ್, ಕ್ಯಾಪ್ಸಿಕಂ- 1 (ತರಕಾರಿಗಳನ್ನು ಒಂದೇ ರೀತಿಯಲ್ಲಿ ಹೆಚ್ಚಿಕೊಳ್ಳಿ).
ಮಾಡುವ ವಿಧಾನ
ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಪಲಾವ್ ಎಲೆ, ಲವಂಗ, ಏಲಕ್ಕಿ, ಕಾಳುಮೆಣಸು ಹಾಕಿ. ಗೋಡಂಬಿ ಸೇರಿಸಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಈರುಳ್ಳಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ತರಕಾರಿಗಳನ್ನು ಸೇರಿಸಿ ಎರಡು ನಿಮಿಷ ಹುರಿದು, ಅಕ್ಕಿ ಹಾಕಿ, ಸ್ವಲ್ಪ ಹುರಿಯಿರಿ. ನಂತರ ಉಪ್ಪು, ನೀರು ಮತ್ತು ಹಾಲನ್ನು ಸೇರಿಸಿ ಕುಕರ್ ನಲ್ಲಿ ಮೂರು ವಿಶಿಲ್ ಕೂಗಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…
International: New Orleans-ದಾಳಿ ನಡೆಸಿದಾತ ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.