‘ಇಂದು ನಾಳೆಯಲ್ಲ’ : ಬದುಕು ಬೇರೆನೇ ಇದೆ ಮತ್ತು ಮಜಬೂತಾಗಿದೆ
ಅಕಾರಣದ ಭಯದಿಂದಲೇ ಬದುಕು ನಾಶ..!
ಶ್ರೀರಾಜ್ ವಕ್ವಾಡಿ, May 21, 2021, 9:45 AM IST
ಮನುಷ್ಯನ ಜೀವನ ಸಾಹಸಮಯ ಹಾಗೂ ಹೋರಾಟಮಯ. ಹುಟ್ಟಿದಾಗಿನಿಂದ ಸಾಯುವ ತನಕ ಕ್ಷಣ ಕ್ಷಣಕ್ಕೂ ಎಷ್ಟೋ ಭಯಕ್ಕೆ ಸಿಲುಕಿ ಬದುಕುವ ಮನುಷ್ಯ ತಾನು ತಿಳಿದುಕೊಂಡಂತೆ ಅವಶ್ಯಕವಾದ ಭಯಗಳನ್ನು ಬಿಟ್ಟು ಆರಾಮವಾದ ಬದುಕನ್ನು ಬದುಕಬೇಕೆಂದರೇ ಧೈರ್ಯವನ್ನು ತಾಳಬೇಕು.
ಬದುಕಿನಲ್ಲಿ ಇಂದು ನಾಳೆಯಾಗಿರುವುದಿಲ್ಲವೆನ್ನುವುದನ್ನು ಮೊದಲು ಮನುಷ್ಯ ಅರಿತುಕೊಳ್ಳಬೇಕು. ಆಗ ಮಾತ್ರ ಬದುಕಿನಲ್ಲಿ ಸುಖ ನೆಮ್ಮದಿಯ ಬದುಕನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ತುಂಬಾ ಮಾನಸಿಕ ಘರ್ಷಣೆಯನ್ನು ಅನುಭವಿಸಿ , ವಿದ್ಯಾರ್ಥಿ ದೆಸೆಯಿಂದಲೇ ವೃತ್ತಿ ಜೀವನದ ಬಗ್ಗೆ ಏನೋ ಶೃದ್ಧೆ ಇಟ್ಟುಕೊಂಡು ಏನೋ ಮಹತ್ತರವಾದದ್ದನ್ನು ಸಾಧಿಸಬೇಕೆಂದುಕೊಂಡು ಅನವಶ್ಯಕ ಭಯಗಳಿಗೆ ಗುರಿಯಾಗಿ ಜೀವನದಲ್ಲಿ ತುಂಬಾ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವವರು ನಮ್ಮೊಂದಿಗೆ ನಮ್ಮ ಸುತ್ತ ಮುತ್ತಾ ಅದೆಷ್ಟೋ ಮಂದಿ ನಮ್ಮ ಸುತ್ತ ಮುತ್ತಲಲ್ಲೇ ಇದ್ದಾರೆ.
ನಮ್ಮ ಬದುಕಿನಲ್ಲಿ ನಮಗೆ ಯಾವಾಗಲೂ ಸಾಮಾನ್ಯವಾಗಿ ಉಂಟಾಗುವ ಅನೇಕ ವಿಧಗಳ ಭಯಗಳ ಬಗ್ಗೆ ಸಾಮನ್ಯ ಅರಿವಿದ್ದರೂ ನಾವು ಆ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೇವೆ. ಹಿಂದೇಟು ಹಾಕುತ್ತೇವೆ. ಇಂತಹ ಅಕಾರಣದ ಬಗ್ಗೆ ಇರುವ ಭಯವನ್ನು ಫೋಬಿಯಾ ಎಂದು ಕರೆಯುತ್ತೇವೆ.
ಕೆಲವು ವಿಷಯಗಳನ್ನು ಆಲೋಚಿಸಬೇಕೆಂದರೆ ಭಯವಾಗುತ್ತದೆ. ಕಾರಿನಲ್ಲಿ ಹೋಗುತ್ತಾ ಅಪಘಾತದ ಬಗ್ಗೆ ಆಲೋಚನೆ ಮಾಡಿದರೇ ಆಗ ಸಹಜವಾಗಿ ಭಯವಾಗುತ್ತದೆ. ಕತ್ತಲೆಯಲ್ಲಿ ಭಯ ಸಹಜ. ಆದರೇ, ನಡೆಯುವ ದಾರಿಯಲ್ಲಿ ಬೆಳಕಿದೆ ಅಂತಂದುಕೊಂಡರೇ, ಆ ದಾರಿಯನ್ನು ಸಹಜವಾಗಿ ಯಾವ ಭಯ ಭೀತಿಯಿಲ್ಲದೇ ಆ ಕತ್ತಲೆಯ ದಾರಿಯನ್ನು ನಿರ್ಭೀತಿಯಿಂದ ದಾಟುವುದಕ್ಕೆ ಸಾಧ್ಯವಿದೆ. ಇಲ್ಲವಾದಲ್ಲಿ ಆ ಕತ್ತಲಲ್ಲೇ ನಾವು ಭಯದಿಂದಲೇ ದಾರಿಯನ್ನು ದೂಡಬೇಕಾಗುತ್ತದೆ. ಭಯ ಎನ್ನುವ ಕಾನ್ಸೆಪ್ಟ್ ನಮ್ಮ ಮನಸ್ಸಿನ ಹೊರಾತಾಗಿ ಬೇರೆಲ್ಲೂ ಇಲ್ಲ ಎನ್ನುವುದು ವಾಸ್ತವಾಂಶ.
ಸಾಧಾರಣ ಸ್ಥಾಯಿಯನ್ನು ಮೀರಿ ವಿಪರೀತವಾಗಿ ಪರಿಣಮಿಸಿದಾಗ ಭಯವು ಪ್ರಮಾದಕರ. ಅಂತಹ ಭಯಗಳನ್ನೆಲ್ಲವನ್ನು ಫೋಬಿಯಾ ಎನ್ನುತ್ತಾರೆ. ಕೆಲವರಿಗೆ ನೀರೆಂದರೇ ಭಯ, ಇನ್ನೂ ಕೆಲವರಿಗೆ ರಕ್ತವೆಂದರೇ ಭಯ, ಕೆಲವರಿಗೆ ಅಶುಭ್ರತೆ ಎಂದರೆ ಭಯ. ಈ ವಿಧವಾದ ಭಯಗಳು ಸಾಧಾರಣವಾಗಿ ಬಾಲ್ಯದಿಂದಲೇ ಆರಂಭವಾಗಿ ದೊಡ್ಡವರಾದ ಮೇಲೆ ಮುಂದುವರಿಯುತ್ತದೆ. ಇದಕ್ಕೆ ಒಂದರ್ಥದಲ್ಲಿ ಭಯ ಎಂದು ಕರೆಯುವ ಬದಲಾಗಿ ಫೋಬಿಯಾ ಎಂದು ಕರೆದರೇ ಒಳ್ಳೆಯದು.
ಯಾರಿಗೆ ಬದುಕಿನ ಬಗ್ಗೆ ಸ್ಪಷ್ಟತೆ ಹಾಗೂ ನಿಖರತೆ ಇಲ್ಲವೋ ಅವರಲ್ಲಿ ಬದುಕಿನ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಸಹಜವಾಗಿ ಭಯ ಇದ್ದೇ ಇರುತ್ತದೆ. ಇದು ಒಂದು ರೀತಿಯಲ್ಲಿ ಕೊಲು ಕೊಟ್ಟು ಪೆಟ್ಟು ತಿಂದ ಹಾಗೆ. ಇಲ್ಲದ ಭಯವನ್ನು ಹುಟ್ಟಿಸಿಕೊಳ್ಳುವುದು. ಮತ್ತು ಇಂತಹ ಭಯಗಳು ಒಬ್ಬ ವ್ಯಕ್ತಿಯಲ್ಲಿ ಹುಟ್ಟಿಕೊಳ್ಳುವುದು ಆ ವ್ಯಕ್ತಿ ಬೆಳೆದು ಬಂದ ದಾರಿಯೂ ಕೂಡ ಪ್ರಭಾವ ಬೀರುತ್ತದೆ ಎನ್ನುವುದು ಕೂಡ ಸತ್ಯ.
ಈ ಭಯವಲ್ಲದ ಭಯದ ಕಾರಣದಿಂದಲೇ ಎಷ್ಟೋ ಮಂದಿ ತಮ್ಮ ಬದುಕಿನ ಅನೇಕ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಾರೆ. ಬದುಕಿನ ಅರ್ಧ ಭಾಗವನ್ನೇ ಅವರು ಈ ರೀತಿಯಲ್ಲೇ ಕಳೆಯುವುದರಿಂದ ಬದುಕಿನ ಹಲವು ಮಜಲುಗಳನ್ನು ದುಃಖದಿಂದಲೇ ಕಳೆಯುತ್ತಾರೆ.
ಇದರಿಂದ ಹೊರ ಬರುವುದಕ್ಕೆ ಪ್ರಧಾನ ಕೆಲಸವೆಂದರೇ, ಬದುಕನ್ನು ಸಹಜವಾಗಿ ಸ್ವೀಕರಿಸುವುದಷ್ಟೇ ಒಂದು ಮಾರ್ಗ ಬಿಟ್ಟರೇ ಬೇರೇನೂ ಇಲ್ಲ.
ಬದುಕು ಬಂದ ಹಾಗೆ ಬದುಕಿ, ಭವಿಷ್ಯದ ಬಗ್ಗೆ ಚಿಂತಿಸದೇ, ಕೊರಗದೇ ಬದುಕುವುದನ್ನು ಕಲಿಯುವುದರಿಂದ ಯಾವ ಭಯ ಭೀತಿಗಳಿಲ್ಲದೆ ಬದುಕಲು ಸಾಧ್ಯವಾಗುತ್ತದೆ. ಎಲ್ಲಿಯ ತನಕ ನಾವು ನಮ್ಮ ಇಂದಿನ ಸಮಸ್ಯೆಯನ್ನು ನಾಳೆಯ ಸಮಸ್ಯೆ ಎಂದು ತಿಳಿದುಕೊಂಡಿರುತ್ತೇವೋ ಅಲ್ಲಿಯ ತನಕ ಈ ಭಯ ತಪ್ಪಿದ್ದಲ್ಲ.
ಇರುವಷ್ಟು ದಿನದ ಬದುಕು ನಿಮ್ಮದು ಎಂದು ಬದುಕಿದರೇ, ಯಾವ ಭಯವೂ ಇರದು. ನೆನಪಿರಲಿ, ನೀವಂದುಕೊಂಡದ್ದಕ್ಕಿಂತ ಬದುಕು ಬೇರೆನೇ ಇದೆ ಮತ್ತು ಮಜಬೂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.