ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರದಿಂದ ಆರೋಗ್ಯ ವೃದ್ಧಿ

ಮಣ್ಣಿನ ಪಾತ್ರೆಗಳು 16 ಕ್ಕಿಂತ ಹೆಚ್ಚು ನೈಸರ್ಗಿಕ ಖನಿಜಗಳನ್ನು ಹೊಂದಿದ್ದು, ಅದು ಆರೋಗ್ಯಕ್ಕೆ ಪ್ರಯೋಜನಕಾರಿ

Team Udayavani, Oct 31, 2022, 5:57 PM IST

web exclusive food soil vessel

ಹಿಂದಿನ ಕಾಲದಲ್ಲಿ ಅಡುಗೆ ಮಾಡಲು ಮಣ್ಣಿನ ಪಾತ್ರೆಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಇದು ಆಹಾರ ರುಚಿ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗುತ್ತದೆ. ಮಣ್ಣಿನ ಪಾತ್ರೆಗಳನ್ನು ಬಳಸುವುದರ ಹಿಂದೆ ಅನೇಕ ಆರೋಗ್ಯಕರ ಲಾಭವಿದೆ. ನಮಗೇ ಗೊತ್ತಿಲ್ಲದೆ ಅದೆಷ್ಟೋ ಆರೋಗ್ಯ ಸಮಸ್ಯೆಗಳು ಕೇವಲ ಮಣ್ಣಿನ ಪಾತ್ರೆ ಬಳಸುವುದರಿಂದ ಗುಣವಾಗುತ್ತದೆ. ಆದರೆ ಕಾಲ ಕಳೆದಂತೆ ಮಣ್ಣಿನ ಪಾತ್ರೆಗಳು ವಿನಾಶದ ಅಂಚಿನಲ್ಲಿವೆ.

ಇಂದಿನ ಯುಗದಲ್ಲಿ ಮಾರುಕಟ್ಟೆಯಲ್ಲಿ ವಿವಿಧ ಶೈಲಿಯ ಪಾತ್ರೆಗಳು ಲಭ್ಯ. ಸ್ಟೀಲ್‌, ನಾನ್ ಸ್ಟಿಕ್, ಫೈಬರ್‌, ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವವರ ಸಂಖ್ಯೆಯೆ ಹೆಚ್ಚು. ಮಣ್ಣಿನ ಪಾತ್ರೆಗಳೊಂದಿಗೆ ತಾಮ್ರ, ಅಲ್ಯುಮಿನಿಯಂ ಪಾತ್ರೆಗಳು ಕೂಡಾ ಇಂದು ಮೂಲೆ ಸೇರಿವೆ.

ಮಣ್ಣಿನ ಪಾತ್ರೆಗಳ ಉಪಯೋಗದಿಂದ ಹಲವಾರು ಆರೋಗ್ಯ ಪ್ರಯೋಜನ ಹೊಂದಿದೆ. ಮಣ್ಣಿನ ಪಾತ್ರೆಗಳಲ್ಲಿ ಭೂಮಿಯ ಅಂಶವಿದೆ. ಹಾಗಾಗಿ ಸಣ್ಣ ಉರಿಯಲ್ಲಿ ಮಾಡುವ ಅಡುಗೆ ಆ ಎಲ್ಲಾ ಖನಿಜಾಂಶಗಳನ್ನೂ ಅಡುಗೆಗೆ ಸೇರಿಸುತ್ತದೆ. ಆಯುರ್ವೇದದ ಪ್ರಕಾರ ನಿಧಾನಕ್ಕೆ ಬೆಂದ ಆಹಾರಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದು ಮಣ್ಣಿನ ಪಾತ್ರೆಯಲ್ಲಿ ಬೆಂದರೆ ಮತ್ತೂ ಉತ್ತಮ ಎನ್ನಲಾಗುತ್ತದೆ.

ಕೊಬ್ಬಿನಾಂಶ ಕಡಿಮೆ:

ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಎಣ್ಣೆ ಅಥವಾ ನೀರನ್ನು ಹೆಚ್ಚು ಬಳಸಬೇಕಾಗಿಲ್ಲ. ಯಾಕೆಂದರೆ ಮಣ್ಣಿನ ಪಾತ್ರೆಗಳು ಬಿಸಿಯಿರುವ ತನಕ ಹಬೆಯಾಡುತ್ತಿರುತ್ತದೆ. ಎಣ್ಣೆ ಬಳಕೆ ಕಡಿಮೆ ಮಾಡುವ ಕಾರಣ ಆಹಾರವು ಆರೋಗ್ಯವಾಗಿರುತ್ತದೆ.

ಹೆಚ್ಚಿನ ಪೋಷಕಾಂಶ:

ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆಯಿಂದ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತದೆ. ಮಣ್ಣಿನ ಪಾತ್ರೆಗಳನ್ನು ತಯಾರಿಸಲು ಬಳಸುವ ಮಣ್ಣಿನಲ್ಲಿ ಕೆಲವೊಂದು ಒಳ್ಳೆಯ ಗುಣಮಟ್ಟದ ಪೋಷಕಾಂಶಗಳಾದ ವಿಟಮಿನ್ ಬಿ12, ಕ್ಯಾಲ್ಸಿಯಂ, ಫೋಸ್ಪರಸ್, ಕಬ್ಬಿನಾಂಶ ಮತ್ತು ಮೆಗ್ನಿಶಿಯಂ ಇದೆ. ಹಾಗಾಗಿ ಬೇರೆ ಪಾತ್ರೆಗಳಿಗಿಂತ ಮಣ್ಣಿನ ಪಾತ್ರೆ ಆಯ್ಕೆ ಒಳ್ಳೆಯದು ಎಂಬುದು ಸಲಹೆ.

ಮಣ್ಣಿನ ಪಾತ್ರೆಗಳು ದೀರ್ಘಕಾಲದ ತನಕ ಆಹಾರ ಬಿಸಿಯಾಗಿರುವಂತೆ ಮಾಡುತ್ತದೆ. ಇದರಿಂದಾಗಿ ಆಹಾರದಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ನಾಶವಾಗದೆ ಹಾಗೆ ಉಳಿಯುತ್ತದೆ. ದೀರ್ಘಕಾಲದ ತನಕ ಆಹಾರದಲ್ಲಿರುವ ಬಿಸಿ ಹಾಗೇ ಉಳಿಯುವ ಕಾರಣದಿಂದಾಗಿ ಪದೇ ಪದೇ ಆಹಾರ ಬಿಸಿ ಮಾಡಬೇಕೆಂದಿರುವುದಿಲ್ಲ.

ಕೆಲವೊಂದು ಆಹಾರ ಪದಾರ್ಥಗಳು ಕೆಲವೊಂದು ನಿರ್ದಿಷ್ಟ ರೋಗಗಳನ್ನು ಗುಣಪಡಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಅದಕ್ಕೆ ಸೂಕ್ತವಾದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ಏನೇ ಇರಲಿ ಆದರೆ ಮಣ್ಣಿನ ಪಾತ್ರೆಯಲ್ಲಿಆಹಾರ ತಯಾರಿಸುವಾಗ ಬರುವಂತಹ ಹಬೆಯನ್ನು ಕೂಡ ಮಣ್ಣಿನ ಪಾತ್ರೆಗಳು ಹೀರಿಕೊಳ್ಳುವುದು. ಈ ಕಾರಣದಿಂದಾಗಿ ಆಹಾರಕ್ಕೆ ಮತ್ತಷ್ಟು ಪೋಷಕಾಂಶಗಳು ಸಿಗುತ್ತದೆ. ಇತರ ಪಾತ್ರೆಗಳಿಗಿಂತ ಇದು ತುಂಬಾ ಆರೋಗ್ಯಕಾರಿ ಎಂದು ಹೇಳಲಾಗುತ್ತದೆ.

ಆಹಾರದ ಪೌಷ್ಠಿಕಾಂಶದ ಮೌಲ್ಯವು 100%ನಷ್ಟು ಹೆಚ್ಚುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಸ್ಟೀಲ್, ಅಲ್ಯುಮೀನಿಯಂ ಇತರ ಪಾತ್ರೆಗಳಲ್ಲಿ, ಪೌಷ್ಠಿಕಾಂಶದ ಮೌಲ್ಯವು 7-13% ರಷ್ಟು ಮಾತ್ರ ಉಳಿದಿರುತ್ತದೆ ಎನ್ನಲಾಗುತ್ತದೆ.

ಖನಿಜಾಂಶ ಹೆಚ್ಚಿಸುತ್ತದೆ:

ಮಣ್ಣಿನ ಪಾತ್ರೆಗಳು 16 ಕ್ಕಿಂತ ಹೆಚ್ಚು ನೈಸರ್ಗಿಕ ಖನಿಜಗಳನ್ನು ಹೊಂದಿದ್ದು, ಅದು ಆರೋಗ್ಯಕ್ಕೆ ಪ್ರಯೋಜನಕಾರಿ.  ಪ್ರಸ್ತುತ ಜನರ ಆರೋಗ್ಯ ಸಮಸ್ಯೆಯ ಕಾರಣಗಳಲ್ಲಿ ಖನಿಜ ಅಂಶದ ಕೊರತೆ ಕೂಡ ಒಂದು ಕಾರಣ.

ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದರಿಂದ ಪೋಷಕಾಂಶಗಳಾದ ಕ್ಯಾಲ್ಸಿಯಂ, ರಂಜಕ, ಮೆಗ್ನೀಷಿಯಂ, ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸೇರಲು ಸಹಾಯ ಮಾಡುತ್ತದೆ. ಆದ್ದರಿಂದ ಮಣ್ಣಿನ ಮಡಕೆಗಳಲ್ಲಿ ಆಹಾರವನ್ನು ತಯಾರಿಸುವುದು ಅದರ ಖನಿಜಾಂಶದಿಂದ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಇದು ಬ್ರಾಂಕೈಟಿಸ್, ಆಸ್ತಮಾ ಮತ್ತು ಕ್ಯಾನ್ಸರ್ ನಂತಹ ವಿವಿಧ ರೋಗಗಳ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

ಬ್ಯಾಕ್ಟೀರಿಯಾ ನಾಶ:

ಕೆಲವು ವಿಧದ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಜೇಡಿಮಣ್ಣು ಅಡ್ಡವಾಗುತ್ತದೆ. ಅದರ ಪಾತ್ರೆಗಳು ಬ್ಯಾಕ್ಟೀರಿಯಾಗಳಿಗೆ ತಡೆಗೋಡೆಯಾಗಿ ಆಹಾರ ಹಾಳು ಮಾಡುವುದನ್ನು ತಡೆಯುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಸೇರದಂತೆ ತಡೆದು, ಆರೋಗ್ಯ ಕಾಪಾಡುತ್ತದೆ.

ಆಹಾರ ಹೆಚ್ಚು ರುಚಿಕರ:

ಮಣ್ಣಿನ ಪಾತ್ರೆಯಲ್ಲಿ ಆಹಾರ ತಯಾರಿಸುವುದರಿಂದ ಆಹಾರ ಹೆಚ್ಚು ರುಚಿಕರವಾಗಿರುತ್ತದೆ. ಮಣ್ಣಿನ ನೈಸರ್ಗಿಕ ಸುವಾಸನೆ ಮತ್ತು ನಿಧಾನ ಅಡುಗೆ ಪ್ರಕ್ರಿಯೆಯು ಇತರ ಅಡುಗೆ ತಯಾರಿಸುವ ಪಾತ್ರೆಗಳಿಗೆ ಹೋಲಿಸಿದರೆ ಆಹಾರದಲ್ಲಿ 10 ಪಟ್ಟು ಉತ್ತಮ ರುಚಿ ನೀಡುತ್ತದೆ ಎಂಬುದು ಹಿರಿಯರ ಅಭಿಪ್ರಾಯ.ಮಾರುಕಟ್ಟೆಯಲ್ಲಿ ಮಣ್ಣಿ ಪಾತ್ರೆ ಖರೀದಿಸುವಾಗ ಪರೀಕ್ಷಿಸಿ ಪಡೆದುಕೊಳ್ಳಿ. ಸೆರಾಮಿಕ್ ಕೋಟಿಂಗ್ ಮಾಡಿರುವ ಮಣ್ಣಿನ ಪಾತ್ರೆಗಳನ್ನು ಮಾತ್ರ ಬಳಸಬಾರದು.

*ಕಾವ್ಯ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.