Easy & Healthy Recipes; ಆಹಾ ಈ ರೀತಿ ಬದನೆಕಾಯಿ ಪೋಡಿ ಮಾಡಿದ್ರೆ ಏನ್ ರುಚಿ ಗೊತ್ತಾ!
ಶ್ರೀರಾಮ್ ನಾಯಕ್, Feb 9, 2024, 5:45 PM IST
ಕೆಲವರಿಗೆ ಬದನೆಕಾಯಿ ಅಂದ್ರೆ ಅಚ್ಚುಮೆಚ್ಚು. ಅದರಲ್ಲೂ ಬದನೆಕಾಯಿಯಿಂದ ಮಾಡುವ ಸಾಂಬಾರ್, ಪಲ್ಯ, ಖಾದ್ಯವಂತೂ ಸಖತ್ ಸ್ವಾದವನ್ನು ನೀಡುತ್ತದೆ.ಬದನೆಕಾಯಿಯಲ್ಲಿ ಪೋಷಕಾಂಶ, ವಿಟಮಿನ್, ಖನಿಜಾಂಶಗಳು ಮತ್ತು ನಾರಿನ ಅಂಶ ಯಥೇಚ್ಛವಾಗಿರುವುದರಿಂದ ಮನುಷ್ಯನ ಆರೋಗ್ಯಕ್ಕೆ ಇದು ತುಂಬಾನೇ ಸಹಕಾರಿ.
ಬದನೆಕಾಯಿಗಳಲ್ಲಿ ಹಲವಾರು ರೀತಿಯ ಬಣ್ಣಗಳು ಮತ್ತು ಗಾತ್ರಗಳು ಇರುವುದನ್ನು ನಾವು ನೀವು ಗಮನಿಸಿರುತ್ತೇವೆ. ನೇರಳೆ ಬದನೆಕಾಯಿ, ಹಸಿರು ಬದನೆಕಾಯಿ,ಮಟ್ಟುಗುಳ್ಳ ಮತ್ತು ಕಪ್ಪು ಬದನೆಕಾಯಿಗಳು ಗಾತ್ರದಲ್ಲೂ ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತವೆ.
ಹಾಗಾದ್ರೆ ಇಂದು ನಾವು ನಿಮಗೆ ವಿಭಿನ್ನ ಟೇಸ್ಟ್‌ನ ಬದನೆಕಾಯಿ ಪೋಡಿ(ಬಜ್ಜಿ)ವನ್ನು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಿರಿ.
ಬದನೆಕಾಯಿ ಪೋಡಿ (ಬಜ್ಜಿ)
ಬೇಕಾಗುವ ಸಾಮಗ್ರಿಗಳು
ಬದನೆಕಾಯಿ-3,ಕಡ್ಲೆಹಿಟ್ಟು-ಅರ್ಧ ಕಪ್, ಅಕ್ಕಿಹಿಟ್ಟು-2ಚಮಚ, ಹಿಂಗಿನ ನೀರು-1ಚಮಚ, ಮೆಣಸಿನ ಪುಡಿ-1ಚಮಚ, ಅಡುಗೆ ಸೋಡಾ-ಸ್ವಲ್ಪ, ಎಣ್ಣೆ-ಕರಿಯಲು, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಬದನೆಕಾಯಿಯನ್ನು ಚೆನ್ನಾಗಿ ತೊಳೆದು ತೆಳ್ಳಗೆ ಹೆಚ್ಚಿ ,ಸ್ವಲ್ಪ ಉಪ್ಪು ಹಾಕಿ ನೀರಿನಲ್ಲಿ 5ರಿಂದ 10ನಿಮಿಷಗಳ ಕಾಲ ನೀರಿನಲ್ಲಿ ಹಾಕಿರಿ. ನಂತನ ಒಂದು ಬೌಲ್‌ಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಹಿಂಗಿನ ನೀರು,ಮೆಣಸಿನಪುಡಿ,ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ತದನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಹೆಚ್ಚಿಟ್ಟುಕೊಂಡ ಬದನೆಕಾಯಿಯನ್ನು ಮೊದಲೇ ಮಾಡಿಟ್ಟ ಹಿಟ್ಟಿನ ಮಿಶ್ರಣಕ್ಕೆ ಮುಳುಗಿಸಿ ಎಣ್ಣೆಗೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿದರೆ ಬದನೆಕಾಯಿ ಪೋಡಿ(ಬಜ್ಜಿ) ಸವಿಯಲು ಸಿದ್ಧ.
-ಶ್ರೀರಾಮ್ ಜಿ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
ಪೊಂಗಲ್ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್ ಆಗಲಿರುವ ಚಿತ್ರಗಳ ಪಟ್ಟಿ
Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್ ಸಿಂಗ್?
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.