ಕಳೆದ 10 ವರ್ಷಗಳಿಂದ ಇವರ ಪ್ರತಿ ಸಂಡೇಯೂ ಪ್ರಾಣಿ-ಪಕ್ಷಿಗಳ ಹಸಿವು ನೀಗಿಸಲು ಮೀಸಲು.!

Team Udayavani, Jun 10, 2021, 9:10 AM IST

ಕಳೆದ 10 ವರ್ಷಗಳಿಂದ ಇವರ ಪ್ರತಿ ಸಂಡೇಯೂ ಪ್ರಾಣಿ-ಪಕ್ಷಿಗಳ ಹಸಿವು ನೀಗಿಸಲು ಮೀಸಲು.!

ಬದುಕನ್ನು ನಮ್ಮಗಾಗಿಯೇ ಬದುಕಿಸಿಕೊಳ್ಲುವುದು,ಬಳಸಿಕೊಳ್ಳುವುದು ಹುಟ್ಟು ಜೀವಿಯ ಮೂಲ ಗುರಿ. ನಾವು ಬದಕುಬೇಕು ಇನ್ನೊಬ್ಬರನ್ನು ಬದಕಲು ಬಿಡಬೇಕು. ನಮ್ಮಿಂದಾಗುವಷ್ಟು ಸಹಾಯ,ಸಹಕಾರ,ಸಲಹೆಯನ್ನು ಇನ್ನೊಬ್ಬರ ಜೀವನಕ್ಕೆ ನೀಡಬೇಕೆನ್ನುವವರು ಕೈ ಲೆಕ್ಕಕ್ಕೆ ಸಿಗುವಷ್ಟು ಮಂದಿ ಮಾತ್ರ.

ಇನ್ನೊಂದು ಜೀವಿಯ ಹಸಿವು ಹಾಗೂ ದಾಹ ನೀಗಿಸುವ ಮನಸ್ಸುವುಳ್ಳ ವ್ಯಕ್ತಿಗಳು,ವ್ಯಕ್ತಿತ್ವಗಳು,ಸಂಘ ಸಂಸ್ಥೆಗಳು ಅಲ್ಲಲ್ಲಿ ಕಾಣಸಿಗುತ್ತದೆ. ಇಲ್ಲೊಬ್ಬರು ಪ್ರಾಣಿ- ಪಕ್ಷಿಗಳ ಹಸಿವನ್ನು ನೀಗಿಸುವ ಕೆಲಸವನ್ನು ಕಳೆದ 10 ವರ್ಷದಿಂದ ಮಾಡುತ್ತಾ ಬರುತ್ತಿದ್ದಾರೆ ಅವರೇ ಆಂಧ್ರದ ಕಡಪದ ನಿವಾಸಿ ಶೇಕ್ ಬಾಷಾ ಮೊಹಿಯುದ್ದೀನ್.

ಮೊಹಿಯುದ್ದೀನ್ ಅವರದು, ಮಧ್ಯಮ ವರ್ಗದ ಜೀವನ, ಕುಟುಂಬದ ಜವಾಬ್ದಾರಿ ನಿಭಾಯಿಸಲು, ಮನೆಯವರನ್ನು ನೋಡಿಕೊಂಡು ನೆಮ್ಮದಿಯಾಗಿರಲು ಪೇಟೆಯಲ್ಲಿ ಒಂದು ಜಿಮ್ ಬಿಟ್ಟರೆ ಹೇಳಿಕೊಳ್ಳುವಷ್ಟು ಅದ್ಧೂರಿ ಆಸ್ತಿಗಳಿಲ್ಲ.

ಅದು 2011 ಸಮಯ ಮೊಹಿಯುದ್ದೀನ್ ಸಿದ್ದವತಂ ಅರಣ್ಯ ಪ್ರದೇಶದಿಂದ ಸಾಗುತ್ತಿರುವಾಗ, ಅಲ್ಲೊಂದಿಷ್ಟು ಕೋತಿಗಳ ಗುಂಪು ನೀರಿಗಾಗಿ ಯಾರೋ ಬಿಸಾಡಿದ ಬಾಟಲಿನಲ್ಲಿದ್ದ ಹನಿಗಾಗಿ ಕಚ್ಚಾಟ ನಡೆಸುವುದನ್ನು ಗಮನಿಸುತ್ತಾರೆ. ತನ್ನ ಬಳಿಯಿದ್ದ ಬಾಟಲಿಯನ್ನು ಕೋತಿಗಳತ್ತ ಬಿಸಾಡಿದಾಗ, ಕೋತಿಗಳು ತಾ ಮುಂದು ನೀ ಮುಂದು ಎಂಬಂತೆ ನೀರಿಗಾಗಿ ಹಾತೊರೆಯುತ್ತವೆ. ಈ ದೃಶ್ಯ ಮೊಹಿಯುದ್ದೀನ್ ಅವರ ಮನಸ್ಸಿನಲ್ಲಿ ಇವುಗಳ ದಾಹ ನೀಗಿಸಲು ಏನಾದರೂ ಮಾಡಬೇಕೆನ್ನುವ ಯೋಚನೆಯನ್ನು ಹುಟ್ಟು ಹಾಕುತ್ತದೆ. ಅದೇ ದಿನ ಮೊಹಿಯುದ್ದೀನ್ ನದಿಯೊಂದರಿಂದ ನೀರನ್ನು ತಂದು ಕೋತಿಗಳಿಗೆ ನೀಡುತ್ತಾರೆ.

ಮುಂದಿನ ಭಾನುವಾರ ಆಟೋ ರಿಕ್ಷಾದಲ್ಲಿ ನೀರಿನ ಕ್ಯಾನ್ ಗಳನ್ನು ತಂದು ಕೋತಿಗಳ ಮುಂದೆ ಇಡುತ್ತಾರೆ. ಕೋತಿಗಳಿಗಾಗಿ ಬಾಳೆ ಹಣ್ಣು ಅದರೊಂದಿಗೆ ಆಹಾರವನ್ನು ತರುತ್ತಾರೆ. ವಾರ ಮುಗಿದ ಬಳಿಕ ಮುಂದಿನ ವಾರ ಮತ್ತೆ ಅದೇ ಮಾದರಿಯನ್ನು ಮೊಹಿಯುದ್ದೀನ್ ಮುಂದುವರೆಸುತ್ತಾರೆ. ಎಲ್ಲಿಯವರೆಗೆ ಅಂದರೆ ಭಾನುವಾರ ಬಂತೆಂದರೆ ಸಾಕು ಕೋತಿಗಳು ಬೇಗ ಎದ್ದು ಗುಂಪುಗೂಡಿ ಮೊಹಿಯುದ್ದೀನ್ ತರುವ ಆಹಾರಕ್ಕಾಗಿ ಕಾಯುತ್ತವೆ.

ಮೊಹಿಯುದ್ದೀನ್ ಗೆ ಈ ಕೆಲಸ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಪ್ರತಿವಾರ ಪ್ರಾಣಿಗಳ ಜತೆ ಒಡನಾಟ ಹೆಚ್ಚುತ್ತದೆ. ರಸ್ತೆ ಬದಿ ಬಿಡಾಡಿ ಹಸುಗಳಿಗೆ ಹುಲ್ಲು, ಹಣ್ಣನ್ನು ನೀಡಲು ಶುರು ಮಾಡುತ್ತಾರೆ.  ಪ್ರಾಣಿ – ಪಕ್ಷಿಗಳಿಗಾಗಿ ಭಾನುವಾರದ ದಿನ ಮುಂಜಾನೆ ಬೇಗ ಎದ್ದು ಮಾರುಕಟ್ಟೆಗೆ ಹೋಗಿ ತರಕಾರಿ, ಹಣ್ಣು ಹಂಪಲನ್ನು ತಂದು ಭಕರಪೇಟೆ, ಸಿದ್ದವತಂ, ಅಟ್ಲೂರ್, ರಾಪುರು, ರಾಮಪುರಂ, ಗ್ವಾವಾಲಾ ಚೆರುವು ಘಾಟ್ ನ ಅರಣ್ಯ ಪ್ರದೇಶಕ್ಕೆ ಹೋಗಿ ಅವುಗಳನ್ನು ತನ್ನ ಪ್ರೀತಿಯ ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಾರೆ.

ಹಸುಗಳು, ಕೋತಿಗಳು, ಜಿಂಕೆ, ಅಳಿಲುಗಳು, ನಾಯಿಗಳು, ಬೆಕ್ಕುಗಳು, ಪಾರಿವಾಳಗಳು, ಗಿಳಿಗಳು, ಕಾಗೆಗಳು, ಗುಬ್ಬಚ್ಚಿಗಳಿಗೆ ಮೊಹಿಯುದ್ದೀನ್ ಅವರು ಸ್ನೇಹಿತ. ಪ್ರತಿ ಸಂಡೇಯೂ ಅವರ ಭೇಟಿಗೆ ಪ್ರಾಣಿ-ಪಕ್ಷಿಗಳು ಕಾಯುತ್ತಾ ಇರುತ್ತವೆ.

ಜಿಮ್ ಸೆಂಟರ್ ನ್ನು ನಿಭಾಯಿಸಿಕೊಂಡಿರುವ ಮೊಹಿಯುದ್ದೀನ್ ಅವರಿಗೆ ಕುಟುಂಬದ ಸಹಕಾರ ಈ ಕೆಲಸಕ್ಕಿದೆಯಂತೆ. ಲಾಕ್ ಡೌನ್ ಹಾಗೂ ಕೋವಿಡ್ ಸಂದರ್ಭದಲ್ಲಿಯೂ, ಚಳಿ,ಮಳೆ ಎನ್ನದೇ ಇದುವರೆಗೂ, ಕಳೆದ 10 ವರ್ಷಗಳಿಂದ ಮೊಹಿಯುದ್ದೀನ್ ಪ್ರಾಣಿ- ಪಕ್ಷಿಗಳಿಗೆ ಆಹಾರ ನೀಡಲು ಮರೆತಿಲ್ಲ. ಪೊಲೀಸರು ಕೂಡ ಇವರ ಸೇವೆಗೆ ಕೈಜೋಡಿಸಿ ಲಾಕ್ ಡೌನ್ ಸಮಯದಲ್ಲಿ ಸಹಕರಿಸಿದ್ದಾರೆ.

-ಸುಹಾನ್ ಶೇಕ್

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

prashanth-Kishore

Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

6

Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?

4-lemon-web

Health benefits: ನಿಂಬೆಹಣ್ಣಿನಿಂದ ಹಲವು ಆರೋಗ್ಯ ಪ್ರಯೋಜನಗಳು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.