![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
ವಿಷ್ಣುದಾಸ್ ಪಾಟೀಲ್, Jan 29, 2025, 12:46 PM IST
2025 ರ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು(ಬುಧವಾರ, ಜ29) ಭೀಕರ ಕಾಲ್ತುಳಿತ ಸಂಭವಿಸಿದ್ದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಆಗಮಿಸಿದ ಹಲವರು ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದಾರೆ. ಕಹಿ ಘಟನೆ ವೇಳೆ 1954 ರ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಮತ್ತೆ ನೆನಪಿಗೆ ಬಂದಿದೆ.
ಕುಂಭ ಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಎಂದು ಪರಿಗಣಿಸಲಾಗಿದ್ದು, ಈ ಹಿಂದೆಯೂ ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ ಅನೇಕ ಕಾಲ್ತುಳಿತಗಳಿಗೆ ಸಾಕ್ಷಿಯಾಗಿದೆ.
1954 ರಲ್ಲಿ ನಡೆದದ್ದೇನು?
ಸ್ವಾತಂತ್ರ್ಯದ ನಂತರ ನಡೆದ ಮೊದಲ 1954 ರ ಕುಂಭಮೇಳ ಭಾರತಕ್ಕೆ ಒಂದು ಹೆಗ್ಗುರುತಾಗಿತ್ತು , ಆದರೆ ಅಂದು ನಡೆದ ದುರಂತ ಈಗಲೂ ನೆನಪಿನಲ್ಲಿ ಉಳಿದುಕೊಂಡಿದೆ. 1954, ಫೆಬ್ರವರಿ 3 ರಂದು, ಪ್ರಯಾಗರಾಜ್(ಅಂದು ಅಲಹಾಬಾದ್) ಮೌನಿ ಅಮವಾಸ್ಯೆಯ ಪುಣ್ಯ ದಿನದಂದು ಪವಿತ್ರ ಸ್ನಾನ ಮಾಡಲೆಂದು ಹಲವಾರು ಭಕ್ತರು ನೆರೆದಿದ್ದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು, ಅನೇಕರು ನದಿಯಲ್ಲಿ ಮುಳುಗಿದ್ದರು. ಸುಮಾರು 800 ಮಂದಿ ಪ್ರಾಣ ಕಳೆದುಕೊಂಡಿದ್ದರು.
1986 ರಲ್ಲೂ ನಡೆದಿತ್ತು ದುರಂತ
1986 ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಕನಿಷ್ಠ 200 ಜನರು ಪ್ರಾಣ ಕಳೆದುಕೊಂಡಿದ್ದರು. ಆಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ವೀರ್ ಬಹದ್ದೂರ್ ಸಿಂಗ್ ಅವರು ಹರಿದ್ವಾರಕ್ಕೆ ವಿವಿಧ ರಾಜ್ಯಗಳ ಹಲವಾರು ಮುಖ್ಯಮಂತ್ರಿಗಳು ಮತ್ತು ಸಂಸದರೊಂದಿಗೆ ಆಗಮಿಸಿದಾಗ ಅವ್ಯವಸ್ಥೆಯಿಂದಾಗಿ ದುರಂತ ಸಂಭವಿಸಿತ್ತು. ಭದ್ರತಾ ಸಿಬಂದಿಗಳು ಸಾಮಾನ್ಯ ಜನರನ್ನು ನದಿ ದಡಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದ್ದರಿಂದ,ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನರು ನೂಕು ನುಗ್ಗಲು ಉಂಟು ಮಾಡಿದ್ದರಿಂದ ಪರಿಷ್ಟಿತಿ ಪ್ರಕ್ಷುಬ್ಧವಾಗಿ ಅನಿಯಂತ್ರಿತವಾಗಿ ಸಾವು ನೋವುಗಳಿಗೆ ಕಾರಣವಾಯಿತು.
2003 ರಲ್ಲೂ ಮತ್ತೆ ಕಾಲ್ತುಳಿತ
ಮಹಾರಾಷ್ಟ್ರದ ನಾಸಿಕ್‌ನಲ್ಲಿ 2003 ರಲ್ಲಿ ನಡೆದ ಕುಂಭಮೇಳದಲ್ಲಿ ಪವಿತ್ರ ಸ್ನಾನಕ್ಕಾಗಿ ಸಾವಿರಾರು ಯಾತ್ರಾರ್ಥಿಗಳು ಗೋದಾವರಿ ನದಿಯಲ್ಲಿ ಜಮಾಯಿಸಿದಾಗ ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ ಮಹಿಳೆಯರು ಸೇರಿದಂತೆ ಕನಿಷ್ಠ 39 ಜನರು ಪುಣ್ಯ ಸ್ಥಳದಲ್ಲಿ ಇಹಲೋಕದ ಯಾತ್ರೆ ಮುಗಿಸಿದ್ದರು. 100 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.
2013 ರಲ್ಲೂ ರೈಲು ನಿಲ್ದಾಣದಲ್ಲಿ ಅವಘಡ
2013 ರಂದು ಫೆಬ್ರವರಿ 10 ರಂದು ಅಲಹಾಬಾದ್ ರೈಲು ನಿಲ್ದಾಣದಲ್ಲಿ ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಗೊಂದಲ ಸೃಷ್ಟಿಯಾಗಿ ಕಾಲ್ತುಳಿತ ಸಂಭವಿಸಿತ್ತು, ದುರಂತದಲ್ಲಿ 42 ಮಂದಿ ಪ್ರಾಣ ಕಳೆದುಕೊಂಡಿದ್ದು, 45 ಮಂದಿ ಗಾಯಗೊಂಡಿದ್ದರು.
45 ಕೋಟಿ ಸಂಖ್ಯೆ ಮೀರಲಿದೆಯೇ ಈ ಬಾರಿ?
ಈ ಬಾರಿ ಮಹಾ ಕುಂಭ ನಡೆಯುತ್ತಿರುವ ಕಾರಣ 45 ಕೋಟಿಗೂ ಹೆಚ್ಚು ಜನರನ್ನು ಮೊದಲೇ ನಿರೀಕ್ಷಿಸಲಾಗಿತ್ತು. ಮಹಾಕುಂಭಕ್ಕೆ ಉತ್ತರ ಪ್ರದೇಶ ಸರಕಾರ ಸಾಕಷ್ಟು ಪೂರ್ವ ತಯಾರಿ ನಡೆಸಿ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಅಲ್ಲಲ್ಲಿ ಸಣ್ಣ ಘಟನೆ ಹೊರತು ಪಡಿಸಿದರೆ, ಕುಂಭ ಆರಂಭವಾದ ಒಂದೆರಡು ದಿನಗಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿ ಶಾಮಕ ದಳದ ಸಿಬಂದಿಗಳು ಸಕಾಲಿಕ ಕಾರ್ಯಾಚರಣೆ ನಡೆಸಿ ತತ್ ಕ್ಷಣ ಬೆಂಕಿಯನ್ನು ನಿಯಂತ್ರಿಸಿದ್ದರು. ಅದೃಷ್ಟವಶಾತ್ ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿರಲಿಲ್ಲ. ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಅವರೇ ಭೇಟಿ ನೀಡಿ ಪರಿಶೀಲಿಸಿದ್ದರು.
ಆಡಳಿತಕ್ಕೆ ಸಾಕಷ್ಟು ಸವಾಲು
ಈಗಾಗಲೇ ದೇಶ, ವಿದೇಶಗಳಿಂದ ಭಾರಿ ಸಂಖ್ಯೆಯ ಜನರು ಕುಂಭ ಮೇಳಕ್ಕೆಂದು ಆಗಮಿಸುತ್ತಿದ್ದು, ಜತೆಯಲ್ಲಿ ಕಾಶಿಯಾತ್ರೆ ಮತ್ತು ಅಯೋಧ್ಯೆ ರಾಮ ಮಂದಿರದ ಯಾತ್ರೆಯನ್ನೂ ನಡೆಸುತ್ತಿದ್ದಾರೆ. ಮೂರೂ ಕಡೆಗಳಲ್ಲಿ ಭಾರಿ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು ಸುವ್ಯವಸ್ಥೆಗಳನ್ನು ಇನ್ನಷ್ಟು ಒದಗಿಸುವ ಸವಾಲು ಉತ್ತರಪ್ರದೇಶದ ಸರ್ಕಾರಕ್ಕಿದೆ.
ಯೋಗಿ ಆದಿತ್ಯನಾಥ್ ಅವರು ಈ ಬಾರಿಯ ಮಹಾಕುಂಭವನ್ನು ಯಶಸ್ವಿಯಾಗಿ ನಡೆಸಲು ಸ್ವತಃ ನೇತೃತ್ವ ವಹಿಸಿಕೊಂಡು ಕೆಲಸ ಮಾಡುತ್ತಿದ್ದರು. ಅಧಿಕಾರಿಗಳು, ಭದ್ರತಾ ಸಿಬಂದಿಗಳೊಂದಿಗೆ ದಿನನಿತ್ಯವೂ ಮಾಹಿತಿ ಪಡೆದುಕೊಳ್ಳುತ್ತಿದ್ದರು.
ಈಗಾಗಲೇ ಗಣ್ಯಾತಿಗಣ್ಯರು ಆಗಮಿಸಿ ಪವಿತ್ರ ಸ್ನಾನ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೂ ಆಗಮಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಪ್ರಧಾನಿ ಆಗಮಿಸುವ ವೇಳೆ ವಿಶೇಷ ಭದ್ರತೆ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಜೀವಿತದಲ್ಲಿ ಒಮ್ಮೆ ಮಾತ್ರ ಸಿಗುವ ಮಹಾಕುಂಭಕ್ಕೆ ಅನಾರೋಗ್ಯ ಪೀಡಿತರು,ಮಕ್ಕಳೊಂದಿಗೆ ಮಹಿಳೆಯರು, ವೃದ್ಧರೂ ಆಗಮಿಸಿದ್ದು, ನಿಯಮಗಳು ಇನ್ನಷ್ಟು ಬಿಗಿ ಮಾಡಿದ್ದೇ ಆದಲ್ಲಿ ಇನ್ನಷ್ಟು ಪರದಾಡಬೇಕಾಗುವುದು ಎಲ್ಲರಿಗೂ ಅನಿವಾರ್ಯವಾಗಲಿದೆ.
Mahakumbh Mela-No Traffic jam;ಯುವಕರ ಸಾಹಸಯಾತ್ರೆ-ಗಂಗಾನದಿ ಮೂಲಕ ಕುಂಭಮೇಳಕ್ಕೆ ಆಗಮನ!
Mahakumbha Mela: ದೇಶದ ಬಹುತೇಕ ರೈಲು ನಿಲ್ದಾಣಗಳು ರಶ್
Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!
Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್ ಯಾದವ್
Maha Kumbh: ಕುಂಭಮೇಳದ ಸೆಕ್ಟರ್ 18, 19ರಲ್ಲಿ ಭಾರೀ ಅಗ್ನಿ ಅನಾಹುತ!
Katapadi: ಮುಕ್ಕಾಲು ಎಕರೆಯಲ್ಲಿ 8 ಟನ್ ಸೌತೆ, ಅಂಗಳದಿಂದಲೇ ಮಾರಾಟ!
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
You seem to have an Ad Blocker on.
To continue reading, please turn it off or whitelist Udayavani.