ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Team Udayavani, May 4, 2024, 5:00 PM IST
ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಇಂದು ಬಾಲಿವುಡ್‌ನಲ್ಲಿ ದೊಡ್ಡ ಹೆಸರು. ಆದರೆ ಅವರಿಂದು ಎಷ್ಟೇ ದೊಡ್ಡಮಟ್ಟದಲ್ಲಿ ಬೆಳೆದರೂ ಅವರ ಆರಂಭಿಕ ದಿನಗಳು ಅಷ್ಟು ಸುಲಭದ್ದಾಗಿರಲಿಲ್ಲ. ಇಂದು ಈ ನಟರ ಸಿನಿಮಾಗಳು ಬಂದರೆ ಥಿಯೇಟರ್ ನಲ್ಲಿ ಕೋಟಿ ಕೋಟಿ ಗಳಿಸುತ್ತದೆ.
ಈ ಸ್ಟಾರ್ ನಟರು ಪಡೆದುಕೊಂಡ ಮೊದಲ ಸಂಪಾದನೆ ಎಷ್ಟು ಎನ್ನುವುದರ ಬಗ್ಗೆ ಇಲ್ಲಿದೆ ಒಂದು ವರದಿ.
ಅಮಿತಾಭ್ ಬಚ್ಚನ್: ಬಾಲಿವುಡ್ ಸಿನಿರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್ ನೇರವಾಗಿ ಸಿನಿಮಾರಂಗಕ್ಕೆ ಬಂದವರಲ್ಲ. ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಅವರು ಪಟ್ಟ ಸಂಕಷ್ಟ ಒಂದೆರೆಡಲ್ಲ. ಕೋಲ್ಕತ್ತಾದಲ್ಲಿ1960 ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರು ಬ್ರಿಟಿಷ್ ಮ್ಯಾನೇಜಿಂಗ್ ಏಜೆನ್ಸಿಯ ಕಾರ್ಯನಿರ್ವಾಹಕರಾಗಿ ಕೆಲಸವನ್ನು ಆರಂಭಿಸಿದ್ದರು. ಈ ಹಣದಲ್ಲಿ ಅವರು ಒಂದು ಕೋಣೆಯಲ್ಲಿ ಏಳು ಮಂದಿಯೊಂದಿಗೆ ಇರುತ್ತಿದ್ದರು.
ಇಂದು ಅಮಿತಾಭ್ ಅವರಿಗೆ ವಯಸ್ಸು 80 ದಾಟಿದರೂ ಬಿಡುವಿಲ್ಲದೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪಂಕಜ್ ತ್ರಿಪಾಠಿ: ಬಾಲಿವುಡ್ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿರುವ ಪಂಕಜ್ ತ್ರಿಪಾಠಿ ಅವರ ಅಭಿನಯಕ್ಕೆ ಇಂದು ಪ್ರತ್ಯೇಕ ಪ್ರೇಕ್ಷಕರ ವರ್ಗವೇ ಇದೆ. ಯಾವ ಪಾತ್ರ ಕೊಟ್ಟರೂ ಅದನ್ನು ಸಲೀಸಾಗಿ ಮಾಡುವ ಪಂಕಜ್ ಅವರ ಆರಂಭಿಕ ದಿನಗಳ ನಟನಾ ವೃತ್ತಿ ಪ್ರಾರಂಭವಾಗುವುದು ಕಿರುತೆರೆಯಲ್ಲಿ. ಕಿರುತೆರೆಯಲ್ಲಿ ಅವರಿಗೆ 1700 ರೂಪಾಯಿ ಸಂಭಾವನೆ ಸಿಗುತ್ತಿತ್ತು. ಇದು ಅವರ ಮೊದಲ ಸಂಪಾದನೆ ಆಗಿತ್ತು.
ಇರ್ಫಾನ್ ಖಾನ್: ದಿವಂಗತ ನಟ ಇರ್ಫಾನ್ ಖಾನ್ ನಟನೆ ಕೌಶಲ್ಯ ಆರಂಭವಾದದ್ದು ಹೈಸ್ಕೂಲ್ ದಿನಗಳಲ್ಲಿ. ಆ ಸಮಯದಲ್ಲಿ ಅವರ ಪ್ರತಿ ನಟನೆಗೆ ಅವರಿಗೆ 25 ರೂಪಾಯಿ ಸಿಗುತ್ತಿತ್ತು. ಇದಾದ ಬಳಿಕ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿನ ಪ್ರವೇಶದಿಂದಾಗಿ ನಾಟಕ ಹಾಗೂ ಇತರೆ ನಟನಾ ಕಾರ್ಯಕ್ರಮದಿಂದ 300 ರೂಪಾಯಿ ಸಿಗುತ್ತಿತ್ತು.
ಸಲ್ಮಾನ್ ಖಾನ್: ಬಾಲಿವುಡ್ ಸ್ಟಾರ್ ಗಳಲ್ಲಿ ಕೋಟಿ ಕುಳ ಆಗಿರುವ ಸಲ್ಮಾನ್ ಖಾನ್ ಇಂದು ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಅವರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತರೂ ಆರಾಮವಾಗಿ 100 ಕೋಟಿ ಬಾಚಿಕೊಂಡು ಹೋಗುತ್ತದೆ. ಅವರ ಸಿನಿಮಾಗಳಿಗೆ ಇಂದಿಗೂ ಬೇಡಿಕೆಯಿದೆ. ಇಂದು ಕೋಟಿ ಕೋಟಿ ಗಳಿಸುವ ಅವರು, ಮೊದಲ ಸಂಪಾದನೆ ಆಗಿ ಗಳಿಸಿದ್ದು ಕೇವಲ 75 ರೂಪಾಯಿಯನ್ನು ಮಾತ್ರ.
ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ವೃತ್ತಿಯನ್ನು ಆರಂಭಿಸಿದ ಸಲ್ಮಾನ್, ತಾಜ್ ಹೊಟೇಲ್ ವೊಂದರ ಕಾರ್ಯಕ್ರಮದಲ್ಲಿನ ಪ್ರದರ್ಶನಕ್ಕಾಗಿ 75 ರೂಪಾಯಿಯನ್ನು ಪಡೆದಿದ್ದರು. ಇದು ಅವರ ಮೊದಲ ಸಂಪಾದನೆ ಆಗಿತ್ತು.
ಶಾರುಖ್ ಖಾನ್: ಕಿಂಗ್ ಖಾನ್ ಎಂದೇ ತನ್ನ ಸಿನಿಮಾಗಳಿಂದ ಖ್ಯಾತಿ ಆಗಿರುವ ಶಾರುಖ್ ಖಾನ್ ಇಂದು ಬಾಲಿವುಡ್ ಸಿನಿರಂಗಗ ದೊಡ್ಡ ಹೆಸರುಗಳಲ್ಲಿ ಒಂದು. ಅವರ ಸಿನಿಮಾಗಳು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಎಂದರೆ ತಪ್ಪಾಗದು. ಇತ್ತೀಚೆಗಿನ ದಿನಗಳಲ್ಲಿ ಮಾತ್ರವಲ್ಲದೆ ಕಿಂಗ್ ಆಫ್ ರೊಮ್ಯಾನ್ಸ್ ಎಂದೇ ಆರಂಭಿಕ ದಿನಗಳಲ್ಲೇ ಶಾರುಖ್ ಖ್ಯಾತಿ ಆಗಿದ್ದಾರೆ.
ಶಾರುಖ್ ಖಾನ್ ಇಂದು ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಆದರೆ ಅವರ ಮೊದಲ ಸಂಪಾದನೆ ಎಷ್ಟು ಗೊತ್ತಾ? ಅವರ ಮೊದಲ ಸಂಪಾದನೆ ಕೇವಲ 50 ರೂಪಾಯಿ ಮಾತ್ರ. ಶಾರುಖ್ ಖಾನ್ ಸಣ್ಣವರಿದ್ದಾಗ ಅವರು ದಿಗ್ಗಜ ಗಾಯಕ ಪಂಕಜ್ ಉಧಾಸ್ ಅವರ ಗಾಯನ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಬಂದ ಅತಿಥಿಗಳಿಗೆ ಸೀಟ್ ತೋರಿಸಿ ಅವರನ್ನು ಅಲ್ಲಿ ಕೂರುವಂತೆ ಹೇಳುವ ಕೆಲಸವೊಂದನ್ನು ಮಾಡಿದ್ದರು. ಇದಕ್ಕೆ ಕಾರ್ಯಕ್ರಮ ಮುಗಿದ ಬಳಿಕ ಪಂಕಜ್ ಉಧಾಸ್ ಅವರು ಶಾರುಖ್ ಖಾನ್ ಅವರಿಗೆ 50 ರೂಪಾಯಿ ನೀಡಿದ್ದರು. ಇದು ಅವರ ಮೊದಲ ಸಂಪಾದನೆ ಆಗಿತ್ತು ಎಂದು ಶಾರುಖ್ 2017 ರಲ್ಲಿ ತನ್ನ ಸಿನಿಮಾ ಪ್ರಚಾರದ ವೇಳೆ ಬಹಿರಂಗವಾಗಿ ಹೇಳಿದ್ದರು.
ಅಕ್ಷಯ್ ಕುಮಾರ್: ಕಿಲಾಡಿ ಅಕ್ಕಿಯಂದೇ ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳುವ ಅಕ್ಷಯ್ ಕುಮಾರ್. ಬಾಲಿವುಡ್ ನ ಖ್ಯಾತ ನಟರಲ್ಲಿ ಒಬ್ಬರು. ಇಂದು ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ತಕ್ಕಮಟ್ಟಿಗಿನ ಗಳಿಕೆಯನ್ನು ಕಾಣುತ್ತದೆ. ಅಕ್ಷಯ್ ಕುಮಾರ್ ಮೊದಲ ಸಂಪಾನೆ ಮಾಡಿದ್ದು ಸಿನಿಮಾದಿಂದ ಅಲ್ಲ. ಸಿನಿಮಾಕ್ಕೆ ಬರುವ ಮುನ್ನ ಅವರು ಬ್ಯಾಂಕಾಕ್ ನಲ್ಲಿ ಚೆಫ್ ಹಾಗೂ ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ 1500 ರೂಪಾಯಿ ಸಂಬಳ ಸಿಗುತ್ತಿತ್ತು.
ಪ್ರಿಯಾಂಕ ಚೋಪ್ರಾ: ಭಾರತದ ಖ್ಯಾತ ನಟಿ, ಇಂದು ಗ್ಲೋಬಲ್ ಐಕಾನ್ ಎಂದೇ ಕರೆಯಲ್ಪಡುವ ಪ್ರಿಯಾಂಕ ಚೋಪ್ರಾ. 2000 ಇಸವಿಯಲ್ಲಿ ಮಿಸ್ ವರ್ಲ್ಡ್ ಆಗಿ ಜಾಗತಿಕವಾಗಿ ಸುದ್ದಿ ಆದವರು. ಇಂದು ಪ್ರಿಯಾಂಕ ಹಾಲಿವುಡ್ ನಲ್ಲಿ ತನ್ನ ನಟನೆ ಮೂಲಕ ಮಿಂಚಿದ್ದಾರೆ. ತಮ್ಮ ಕೆಲಸಕ್ಕಾಗಿ ಅವರು 5000 ರೂಪಾಯಿಯ ಚೆಕ್ ಪಡೆದುಕೊಂಡಿದ್ದರು. ಇದು ಅವರ ಮೊದಲ ಸಂಪಾದನೆ ಆಗಿತ್ತು.
ರಣ್ಬೀರ್ ಕಪೂರ್: ಚಾಕ್ಲೇಟ್ ಬಾಯ್ ಆಗಿ ಬಿಟೌನ್‌ಗೆ ಎಂಟ್ರಿ ಆದ ರಣ್ಭೀರ್ ಕಪೂರ್ ಇಂದು ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಿನಿಮಾಗಳು ಇಂದು ಕೋಟಿ ಗಳಿಸುತ್ತವೆ. ಸಿನಿಮಾ ಕುಟುಂಬದ ಹಿನ್ನೆಲೆಯಲ್ಲಿ ರಣ್ಬೀರ್ ತನ್ನ ತಂದೆ ರಿಷಿ ಕಪೂರ್ ಅವರ ʼಪ್ರೇಮ್ ಗ್ರಂಥ್ʼ ಸಿನಿಮಾದಲ್ಲಿ ಕೆಲಸ ಮಾಡಿದ್ದಕ್ಕಾಗಿ 250 ರೂಪಾಯಿಯನ್ನು ಪಡೆದುಕೊಂಡಿದ್ದರು. ಸಿನಿಮಾರಂಗದಲ್ಲಿ ಇದು ಅವರ ಮೊದಲ ಸಂಪಾದನೆ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.