ಪ್ರವಾಸಿಗರ ನೆಚ್ಚಿನ ತಾಣ ಗೊಡಚಿನ ಮಲ್ಕಿ ಜಲಪಾತ


Team Udayavani, Jul 4, 2021, 8:32 AM IST

3265

ಸಿಹಿ ತಿಂಡಿ ‘ಕರದಂಟಿ’ಗೆ ಫೇಮಸ್ ಆಗಿರುವ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕು ಪ್ರವಾಸಿ ತಾಣವಾಗಿಯೂ ಖ್ಯಾತಿ ಪಡೆದಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 51ಕಿ,ಮೀ ದೂರದಲ್ಲಿರುವ ಗೋಕಾಕ್ ಹಲವು ಧಾರ್ಮಿಕ ಸ್ಥಳಗಳು ಹಾಗೂ ಜಲಪಾತಗಳನ್ನು ತನ್ನ  ಒಡಲಿನಲ್ಲಿ ತುಂಬಿಕೊಂಡಿದೆ.

ಸಪ್ತ ನದಿಗಳ ನಾಡು ಗೋಕಾಕ್ ಎಂದಾಕ್ಷಣ ಎಲ್ಲರ ಕಣ್ಮುಂದೆ ಬರುವುದು ಅಲ್ಲಿರುವ ಜಲಪಾತ. ಪ್ರವಾಸಿಗರ ನೆಚ್ಚಿನ ತಾಣ ಗೋಕಾಕ್ ಜಲಪಾತದ ಜೊತೆಗೆ ಇನ್ನೂ ಸಾಕಷ್ಟು ಜಲಧಾರೆಗಳು ಇಲ್ಲಿವೆ. ಅವುಗಳಲ್ಲಿ ಗೊಡಚಿನ ಮಲ್ಕಿ ಜಲಪಾತ ಕೂಡ ಒಂದು.

ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿಯ ಗೊಡಚಿನಮಲ್ಕಿ ಗ್ರಾಮದಿಂದ ಸುಮಾರು 2.5 ಕಿ.ಮೀ ದೂರದಲ್ಲಿರುವ ಕಣಿವೆಯೊಂದರಲ್ಲಿ  ಮಾರ್ಕಂಡೇಯ ನದಿ ಪುಟಿದೇಳುವಾಗ ಗೊಡಚಿನಮಲ್ಕಿ ಜಲಪಾತ ರೂಪುಗೊಳ್ಳುತ್ತದೆ.

ಗೊಡಚಿನಮಲ್ಕಿ ಜಲಪಾತದಲ್ಲಿ ಎರಡು ಹಂತಗಳಿವೆ. ಮೊದಲನೆಯದು 25 ಮೀಟರ್ ಎತ್ತರ ಮತ್ತು ಎರಡನೆಯದು 18 ಮೀಟರ್ ಎತ್ತರವಿದೆ. ಗೊಡಚಿನಮಲ್ಕಿ ಜಲಪಾತವನ್ನು ಮಾರ್ಕಂಡೇಯ ಜಲಪಾತ ಎಂದೂ ಕರೆಯುತ್ತಾರೆ.

ಮಳೆಗಾಲದಲ್ಲಿ ಮಾರ್ಕಂಡೇಯ ನದಿ ರಭಸದಿಂದ ಹರಿಯುತ್ತದೆ. ಕರಿ ಬಂಡೆಗಳು, ನಡುವೆ ಹರಿವ ನದಿ, ಎತ್ತರಕ್ಕಿಂತಲೂ ವಿಶಾಲತೆಗೆ ಹೆಸರಾದ ಜಲಪಾತ … ನೋಡುಗರ ಮನ ತಣಿಸುತ್ತವೆ.

ಇಲ್ಲಿನ ಬಂಡೆಗಲ್ಲುಗಳ ಮೇಲೆ ಎಚ್ಚರದಿಂದ ಹೆಜ್ಜೆ ಇಡಬೇಕು. ಆಯ ತಪ್ಪಿದರೆ ಅಪಾಯ. ಮಕ್ಕಳು ಜತೆಗಿದ್ದರೆ ಹೆಚ್ಚು ಕಾಳಜಿ ಇರಲಿ. ನದಿಯಲ್ಲೇ ಒಂದೂವರೆ ಕಿ. ಮೀ. ದೂರದ ವರೆಗೆ ನಡೆದು ಹೋಗಬಹುದು. ಅಲ್ಲಿನ ಸೌಂದರ್ಯ ನಿಮ್ಮ ನಡಿಗೆಯ ಆಯಾಸವನ್ನೆಲ್ಲ ಮರೆಸಿಬಿಡುತ್ತದೆ. ನೀರು ಧುಮುಕುವ ದೃಶ್ಯ ರೋಮಾಂಚನಕಾರಿ. ಮಳೆಗಾಲದಲ್ಲಿ ಇಂಥ ಜಲಪಾತಗಳನ್ನು ಕಷ್ಟಪಟ್ಟಾದರೂ ನೋಡಬೇಕು.

ದೊಡ್ಡ ತೆರೆದ ಕಣಿವೆಯ  ನಡುವೆ  ಭೋರ್ಗರಿಸುವ ಜಲಪಾತದ ದೃಶ್ಯ ವೈಭವ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ರಸ್ತೆಯ ಮೂಲಕ ಪ್ರವೇಶಿಸಬಹುದಾದರೂ, ಗೊಡಚಿನಮಲ್ಕಿ ಹಳ್ಳಿಯಿಂದ ಜಲಪಾತದವರೆಗೆ ಕೆಲವು ಕಿಲೋಮೀಟರ್ ಚಾರಣ ಕೈಗೊಳ್ಳುವುದು ಜನಪ್ರಿಯ ಚಟುವಟಿಕೆಯಾಗಿದೆ.

ಜುಲೈ ನಿಂದ ಅಕ್ಟೋಬರ್ ಗೊಡಚಿನಮಲ್ಕಿ ಜಲಪಾತವನ್ನು ಭೇಟಿ ಮಾಡಲು ಉತ್ತಮ ಸಮಯವಾಗಿದೆ. ಏಕೆಂದರೆ ಈ ಅವಧಿಯಲ್ಲಿ ನೀರಿನ ಮಟ್ಟ ಹೆಚ್ಚಿರುತ್ತದೆ ಮತ್ತು ದೃಶ್ಯ ವೈಭವ ಗರಿಷ್ಟ ಮಟ್ಟದಲ್ಲಿರುತ್ತದೆ.

ಇನ್ನು ಈ ಜಲಪಾತದ ಹತ್ತಿರ ಗೋಕಾಕ ಜಲಪಾತ (14 ಕಿ.ಮೀ) ಮತ್ತು ಹಿಡ್ಕಲ್ ಜಲಾಶಯ (22 ಕಿ.ಮೀ) ಭೇಟಿಕೊಡಬಹುದಾದ ಹತ್ತಿರದ ಪ್ರವಾಸಿ ಸ್ಥಳಗಳಾಗಿವೆ.

ತಲುಪುವುದು ಹೇಗೆ:

ಗೊಡಚಿನಮಲ್ಕಿ ಜಲಪಾತ ಬೆಂಗಳೂರಿನಿಂದ 538 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಬೆಳಗಾವಿಯಿಂದ 51 ಕಿ.ಮೀ. ದೂರದಲ್ಲಿದೆ. ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ಪಚಾಪುರ (9 ಕಿ.ಮೀ ದೂರದಲ್ಲಿ) ಹತ್ತಿರದ ರೈಲು ನಿಲ್ದಾಣವಾಗಿದೆ. ಗೊಡಚಿನಮಲ್ಕಿ ಜಲಪಾತವನ್ನು ತಲುಪಲು ಬೆಳಗಾವಿ ಅಥವಾ ಪಚಾಪುರದಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದಾಗಿದೆ.

ವಸತಿ: ಗೋಕಾಕ್ (18 ಕಿ.ಮೀ) ನಲ್ಲಿ ಹೋಟೆಲ್‌ಗಳು ಮತ್ತು ಹೋಂ-ಸ್ಟೇಗಳು ಲಭ್ಯವಿದೆ. ಬೆಳಗಾವಿ ನಗರ (51 ಕಿ.ಮೀ) ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ಮುಖ್ಯಸ್ಥ: ಡೊನಾಲ್ಡ್‌ ಟ್ರಂಪ್‌ ಒಲವು

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ನಿರ್ದೇಶಕ: ಡೊನಾಲ್ಡ್‌ ಟ್ರಂಪ್‌ ಒಲವು

voter

Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.