ಕಣ್ಮನ ಸೆಳೆಯುವ ಗೋಕಾಕ್ ಜಲಪಾತ
Team Udayavani, May 16, 2021, 2:29 PM IST
ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್ ಜಲಪಾತ ಉತ್ತರ ಕರ್ನಾಟಕದ ಜನಪ್ರಿಯ ಜಲಪಾತಗಳಲ್ಲಿ ಒಂದಾಗಿದೆ.
ಗೋಕಾಕ್ ಜಲಪಾತವು ಅಮೇರಿಕ ದೇಶದ ನಯಾಗರ ಜಲಪಾತವನ್ನು ಹೊಲುವುದರಿಂದ ಇದನ್ನು ಭಾರತದ ನಯಾಗಾರವೆಂದು ಕರೆಯಲಾಗುತ್ತದೆ. ಈ ಜಲಪಾತವು 180 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಇಲ್ಲಿಗೆ ಮಳೆಗಾಲದಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ. ವಿದ್ಯುತ್ತನ್ನು ಮೊದಲ ಬಾರಿಗೆ ಉತ್ಪಾದಿಸಿದ್ದು ಇಲ್ಲೇ ಎನ್ನಲಾಗುತ್ತದೆ.
ಘಟಪ್ರಭಾ ನದಿ ಕುದುರೆಯ ಲಾಳದ ಆಕಾರದ ಬಂಡೆಯ ಮೇಲ್ಭಾಗದಿಂದ ಸುಮಾರು 52 ಮೀಟರ್ ಎತ್ತರದಿಂದ ಧುಮುಕಿದಾಗ ಗೋಕಾಕ್ ಜಲಪಾತವು ರೂಪುಗೊಳ್ಳುತ್ತದೆ. ಇತರ ಜಲಪಾತಗಳಿಗೆ ಹೋಲಿಸಿದರೆ ಗೋಕಾಕ ಜಲಪಾತ ಸಾಕಷ್ಟು ಅಗಲವಿದ್ದು (ಒಟ್ಟು 177 ಮೀಟರ್) ದೂರದಿಂದ ನೋಡಿದರೂ ತುಂಬಾ ರಮಣೀಯವಾಗಿ ಕಾಣಿಸುತ್ತದೆ ಮತ್ತು ಜಲಪಾತದ ಭೋರ್ಗೆರೆತ ದೂರದಿಂದಲೇ ಕೇಳಿಸುತ್ತದೆ.
ಗೋಕಾಕ್ ಜಲಪಾತವನ್ನು ಭೇಟಿ ನೀಡಲು ಕಾರಣಗಳು:
ತೂಗು ಸೇತುವೆ: 200 ಮೀಟರ್ ಉದ್ದದ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆ ಗೋಕಾಕ್ ಜಲಪಾತದ ಎತ್ತರದ ನೋಟವನ್ನು ನೀಡುತ್ತದೆ.
ಚಾಲುಕ್ಯ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಭಗವಾನ್ ಮಹಾಲಿಂಗೇಶ್ವರ ದೇವಸ್ಥಾನ.
ಕೆಂಪಲ್ ಸಸ್ಯ ಉದ್ಯಾನ
ಯೋಗಿ ಕೊಳ್ಳ ಚಾರಣ: ಗೊಕಾಕ್ ಜಲಪಾತದಿಂದ 3 ಕಿ.ಮೀ ದೂರದಲ್ಲಿರುವ ಜನಪ್ರಿಯ ಚಾರಣ ತಾಣ.
ಮಲ್ಲಪ್ರಭಾ ಬೋಟಿಂಗ್: ಮಾರ್ಕಂಡೇಯ ನದಿಯಲ್ಲಿ ಬೋಟಿಂಗ್ ವಿಹಾರ ಮಾಡಬಹುದಾಗಿದೆ, ಗೋಕಾಕ್ ಜಲಪಾತದಿಂದ 8 ಕಿ.ಮೀ. ದೂರದಲ್ಲಿದೆ.
ದೇವಾಲಯಗಳು: ಯೋಗಿಕೊಳ್ಳ ಮಲ್ಲಿಕರ್ಜುನ ದೇವಸ್ಥಾನ, ಕರಿಯಮ್ಮ ದೇವಸ್ಥಾನ, ಲಕ್ಷ್ಮಿ ದೇವಸ್ಥಾನ, ಹನುಮಾನ್ ದೇವಾಲಯ ಇತ್ಯಾದಿ.
ಹತ್ತಿರದಲ್ಲಿ ಇನ್ನೇನಿದೆ?
ಗೋಕಾಕ್ ಜಲಪಾತದ ಜೊತೆಗೆ ಗೋಡಚಿನಮಲ್ಕಿ ಜಲಪಾತಗಳು (ಗೋಕಾಕ್ ಜಲಪಾತದಿಂದ 13 ಕಿ.ಮೀ) ಮತ್ತು ಸವದತ್ತಿ ಯಲ್ಲಮ್ಮ (73 ಕಿ.ಮೀ) ಕ್ಷೇತ್ರಕ್ಕೆ ಭೇಟಿ ಕೊಡಬಹುದಾಗಿದೆ.
ಗೋಕಾಕ್ ಜಲಪಾತವನ್ನು ತಲುಪುವುದು ಹೇಗೆ?
ಗೋಕಾಕ್ ಜಲಪಾತ ಬೆಂಗಳೂರಿನಿಂದ 622 ಕಿ.ಮೀ ಮತ್ತು ಬೆಳಗಾವಿಯಿಂದ 62 ಕಿ.ಮೀ ದೂರದಲ್ಲಿದೆ. ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ಪ್ರಮುಖ ರೈಲು ನಿಲ್ದಾಣವಾಗಿದೆ. ಬೆಳಗಾವಿ ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಬೆಳಗಾವಿಯಿಂದ ಟ್ಯಾಕ್ಸಿ ಪಡೆದು ಗೋಕಾಕ್ ಜಲಪಾತವನ್ನು ತಲುಪಬಹುದಾಗಿದೆ.
ವಸತಿ: ಜಲಪಾತದಿಂದ 6 ಕಿ.ಮೀ ದೂರದಲ್ಲಿರುವ ಗೋಕಾಕ್ ನಗರದಲ್ಲಿ ಹೋಟೆಲ್‌ಗಳಿವೆ.
ಗೋಕಾಕ್ ಜಲಪಾತವು ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಮೇಲಿನಿಂದ ಬೀಳುವ ನೀರು ಪ್ರವಾಸಿಗರ ಕಣ್ಣುಗಳನ್ನು ಸೆಳೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.