ಸಮರ ಕಲೆಯನ್ನುಜೀವಂತವಾಗಿರಿಸಿದ ಕೇರಳದ 78ರ ವೃದ್ಧೆ!

2017 ರಲ್ಲಿ ಮೀನಾಕ್ಷಿ ಅಮ್ಮ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Team Udayavani, Oct 1, 2021, 11:59 AM IST

vatakar

ವಟಕರ : 78ರ ಹರೆಯದ ಈ ವೃದ್ಧೆಯ ಜೀವನೋತ್ಸಾಹ ನೋಡಿದರೆ ಎಂತಹವರೂ ವಿಸ್ಮಯಗೊಳ್ಳಬೇಕು. ದೇಶದ ಅತ್ಯಂತ ಪುರಾತನ ಸಮರಕಲೆಗಲ್ಲಿ ಒಂದಾಗಿರುವ ಕೇರಳದ ಕಳರಿ ಪಯಟ್ಟುವಿನಲ್ಲಿ ಪಳಗಿ ಇಳಿ ವಯಸ್ಸಿನಲ್ಲಿ ಯುವಕರೂ ನಾಚುವಂತೆ ಹೋರಾಟ ನೀಡುತ್ತಿದ್ದಾರೆ.

ಇನ್ನೂ 4೦ ರ ಹರೆಯದ ಮಹಿಳೆಯಂತೆ ಕಾಣುವ ಮೀನಾಕ್ಷಿ ಅಮ್ಮ ಅವರು ಬಿದಿರಿನ ಗಳ ಹಿಡಿದು ಪುತ್ರನೊಂದಿಗೆ ಸಮದಂಡಿನ ಹೋರಾಟ ನೀಡಿ ಬೆರಗು ಮೂಡಿಸುತ್ತಾರೆ.

ಕೇರಳದ ಅತ್ಯಂತ ಪುರಾತನ ಕಲೆಯಾಗಿರುವ ಕಳರಿ ಪಯಟ್ಟುವಿನ ಪುನರುತ್ಥಾನಕ್ಕೆ ಸಂಕಲ್ಪ ಮಾಡಿರುವ ಮೀನಾಕ್ಷಿ ಅಮ್ಮ ಮುಂದಿನ ತಲೆಮಾರಿಗೆ ಈ ಸಮರಾ ಕಲೆ ತಲುಪಬೇಕು ಎನ್ನುವ ಮಹದಾಸೆ ಹೊತ್ತಿದ್ದಾರೆ.

‘ನಾನು 7 ವರ್ಷದ ಬಾಲಕಿ ಇರುವಾಗ ಕಳರಿ ಪಯಟ್ಟು ಅಭ್ಯಾಸ ಆರಂಭಿಸಿದೆ. ನನಗೀಗ 78 ವರ್ಷ ಪ್ರಾಯ, ನನ್ನ ದಿವಂಗತ ಪತಿ ಅವರು 1949ರಲ್ಲಿ ಪ್ರಾರಂಭಿಸಿದ ಕಡತನಾಡ್ ಸಂಗಮ್ ಕಳರಿ ಶಾಲೆಯಲ್ಲಿ ಈಗಲೂ ನಾನು ಕಲಿಯುತ್ತಿದ್ದೇನೆ, ಉತ್ಸಾಹಿಗಳಿಗೆ ಕಲಿಸುತ್ತಿದ್ದೇನೆ’ ಎಂದರು.

‘ಈಗ ಪತ್ರಿಕೆಗಳನ್ನು ತೆರೆದರೆ ಕೇವಲ ಮಹಿಳೆಯರ ಮೇಲಿನ ದೌರ್ಜನ್ಯವನ್ನೇ ಕಾಣಬೇಕಾಗಿದೆ. ಹೆಣ್ಮಕ್ಕಳು ಸಮರ ಕಲೆಯನ್ನು ಅಭ್ಯಾಸ ಮಾಡಿದರೆ ದೈಹಿಕ ಮತ್ತು ಮಾನಸಿಕವಾಗಿ ಶಕ್ತರಾಗುತ್ತಾರೆ ಮಾತ್ರವಲ್ಲದೆ ಒಂಟಿಯಾಗಿ ತೆರಳಲು ಮತ್ತು ಕೆಲಸ ಮಾಡಲು ವಿಶ್ವಾಸ ಮೂಡಿಸುತ್ತದೆ’ ಎಂದರು.

3,000 ವರ್ಷಗಳ ಇತಿಹಾಸ ಹೊಂದಿರುವ ಕಳರಿ ಸಮರ ಕಲೆಯಲ್ಲಿ ಯೋಗ ಮತ್ತು ನೃತ್ಯ ಅಡಕವಾಗಿದ್ದು, ಕತ್ತಿಯೊಂದಿಗೆ ಗುರಾಣಿ ಮತ್ತು ಬಿದಿರಿನ ಗಳಗಳನ್ನು ಹಿಡಿದು ರೋಮಾಂಚನಕಾರಿಯಾಗಿ ಹೋರಾಟ ನಡೆಸುವುದು ವಿಶೇಷ.

ಈ ಕಲೆಯಿಂದ ತಮಗೆ ಅಪಾಯವಾಗುವ ಸಾಧ್ಯತೆಯನ್ನು ಅರಿತ ಬ್ರಿಟಿಷರು 1804ರಲ್ಲಿ ನಿಷೇಧ ಹೇರಿದ್ದರು. ಗುಪ್ತವಾಗಿದ್ದ ಕಳರಿ ಕಲೆ ಸ್ವಾತಂತ್ರ್ಯದ ಬಳಿಕವೇ ಮತ್ತೆ ಮುನ್ನೆಲೆಗೆ ಬಂದಿತ್ತು .

ಕಳರಿಯನ್ನು ಈಗ ಕ್ರೀಡೆಯಾಗಿ ದೇಶದಲ್ಲಿ ಅಭ್ಯಾಸ ನಡೆಸಲಾಗುತ್ತಿದ್ದು ಪ್ರೋತ್ಸಾಹವೂ ನೀಡಲಾಗುತ್ತಿದೆ.

ಮೀನಾಕ್ಷಿ ಅಮ್ಮನವರ ಕಳರಿ ಶಾಲೆಯ ಒಳಗೆ ಪುತ್ರ ಸಂಜೀವ್ ಅವರು ಕಚ್ಚೆಯನ್ನು ಉಟ್ಟುಕೊಂಡು ಎದೆಗಾರಿಕೆ ತೋರುತ್ತಾ,ಬಾಲಕರು ಮತ್ತು ಬಾಲಕಿಯರಿಗೆ ಸಮರ ಕಲೆಯನ್ನು ಕಲಿಸುವ ವೇಳೆ ಮಾತನಾಡಿದರು.

‘ಕಲರಿಯಲಿ ಎರಡು ವಿಧಗಳಿದ್ದು ಒಂದು ಶಾಂತಿಯುತ ಇನ್ನೊಂದು ಸಮರಕ್ಕಾಗಿ’ ಎಂದು ಸಂಜೀವ್ ತಿಳಿಸಿದರು.

‘ನಾನು ನನ್ನ ಸಹೋದರನೊಂದಿಗೆ ಕಳರಿಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ. ಇಲ್ಲವಾದಲ್ಲಿ ಪುರಾತನ ಕಲೆ ನಶಿಸಿ ಹೋಗುತ್ತದೆ. ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣವಾಗಿ ಕಳರಿಯಲ್ಲಿ ತೊಡಗಿಸಿಕೊಂಡರೆ ವಿರೋಧಿಗಳು ಮರೆಯಾಗುತ್ತಾರೆ. ದೇಹವೇ ಕಣ್ಣಾಗುತ್ತದೆ.ಇದು ಮನಸ್ಸನ್ನು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸಿ ಏಕಾಗ್ರತೆಯನ್ನು ಜಾಗ್ರತಿ ಮಾಡಿಸುತ್ತದೆ. ವೇಗ ಮತ್ತು ತಾಳ್ಮೆ ಬರಿಸುತ್ತದೆ. ದೈಹಿಕ ಮತ್ತು ಮಾನಸಿಕ ಶಕ್ತಿ ನೀಡುತ್ತದೆ’ ಎಂದು ಮೀನಾಕ್ಷಿ ಅಮ್ಮ ಅವರ ಮೊಮ್ಮಗಳು ಸಿವಿಲ್ ಇಂಜಿನಿಯರ್ ಆಗಿರುವ ಅಲಕಾ ಅವರು ಕವಿತೆಯ ರೂಪದಲ್ಲಿ ಕಲೆಯ ಮಹತ್ವವನ್ನು ಹೇಳಿದರು.

2017 ರಲ್ಲಿ ಮೀನಾಕ್ಷಿ ಅಮ್ಮ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.