ಮುಂಗಾರು ಮಳೆಗೆ ದೇಹ ಬೆಚ್ಚಗಾಗಿಸುವ ‘ಗ್ರೀನ್ ಚಿಕನ್ ಚಾಪ್ಸ್’
ಶ್ರೀರಾಮ್ ನಾಯಕ್, Jul 2, 2020, 8:17 PM IST
ಚಿಕನ್ ಎಂದರೇನೇ ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರೂರತ್ತದೆ. ಇನ್ನು ಈ ಚಿಕನ್ ನಿಂದ ತರತರಹದ ರೆಸಿಪಿಗಳನ್ನು ತಯಾರಿಸಿದರೆ ಹೇಗಿರಬೇಡ ಹೇಳಿ?ಚಿಕನ್ ಮಸಾಲ, ಟಿಕಾ ಮುರ್ಗ್, ಮುರ್ಗ್ ಮಲಾಯ್ ವಾಲಾ, ಕೇರಳ ಚಿಕನ್ ರೋಸ್ಟ್, ಚಿಕನ್ ಚೆಟ್ಟಿನಾಡ್, ಚಿಕನ್ ಲಾಲಿಪಾಪ್, ಬಟರ್ ಚಿಕನ್, ಚಿಕನ್ ದಮ್ ಬಿರಿಯಾನಿ, ಚಿಕನ್ ಸುಕ್ಕ, ರೋಸ್ಟೆಡ್ ಚಿಕನ್ ಮಸಾಲ, ಚಿಕನ್ 65, ಚಿಕನ್ ಬಾದಾಮ್ ರೋಲ್, ಪಂಜಾಬಿ ಲೆಮನ್ ಚಿಕನ್, ದಹಿ ಚಿಕನ್, ಆಂಧ್ರ ಶೈಲಿಯ ಚಿಕನ್ ಕರಿ.. ಹೀಗೆ ಚಿಕನ್ ನ ತರಹೇವಾರಿ ಅಡುಗೆಗಳು ನಮ್ಮಲ್ಲಿ ಜನಪ್ರಿಯವಾಗಿವೆ.
ಇನ್ನು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಾಂಪ್ರದಾಯಿಕ ಶೈಲಿಯ ಹಲವು ಚಿಕನ್ ಡಿಶಸ್ ಗಳು ಜನಪ್ರಿಯಗೊಂಡಿವೆ. ಇದೇ ಸಾಲಿನಲ್ಲಿ ಬರುವ ಗ್ರೀನ್ ಚಿಕನ್ ಚಾಪ್ಸ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಗ್ರೀನ್ ಚಿಕನ್ ಚಾಪ್ಸ್
ಬೇಕಾಗುವ ಸಾಮಗ್ರಿಗಳು: ಚಿಕನ್ 1 ಕೆ.ಜಿ., ಹಸಿಮೆಣಸು 10, ಚಕ್ಕೆ 2, ಲವಂಗ 7, ಗೋಡಂಬಿ 5, ಬೆಣ್ಣೆ 2 ಚಮಚ ,ಕೊತ್ತಂಬರಿ ಸೊಪ್ಪು 1ಕಟ್ಟು, ಪುದೀನಾ ಸೊಪ್ಪು 1 ಕಟ್ಟು , ಮೊಸರು 1 ಕಪ್, ಎಣ್ಣೆ 2 ಚಮಚ, ಈರುಳ್ಳಿ 4 , ಶುಂಠಿ-ಬೆಳ್ಳುಳ್ಳಿ ಪೇಸ್ಟ್ 3 ಚಮಚ, ಅರಿಶಿನ ಪುಡಿ 2 ಚಮಚ, ಧನಿಯಾ ಪುಡಿ 2 ಚಮಚ, ತುಪ್ಪ 3 ಚಮಚ, ಗರಂ ಮಸಾಲ ಪುಡಿ 1 ಚಮಚ, ಪೆಪ್ಪರ್ ಪುಡಿ 1ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಚಿಕನ್ ಚಾಪ್ಸ್ ಗೆ ಮೊದಲು ಮಸಾಲವನ್ನು ತಯಾರಿಸಬೇಕು. ಮಿಕ್ಸಿ ಜಾರಿಗೆ ಹಸಿಮೆಣಸು, ಚಕ್ಕೆ, ಲವಂಗ, ಗೋಡಂಬಿ , ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ನುಣ್ಣಗೆ ಆಗುವವರೆಗೆ ರುಬ್ಬಿಕೊಳ್ಳಿ. ನಂತರ ಚಿಕನ್‌ನ್ನು ನೀರಿನಲ್ಲಿ ತೊಳೆದು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್ ಮಾಡಿಕೊಳ್ಳಿ. ತದನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವ ತನಕ ಫ್ರೈ ಮಾಡಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಚಿಕನ್,ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 5 ರಿಂದ 10 ನಿಮಿಷ ಹಾಗೇ ಬಿಡಿ. ಆಮೇಲೆ ರುಬ್ಬಿಟ್ಟ ಮಸಾಲೆ ಮತ್ತು ಧನಿಯಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 15 ರಿಂದ 20 ನಿಮಿಷಗಳವರೆಗೆ ಬೇಯಿಸಿರಿ. ನಂತರ ಬೆಣ್ಣೆ ಅಥವಾ ತುಪ್ಪ ,ಗರಂ ಮಸಾಲ,ಪೆಪ್ಪರ್ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಹಾಗೇ ಬಿಡಿ .ರುಚಿಕರವಾದ ಗ್ರೀನ್ ಚಿಕನ್ ಚಾಪ್ಸ್ ಚಪಾತಿ,ನಾನ್ ಹಾಗೂ ಅನ್ನ ಜೊತೆಗೂ ಸಹ ಸವಿಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
Zakir Hussain: 5 ರೂ ಕಾನ್ಸರ್ಟ್ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್ ನಾದಮಯ ಪಯಣ
Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್ ಆಗುತ್ತಿರುವ ಈ ಬಾಲಕ ಯಾರು?
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.