ಮರೆಯಲಾಗದ ಮಹಾನುಭಾವರು; ಯಕ್ಷಗಾನಕ್ಕೆ ಮೊದಲ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟವರು


ವಿಷ್ಣುದಾಸ್ ಪಾಟೀಲ್, Aug 2, 2023, 6:00 PM IST

1-fsfsffsd

ಬಡಗುತಿಟ್ಟು ಯಕ್ಷಗಾನರಂಗದಲ್ಲಿ ಸಾಟಿಯೇ ಇಲ್ಲದ ಪ್ರತಿಭೆ ಮತ್ತೆ ಕಾಣುವುದು ಅಸಾಧ್ಯ ಎಂದು ಹಿರಿಯ ವಿದ್ವಾಂಸರು, ವಿಮರ್ಶಕರು ಇಂದಿಗೆ ಗುರುತಿಸುವುದು ಬೆರಳೆಣಿಕೆಯ ಕೆಲವು ಮೇರು ಕಲಾವಿದರನ್ನು ಮಾತ್ರ. ಅಂತಹ ಮೇರು ಕಲಾವಿದರಲ್ಲಿ ಮರೆಯಲಾಗದ ಮಹಾನ್ ಕಲಾವಿದರೊಬ್ಬರ ಹೆಸರೇ ”ಹಾರಾಡಿ ರಾಮಗಾಣಿಗ”.

ಶ್ರೀಮಂತ ನಡು ಬಡಗು ತಿಟ್ಟು ಯಕ್ಷರಂಗದ ಮೇರು ಶಿಖರವಾಗಿದ್ದ ಹಾರಾಡಿ ರಾಮಗಾಣಿಗರು ಇಹಲೋಕದ ಯಾತ್ರೆ ಮುಗಿಸಿ 50 ವರ್ಷಗಳು ಸಂದರೂ ಇಂದಿಗೂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದ್ದು, ಅವರದ್ದೇ ಆದ ‘ಹಾರಾಡಿ’ ಶೈಲಿಯೂ ಉಳಿದುಕೊಂಡಿದೆ.

ತನ್ನದೇ ಆದ ಸರಿಗಟ್ಟಲಸಾಧ್ಯವಾದ ಗತ್ತು ಗೈರತ್ತು , ಹಿತಮಿತವಾದ ಅದ್ಭುತ ಮಾತುಗಾರಿಕೆ , ಸುಂದರವಾದ ಆಳಂಗ, ಆಳ್ತನದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಕರಾವಳಿಯ ನೈಜ ನಾಯಕ ಎನಿಸಿಕೊಂಡಿದ್ದವರು ರಾಮಗಾಣಿಗರು. ಇಂದಿಗೂ ಅವರ ಪಾತ್ರ ವೈಭವವನ್ನು 80 ವರ್ಷ ದಾಟಿದ ಹಿರಿಯ ಯಕ್ಷಗಾನ ಕಲಾವಿದರು, ವಿಮರ್ಶಕರು ಮತ್ತು ಕಲಾಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ನಡುಬಡಗುತಿಟ್ಟನ್ನು ಬೆಳಗಿದ ಹಾರಾಡಿ ರಾಮಗಾಣಿಗರು ಮಾಡಿದ ಕರ್ಣ, ಋತುಪರ್ಣ, ತಾಮ್ರಧ್ವಜ, ಅರ್ಜುನ , ಕೌಂಡ್ಲಿಕ, ಮಾರ್ತಾಂಡತೇಜ, ಭೀಮ,  ಹಿರಣ್ಯ ಕಶ್ಯಪು,ಜಾಂಬವ, ಭೀಷ್ಮ, ಅಂಗಾರವರ್ಮ, ಚಿತ್ರಸೇನ ಮೊದಲಾದ ಪಾತ್ರಗಳಿಂದ ಪ್ರಖ್ಯಾತರಾಗಿದ್ದರು. ಅವರು ಜೀವಂತಿಕೆ ನೀಡಿದ್ದ ಪಾತ್ರಗಳನ್ನು ಬೇರೆಯವರು ಸರಿಗಟ್ಟುವುದು ಅಸಾಧ್ಯ ಎನ್ನುವುದು ಹಿರಿಯ ಯಕ್ಷಗಾನ ಅಭಿಮಾನಿಗಳ ಅಭಿಪ್ರಾಯ.

ಬ್ರಹ್ಮಾವರ ಬಳಿಯ ಹಾರಾಡಿಯಲ್ಲಿ 1902 ಮೇ 27 ರಂದು ಸುಬ್ಬಣ್ಣ ಗಾಣಿಗ ಮತ್ತು ಕೊಲ್ಲು ದಂಪತಿಗಳ 2 ನೇ ಪುತ್ರನಾಗಿ ಜನಿಸಿದ ರಾಮ ಗಾಣಿಗರು ಬೈಕಾಡಿಯ ಐಗಳ ಮಠದಲ್ಲಿ 2 ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು.

ಯಕ್ಷಗಾನ ರಂಗಕ್ಕೆ 14 ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ಅವರು ಮೊದಲು ಗೆಜ್ಜೆ ಕಟ್ಟಿದ್ದು ಮಾರಣಕಟ್ಟೆ ಮೇಳದಲ್ಲಿ ಬಾಲಗೋಪಾಲನಾಗಿ. ಒಂದು ವರ್ಷದ ತಿರುಗಾಟದ ಬಳಿಕ ಮಂದಾರ್ತಿ ಮೇಳಕ್ಕೆ ಸೇರ್ಪಡೆಯಾದ ಅವರು ಮತ್ತೆ ಹಿಂತಿರುಗಿ ನೋಡಿದವರಲ್ಲ. ಪ್ರಖ್ಯಾತಿಯ ಉತ್ತುಂಗಕ್ಕೇರಿದ ಅವರು ಕಲಾಮಾತೆಯ ಮೇಳವೊಂದರಲ್ಲಿ 45 ವರ್ಷಗಳ ಕಾಲ ತಿರುಗಾಟ ನಡೆಸಿದ್ದು ದಾಖಲೆಯಾಗಿದೆ. ಮಂದಾರ್ತಿ ಮೇಳ ಮಾತ್ರವಲ್ಲದೆ ಅಮೃತೇಶ್ವರಿ ಮೇಳ ಕೋಟ, ಅಂದಿನ ಕಾಲದ ವರಂಗ ಮೇಳ, ಸೌಕೂರು ಮೇಳ, ಸಾಲಿಗ್ರಾಮ ಮೇಳದಲ್ಲೂ ಕೆಲ ಕಾಲ ತಿರುಗಾಟ ಮಾಡಿದ್ದರು ಎನ್ನುವುದು ದಾಖಲೆಗಳಿಂದ ಲಭ್ಯವಾಗಿದೆ.

ರಂಗದಲ್ಲೇ ಹಂತ ಹಂತವಾಗಿ ಕಲಿತ ರಾಮಗಾಣಿಗರು ತೆಕ್ಕಟ್ಟೆ ಬಾಬಣ್ಣ ಶ್ಯಾನುಭೋಗರು ಮಾತುಗಾರಿಕೆಯನ್ನು ಕಲಿಸಿದರೆ, ಪಾಂಡೇಶ್ವರ ಪುಟ್ಟಯ್ಯ, ಸಕ್ಕಟ್ಟು ಸುಬ್ಬಣ್ಣಯ್ಯ ಅವರು ಹೆಜ್ಜೆಗಾರಿಕೆಯನ್ನು ಕಲಿಸಿದ್ದರು. ವೇದಮೂರ್ತಿ ಬಿರ್ತಿ ರಾಮಚಂದ್ರ ಶಾಸ್ತ್ರೀಗಳೂ ರಂಗದ ಕುರಿತಾಗಿ ಮಾರ್ಗದರ್ಶನ ನೀಡಿದ್ದರು ಎನ್ನುವುದು ದಾಖಲೆಗಳಲ್ಲಿದೆ.

ರಂಗದಲ್ಲೂ ಕೆಲ ಕಲಾವಿದರನ್ನು ನೆಚ್ಚಿಕೊಂಡಿದ್ದ ರಾಮಗಾಣಿಗರು ಕುಂಜಾಲು ಶೇಷಗಿರಿ ಕಿಣಿ, ಜಾನುವಾರು ಕಟ್ಟೆ ಗೋಪಾಲಕೃಷ್ಣ ಕಾಮತ್‌, ಗೋರ್ಪಾಡಿ ವಿಟ್ಠಲ ಪಾಟೀಲ್‌ , ಗುಂಡ್ಮಿ ರಾಮಚಂದ್ರ ನಾವಡರಂತಹ ಭಾಗವತರನ್ನು ನೆಚ್ಚಿಕೊಂಡಿದ್ದರು. ಸಹ ಪಾತ್ರಗಳಲ್ಲಿ ನೀಲಾವರ ಸುಬ್ಬಣ್ಣ ಶೆಟ್ಟಿ, ಕೊಳ್ಕೆಬೈಲು ಶೀನ, ಶಿರಿಯಾರ ಮಂಜು ನಾಯ್ಕ, ಹಾರಾಡಿ ಕುಷ್ಟ ಗಾಣಿಗ, ಹಾರಾಡಿ ನಾರಾಯಣ, ಉಡುಪಿ ಬಸವ , ಮಾರ್ವಿ ಹೆಬ್ಬಾರ್‌ ಮೊದಲಾದವರನ್ನು ತನ್ನ ಪಾತ್ರಗಳ ವೈಭವದೊಂದಿಗೆ ಜತೆಯಾಗಿಸಿಕೊಂಡಿದ್ದರು.

ಪಾತ್ರವೈಭವದ ಮೂಲಕ ಬಯಲಾಟ ರಂಗವನ್ನು ಶ್ರೀಮಂತಗೊಳಿಸಿದ್ದ ರಾಮಗಾಣಿಗರಿಗೆ 1961 ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, 1962 ರಲ್ಲಿ ರಾಜ್ಯ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್‌.ನಿಜಲಿಂಗಪ್ಪನವರು ಪ್ರದಾನ ಮಾಡಿದ್ದರು.

ಕರಾವಳಿಯ ಆರಾಧನಾ, ಜಾನಪದ ವೈಭವದ ಮೇರು ಕಲೆಗೆ ಮೊದಲ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟ ಹಿರಿಮೆ ರಾಮಗಾಣಿಗರು 1964 ರಲ್ಲಿ ಸರ್ವಪಲ್ಲಿ ಡಾ.ರಾಧಾಕೃಷ್ಣನ್‌ ಅವರಿಂದ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿ ಯಕ್ಷಗಾನದ ಶ್ರೇಷ್ಠತೆ ಮಾನ್ಯತೆಯನ್ನು ಸಾರಿದ್ದರು.

ಆ ಕಾಲದಲ್ಲಿ ಕರಾವಳಿಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ರಾಮಗಾಣಿಗ ಅವರು ರಂಗದಲ್ಲೂ ನಿಜ ಜೀವನದಲ್ಲೂ ಆದರ್ಶಪ್ರಾಯ ವ್ಯಕ್ತಿಯಾಗಿದ್ದರು ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯ. ಮಿತಭಾಷಿಯಾಗಿದ್ದ ಅವರು ಅಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ ಹೊರತಾಗಿಯೂ ನಿರಾಡಂಬರ ಜೀವನನ್ನು ನಡೆಸಿದವರು ಎನ್ನುತ್ತಾರೆ ಅವರನ್ನು ಕಂಡಿದ್ದ ಯಕ್ಷಗಾನಾಭಿಮಾನಿಗಳು.

ಅಂದಿನ ಕಾಲದಲ್ಲಿ ಮೇಳದ ಪೆಟ್ಟಿಗೆಗಳು ಹೊತ್ತುಕೊಂಡು ಹೋಗುವ ಕಾಲವಿತ್ತು.ಒಮ್ಮೆ ಆಟ ಮುಗಿಸಿ ಬರುವಾಗ ದಾರಿಯಲ್ಲಿ ಪೆಟ್ಟಿಗೆ ಹೊತ್ತ ಆಳಿನ ಕಾಲಿಗೆ ದೊಡ್ಡ ಮುಳ್ಳು ಚುಚ್ಚಿ ರಕ್ತ ಬರಲಾರಂಭಿಸಿತಂತೆ. ಪಕ್ಷದಲ್ಲಿದ್ದ ರಾಮಗಾಣಿಗರು ತಕ್ಷಣ ಆತನ ತಲೆಮೇಲಿದ್ದ ಪೆಟ್ಟಿಗೆಯನ್ನು ತಾನು ಹೊತ್ತಿದ್ದರಂತೆ.ಈ ರೀತಿಯ ಸರಳತೆಯ ನೂರಾರು ಉದಾಹರಣೆಗಳು ಬಹುಮನ್ನಣೆ ಪಡೆದಿದ್ದ ರಾಮ ಗಾಣಿಗರ ಜೀವನದಲ್ಲಿ ನಡೆದಿರುವುದು ಕಲಾಪ್ರೇಮಿಗಳಿಂದ ತಿಳಿದು ಬಂದಿದೆ.

1966ರಲ್ಲಿ ಪಾರ್ಶ್ವವಾಯು ಪೀಡಿತರಾದ ರಾಮಗಾಣಿಗರು 1968 ಡಿಸೆಂಬರ್‌ 11 ರಂದು ಇಹಲೋಕದ ಯಾತ್ರೆ ಮುಗಿಸಿದರು.

ಅವರ ಕಾಲಾನಂತರ ಶ್ರೀ ಕ್ಷೇತ್ರ ಮಂದಾರ್ತಿ ವತಿಯಿಂದ ಅವರ ಕಲಾ ಜೀವನದ ಕುರಿತಾಗಿ ಶ್ರೀ ಕ್ಷೇತ್ರ ಮಂದಾರ್ತಿ ಮೇಳದಲ್ಲಿ ಹಾರಾಡಿ ರಾಮಗಾಣಿಗರು ಎಂಬ ಪುಸ್ತಕವನ್ನು ಪ್ರಕಟಿಸಲಾಗಿದೆ.ಜನ್ಮ ಶತಾಬ್ದಿ ವೇಳೆ ಯಕ್ಷಲೋಕದ ಕೋಲ್ಮಿಂಚು ಎಂಬ ವಿಶೇಷ ಸಂಕಲನವನ್ನೂ ಪ್ರಕಟಿಸಿ ಯುವ ಪೀಳಿಗೆಗೆ ರಾಮಗಾಣಿಗರ ಕುರಿತಾಗಿನ ಪರಿಚಯ ಮಾಡುವ ಕಾರ್ಯವನ್ನು ಯಕ್ಷ ದೇಗುಲ ಸಂಸ್ಥೆ ಮಾಡಿದೆ. ರಾಮಗಾಣಿಗರ ಹೆಸರಿನಲ್ಲಿ ಶ್ರೀ ಕ್ಷೇತ್ರ ಮಂದಾರ್ತಿ ವತಿಯಿಂದ ಯಕ್ಷಗಾನ ಕಲಾವಿದರಿಗೆ ಹಾರಾಡಿ ರಾಮ ಗಾಣಿಗ ವಾರ್ಷಿಕ ಪ್ರಶಸ್ತಿಯನ್ನೂ ನೀಡಲಾಗುತ್ತಿದೆ.

ಇಂದಿಗೂ ಹಿರಿಯ ಅಭಿಮಾನಿಗಳ ಮನದಲ್ಲಿ ರಾಮಗಾಣಿಗರು ನಿರ್ವಹಿಸಿದ ಪಾತ್ರಗಳು ರಾರಾಜಿಸುತ್ತಿವೆ. ರಾಮಗಾಣಿಗರ ಆದರ್ಶಗಳು ಇಂದಿನ ಯುವ ಕಲಾವಿದರಿಗೆ ಆದರ್ಶಪ್ರಾಯರು.

ಮುಂದುವರಿಯುವುದು…

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.