ಔಷಧೀಯ ಗುಣದ …ಸಂಜೀವಿನಿಗೆ ಸಮನಾದ ವನಸ್ಪತಿ “ಅಮೃತ ಬಳ್ಳಿ”
ದುಬಾರಿ ಬೆಲೆ ನೀಡಿ ಖರೀದಿಸಿರೋದು ಉಂಟು. ಮಧುಮೇಹ ರೋಗಕ್ಕೂ ಸಹ ಔಷಧೀಯಾಗಿ ಉಪಯೋಗಿಸುತ್ತಾರೆ.
Team Udayavani, Jul 18, 2022, 12:32 PM IST
ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿಯೇ ಅಮೃತ ಬಳ್ಳಿ. ಇದರಲ್ಲಿ ಎಲೆ, ಕಾಂಡ, ಬೇರು ಎಲ್ಲವೂ ಜೌಷಧೀಯ ಗುಣ ಹೊಂದಿದ್ದು. ಈ ಬಳ್ಳಿ ಕಹಿ ಹಾಗೂ ಒಗರು ರಸವನ್ನು ಹೊಂದಿರುತ್ತದೆ. ಈ ಬಳ್ಳಿಯು ಮರಗಳ ಮೇಲೆ ತೋಟದ ಬೇಲಿಗಳ ಮೇಲೆ ಹಬ್ಬಿರುತ್ತದೆ ಹಾಗೂ ಕಾಡುಗಳ ಪೊದೆಗಳ ಮೇಲೂ ಹಬ್ಬಿರುತ್ತದೆ. ಇದರ ಪತ್ರೆ ಹಸಿರು ಹಾಗೂ ಹೃದಯಾಕಾರವಾಗಿದ್ದು ಮೃದುಮಾಗಿರುತ್ತದೆ. ಆನೇಕ ಔಷಧೀಯ ಗುಣಗಳನ್ನು ಹೊಂದಿರುವ ಮತ್ತು ಯಾವುದೇ ಅಡ್ಡ ಪರಿಣಾಮ ಬೀರದೆ, ಎಲ್ಲಾ ಕಡೆ ಸುಲಭವಾಗಿ ದೊರಕುವ ಅಮೃತ ಬಳ್ಳಿ ಆಯುರ್ವೇದಲ್ಲಿ ಬಹು ಜನಪ್ರಿಯ ಔಷಧಿ. ಇಂದಿನ ದಿನಗಳಲ್ಲಿ ಬಹು ಬೇಡಿಕೆಯಾಗಿರುವುದರಿಂದ ಹೆಚ್ಚಾಗಿ ಬೆಳೆಯಲಾರಂಭಿಸಿದ್ದಾರೆ.
ಆಮೃತ ಬಳ್ಳಿಯ ಔಷಧೀಯ ಗುಣಗಳು:
ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಸಂಜೀವಿನಿಗೆ ಸಮನಾದ ಒಂದು ವನಸ್ಪತಿ ಎಂದು ಪರಿಗಣಿಸಿದೆ. ಖಾರ, ಕಹಿ, ಒಗರು ರಸಗಳಿಂದ ಕೂಡಿರುವುದರಿಂದ ಪಾಚನಗುಣವನ್ನು ಹೊಂದಿದೆ.
ಜ್ವರ ಮತ್ತು ಮಧುಮೇಹಕ್ಕೆ ರಾಮಾಬಾಣ: ಎಲ್ಲಾ ಬಗೆಯ ಜ್ವರಗಳಿಗೂ ಅಮೃತ ಬಳ್ಳಿಯು ಉತ್ತಮ ಔಷಧಿಯಾಗಿದೆ. ಚಿಕನ್ ಗುನ್ಯ, ಎಚ್1ಎನ್1 ಜ್ವರ ಕಾಣಿಸಿಕೊಂಡಾಗ ಜನರು ದುಬಾರಿ ಬೆಲೆ ನೀಡಿ ಖರೀದಿಸಿರೋದು ಉಂಟು. ಮಧುಮೇಹ ರೋಗಕ್ಕೂ ಸಹ ಔಷಧೀಯಾಗಿ ಉಪಯೋಗಿಸುತ್ತಾರೆ. ಅದರ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆಅಹಾರ ಸೇವನೆಯ ಮುಂಚೆ ಸೇವಿಸಬೇಕು.
ಆಮೃತ ಬಳ್ಳಿಯ ಚೂರನ್ನು ಅರ್ಧ ಟೀ ಚಮಚದಷ್ಟು ಒಂದೆರಡು ಮೆಣಸು ಕಾಳಿನ ಪುಡಿ ಸೇರಿಸಿ ಬಿಸಿ ನೀರಿನಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿಯಂತೆ ಸೇವಿಸುವುದರಿಂದ ಎದೆ ನೋವು ಕಡಿಮೆಯಾಗುತ್ತದೆ.
ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡುವುದು. ಅಪಾಯಕಾರಿ ರೋಗಗಳಿಗೆ ದೇಹ ತುತ್ತಾಗದಂತೆ ಸಂರಕ್ಷಣೆ ಮಾಡುತ್ತದೆ. ಪಿತ್ತ ಕೋಶ, ಮೂತ್ರ ಕೋಶಗಳಲ್ಲಿ ಸಂಗ್ರಹವಾಗುವ ವಿಷಕಾರಿ ಅಂಶಗಳನ್ನು ಹೋಗಲಾಡಿಸಲು ಸಹಕಾರಿ. ಬಾಣಂತಿಯರು ಅಮೃತ ಬಳ್ಳಿ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಎದೆಹಾಲು ಶುದ್ಧಿಯಾಗುತ್ತದೆ.
ಅರ್ಧ ಗ್ರಾಂ ಅಮೃತ ಬಳ್ಳಿಯನ್ನು ನೆಲ್ಲಿ ಕಾಯಿ ಜೊತೆ ಮಿಶ್ರಣ ಮಾಡಿ ಸೇವಿಸಿದರೆ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಉಸಿರಾಟದದ ತೊಂದರೆ ಸೇರಿದಂತೆ ಅಸ್ತಮಾದಂತಹ ರೋಗಗಳ ಚಿಕಿತ್ಸೆಯಲ್ಲಿ ಅಮೃತ ಬಳ್ಳಿಗೆ ಮಹತ್ವದ ಸ್ಥಾನವಿದೆ. ಅಸ್ತಮಾ ರೋಗಿಗಳು ದಿನನಿತ್ಯ ಅಮೃತ ಬಳ್ಳಿ ಸೇವಿಸುವುದರಿಂದ ರೋಗ ಕಡಿಮೆಯಾಗುತ್ತದೆ.
ಅಮೃತ ಬಳ್ಳಿಯ ನಯವಾದ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕದಡಿ ದಿನಕ್ಕೆ ಎರಡು ಬಾರಿಯಂತೆ ಸೇವಿಸುವುದರಿಂದ ಬಹುಮೂತ್ರ ಶಮನವಾಗುತ್ತದೆ. ಸಂಧಿವಾತ ಅಥವಾ ಮಂಡಿ ನೋಮಿನಿಂದ ಬಳಲುವವರಿಗೆ ಕೂಡ ಅಮೃತ ಬಳ್ಳಿ ಸಹಾಯ ಮಾಡುತ್ತದೆ. ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿರುವಾಗಲೇ ಇದನ್ನು ಸೇವಿಸಿದರೆ ನೋವು ಶಮನವಾಗುತ್ತದೆ.
ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಥೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು. (ಸಂಬಾರ ಬಳ್ಳಿಯ ಎಲೆ, ಮಜ್ಜೆಗೆ ಸೊಪ್ಪು, ತುಳಸಿ, ಲವಂಗ, ಅರಸಿನ ಪುಡಿ, ಕಾಳು ಮೆಣಸು, ಜೇರಿಗೆ, ಶುಂಠಿ) ಈ ಕಷಾಯವನ್ನು ವಾರದಲ್ಲಿ ಒಂದು ಬಾರಿ ಅರ್ಧ ಲೋಟದಂತೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ದೇಹದ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ.
ಇಂತಹ ಮನೆ ಮದ್ದು ಅಮೃತ ಬಳ್ಳಿಯನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡರೆ ಆರೋಗ್ಯ ಸಮಸ್ಯೆಯಿಂದ ದೂರ ಇರುವುದಂತೂ ನಿಚ್ಚಳ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.