Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್ ಆಗಲಿರುವ ಸಿನಿಮಾಗಳ ಪಟ್ಟಿ
ಸುಹಾನ್ ಶೇಕ್, Oct 26, 2024, 5:32 PM IST
ಭಾರತದಲ್ಲಿ ರಜಾದಿನ ಅಥವಾ ಹಬ್ಬದ ಸಂದರ್ಭದಲ್ಲಿ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗುವುದು ಸಾಮಾನ್ಯ. ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ಸಿನಿಮಾಗಳು ಹೆಚ್ಚು ರಿಲೀಸ್ ಆದರೆ, ಉತ್ತರ ಭಾರತದಲ್ಲಿ ಈದ್ ಹಬ್ಬದ ಸಂದರ್ಭದಲ್ಲಿ ಹೆಚ್ಚು ಸಿನಿಮಾಗಳು ಅಥವಾ ನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗುತ್ತವೆ
ಈ ಹಬ್ಬಗಳನ್ನು ಹೊರತುಪಡಿಸಿದರೆ ದೀಪಾವಳಿ ಹಬ್ಬಕ್ಕೂ ಥಿಯೇಟರ್‌ಗಳು ಭರ್ತಿ ಆಗುತ್ತವೆ. ಈ ವರ್ಷ ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಹಿಂದಿಯಲ್ಲೂ ಹಲವು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡಲಿದೆ. ಇಲ್ಲಿದೆ ಅವುಗಳ ಪಟ್ಟಿ..
ಕಾಲಿವುಡ್: ಕಾಲಿವುಡ್‌ನಲ್ಲಿ ದೀಪಾವಳಿ ಹಬ್ಬಕ್ಕೆ ಬಾಕ್ಸಾಫೀಸ್ ದಂಗಲ್ ಆಗುವ ಸಾಧ್ಯತೆ ಹೆಚ್ಚಿದೆ. 3 ಸ್ಟಾರ್ ಸಿನಿಮಾಗಳು ಕಾಲಿವುಡ್ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಲಿದೆ.
ಅಮರನ್ (Amaran): ಶಿವಕಾರ್ತಿಕೇಯನ್ (Sivakarthikeyan) ಮತ್ತು ಸಾಯಿ ಪಲ್ಲವಿ (Sai Pallavi) ಮುಖ್ಯ ಭೂಮಿಕೆಯ ʼಅಮರನ್ʼ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಮೇಜರ್ ಮುಕುಂದ್ ವರದರಾಜನ್ ಅವರ ಸಾಹಸಗಾಥೆಯ ಬಯೋಪಿಕ್ ಸಿನಿಮಾ ಕಾಲಿವುಡ್ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಭಾಷೆಯಲ್ಲಿ ರಿಲೀಸ್ ಆಗಲಿದೆ.
ರಾಜಕುಮಾರ್ ಪೆರಿಯಸಾಮಿ ನಿರ್ದೇಶನದ ಸಿನಿಮಾದಲ್ಲಿ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಜತೆಗೆ ಭುವನ್ ಅರೋರಾ, ರಾಹುಲ್ ಬೋಸ್ ಮುಂತಾದವರು ನಟಿಸಿದ್ದಾರೆ. ಇದೇ ಅಕ್ಟೋಬರ್ 31ರಂದು ಸಿನಿಮಾ ತೆರೆಗೆ ಬರಲಿದೆ.
ಬ್ರದರ್(Brother):
ಜಯಂರವಿ (Jayam Ravi) ಪ್ರಧಾನ ಪಾತ್ರದಲ್ಲಿರುವ ʼಬ್ರದರ್ʼ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವನ್ನು ಒಳಗೊಂಡಿದೆ. ಸಹೋದರ ಹಾಗೂ ಸಹೋದರಿ ಕಥೆ ಈ ಸಿನಿಮಾದಲ್ಲಿ ಜಯಂರವಿ ಜತೆ ಪ್ರಿಯಾಂಕಾ ಅರುಳ್ ಮೋಹನ್, ಹ್ಯಾರಿಸ್ ಜಯರಾಜ್ ನಟಿಸಿರುವ ಈ ಸಿನಿಮಾ ಅಕ್ಟೋಬರ್ 31 ರಂದು ರಿಲೀಸ್ ಆಗಲಿದೆ.
ಬ್ಲಡಿ ಬೆಗ್ಗರ್ (Bloody Beggar): ನಟ ಕೆವಿನ್ (Kavin) ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಒಂದು ಭಿಕ್ಷುಕನ ಸುತ್ತ ನಡೆಯುವ ವಿವಿಧ ಘಟನೆಗಳನ್ನು ಹೇಳುತ್ತದೆ. ಭಿಕ್ಷುಕನ ಸುತ್ತ ನಡೆಯುವ ನಾನಾ ರೀತಿಯ ಪ್ರಸಂಗವನ್ನು ಹಾಸ್ಯದ ರೀತಿ ತೋರಿಸಲಾಗಿದ್ದು, ಡಿಫ್ರೆಂಟ್ ಸ್ಟೋರಿಗೆ ನೆಲ್ಸನ್ ದಿಲೀಪ್ ಕುಮಾರ್ ಬಂಡವಾಳ ಹಾಕಿದ್ದಾರೆ.
ಶಿವಬಾಲನ್ ಮುತ್ತುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಕೆವಿನ್ ಜತೆ ರೆಡಿನ್ ಕಿಂಗ್ಸ್ಲಿ, ಮಾರುತಿ ಪ್ರಕಾಶ್ ರಾಜ್, ಸುನಿಲ್ ಸುಖಾದ, ಟಿ ಎಂ ಕಾರ್ತಿಕ್, ಪದಂ ವೇಣು ಕುಮಾರ್, ಅರ್ಷದ್, ಮಿಸ್ ಸಲೀಮಾ, ಪ್ರಿಯದರ್ಶಿನಿ ರಾಜಕುಮಾರ್ ಮುಂತಾದವರು ನಟಿಸಿದ್ದಾರೆ. ಇದೇ ಅಕ್ಟೋಬರ್ 31 ರಂದು ಸಿನಿಮಾ ರಿಲೀಸ್ ಆಗಲಿದೆ.
ಟಾಲಿವುಡ್: ಟಾಲಿವುಡ್ ಕೂಡ ದೀಪಾವಳಿ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಭರ್ಜರಿ ಮನರಂನೆಯೊಂದಿಗೆ ಬರುತ್ತಿದೆ.
ʼಲಕ್ಕಿ ಭಾಸ್ಕರ್ʼ (Lucky Baskhar):
ದುಲ್ಖರ್ ಸಲ್ಮಾನ್(Dulquer Salmaan) ಈಗಾಗಲೇ ʼಸೀತಾ ರಾಮಂʼ ಮೂಲಕ ಟಾಲಿವುಡ್‌ನಲ್ಲಿ ಮೋಡಿ ಮಾಡಿದ್ದಾರೆ. ಇದೀಗ ಅವರು ಮತ್ತೊಂದು ತೆಲುಗು ಸಿನಿಮಾ ʼಲಕ್ಕಿ ಭಾಸ್ಕರ್ʼ ರಿಲೀಸ್‌ಗೆ ಸಿದ್ದವಾಗಿದೆ. 80ರ ಕಾಲಘಟ್ಟದಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬನ ಜೀವನದ ಆರ್ಥಿಕ ಸ್ಥಿತಿಯ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ.
ಪ್ಯಾನ್ ಇಂಡಿಯಾ ಭಾಷೆಯಲ್ಲಿ ಅಕ್ಟೋಬರ್ 31ಕ್ಕೆ ʼಲಕ್ಕಿ ಭಾಸ್ಕರ್ʼ ರಿಲೀಸ್ ಆಗಲಿದೆ. ವೆಂಕಿ ಅಟ್ಲೂರಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್ ಜತೆ ಮೀನಾಕ್ಷಿ ಚೌಧರಿ, ಆಯೇಷಾ ಖಾನ್, ಹೈಪರ್ ಆದಿ, ಸೂರ್ಯ ಶ್ರೀನಿವಾಸ್, ಸಾಯಿ ಕುಮಾರ್ ಮುಂತಾದವರು ನಟಿಸಿದ್ದಾರೆ.
ಕ(Ka): ಟೈಮ್ ಟ್ರಾವೆಲ್ ಥ್ರಿಲ್ಲರ್ ಕಥೆ ʼಕʼ ಐದು ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಸುಜಿತ್ & ಸಂದೀಪ್ ನಿರ್ದೇಶನ ಮಾಡಿದ್ದಾರೆ. ಕಿರಣ್ ಅಬ್ಬವರಂ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ತನ್ವಿ ರಾಮ್, ನಯನ್ ಸಾರಿಕಾ, ಅಚ್ಯುತ್ ಕುಮಾರ್, ರೆಡಿನ್ ಕಿಂಗ್ಸ್ಲಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಅಕ್ಟೋಬರ್ 31ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಸ್ಯಾಂಡಲ್ ವುಡ್: ಸ್ಯಾಂಡಲ್ ವುಡ್ ಪ್ರಿಯರಿಗೆ ದೀಪಾವಳಿ ಹಬ್ಬ ಜೋರಾಗಿಯೇ ಇರಲಿದೆ ಅದಕ್ಕೆ ಕಾರಣ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ʼಬಘೀರʼ ಸಿನಿಮಾದ ರಿಲೀಸ್ ಎಂದರೆ ತಪ್ಪಾಗದು.
ʼಬಘೀರʼ(Bagheera): ಚಂದನವನದಲ್ಲಿ ಸೆಟ್ಟೇರಿದ ದಿನದಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡಿರುವ ಡಾ. ಸೂರಿ ನಿರ್ದೇಶನದ ʼಬಘೀರʼ ಹಲವು ವಿಳಂಬಗಳ ಬಳಿಕ ರಿಲೀಸ್‌ಗೆ ರೆಡಿಯಾಗಿದೆ. ಮುರಳಿ ಪೊಲೀಸ್ ಅವತಾರದ ಜತೆಗೆ ವಿಲನ್ ಆಗಿಯೂ ಸಿನಿಮಾದಲ್ಲಿ ಅಬ್ಬರಿಸಲಿದ್ದಾರೆ.
ಸಖತ್ ಕುತೂಹಲ ಹುಟ್ಟಿಸಿರುವ ʼಬಘೀರʼ ದಲ್ಲಿ ಶ್ರೀಮುರಳಿ ಜತೆ ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ನಟಿಸಿದ್ದಾರೆ.
ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ.
ಬಾಲಿವುಡ್‌ನಲ್ಲಿ ಭಾರೀ ಪೈಪೋಟಿ..: ಬಾಲಿವುಡ್ ನಲ್ಲಿ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಬಾಕ್ಸಾಫೀಸ್ ನಲ್ಲಿ ಪೈಪೋಟಿ ಉಂಟಾಗುವ ಸಾಧ್ಯತೆಯಿದೆ. ಏಕೆಂದರೆ ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲಿವೆ.
ಭೂಲ್ ಭುಲೈಯಾ 3 (Bhool Bhulaiyaa 3): ಬಾಲಿವುಡ್‌ನಲ್ಲಿ ಬಿಗ್ ಹಿಟ್ ಕೊಟ್ಟ ʼಭೂಲ್ ಭುಲೈಯಾ-2ʼ ಮೂರನೇ ಭಾಗದ ಮೇಲೆ ಅದೇ ನಿರೀಕ್ಷಯನ್ನಿಟ್ಟುಕೊಳ್ಳಲಾಗಿದೆ. ಕಾರ್ತಿಕ್ ಆರ್ಯನ್ (Kartik Aaryan) ʼರೂಹ್ ಬಾಬಾʼ ನಾಗಿ ರಕ್ತಘಾಟ್ ಎಂಬ ಸಾಮ್ರಾಜ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರು ʼಮಂಜುಲಿಕಾʼ (ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್) ಗಳ ಸುತ್ತ ಕಥೆ ಸಾಗಲಿದೆ.
ಅನೀಸ್ ಬಾಜ್ಮಿ ನಿರ್ದೇಶನದ ʼಭೂಲ್ ಭುಲೈಯಾ 3ʼ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ಮತ್ತು ತೃಪ್ರಿ ದಿಮ್ರಿ ಸೇರಿದಂತೆ ಸಿನಿಮಾದಲ್ಲಿ ಹಲವರು ನಟಿಸಿದ್ದಾರೆ. ಇದೇ ನವೆಂಬರ್ 1 ರಂದು ಸಿನಿಮಾ ರಿಲೀಸ್ ಆಗಲಿದೆ.
ʼಸಿಂಗಂ ಎಗೇನ್ʼ(Singham Again):
ರೋಹಿತ್ ಶೆಟ್ಟಿ(Rohit Shetty) – ಅಜಯ್ ದೇವಗನ್ (Ajay Devgn) ಅವರ ʼಸಿಂಗಂ ಎಗೇನ್ʼ ಸಿನಿಮಾ ಕೂಡ ನವೆಂಬರ್ 1ಕ್ಕೆ ರಿಲೀಸ್ ಆಗಲಿದೆ.
ರಾಮಾಯಣದ ಕಥೆಯ ಹಿನ್ನೆಲೆಯನ್ನು ಸಿನಿಮಾದ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಆ್ಯಕ್ಷನ್ ಪ್ಯಾಕೇಜ್ ʼಸಿಂಗಂ ಎಗೇನ್ʼ ನಲ್ಲಿ ಮಲ್ಟಿಸ್ಟಾರ್ಸ್ ಗಳಿದ್ದಾರೆ. ಅಜಯ್ ದೇವಗನ್ (ಬಾಜಿರಾವ್ ಸಿಂಗ೦) ಆಗಿ ಕಾಣಿಸಿಕೊಳ್ಳಲಿದ್ದಾರೆ.
ಶಕ್ತಿ ಶೆಟ್ಟಿಯಾಗಿ ದೀಪಿಕಾ ಪಡುಕೋಣೆ ಎಸಿಪಿ ಸತ್ಯ ಆಗಿ ಟೈಗರ್ ಶ್ರಾಫ್, ಸಿಂಬನಾಗಿ ರಣವೀರ್ ಸಿಂಗ್ , ಸೂರ್ಯವಂಶಿ ಆಗಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಕಪೂರ್ ನಗೆಟಿವ್ ರೋಲ್‌ನಲ್ಲಿ ಮಿಂಚಲಿದ್ದಾರೆ.
ಇದಲ್ಲದೆ ದೀಪಾವಳಿ ಹಬ್ಬದ ಒಂದು ವಾರದ ಬಳಿಕ ಕೂಡ ಅನೇಕ ಸಿನಿಮಾಗಳು ರಿಲೀಸ್ ಆಗಲಿದೆ. ʼನಾನು ಕಥಲನ್ʼ ʼಪ್ರೇಮಲುʼ ನಿರ್ದೇಶಕ ಹಾಗೂ ನಟ ಮತ್ತೆ ಜತೆಯಾಗುತ್ತಿದ್ದಾರೆ. ಈ ಮಾಲಿವುಡ್ ಸಿನಿಮಾ ನವೆಂಬರ್ 7 ರಂದು ರಿಲೀಸ್ ಆಗಲಿದೆ. ʼಅನ್ಪೋಡು ಕಣ್ಮಣಿʼ ಎನ್ನುವ ಮಲಯಾಳಂ ಸಿನಿಮಾ ನವೆಂಬರ್ 8ರಂದು ರಿಲೀಸ್ ಆಗಲಿದೆ.
ʼರಹಸ್ಯ ಇದಮ್ ಜಗತ್ʼ ಎನ್ನುವ ತೆಲುಗು ಸಿನಿಮಾ ನವೆಂಬರ್ 8 ರಂದು ರಿಲೀಸ್ ಆಗಲಿದೆ. ʼಶ್ರೀ ಶ್ರೀ ಶ್ರೀ ರಾಜಾವರುʼ ಎನ್ನುವ ತೆಲುಗು ಸಿನಿಮಾ ನವೆಂಬರ್ 8ಕ್ಕೆ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.