Movies: ಬೆಳಕಿನ ಹಬ್ಬಕ್ಕೆ ಥಿಯೇಟರ್ ತುಂಬಾ ಸಿನಿಮಾ.. ಇಲ್ಲಿದೆ ರಿಲೀಸ್ ಪಟ್ಟಿ
ಕಾಲಿವುಡ್ ನಿಂದ ಬರುತ್ತಿದೆ ʼಟಗರುʼ ರಿಮೇಕ್
ಸುಹಾನ್ ಶೇಕ್, Nov 9, 2023, 4:48 PM IST
ದೀಪಾವಳಿ ವೀಕ್ ಬಂದಿದೆ. ಆಫೀಸ್ ಗಳಿಗೆ ರಜಾ ಇದ್ದರೆ, ಸಿನಿಮಾ ನೋಡುವ ಪ್ಲ್ಯಾನ್ ಹಾಕಿಕೊಂಡಿದ್ದರೆ ಈ ಕೆಳಗಿನ ಸಿನಿಮಾಗಳನ್ನು ಮಿಸ್ ಮಾಡ್ಕೋಬೇಡಿ. ಈ ವಾರ ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಪ್ರಮುಖ ಸಿನಿರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗಲಿವೆ.
ದೀಪಾವಳಿ ಹಬ್ಬದ ರಜಾ ಸಮಯದಲ್ಲಿ ಸಿನಿಮಾ ನೋಡುವ ಯೋಜನೆ ಹಾಕಿಕೊಂಡಿದ್ದರೆ, ಈ ವಾರ ರಿಲೀಸ್ ಆಗುವ ಈ ಸಿನಿಮಾಗಳನ್ನು ನೋಡಿ..
ಹಾಲಿವುಡ್ ನಿಂದ ಬರಲಿದೆ ʼಮಾರ್ವೆಲ್ʼ: ಹಾಲಿವುಡ್ ಸಿನಿಮಾರಂಗದಲ್ಲಿ ʼ ಮಾರ್ವೆಲ್ʼ ಸರಣಿಯ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿರುತ್ತದೆ. 2019 ರಲ್ಲಿ ʼಕ್ಯಾಪ್ಟನ್ ಮಾರ್ವೆಲ್ʼ ತೆರೆಗೆ ಬಂದಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕಮಾಯಿ ಮಾಡಿತ್ತು. ಅದೇ ಸಿನಿಮಾದ ಸೀಕ್ವೆಲ್ ಆಗಿ ʼದಿ ಮಾರ್ವೆಲ್ʼ ಸಿನಿಮಾ ನ.10 ರಂದು(ಶುಕ್ರವಾರ) ರಿಲೀಸ್ ಆಗಲಿದೆ.
ಅಂದಹಾಗೆ ಈ ಸಿನಿಮಾದಲ್ಲಿ ಬ್ರೀ ಲಾರ್ಸನ್, ಕರೋಲ್ ಡ್ಯಾನ್ವರ್ಸ್ , ಟೆಯೋನಾಹ್ ಪ್ಯಾರಿಸ್ , ಇಮಾನ್ ವೆಲ್ಲಾನಿ ಮುಂತಾದ ಹಾಲಿವುಡ್ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.
ಹೈಪ್ ಹೆಚ್ಚಿಸಿದ ʼಟೈಗರ್ -3ʼ: ಸಲ್ಮಾನ್ ಖಾನ್ ವೃತ್ತಿ ಬದುಕಿನಲ್ಲಿ ʼಟೈಗರ್ʼ ಸರಣಿಗಳ ಸಿನಿಮಾ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ಅವರ ʼಟೈಗರ್ʼ ಸಿನಿಮಾಗಳಲ್ಲಿ ಮಾಸ್ ಅಂಶಗಳು ಹೆಚ್ಚಿರುತ್ತದೆ. ಈ ಬಾರಿ ಕತ್ರಿನಾ ಕೈಫ್ ಅವರೊಂದಿಗೆ ʼಟೈಗರ್-3ʼ ಮಿಷನ್ ಮೂಲಕ ರೋಚಕ ಸವಾರಿಯನ್ನು ಸಲ್ಮಾನ್ ಮಾಡಲಿದ್ದಾರೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳು ಗಮನ ಸೆಳೆಯುತ್ತಿದೆ.
ʼರಾʼ ಏಜೆಂಟ್ ಆಗಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾದಲ್ಲಿ ವಿಲನ್ ಆಗಿ ಇಮ್ರಾನ್ ಹಶ್ಮಿ ಅವರು ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ 12 ರಂದು ಸಿನಿಮಾ ರಿಲೀಸ್ ಆಗಲಿದೆ.
ಕಾಲಿವುಡ್‌ನಲ್ಲಿ ಎರಡು ದೊಡ್ಡ ಸಿನಿಮಾ, ಒಂದು ಹೊಸಬರ ಸಿನಿಮಾ: ಬಾಕ್ಸ್ ಆಫೀಸ್ ದಂಗಲ್: ಈ ಬಾರಿಯ ದೀಪಾವಳಿ ಹಬ್ಬ ಕಾಲಿವುಡ್ ಅಭಿಮಾನಿಗಳಿಗೆ ಬಹಳ ವಿಶೇಷ. ಏಕೆಂದರೆ ಒಂದೇ ದಿನ ಎರಡು ದೊಡ್ಡ ಸಿನಿಮಾಗಳ ಜೊತೆ ಮತ್ತೊಂದು ಸಿನಿಮಾನೂ ತೆರೆಗೆ ಅಪ್ಪಳಿಸಲಿದೆ.
ಕಾರ್ತಿ ಅವರು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ ʼಜಪಾನ್ʼ ಸಿನಿಮಾದ ಮೇಲೆ ಪ್ರೇಕ್ಷಕರು ಬಹು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ದರೋಡೆಯ ಹಾಗೂ ಕಾಮಿಡಿ ಕಥಾಹಂದರ ಒಳಗೊಂಡಿರುವ ʼಜಪಾನ್ʼ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನು ಇಮ್ಯಾನುಯೆಲ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಕ್ರೇಜಿ ಆಗಿರುವ ಈ ಸಿನಿಮಾ ಶುಕ್ರವಾರ(ನ.10 ರಂದು) ರಿಲೀಸ್ ಆಗಲಿದೆ.
ಇನ್ನು ಕಾಲಿವುಡ್ ನಲ್ಲಿ ರಿಲೀಸ್ ಆಗಲಿರುವ ಮತ್ತೊಂದು ಸಿನಿಮಾವೆಂದರೆ ಅದು, ಕಾರ್ತಿಕ್ ಸುಬ್ಬರಾಜ್ ಅವರ ʼ ಜಿಗರ್ತಾಂಡ ಡಬಲ್ ಎಕ್ಸ್ʼ 2014 ರಲ್ಲಿ ಬಂದ ʼಜಿಗರ್ತಾಂಡʼ ಆಗಿದ್ದು, ಅದೇ ಟೈಟಲ್ ನಲ್ಲಿ ಬರುತ್ತಿರುವ ಈ ಸಿನಿಮಾ ಮೋಡಿ ಮಾಡುವ ಸಾಧ್ಯತೆಯಿದೆ. ಕಾರ್ತಿಕ್ ಸುಬ್ಬರಾಜ್ ಅವರ ಈ ಸಿನಿಮಾ 1975 ರ ಕಥೆಯನ್ನೊಳಗೊಂಡಿದೆ. ಗ್ಯಾಂಗ್‌ಸ್ಟರ್ ಪಾಂಡಿಯನ್ ಸುತ್ತ ಸಿನಿಮಾದ ಕಥೆ ಸಾಗುತ್ತದೆ.
ರಾಘವ ಲಾರೆನ್ಸ್, ಎಸ್ ಜೆ ಸೂರ್ಯ, ನಿಮಿಷಾ ಸಜಯನ್ ಮುಂತಾದವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶುಕ್ರವಾರ(ನ.10 ರಂದು) ಸಿನಿಮಾ ರಿಲೀಸ್ ಆಗಲಿದೆ.
ಹಿಟ್ ಆಗುತ್ತಾ ʼಟಗರುʼ ರಿಮೇಕ್ ʼರೇಡ್ʼ: ಎರಡು ದೊಡ್ಡ ಸಿನಿಮಾಗಳನ್ನು ಹೊರತುಪಡಿಸಿದರೆ ಅದೇ ದಿನ ಕಾಲಿವುಡ್ ನಲ್ಲಿ ಮತ್ತೊಂದು ಸಿನಿಮಾ ಕೂಡ ರಿಲೀಸ್ ಆಗಲಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಅವರ ʼಟಗರುʼ ಸಿನಿಮಾದ ರಿಮೇಕ್ ಸಿನಿಮಾವಾಗಿ ʼರೇಡ್ʼ ಎನ್ನುವ ಸಿನಿಮಾವೊಂದು ತೆರೆಗೆ ಬರಲಿದೆ. ನವ ನಿರ್ದೇಶಕ ಕಾರ್ತಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸರಣಿ ಕೊಲೆಗಳ ರಹಸ್ಯವನ್ನು ಬೇಧಿಸುವ ಪೊಲೀಸ್ ಅಧಿಕಾರಿಯ ಸುತ್ತ ಸಿನಿಮಾದ ಕಥೆ ಸಾಗುತ್ತದೆ.
ಇದರೊಂದಿಗೆ ʼಕಿಡಾʼ ಎನ್ನುವ ತಮಿಳು ಸಿನಿಮಾ ಕೂಡ ರಿಲೀಸ್ ಆಗಲಿದೆ. ರಾ. ವೆಂಕಟ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನ.11 ರಂದು ರಿಲೀಸ್ ಆಗಲಿದೆ.
ಟಾಲಿವುಡ್ ನಿಂದ ʼಅಲಾ ನಿನ್ನು ಚೆರಿʼ ರಿಲೀಸ್: ಇನ್ನು ಟಾಲಿವುಡ್ ಸಿನಿಮಾರಂಗದತ್ತ ಗಮನ ಹರಿಸಿದರೆ, ದಿನೇಶ್ ತೇಜ್ ಅಭಿನಯದ ʼಅಲಾ ನಿನ್ನ ಚೆರಿʼ ರಿಲೀಸ್ ಆಗಲಿದೆ. ಹೆಬ್ಬಾ ಪಟೇಲ್, ಪಾಯಲ್ ರಾಧಾಕೃಷ್ಣ, ಕಲ್ಪಲತಾ, ಖೇದಾರ್ ಶಂಕರ್, ಝಾನ್ಸಿ ಮುಂತಾದವರು ನಟಿಸಿರುವ ಈ ಸಿನಿಮಾ ಶುಕ್ರವಾರ(ನ.10 ರಂದು) ರಿಲೀಸ್ ಆಗಲಿದೆ.
ಕಮಾಲ್ ಮಾಡುತ್ತಾ ಯೋಗರಾಜ್ ಭಟ್ರ ʼಗರಡಿʼ? ಇನ್ನು ಸ್ಯಾಂಡಲ್ ವುಡ್ ನಲ್ಲೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ʼಗರಡಿʼ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದಿರುವ ʼಗರಡಿʼ ಪಕ್ಕಾ ದೇಸಿ ಸಿನಿಮಾವಾಗಿದ್ದು, ಯಶಸ್ ಸೂರ್ಯ, ಸೋನಾಲ್ ಮೊಂಟೆರೊ, ರವಿ ಶಂಕರ್ , ಬಿಸಿ ಪಾಟೀಲ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ದರ್ಶನ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಇದರೊಂದಿಗೆ ಮಾಸ್ಟರ್ ಆನಂದ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ʼನಾಕೋಳಿಕ್ಕೆರಂಗʼ ಸಿನಿಮಾ ಕೂಡ ಶುಕ್ರವಾರ(ನ.10 ರಂದು) ರಿಲೀಸ್ ಆಗಲಿದೆ.
ಮಾಲಿವುಡ್ ನಲ್ಲಿ ಮೋಡಿ ಮಾಡಲು ಸಾಲು ಸಾಲು ಸಿನಿಮಾ.. : ಮಾಲಿವುಡ್ ಸಿನಿಮಾರಂಗ ಕೂಡ ದೀಪಾವಳಿ ಹಬ್ಬದ ಪ್ರಯುಕ್ತ ಬಹು ನಿರೀಕ್ಷೆಯ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದೆ.
ನಟ ದಿಲೀಪ್ ಅವರ ʼಬಾಂದ್ರಾʼ ಸಿನಿಮಾ ಶುಕ್ರವಾರ(ನ.10 ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ತಮನ್ನಾ ಕಾಣಿಸಿಕೊಳ್ಳಲಿದ್ದು, ಆ ಮೂಲಕ ಅವರು ಮಾಲಿವುಡ್ ಎಂಟ್ರಿ ಕೊಡಲಿದ್ದಾರೆ. ಈ ಹಿಂದೆ ದಿಲೀಪ್ ಹಾಗೂ ನಿರ್ದೇಶಕ ಅರುಣ್ ಗೋಪಿ ʼರಾಮಲೀಲಾʼ ಸಿನಿಮಾವನ್ನು ಮಾಡಿದ್ದರು. ಆ ಸಿನಿಮಾ ಒಂದಷ್ಟು ಸದ್ದು ಮಾಡಿತ್ತು.
ಇನ್ನು ಶೇನ್ ನಿಗಮ್, ಸನ್ನಿ ವೇನ್ ಅವರ ʼವೇಲಾʼ ಸಿನಿಮಾ ಶುಕ್ರವಾರ(ನ.10 ರಂದು) ರಿಲೀಸ್ ಆಗಲಿದೆ. ಪೊಲೀಸ್ ಆಫೀಸರ್ ಆಫೀಸರ್ ಆಗಿ ಸಿನಿಮಾದಲ್ಲಿ ಶೇನ್ ಕಾಣಿಸಿಕೊಳ್ಳಲಿದ್ದಾರೆ.
ಯಾವ ಸಿನಿಮಾವನ್ನು ನೋಡಲು ಪ್ಲ್ಯಾನ್ ಹಾಕಿಕೊಂಡಿದ್ದೀರಿ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
Zakir Hussain: 5 ರೂ ಕಾನ್ಸರ್ಟ್ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್ ನಾದಮಯ ಪಯಣ
Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್ ಆಗುತ್ತಿರುವ ಈ ಬಾಲಕ ಯಾರು?
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.