ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗವಾಸ್ಕರ್ ಸರಣಿಗಿದೆ ರೋಚಕ ಇತಿಹಾಸ!


Team Udayavani, Dec 4, 2020, 6:00 PM IST

ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಸರಣಿಗಿದೆ ರೋಚಕ ಇತಿಹಾಸ

ಆ್ಯಷಸ್ ಹೊರತುಪಡಿಸಿದರೆ ಅತೀ ಹೆಚ್ಚು ಜನರನ್ನು ಸೆಳೆಯುವ, ಅತ್ಯಂತ ಜಿದ್ದಾಜಿದ್ದಿನ ಟೆಸ್ಟ್ ಸರಣಿಯೆಂದರೆ ಭಾರತ- ಆಸೀಸ್ ನಡುವಿನ ಬಾರ್ಡರ್- ಗವಾಸ್ಕರ್ ಟ್ರೋಫಿ. ಟೆಸ್ಟ್ ಕ್ರಿಕೆಟ್ ನಲ್ಲಿ ಶ್ರೀಮಂತ ಸರಣಿಗಳಲ್ಲಿ ಇದೂ ಒಂದು.

ಭಾರತ- ಆಸ್ಟ್ರೇಲಿಯಾ ತಂಡಗಳು 1947ರಿಂದಲೂ ಟೆಸ್ಟ್ ಕ್ರಿಕೆಟ್ ನಲ್ಲಿ ಮುಖಾಮುಖಿಯಾಗುತ್ತಿದೆ. 1947ರಿಂದ 1996ರವರೆಗೆ ಸುಮಾರು 50 ಟೆಸ್ಟ್ ಪಂದ್ಯಗಳಲ್ಲಿ ಇತ್ತಂಡಗಳು ಮುಖಾಮುಖಿಯಾಗಿದೆ. 1996ರಲ್ಲಿ ಈ ಸರಣಿಗೆ ಇಂಡೋ-ಆಸೀಸ್ ದಿಗ್ಗಜರಾದ ಅಲನ್ ಬಾರ್ಡರ್ ಮತ್ತು ಸುನೀಲ್ ಗವಾಸ್ಕರ್ ಹೆಸರಿಡಲಾಯಿತು. ಅಂದಿನಿಂದ ಭಾರತ – ಆಸ್ಟ್ರೇಲಿಯಾ ಟೆಸ್ಟ್ ಸರಣಿ ಬಾರ್ಡರ್- ಗವಾಸ್ಕರ್ ಟ್ರೋಫಿ ಎಂದು ಕರೆಯಲ್ಪಡುತ್ತದೆ.

ಮೊದಲ ಪಂದ್ಯ ನಡೆದಿದ್ದು 1996 ಅಕ್ಟೋಬರ್ ನಲ್ಲಿ. ದಿಲ್ಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ. ಆ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. 1997-98ರಲ್ಲಿ ಆಸ್ಟ್ರೇಲಿಯಾ ಮತ್ತೆ ಭಾರತ ಪ್ರವಾಸ ಮಾಡಿತ್ತು. ಆ ಸರಣಿಯನ್ನು ಭಾರತ 2-1 ಅಂತರದಿಂದ ಗೆಲುವು ಸಾಧಿಸಿತ್ತು. ಶೇನ್ ವಾರ್ನ್ ಎಸೆತಗಳನ್ನು ಸಚಿನ್ ತೆಂಡುಲ್ಕರ್ ಪುಡಿಗಟ್ಟಿದ್ದು ಈಗ ಇತಿಹಾಸ.

1999-2000 ರಲ್ಲಿ ಸಚಿನ್ ತೆಂಡುಲ್ಕರ್ ನೇತೃತ್ವದ ಭಾರತ ತಂಡ ಆಸೀಸ್ ಗೆ ತೆರಳಿತ್ತು. ಇದು ಆಸೀಸ್ ನೆಲದಲ್ಲಿ ನಡೆದ ಮೊದಲ ಬಾರ್ಡರ್- ಗವಾಸ್ಕರ್ ಸರಣಿ. ಆದರೆ ಸರಣಿಯಲ್ಲಿ ಕಾಂಗರೂಗಳು ಭಾರತದ ಮೇಲೆ ಸವಾರಿ ನಡೆಸಿದ್ದರು. ನಡೆದ ಮೂರು ಪಂದ್ಯಗಳಲ್ಲಿ ಆಸೀಸ್ ಗೆದ್ದು ಬೀಗಿತ್ತು. ಇದೇ ಸರಣಿಯಲ್ಲಿ ಬ್ರೇಟ್ ಲಿ ಎಂಬ ಸ್ಪೀಡ್ ಸ್ಟಾರ್ ನ ಉದಯವಾಗಿತ್ತು. ಈ ಸರಣಿಯಲ್ಲಿ ಮತ್ತೊಂದು ನೆನಪಿನಲ್ಲಿ ಉಳಿಯುವ ವಿಚಾರವೆಂದರೆ ಸಚಿನ್ ತೆಂಡುಲ್ಕರ್ ರ ಭುಜಕ್ಕೆ ತಾಗಿದ ಎಸೆತಕ್ಕೆ ಎಲ್ ಬಿಡಬ್ಲ್ಯೂ ಔಟ್ ನೀಡಿದ್ದು!

ದಾಖಲೆಯ 2001ರ ಸರಣಿ

2001ರಲ್ಲಿ ಭಾರತ ಪ್ರವಾಸಕ್ಕೆ ಆಗಮಿಸಿದ ಆಸೀಸ್ ಗೆ ಗಂಗೂಲಿ ಪಡೆ ಸೋಲಿನ ರುಚಿ ತೋರಿಸಿತ್ತು. ಹರ್ಭಜನ್ ಸಿಂಗ್ ಹ್ಯಾಟ್ರಿಕ್, ವಿವಿಎಸ್ ಲಕ್ಷ್ಮಣ್ 281 ರನ್, ದ್ರಾವಿಡ್ – ಲಕ್ಷ್ಮಣ್ ದಾಖಲೆಯ ಜೊತೆಯಾಟದ ಐತಿಹಾಸಿಕ ಕೋಲ್ಕತ್ತಾ ಟೆಸ್ಟ್ ಪಂದ್ಯ ನಡೆದಿದ್ದು ಇದೇ ಸರಣಿಯಲ್ಲಿ. ಭಾರತ 2-1ರ ಅಂತರದಿಂದ ಸರಣಿ ಜಯಿಸಿತ್ತು.

ದಾಖಲೆಯ 2001ರ ಸರಣಿ

2004ರಲ್ಲಿ ಭಾರತಕ್ಕೆ ಆಗಮಿಸಿದ ಆಸೀಸ್ ಬಳಗ 1969-70ರ ಬಳಿಕ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. 2007-08ರಲ್ಲಿ ಆಸೀಸ್ ನೆಲದಲ್ಲಿ ನಡೆದ ಸರಣಿ ಕಾಂಗರೂಗಳ ಕೆಟ್ಟ ಮುಖವನ್ನು ಜಗತ್ತಿಗೆ ಪರಿಚಯಿಸಿತ್ತು. ಕೆಟ್ಟ ಅಂಪಾಯರಿಂಗ್ ನಿರ್ಧಾರಗಳು, ಸೈಮಂಡ್ಸ್- ಹರ್ಭಜನ್ ನಡುವಿನ ಮಂಕಿಗೇಟ್ ಪ್ರಕರಣಗಳು ಆ ಕಾಲದಲ್ಲಿ ಕ್ರಿಕೆಟ್ ಗಿಂತ ಹೆಚ್ಚಾಗಿ ಸದ್ದು ಮಾಡಿದ್ದವು. ಪ್ರವಾಸಿಗರನ್ನು ಮಾನಸಿಕವಾಗಿಯೂ ಕುಗ್ಗಿಸಿದ್ದ ಆಸೀಸ್ ಆಟಗಾರರು ಸರಣಿ ಜಯಿಸಿದ್ದರು.

ಗಂಗೂಲಿ

2010ರಲ್ಲಿ ಎರಡು ಪಂದ್ಯಗಳ ಸರಣಿಗಾಗಿ ಆಸೀಸ್ ಭಾರತಕ್ಕೆ ಆಗಮಿಸಿತ್ತು. ಮೊದಲ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್ ಕೊನೆಯ ಎರಡು ವಿಕೆಟ್ ಗೆ ಇಶಾಂತ್ ಮತ್ತು ಓಝಾ ಜೊತೆಯಾಟವಾಡಿ ಗೆಲುವು ತಂದಿತ್ತರು. ಎರಡನೇ ಪಂದ್ಯದಲ್ಲೂ ಜಯಿಸಿದ ಧೋನಿ ಪಡೆ 2-0 ಅಂತರದ ಜಯ ಸಾಧಿಸಿತ್ತು.

ವೈಟ್ ವಾಷ್ ಅವಮಾನ

2011-12ರ ಸರಣಿಯಲ್ಲಿ ಆಸೀಸ್ ನಾಯಕ ಮೈಕಲ್ ಕ್ಲಾರ್ಕ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸೀಸ್ 4-0 ಅಂತರದಿಂದ ಸರಣಿ ಜಯಿಸಿತು, ಧೋನಿ ಪಡೆ ವೈಟ್ ವಾಷ್ ಅವಮಾನ ಅನುಭವಿಸಿತು. ಆದರೆ 2013ರ ಸರಣಿಯಲ್ಲಿ ಸೇಡು ತೀರಿಸಿಕೊಂಡ ಭಾರತ ತಂಡ 4-0 ಅಂತರದಲ್ಲಿ ಸರಣಿ ಗೆಲುವು ಸಾಧಿಸಿತು. ಈ ಸರಣಿಯಲ್ಲಿ ಎಂ.ಎಸ್.ಧೋನಿ ತನ್ನ ಜೀವನಶ್ರೇಷ್ಠ ಟೆಸ್ಟ್ ಸ್ಕೋರ್ 224 ರನ್ ಗಳಿಸಿದ್ದರು.

2014ರಲ್ಲಿ ಟೀಂ ಇಂಡಿಯಾವು ಆಸೀಸ್ ಪ್ರವಾಸ ಕೈಗೊಂಡಿತ್ತು. ಭಾರತ 2-0 ಅಂತರದ ಸೋಲನುಭವಿಸಿತು. ಇದೇ ಸರಣಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರು. ವಿರಾಟ್ ಕೊಹ್ಲಿ ಭಾರತದ ಹೊಸ ನಾಯಕನಾಗಿ ಆಯ್ಕೆಯಾದರು.

2018-19ರಲ್ಲಿ ಸ್ಯಾಂಡ್ ಪೇಪರ್ ಗೇಟ್ ವಿವಾದಿಂದ ಆಸೀಸ್ ತಂಡ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸೇವೆಯನ್ನು ಕಳೆದುಕೊಂಡಿತ್ತು. ಈ ಸಮಯವನ್ನು ಸದುಪಯೋಗ ಮಾಡಿಕೊಂಡ ಟೀಂ ಇಂಡಿಯಾ 2-1 ಅಂತರದಿಂದ ಸರಣಿ ಜಯಿಸಿತ್ತು. ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಭಾರತ ಟೆಸ್ಟ್ ಸರಣಿ ಜಯಿಸಿತ್ತು. ಚೇತೇಶ್ವರ ಪೂಜಾರ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ವಿರಾಟ್ ಕೊಹ್ಲಿ

ಇದೀಗ ಭಾರತ ತಂಡ ಮತ್ತೆ ಆಸೀಸ್ ಸರಣಿ ಕೈಗೊಂಡಿದೆ. ಈ ಬಾರಿಯೂ ನಾಲ್ಕು ಪಂದ್ಯಗಳನ್ನು ಆಡಲಿದೆ. ಪ್ರತಿಷ್ಠಿತ ಕದನಕ್ಕಾಗಿ ಕ್ರಿಕೆಟ್ ವಿಶ್ವ ಕಾತರದಿಂದ ಕಾಯುತ್ತಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.