ರುದ್ರಪ್ರಯಾಗದಲ್ಲಿ IFS ಅಧಿಕಾರಿಯ ಯಶೋಗಾಥೆ; 2 ವರ್ಷದಲ್ಲಿ 800 ಕೊಳ ನಿರ್ಮಾಣ!

2019ರಲ್ಲಿ ರುದ್ರಪ್ರಯಾಗ್‌ ಅಧಿಕಾರಿಯಾಗಿ ಬಂದ ಇವರು ಅಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗುತ್ತಾರೆ.

Team Udayavani, Apr 13, 2022, 5:14 PM IST

ರುದ್ರಪ್ರಯಾಗದಲ್ಲಿ IFS ಅಧಿಕಾರಿಯ ಯಶೋಗಾಥೆ; 2 ವರ್ಷದಲ್ಲಿ 800 ಕೊಳ ನಿರ್ಮಾಣ!

ಪ್ರಕೃತಿ ಸುಲಭವಾಗಿ, ಯಾವುದೇ ಪ್ರತಿಫ‌ಲಾಪೇಕ್ಷೆಯಿಂದ ನೀಡುವ ಗಾಳಿ, ಬೆಳಕು, ನೀರಿನ ಕುರಿತು ಮನುಷ್ಯನಿಗೆ ತಾತ್ಸಾರ. ಉಚಿತವಾಗಿ ಸಿಗುತ್ತದೆ ಎಂದರೆ ಹಾಗೇ ಅಲ್ಲವೇ?…ಎಷ್ಟು ಬೇಕಾದರೂ, ಹೇಗೆ ಬೇಕಾದರೂ ಬಳಸಬಹುದು. ಯಾರೂ ನಿರ್ಬಂಧಿಸುವವರಿಲ್ಲ ಎಂದು ಬೇಕಾಬಿಟ್ಟಿ ಬಳಸುತ್ತೇವೆ. ಅಷ್ಟೇ ಅಲ್ಲದೆ ಅದನ್ನು ಎಷ್ಟು  ಹಾಳಗೆಡುಹಬಹುದು ಅಷ್ಟು ಹಾಳು ಮಾಡುತ್ತೇವೆ.

ಗಾಳಿಯ ಹಾಗೆ ನೀರು ಅಷ್ಟೇ ಅಮೂಲ್ಯವಾದುದು. ನೀರಿಗಾಗಿಯೂ ಎಷ್ಟೋ ಕಡೆ ಹಾಹಾಕಾರವಿದೆ. ಬೇಸಗೆ ಕಾಲದಲ್ಲಿ ನೀರಿಲ್ಲದೆ ಕಷ್ಟ ಪಡುವ ಊರುಗಳೂ ಇವೆ. ನೀರಿನ್ನು ಮಿತ ಬಳಕೆ ಮಾಡಲು ಆರಂಭಿಸಿದರೆ  ಮುಂದೆ ಆಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು.  ಅದರೊಂದಿಗೆ ಮಳೆಕೊಯ್ಲು, ಇಂಗುಗುಂಡಿ ಮುಂತಾದವುಗಳನ್ನು ನಾವು ಮಾಡಲು ಆರಂಭಿಸಿದರೆ ನಮ್ಮಲ್ಲಿ ನೀರಿನ ಸಮಸ್ಯೆ ಕಾಡಲಿಕ್ಕಿಲ್ಲ.

ಪ್ರಯತ್ನ ಪಟ್ಟರೆ ಏನನ್ನೂ ಸಾಧಿಸಬಹುದು, ಬರಡು ಭೂಮಿಯಲ್ಲೂ ಬೆಳೆ ಬೆಳೆಯಬಹುದು ಎನ್ನುತ್ತಾರೆ. ಅಂತಹುದೇ ಸಾಧನೆ ಮಾಡಿದವರು ಉತ್ತರಖಂಡದ ವೈಭವ್‌ ಸಿಂಗ್‌.

ಉತ್ತರಖಂಡದ ರುದ್ರಪ್ರಯಾಗವು ಸಮುದ್ರಮಟ್ಟದಿಂದ ಸುಮಾರು 3,000 ಮೀ. ಎತ್ತರದಲ್ಲಿದೆ. ಇದು ಅತಿವೃಷ್ಟಿ, ಕಾಡ್ಗಿಚ್ಚಿಗೆ ಹೆಚ್ಚು  ಒಳಗಾಗುವ ಪ್ರದೇಶ. ಅಲ್ಲಿ  ನೀರಿಗಾಗಿ ಪರದಾಡುವ ಸ್ಥಿತಿ.  ಬೇಸಗೆ ಕಾಲದಲ್ಲಿ  ಮಣ್ಣಿನಲ್ಲಿ ತೇವಾಂಶವಿಲ್ಲದೆ ಬೆಂಕಿ ಹತ್ತಿಕೊಳ್ಳುತ್ತದೆ, ಮಳೆಗಾಲದಲ್ಲಿ  ಭೂ ಕುಸಿತ ಉಂಟಾಗುವ ಭೀತಿಯಿರುತ್ತದೆ. ಇಲ್ಲಿನ ಕಾಡುಗಳಲ್ಲಿ  ಪೈನ್‌ ಟ್ರೀಗಳೇ ತುಂಬಿರುವುದರಿಂದ ಮಣ್ಣಿನ ಸವೆತ ಹೆಚ್ಚಾಗಿತ್ತು. ಅಂತಹ ಊರಿನಲ್ಲಿ  ನೀರಿನ ಸಮಸ್ಯೆಗೆ ಮುಕ್ತಿ ನೀಡಿದವರು ವೈಭವ್‌ ಸಿಂಗ್‌. ಇವರು ರುದ್ರಪ್ರಯಾಗ್‌ ಜಿಲ್ಲೆಯಲ್ಲಿ ಭಾರತೀಯ ಅರಣ್ಯ ಸೇವಾ ಅಧಿಕಾರಿಯಾಗಿ ಮತ್ತು ವಿಭಾಗೀಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

2019ರಲ್ಲಿ ರುದ್ರಪ್ರಯಾಗ್‌ ಅಧಿಕಾರಿಯಾಗಿ ಬಂದ ಇವರು ಅಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗುತ್ತಾರೆ. ಅವರಿಗೆ ಸರಕಾರ ಬೆಂಬಲ ನೀಡುತ್ತದೆ. ವೈಭವ್‌ ಮಣ್ಣಿನ ತೇವಾಂಶ ಸಂರಕ್ಷಣೆ ಮಾಡಲು ಒತ್ತು ನೀಡಿದರು, ಜತೆಗೆ ಗರ್ವಾಲಿಯಲ್ಲಿ  ಕೊಳಗಳನ್ನು  ನಿರ್ಮಿಸಿದರು.  ವೈಭವ್‌ ಮತ್ತು ಅವರ ಸಿಬಂದಿ ಇಲ್ಲಿ  ಒಟ್ಟು 612 ಕೊಳಗಳನ್ನು ನಿರ್ಮಿಸಿದರು. ಒಟ್ಟು 10 ಮಿಲಿಯನ್‌ ಲೀಟರ್‌ಗಳಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಇದು ಹೊಂದಿದೆ. ಜತೆಗೆ ಸುಮಾರು 400 ಎಕರೆ ಜಾಗದಲ್ಲಿ  ಅವನತಿ ಹೊಂದಿದ್ದ ಅರಣ್ಯವನ್ನು ಮತ್ತೆ ಹಸುರಾಗಿಸಿದ್ದಾರೆ.

ಇವರು ತಮ್ಮ ಎರಡು ವರ್ಷಗಳ ಅವಧಿಯಲ್ಲಿ  887 ಕೊಳಗಳನ್ನು ನಿರ್ಮಿಸಿದ್ದಾರೆ. ಪ್ರತೀ ಕೊಳವು 10 ಸಾವಿರದಿಂದ 2,50,000 ಲೀ. ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಮಳೆಗಾಲದಲ್ಲಿ ಮಳೆ ನೀರು ಇದರಲ್ಲಿ  ಶೇಖರಣೆಯಾಗಿ ನೀರಿನ ಸಮಸ್ಯೆ ನೀಗುವುದರ ಜತೆಗೆ ಮಣ್ಣಿನ ತೇವಾಂಶವನ್ನು  ಹೆಚ್ಚಿಸುತ್ತದೆ. ಕೊಳ ನಿರ್ಮಿಸುವುದಕ್ಕೆ ಜಾಗ ಆಯ್ದುಕೊಳ್ಳವುದೇ ಇವರಿಗೆ ಬಹುದೊಡ್ಡ ಸಮಸ್ಯೆಯಾಗಿತ್ತು. ಇಳಿಜಾರು ಪ್ರದೇಶದ ತಳಭಾಗದಲ್ಲಿ  ಈ ಕೊಳಗಳನ್ನು ನಿರ್ಮಿಸಲು ಹೆಚ್ಚು ಆದ್ಯತೆ ನೀಡಿದರು. ಇವುಗಳ ನಿರ್ಮಾಣದಿಂದಾಗಿ ನೀರಿನ ಸಮಸ್ಯೆ, ಕಾಡ್ಗಿಚ್ಚು ಸಮಸ್ಯೆಗಳು ಕಡಿಮೆಯಾಗುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಾಗಲು ಕಾರಣವಾಯಿತು. ಸದ್ಯ ಇಲ್ಲಿ  70 ನೀರು ಸರಬರಾಜು ಯೋಜನೆಗಳಿವೆ. ಕೆಲವೇ ವರ್ಷಗಳಲ್ಲಿ  ರುದ್ರಪ್ರಯಾಗ್‌ ನೀರಿನ ಸಮಸ್ಯೆಯೇ ಕಾಡದಷ್ಟು  ಬದಲಾಗಿದೆ. ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ.

ಅಂತಹ ಬರಡು ಭೂಮಿಯಲ್ಲೇ ಸಮೃದ್ಧ ನೀರು ಹರಿದಾಡುವಂತೆ, ಮಣ್ಣಿನಲ್ಲಿ ತೇವಾಂಶ ಹೆಚ್ಚಾಗುವಂತೆ ಮಾಡಲು ಸಾಧ್ಯವಾದರೆ ನಮಗೂ ಸಾಧ್ಯವಲ್ಲವೇ? ನಾವು ಪ್ರಯತ್ನ ಪಟ್ಟರೆ ನಮ್ಮ  ಊರು ಕೂಡ ನೀರಿನ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಇದರಿಂದಾಗಿ ಪ್ರಕೃತಿಯ ಒಳಿತೂ ಸಾಧ್ಯ. ಪ್ರಕೃತಿಯಿಂದಲೇ ಎಲ್ಲ ಪಡೆಯುವ ನಾವು ಪ್ರಕೃತಿಗೂ ಒಂದಿಷ್ಟು  ಕೊಡುಗೆ ನೀಡೋಣ…

ರಂಜಿನಿ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.