ನಿಮ್ಮ ಸ್ಮಾರ್ಟ್ ಪೋನ್ ಹ್ಯಾಕ್ ಆಗಿದೆ ಎಂದು ಹೇಗೆ ಪತ್ತೆಹಚ್ಚುವುದು ? ಇಲ್ಲಿವೆ ಮಾಹಿತಿ
ಮಿಥುನ್ ಪಿಜಿ, Aug 11, 2020, 5:52 PM IST
ಇಂದು ಸ್ಮಾರ್ಟ್ ಫೋನ್ ಗಳು ಮಾನವನ ಅವಿಭಾಜ್ಯ ಅಂಗಗಳಾಗಿ ಮಾರ್ಪಟ್ಟಿವೆ. ಬಹುತೇಕರು ತಮ್ಮ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ಸ್ಮಾರ್ಟ್ ಫೋನ್ ನಲ್ಲಿ ಸಂಗ್ರಹಿಸಿರುತ್ತಾರೆ. ಇದು ಸಹಜ ಕೂಡ. SMS ಗಳು, ಇಮೇಲ್, ಬ್ಯಾಂಕಿಂಗ್ ವಹಿವಾಟುಗಳು, ಫೋಟೋ-ವಿಡಿಯೋ, ಸಾಮಾಜಿಕ ಜಾಲತಾಣಗಳ ಪಾಸ್ ವರ್ಡ್ ಗಳು ಸೇರಿದಂತೆ ಹಲವು ವಿಚಾರಗಳು ಮೊಬೈಲ್ ನ ಒಂದು ಮೂಲೆಯಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಆದರೇ ಇವೆ ಹ್ಯಾಕರ್ ಗಳಿಗೆ ವರದಾನವಾಗಿದೆ ಎಂಬ ವಿಚಾರಗಳು ನಿಮಗೆ ತಿಳಿದಿದಿಯೇ? ಮೊಬೈಲ್ ಹ್ಯಾಕ್ ಆಗಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ? ಇಂದಿನ ಲೇಖನದಲ್ಲಿ ಆ ಕುರಿತ ಸಂಪೂರ್ಣ ಮಾಹಿತಿ.
ತಂತ್ರಜ್ಞಾನ ಹೆಚ್ಚಿದಂತೆ ಅದರ ದುರ್ಬಳಕೆ ಮಾಡಿಕೊಳ್ಳುವವರು ಇಂದು ಸಾಲುಗಟ್ಟಿ ನಿಂತಿದ್ದಾರೆ. ಆ ಮೂಲಕ ಕೋಟ್ಯಾಂತರ ರೂ.ಗಳಿಗೆ ಬೇಡಿಕೆ ಇಟ್ಟು ಲಾಭ ಮಾಡಿಕೊಳ್ಳುತ್ತಾರೆ. ಜಗತ್ತಿನಾದ್ಯಂತ ಹ್ಯಾಕರ್ ಗಳು ರಾತ್ರಿ ಬೆಳಗ್ಗೆಯೆನ್ನದೆ ಸಕ್ರಿಯರಾಗಿದ್ದಾರೆ. ಯಾವ ಡಿವೈಸ್ ಗಳಲ್ಲಿ ಲೋಪದೋಷಗಳಿವೆ ಎಂಬುದನ್ನು ಪತ್ತೆಹಚ್ಚಿ ಅಲ್ಲಿ ನುಸುಳಿ ಕುಳಿತಿರುತ್ತಾರೆ. ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂಬುದು ನಿಮಗೆ ತಿಳಿಯದ ಮಟ್ಟಿಗೆ ಕೈಚಳಕ ತೋರಿರುತ್ತಾರೆ.
ಇನ್ನು ನಮ್ಮ ಮೊಬೈಲ್ ನಲ್ಲಿ ಯಾವುದೇ ವಿಶೇಷತೆ ಇಲ್ಲ. ನಮ್ಮ ಮೊಬೈಲ್ ಗೆ ಹ್ಯಾಕರ್ ಗಳು ನುಸುಳುವ ಸಾಧ್ಯತೆ ಇಲ್ಲ ಎಂದು ನೀವು ಭಾವಿಸಿದ್ದರೇ ನಿಮ್ಮ ಊಹೆ ತಪ್ಪು. ಯಾಕೆಂದರೇ ನಿಮ್ಮ ಮೊಬೈಲ್ ನಲ್ಲಿ ಬ್ಯಾಂಕಿಂಗ್ ಆ್ಯಪ್ ಗಳಿರಬಹುದು. ಅಥವಾ ಜಿ ಮೇಲ್ ಸೇರಿದಂತೆ ಎಲ್ಲಾ ಆಪ್ಲಿಕೇಶನ್ ಗಳು ಲಾಗಿನ್ ಆಗಿರಬಹುದು.
ಗಮನಿಸಿ: ನಿಮ್ಮ ಮೊಬೈಲ್ ಗ್ಯಾಲರಿಯನ್ನು ಅಟೋಮ್ಯಾಟಿಕ್ ಜಿಮೇಲ್ ಗೆ ಬ್ಯಾಕ್ ಅಪ್ ಇಟ್ಟಿದ್ದರೆ ಅದರ ಪಾಸ್ ವರ್ಡ್ ಯಾರ ಕೈಗೆ ಸಿಗದಂತೆ ಎಚ್ಚರವಹಿಸಿ. ಏಕೆಂದರೇ ಜಿಮೇಲ್ ಪಾಸ್ ವರ್ಡ್ ಬಳಸಿಕೊಂಡು ನಿಮ್ಮ ಕಾಂಟ್ಯಾಕ್ಟ್ , ಫೋಟೋಗಳು, ಸರ್ಚ್ ಹಿಸ್ಟರಿ ಸೇರಿದಂತೆ ಪ್ರಮುಖ ಮಾಹಿತಿ ಕದಿಯಬಹುದು. ಇದು ಸುಲಭ ಕೂಡ. ಇನ್ನು ವಾಟ್ಸಾಪ್ ಕ್ಲೋನಿಂಗ್ ಮಾಡುವ ಕೆಲವೊಂದು ಅಪ್ಲಿಕೇಶನ್ ಗಳು ಕೂಡ ಇದ್ದು ಎಚ್ಚರ ವಹಿಸುವುದು ಸೂಕ್ತ
ಇಂದು ಹೆಚ್ಚಾಗಿ ಹ್ಯಾಕಿಂಗ್ ಗೆ ಒಳಗಾಗುತ್ತಿರುವುದು ಆ್ಯಂಡ್ರಾಯ್ಡ್ ಫೋನ್ ಗಳು. ಇಲ್ಲಿ ಹ್ಯಾಕರ್ ಗಳು ಹ್ಯಾಕ್ ಮಾಡಲೆಂದೇ ಕೆಲವೊಂದು ದೋಷಪೂರಿತ ಅಪ್ಲಿಕೇಶನ್ ಗಳನ್ನು ಸೃಷ್ಟಿಸಿರುತ್ತಾರೆ. ಮಾತ್ರವಲ್ಲದೆ ಆ ಲಿಂಕ್ ಗಳನ್ನು ಇಮೇಲ್ ಆಥವಾ ಇತರೆ ಮಾರ್ಗಗಳಲ್ಲಿ ನಿಮಗೆ ಕಾಣಿಸಿಕೊಳ್ಳುವಂತೆ ಮಾಡಲಾಗುತ್ತದೆ. ಇವುಗಳನ್ನು ಒಮ್ಮೆ ಕ್ಲಿಕ್ ಮಾಡಿದರೇ ನಿಮ್ಮ ಮೊಬೈಲ್ ನ ಸಂಪೂರ್ಣ ಮಾಹಿತಿ ಹ್ಯಾಕರ್ ಗಳ ಪಾಲಾಗಿರುತ್ತದೆ. ಥರ್ಡ್ ಪಾರ್ಟಿ APK ಫೈಲ್‌ಗಳ ಬಳಕೆ ಕೂಡ ಅಪಾಯಕಾರಿ. ಇದನ್ನು ತೆರೆಯುತ್ತಿದ್ದಂತೆ ಅನಗತ್ಯ ಜಾಹೀರಾತುಗಳು ಒಂದಾದ ಮೇಲೊಂದರಂತೆ ತೆರೆದುಕೊಳ್ಳುತ್ತಲೇ ಹೋಗುತ್ತದೆ. ನಿಮಗೆ ಗೊತ್ತಿಲ್ಲದಂತೆ ಕೂಡ ಮೊಬೈಲ್‌ನಲ್ಲಿ ಕೆಲವೊಂದು ಆ್ಯಪ್ ಗಳು ಇನ್ ಸ್ಟಾಲ್ ಆಗಿರುತ್ತದೆ.
ಹಾಗಾದರೇ ಮೊಬೈಲ್ ಹ್ಯಾಕ್ ಆಗಿದೆ ಎಂದು ಹೇಗೆ ಪತ್ತೆಹಚ್ಚುವುದು ?
- ಕೆಲವೊಂದು ಆ್ಯಪ್ ಗಳು ಕಾರ್ಯನಿರ್ವಹಸದೆ ಇರುವುದು ಅಥವಾ ಏಕಾಏಕಿ ಸ್ಟಾಪ್ ಆಗುವುದು: ಕೆಲವೊಂದು ಅಪ್ಲಿಕೇಶನ್ ಗಳು ಬಳಕೆಯಲ್ಲಿರುವಾಗಲೇ ಪದೇ ಪದೇ ಸ್ಟಾಪ್ ಆಗುತ್ತಿದ್ದರೇ ಮಾಲ್ವೇರ್ ಗಳು ಅಟ್ಯಾಕ್ ಆಗಿರುವ ಸಾಧ್ಯತೆಯಿದೆ. ಮಾಲ್ವೇರ್ ಗಳು ಅಪ್ಲಿಕೇಶನ್ ಗಳು ಕಾರ್ಯನಿರ್ವಹಿಸದಂತೆ ತಡೆಯುತ್ತದೆ.
- ಪಾಪ್ ಅಪ್ಸ್ ಕಾಣಿಸಿಕೊಳ್ಳುವುದು: ಅನಗತ್ಯ ಜಾಹೀರಾತುಗಳು ಏಕಾಏಕಿ ಕಾಣಿಸಿಕೊಳ್ಳುವುದು, ಹೊಸ ವೆಬ್ ಸೈಟ್ ತೆರೆದಾಗ ಇತರ ಲಿಂಕ್ ಗಳು ಕ್ಲಿಕ್ ಮಾಡುವಂತೆ ಪದೇ ಪದೇ ಡಿಸ್ ಪ್ಲೇ ಆಗುವುದು. ನಾವು ಓಪನ್ ಮಾಡದ ವೆಬ್ ಸೈಟ್ ಗಳು ತೆರೆದುಕೊಳ್ಳುವುದು ಇವೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ವೈರಸ್ ಅಟಕಾಯಿಸಿಕೊಂಡಿರುವ ಸೂಚನೆಗಳು. ನೀಲಿ ಚಿತ್ರಗಳ ವೆಬ್ ಸೈಟ್ ಗಳು ಕೂಡ ಬಹಳ ಅಪಾಯಕಾರಿಯಾಗಿರುತ್ತದೆ. ಇಲ್ಲಿಯೇ ಹ್ಯಾಕರ್ ಗಳು ಅತೀ ಹೆಚ್ಚು ಸಕ್ರೀಯರಾಗಿರುತ್ತಾರೆ.
- ಮೊಬೈಲ್ ಸ್ಲೋ ಆಗುವುದು: ಮಾಲ್ವೇರ್ ವೈರಸ್ ಗಳು ನುಸುಳಿದ್ದರೆ ಮೊಬೈಲ್ ಸ್ಲೋ ಆಗುವ ಸಾಧ್ಯತೆ ಹೆಚ್ಚು. ಯಾಕೆಂದರೇ ಇದು ಬ್ಯಾಕ್ ಗ್ರೌಂಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಕೆಲ ಆ್ಯಪ್‌ಗಳು ನೀವು ಡೌನ್ ಲೋಡ್ ಮಾಡದಿದ್ದರೂ ನಿಮ್ಮ ಗಮನಕ್ಕೆ ಬಾರದೆ ಇನ್ ಸ್ಟಾಲ್ ಆಗಿರುವ ಸಂಭವವಿರುತ್ತದೆ. ಅಂದರೇ ಇಲ್ಲಿ ಮಾಲ್ವೇರ್ ವೈರಸ್ ಗಳು ಪರ್ಮಿಷನ್ ಇಲ್ಲದೆ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿರುತ್ತದೆ.
- ಮೊಬೈಲ್ ಬಿಸಿಯಾಗುವುದು: ಬ್ಯಾಕ್ ಗ್ರೌಂಡ್ ನಲ್ಲಿ ಮಾಲ್ವೇರ್ ಗಳು ಕಾರ್ಯನಿರ್ವಹಿಸುತ್ತಿದ್ದರೆ ಮೊಬೈಲ್ ಹಿಂದಿಗಿಂತಲೂ ಹೆಚ್ಚು ಬಿಸಿಯಾಗುತ್ತದೆ. ಪರಿಣಾಮವೆಂಬಂತೆ ಇದ್ದಕ್ಕಿದ್ದಂತೆ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತದೆ. 100 ಪರ್ಸೆಂಟ್ ಚಾರ್ಜ್ ಇದ್ದರೂ 2-3 ಗಂಟೆಯೊಳಗೆ ಚಾರ್ಜ್ ತಗ್ಗಿದರೆ ಸಾರ್ಟ್‌ಫೋನ್‌ಗೆ ಮಾಲ್ವೇರ್ ವೈರಸ್ ಅಟ್ಯಾಕ್ ಆಗಿದೆ ಎಂದರ್ಥ.
- ವಿಚಿತ್ರ ಸಂದೇಶಗಳು ಸ್ವೀಕಾರ ಮತ್ತು ಸೆಂಡ್ ಆಗುವುದು: ನೀವು ಯಾವುದೇ SMS ಸೆಂಡ್ ಮಾಡಿರದಿದ್ದರೂ ಕೆಲವೊಮ್ಮೆ ಅಜ್ಞಾತ ನಂಬರ್ ಗಳಿಗೆ ಮೆಸೇಜ್ ಹೋಗಿರುತ್ತದೆ. ಇನ್ನೊಂದು ಅಂಶವೆಂದರೇ ಅನಗತ್ಯ ಮೆಸೇಜ್ ಗಳು ಕಾಣಿಸಿಕೊಳ್ಳುವುದು. ನೀವು ಅಕೌಂಟಿನಿಂದ ಹಣ ತೆಗೆಯದಿದ್ದರೂ ನಿಮ್ಮ ಬ್ಯಾಂಕಿನಿಂದ ಇಂತಿಷ್ಟು ಹಣ ವಿತ್ ಡ್ರಾ ಆಗಿದೆ ಎಂಬ ಮಾದರಿಯಲ್ಲಿ ಸಂದೇಶ ಬರುವುದು. ನೀವು ಗಾಬರಿಯಲ್ಲಿ ಅಲ್ಲಿನ ಲಿಂಕ್ ಕ್ಲಿಕ್ ಮಾಡಿದರೇ ಸಂಪೂರ್ಣ ಖಾತೆ ಶೂನ್ಯವಾಗುವ ಸಂಭವವಿರುತ್ತದೆ.
- ಆ್ಯಪ್ ಗಳು ಅಪ್ ಡೇಟ್ ಆಗಿರುವುದು: ಒಂದು ನಿರ್ದಿಷ್ಠ ಆ್ಯಪ್ ಏನೇ ಪ್ರಯತ್ನಪಟ್ಟರೂ ಅಪ್ಡೇಟ್ ಆಗದೇ ಇರುವುದು ಸಹ ಮಾಲ್ವೇರ್ ಅಟ್ಯಾಕ್ ಆಗಿರುವ ಲಕ್ಷಣಗಳು. ಇದನ್ನು ಆ್ಯಪ್ ಕ್ರ್ಯಾಶ್ ಎಂದು ಕೂಡ ಕರೆಯುತ್ತಾರೆ. ಕೆಲವೊಮ್ಮೆ ನೀವು ಇನ್‌ಸ್ಟಾಲ್ ಮಾಡಿದ ಆ್ಯಪ್ ಐಕಾನ್ ಹೋಂ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಸಂದರ್ಭದಲ್ಲಿ ಆ ಆ್ಯಪ್ ದೋಷಪೂರಿತವಾಗಿದೆ ಎಂದು ನೀವು ಅರಿಯಬಹುದು.
- ಅನಗತ್ಯ ವೆಬ್ ಸೈಟ್ ಗಳು ಕಾಣಿಸಿಕೊಳ್ಳುವುದು. ಇಮೇಲ್ ಬ್ಲಾಕ್ ಆಗುವುದು: ಇವು ಕೂಡ ಹ್ಯಾಕ್ ಆಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ. ಡೇಟಾ ಉಪಯೋಗ ನಿಗದಿತ ಪ್ರಮಾಣಕ್ಕಿಂತ ಜಾಸ್ತಿಯಾಗುತ್ತಿದೆ ಎಂದನ್ನಿಸಿದರೆ ನಿಮ್ಮ ಫೋನ್‌ಗೆ ಯಾವುದೋ ವೈರಸ್ ದಾಳಿ ಮಾಡಿದೆ ಎಂದೇ ಅರ್ಥ.
-ಮಿಥುನ್ ಮೊಗೇರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender: 2024ರಲ್ಲಿ ಬಣ್ಣದ ಲೋಕದಿಂದ ದೂರ ಉಳಿದ ಬಿಟೌನ್ ಸ್ಟಾರ್ ಗಳಿವರು
Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್ ಕಸರತ್ತು…ISRO ಸಾಹಸ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.