website ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ ? SSL ಸರ್ಟಿಫಿಕೇಟ್ ಎಂದರೇನು ?
Team Udayavani, Nov 24, 2020, 8:36 PM IST
ಕೋವಿಡ್-19 ಕಾಲದಲ್ಲಿ ಡಿಜಿಟಲ್ ಮಾಧ್ಯಮಗಳು ಹೆಚ್ಚು ಪ್ರಚಲಿತಕ್ಕೆ ಬಂದಿರುವುದನ್ನು ಗಮನಿಸಿರಬಹುದು. ಪರಿಣಾಮವಾಗಿ ಇದೀಗ ಪ್ರತಿ ನಿಮಿಷಕ್ಕೆ ಬಿಲಿಯನ್ ಗಟ್ಟಲೇ ಡೇಟಾಗಳು ವರ್ಗಾವಣೆಯಾಗುತ್ತಿರುತ್ತದೆ. ಏತನ್ಮಧ್ಯೆ ಹ್ಯಾಕರ್ ಗಳು ಕೂಡ ಹಿಂದೆಂದಿಗಿಂತಲೂ ಸಕ್ರಿಯರಾಗಿದ್ದಾರೆ. ಪ್ರತಿ ಡಿಜಿಟಲ್ ವಾಣಿಜ್ಯೋದ್ಯಮ ಚಟುವಟಿಕೆಗಳನ್ನು ಕೂಲಂಕಶವಾಗಿ ಗಮನಿಸಿಕೊಂಡು ವೆಬ್ ಸೈಟ್ ಸೇರಿದಂತೆ ಇತರ ಡಿಜಿಟಲ್ ಮಾಧ್ಯಮಗಳಿಗೆ ಕನ್ನ ಹಾಕಲು ಪ್ರಯತ್ನಿಸುತ್ತಿರುತ್ತಾರೆ.
ಪ್ರಮುಖವಾಗಿ ವೆಬ್ ಸೈಟ್ ಕ್ರಿಯೇಟ್ ಮಾಡಿಕೊಂಡು ಅತೀ ಸಣ್ಣ ಮಟ್ಟದಲ್ಲಿ ಲಾಭಪಡೆಯುವವರು. ತಮ್ಮ ವೆಬ್ ಸೈಟ್ ಗೆ ಯಾವುದೇ ಕಾರಣಕ್ಕೂ ಹ್ಯಾಕರ್ ಗಳು ನುಸುಳುವುದಿಲ್ಲ ಎಂದು ಆಲೋಚಿಸುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದು. ಆದರೇ ಇದು ತಪ್ಪು. ಸಣ್ಣ ಸಣ್ಣ ಮಾಹಿತಿಗಳ ಸೋರುವಿಕೆ ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.
ಪ್ರಮುಖವಾಗಿ ಹಲವು ಸಣ್ಣ ಉದ್ಯಮದಾರರಿಗೆ (ವೆಬ್ ಸೈಟ್ ಮಾಲೀಕರು) ಆನ್ ಲೈನ್ ಸುರಕ್ಷತೆ ಅಥವಾ ಭದ್ರತೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ಹೀಗಾಗಿ ಇಂತಹ ವೆಬ್ ಸೈಟ್ ಗಳನ್ನೇ ಹ್ಯಾಕರ್ ಗಳು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುತ್ತಾರೆ. ಆಟೋ ಮ್ಯಾಟಿಕ್ ಟೂಲ್ ಬಳಸಿಕೊಂಡು ಸಾವಿರಾರು ವೆಬ್ ಸೈಟ್ ಗಳನ್ನು ಒಮ್ಮೆಲೆ ಸ್ಕ್ಯಾನ್ ಮಾಡಿ, ಸಣ್ಣ ಸಣ್ಣ ದೋಷಗಳನ್ನು ಹುಡುಕುತ್ತಿರುತ್ತಾರೆ.
ಸಮೀಕ್ಷೆಯೊಂದರ ಪ್ರಕಾರ 32% ಸಣ್ಣ ಉದ್ಯಮದಾರರು, ಹೆಚ್ಚಿನ ಪ್ರಮಾಣದ ಹಣಕಾಸಿನ ಹೂಡಿಕೆಯನ್ನು ಸೈಬರ್ ಸೆಕ್ಯೂರಿಟಿ ಹಾಗೂ ಪ್ರೈವೆಸಿಗಾಗಿ ಮೀಸಲಿಡಬೇಕೆಂದು ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಈ ಎಲ್ಲಾ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣ ವೆಬ್ ಸೈಟ್ ಉದ್ದಿಮೆದಾರರು ಮತ್ತು ಇತರರು ತಮ್ಮ ವೆಬ್ ಸೈಟ್ ಹಾಗೂ ಡೇಟಾ ವನ್ನು ಯಾವ ರೀತಿಯಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಉತ್ತಮವಾದ ಹೋಸ್ಟಿಂಗ್ ಒದಗಿಸುವವರನ್ನೇ ಆಯ್ಕೆ ಮಾಡಿಕೊಳ್ಳಿ: ಅತೀ ಹೆಚ್ಚು ಭದ್ರತೆ ಮತ್ತು ಆನ್ ಲೈನ್ ನಲ್ಲಿ ಸಕ್ರಿಯವಾಗಿರುವಂತೆ ಮಾಡಲು, ಯಾವ ತೆರನಾದ ಹೋಸ್ಟಿಂಗ್ ಸಂಸ್ಥೆಯನ್ನು ಆಯ್ದುಕೊಂಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಹಲವು ಜನಪ್ರಿಯ ಹೋಸ್ಟಿಂಗ್ ಪ್ರೊವೈಡರ್ ಗಳು ಆನ್ ಲೈನ್ ಟೂಲ್ ಗಳನ್ನು ಮತ್ತು ವೆಬ್ ಸೈಟ್ ಡಿಸೈನ್ ಗಳನ್ನು ನಿಯತವಾಗಿ ಮಾಡಿಕೊಡುತ್ತವೆ. ಮಾತ್ರವಲ್ಲದೆ ಭದ್ರತಾ ವ್ಯವಸ್ಥೆಯಲ್ಲೂ ಹಲವು ವೈವಿಧ್ಯತೆಗಳನ್ನು ನೀಡುತ್ತಾರೆ. ಇದರ ಜೊತೆಗೆ 24/7 ಹೆಲ್ಪ್ ಲೈನ್ (ಸಹಾಯವಾಣಿ) ಒದಗಿಸಿರುವುದು ವೆಬ್ ಸೈಟ್ ತಾಂತ್ರಿಕ ದೋಷಗಳು ಕಂಡುಬಂದಾಗ ಸಂಪರ್ಕಿಸಲು ಅನುಕೂಲವಾಗುತ್ತದೆ.
ಸಾಫ್ಟ್ ವೇರ್ ಅಪ್ ಡೇಟ್: ಅತೀ ಮುಖ್ಯವಾಗಿ ಸಾಫ್ಟ್ ವೇರ್ ಪ್ರೋಗ್ರಾಂಗಳನ್ನು ನಿರಂತರವಾಗಿ ಅಪ್ ಡೇಟ್ ಮಾಡುವುದರಿಂದ ಆನ್ ಲೈನ್ ವ್ಯವಹಾರಗಳು ಅತೀ ಹೆಚ್ಚು ಸುರಕ್ಷಿತವಾಗಿರುತ್ತವೆ. ಇದರಲ್ಲಿ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಹಾಗೂ ಬಳಸಲ್ಪಡುತ್ತಿರುವ ಇತರ ಸಾಫ್ಟ್ ವೇರ್ ಗಳ ಅಪ್ ಡೇಟ್ ಗಳು ಕೂಡ ಪ್ರಮುಖವಾಗಿದೆ.
ಪಾಸ್ ವರ್ಡ್ ಬಳಕೆ: ವೆಬ್ ಸೈಟ್ ಪಾಸ್ ವರ್ಡ್ ಗಳು ಯಾವಾಗಲು ಕೂಡ 12 ಪದಗಳಿಂತ ಹೆಚ್ಚಿರಬೇಕು. ಮಾತ್ರವಲ್ಲದೆ ಇದರಲ್ಲಿ ಅಕ್ಷರ, ಸಂಖ್ಯೆ, ಚಿಹ್ಹೆಗಳು ಮಿಳಿತವಾಗಿರಬೇಕು. ಒಂದೇ ಮಾದರಿಯ ಪಾಸ್ ವರ್ಡ್ ಗಳನ್ನು ಎಲ್ಲಾ ಮಾದರಿಯ ಅಕೌಂಟ್ ಗಳಿಗೆ ಬಳಸುವುದಕ್ಕಿಂತ ಭಿನ್ನ ಮಾದರಿಯ ಅತೀ ಹೆಚ್ಚು ಭದ್ರತೆಯುಳ್ಳ ಪಾಸ್ ವರ್ಡ್ ಬಳಸುವುದು ಸೂಕ್ತ.
ಒಂದೇ ಮಾದರಿಯ ಪಾಸ್ ವರ್ಡ್ ಬಳಸುವುದು ಹಲವು ಅಪಾಯಗಳಿಗೆ ಆಹ್ವಾನ ನೀಡಬಹುದು. ಅತೀ ಮುಖ್ಯವಾದ ಮಾಹಿತಿ ಸೋರಿಕೆಯಾಗಬಹುದು. ಹ್ಯಾಕರ್ ಗಳು ಏಕಮಾತ್ರ ಪಾಸ್ ವರ್ಡ್ ಬಳಸಿಕೊಂಡು ಎಲ್ಲಾ ಡಿಜಿಟಲ್ ಅಕೌಂಟ್ ಗಳಿಗೆ ಲಗ್ಗೆಯಿಡಬಹುದು. ಹೀಗಾಗಿ ಗುರುತಿಸಲು ಅಸಾಧ್ಯವಾದ ಪಾಸ್ ವರ್ಡ್ ಬಳಕೆ ಮಾಡುವುದು ಸೂಕ್ತ.
ಡೇಟಾ ಬ್ಯಾಕಪ್: ಯಾವುದೇ ಸಂಸ್ಥೆಗಳು ಕೂಡ ತಮ್ಮ ಗ್ರಾಹಕರ ಅಥವಾ ತಮ್ಮದೇ ಕಂಪೆನಿಯ ಡೇಟಾಗಳನ್ನು ಬ್ಯಾಕಪ್ ಮಾಡಿಟ್ಟುಕೊಳ್ಳುವುದು ಅತ್ಯವಶ್ಯಕ. ಇದಕ್ಕಾಗಿ ವಾರಕ್ಕೊಂದು ಬಾರಿ, ಅಥವಾ ದಿನಕ್ಕೊಮ್ಮೆ ಸಮಯ ಮೀಸಲಿಡುವುದು ಒಳಿತು. ವೆಬ್ ಸೈಟ್ ಸುರಕ್ಷತೆಗಾಗಿ ಪ್ರೊಟೆಕ್ಷನ್ ಸರ್ವಿಸ್ ಗಳನ್ನು ಬಳಸಿಕೊಂಡು, ಅಟೋಮ್ಯಾಟಿಕ್ ಬ್ಯಾಕಪ್ ಮೂಲಕ ಕ್ಲೌಡ್ ಸ್ಟೋರೇಜ್ ನಲ್ಲಿ ಡೇಟಾ ಗಳನ್ನು ಸಂಗ್ರಹಿಸಿಡುವುದು ಉತ್ತಮ ವಿಧಾನ.
ಎಸ್ ಎಸ್ ಎಲ್ ಸರ್ಟಿಫಿಕೇಟ್: ಆನ್ ಲೈನ್ ವಹಿವಾಟು ಸೇರಿದಂತೆ ಎಲ್ಲಾ ಮಾದರಿಯ ಆನ್ ಲೈನ್ ವ್ಯವಹಾರಗಳಿಗೂ ಎಸ್ ಎಸ್ ಎಲ್ ಸರ್ಟಿಫಿಕೇಟ್ ಇನ್ ಸ್ಟಾಲ್ ಮಾಡಿಕೊಂಡಿರುವುದು ಅವಶ್ಯಕ. ಒಬ್ಬ ಮಾಲೀಕರಿಗೆ, ತಮ್ಮ ವೆಬ್ ಸೈಟ್ ಬಳಸುವ ಗ್ರಾಹಕರ ವ್ಯೆಯಕ್ತಿಕ ಮಾಹಿತಿಗಳನ್ನು ಸುರಕ್ಷಿತವಾಗಿಡುವುದು ಅತೀ ಮುಖ್ಯ ಕರ್ತವ್ಯವಾಗಿದೆ.
ಗೂಗಲ್, ವೆಬ್ ಸೈಟ್ ಗಳ ಸುರಕ್ಷತೆಗಾಗಿ ರ್ಯಾಕಿಂಗ್ ಸಿಗ್ನಲ್ ಗಳನ್ನು ಜಾರಿಗೆ ತಂದಿದೆ. ಇದು ಸರ್ಚ್ ಇಂಜಿನ್ ಗಳಲ್ಲಿ ಸುರಕ್ಷಿತವಾಗಿರುವ ವೆಬ್ ಸೈಟ್ ಗಳನ್ನು ಮಾತ್ರ ತೋರ್ಪಡಿಸುತ್ತದೆ. ಹೀಗಾಗಿ ಎಸ್ ಎಸ್ ಎಲ್ ಸರ್ಟಿಫಿಕೇಟ್ ಅಳವಡಿಸಿಕೊಂಡರೇ ಸರ್ಚ್ ರಿಸಲ್ಟ್ ನಲ್ಲಿ ನಿಮ್ಮ ವೆಬ್ ಸೈಟ್ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಎಸ್ ಎಸ್ ಎಲ್ ಸರ್ಟಿಫಿಕೇಟ್ ಗಳು ಡೇಟಾಗಳ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕಾಗಿ ಸರ್ಟಿಫಿಕೇಟ್ ಅಥಾರಿಟಿಯಿಂದ (ಸಿಎ) SSL ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ನಂತರದಲ್ಲಿ ಯುಆರ್ ಎಲ್ ಅಡ್ರೆಸ್ ಬಾರ್ ನಲ್ಲಿ ‘ಸೆಕ್ಯೂರ್‘ ಎಂಬ ಅಂಶ ಕಾಣಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.