ಸೋಂಕಿತರ ಮೇಲೆ ನಿಗಾ ಇಡುವ “ಆರೋಗ್ಯ ಸೇತು ಆ್ಯಪ್” ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ?
Team Udayavani, Apr 14, 2020, 6:05 PM IST
ವಿಶ್ವದೆಲ್ಲೆಡೆ ಕೋವಿಡ್-19 ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಭಾರತದಲ್ಲಿ ಕೂಡ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದ್ದು ಸೋಂಕಿತರ ಮೇಲೆ ನಿಗಾ ಇಡಲು ಆರೋಗ್ಯ ಸೇತು ಎಂಬ ಆ್ಯಪ್ ಹೊರತಂದಿದೆ.
ಏನಿದು ಆರೋಗ್ಯ ಸೇತು ? ಹೇಗೆ ಕಾರ್ಯನಿರ್ವಹಿಸುತ್ತದೆ ?
ಇದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ರಿಯಲ್ ಟೈಂ ಮಾಹಿತಿ ನೀಡಲಿದೆ. ದಕ್ಷಿಣ ಕೊರಿಯಾ ಹಾಗೂ ಸಿಂಗಾಪುರದಲ್ಲಿ ಕೂಡಾ ಇದೇ ರೀತಿ ಟ್ರ್ಯಾಕಿಂಗ್ ಅಪ್ಲಿಕೇಷನ್ ಬಳಸಿ ಕೋವಿಡ್ 19 ಸೋಂಕು ಹರಡದಂತೆ ನಿಯಂತ್ರಿಸಲಾಯಿತು ಎಂಬ ಅಂಕಿ ಅಂಶದ ಆಧಾರದ ಮೇಲೆ ಆರೋಗ್ಯ ಸೇತು ಆ್ಯಪ್ ರೂಪಿಸಲಾಗಿದೆ.
ಕೋವಿಡ್-19 ವೈರಸ್ ಸೋಂಕಿತರು ಹಾಗೂ ಶಂಕಿತರ ಚಲನವಲನವನ್ನು ಜಿಪಿಎಸ್ ತಂತ್ರಜ್ಞಾನ ಸಹಾಯದಿಂದ ಸೆರೆಹಿಡಿಯಲಾಗುತ್ತದೆ. ಇದರಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಸಹಿತ 11 ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಕೋವಿಡ್ 19 ಸೋಂಕು ಹರಡುವ ಬಗೆ, ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನ, ಸಹಾಯವಾಣಿ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಿವೆ. ಸ್ವಯಂ ಮೌಲ್ಯ ಮಾಪನ ಪರೀಕ್ಷೆಗೂ ಅವಕಾಶ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಮೊಬೈಲ್ ಪರದೆಯ ಮೇಲೆ ಮೂಡಲಿವೆ. ಅದಕ್ಕೆ ಉತ್ತರಿಸಿದ ಬಳಿಕ ಫಲಿತಾಂಶ ನೀಡಲಾಗುತ್ತದೆ.
ರೋಗಿಗಳ ಚಲನವಲನದ ಮೇಲೆ ನಿಗಾ
ಈ ಆ‍್ಯಪ್ ಮೂಲಕ ಕೊವಿಡ್-19 ಪಾಸಿಟಿವ್ ರೋಗಿಗಳ ಚಲನವಲನಗಳನ್ನು ರಿಯಲ್ ಟೈಮ್ ನಲ್ಲಿ ಟ್ರ್ಯಾಕ್ ಮಾಡಬಹುದು. ಕೋವಿಡ್-19 ಸೋಂಕಿತರು, ಹೋಂ ಕ್ವಾರಂಟೈನ್ ಆಗಿರುವವರು ಎಲ್ಲೆಲ್ಲಿದ್ದಾರೆ ಎಂದು ಗುರುತಿಸಬಹುದು. ಒಂದು ವೇಳೆ ಸೋಂಕಿತ ವ್ಯಕ್ತಿಯೇನಾದರೂ ಆರೋಗ್ಯವಂತರ ಬಳಿಗೆ (1 ಮೀಟರ್ ಅಂತರ) ಸುಳಿದರೆ ಅಲರ್ಟ್ ನೀಡಲಿದೆ. ಆ ಮೂಲಕ ಮೊಬೈಲ್‌ನ ಮೂಲಕವೇ ಜನಸಾಮಾನ್ಯರು ತಮ್ಮ ಸುತ್ತಲಿನ ಸೋಂಕಿತರು ಹಾಗೂ ಸೋಂಕು ವಲಯಗಳನ್ನು ಗುರುತಿಸಬಹುದಾಗಿದೆ.
ಆ್ಯಪ್‌ನಲ್ಲಿ ಕೊರೋನಾ ವೈರಸ್ಗೆ ಸಂಬಂಧಿಸಿದ ರೋಗ ಲಕ್ಷಣಗಳನ್ನು ದಾಖಲಿಸಬಹುದಾಗಿದೆ. ನಾವು ಈ ಮಾಹಿತಿ ದಾಖಲಿಸಿದ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ರವಾನೆಯಾಗಲಿದೆ. ಇದು ಕೊರೋನಾ ವೈರಸ್ ಬಂದ ರೋಗಿ ಇರುವ ಸ್ಥಳವನ್ನೂ ಸುಲಭವಾಗಿ ಪತ್ತೆ ಮಾಡುವಂಥ ವ್ಯವಸ್ಥೆ ಈ ಆ್ಯಪ್ ಹೊಂದಿದೆ.
ಬಳಕೆ ಹೇಗೆ ?
ಗೂಗಲ್ ಅಥವಾ ಆ್ಯಪಲ್ ಪ್ಲೇ ಸ್ಟೋರಿನಲ್ಲಿ NIC eGov Mobile AppsTools ಅಭಿವೃದ್ಧಿಪಡಿಸಿರುವ Aarogya Setu ಆಪ್ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ. ಡೌನ್‌ಲೋಡ್ ಮಾಡಿಕೊಂಡು ಬಳಿಕ ಬ್ಲೂಟೂತ್ ಮತ್ತು ಲೊಕೇಶನ್ ಆನ್ ಮಾಡಿರಬೇಕು. ಅದರಲ್ಲಿ ಸೆಟ್ ಲೊಕೇಶನ್ ಎಂದಿರುವುದನ್ನು ALWAYS ಎಂದು ಕೊಡಬೇಕು.
ಕೋವಿಡ್ ವೈರಸ್ ಬಗ್ಗೆ ಜನಸಾಮಾನ್ಯರಿಗೆ ಉಪಯುಕ್ತ ಮಾಹಿತಿ ನೀಡುವುದರ ಜೊತೆಗೆ, ಈ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ‘ಆರೋಗ್ಯ ಸೇತು’ ಮೊಬೈಲ್ ಅಪ್ಲಿಕೇಷನ್ ಬಗ್ಗೆ ವಿಶ್ವಸಂಸ್ಥೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…
Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ
Box Office: ದೀಪಾವಳಿಗೆ ರಿಲೀಸ್ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.