Recipes: ಈ ಸಾರು ಎಲ್ಲೂ ತಿಂದಿರಲ್ಲ ಹೊಸ ರುಚಿ ಒಮ್ಮೆ ಟ್ರೈ ಮಾಡಿ..
ಶ್ರೀರಾಮ್ ನಾಯಕ್, Oct 6, 2023, 6:09 PM IST
ಊಟಕ್ಕೆ ಯಾವ ಸಾರು ಮಾಡಬೇಕು ಎನ್ನುವ ಯೋಚನೆ ಇದ್ದರೆ ಇಲ್ಲೊಂದು ಸಾರಿನ ರೆಸಿಪಿ ಇದೆ ಇದು ಎಲ್ಲರಿಗೂ ಇಷ್ಟವಾಗುತ್ತೆ. ಮಾತ್ರವಲ್ಲದೇ ಅನೇಕ ಕಾಯಿಲೆಗಳಿಗೆ ಮನೆ ಮದ್ದಾಗಿದೆ ಅದುವೇ “ಹುರುಳಿ ಕಾಳಿನ ಸಾರು“. ಹುರುಳಿ ರೈತಾಪಿ ಜನರ ಹಾಗೂ ಬಡವರ ಪ್ರಿಯವಾದ ಆಹಾರ. ಎಷ್ಟೋ ಜನರಿಗೆ ಹುರುಳಿ ಕಾಳಿನ ಪರಿಚಯವಿಲ್ಲ. ಈ ಹುರುಳಿ ಕಾಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ. ಕಾಳುಗಳಲ್ಲಿ ಕಬ್ಬಿಣಾಂಶ, ಪ್ರೋಟೀನ್ ಹಾಗೂ ಅತ್ಯಧಿಕ ಕ್ಯಾಲ್ಸಿಯಂ ಹೊಂದಿರುವ ವಿಶೇಷ ಕಾಳುಗಳಲ್ಲಿ ಹುರುಳಿ ಸಹ ಒಂದು.ಹಾಗಾದರೆ ಹುರುಳಿ ಕಾಳಿನಿಂದ ಸಾರು ಮಾಡುವ ವಿಧಾನವನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ. ಈ ಸಾರನ್ನು ಮಾಡುವುದು ತುಂಬಾನೇ ಸುಲಭ. ಬಿಸಿ-ಬಿಸಿಯಾದ ಅನ್ನದ ಜೊತೆ ಬಡಿಸಿ ತಿನ್ನಲು ಈ ಸಾರು ತುಂಬಾ ರುಚಿ.ಒಮ್ಮೆ ಮಾಡಿ ನೋಡಿ ಸವಿಯಿರಿ….
ಬೇಕಾಗುವ ಸಾಮಗ್ರಿಗಳು
ಹುರುಳಿ ಕಾಳು-1ಕಪ್, ಹುಣಸೇ ಹುಳಿ-(1ನೆಲ್ಲಿ ಗಾತ್ರದಷ್ಟು), ಹಸಿಮೆಣಸು-3, ಒಣಮೆಣಸು-4, ಬೆಳ್ಳುಳ್ಳಿ-6 ರಿಂದ8 ಎಸಳು, ಎಣ್ಣೆ-4 ಚಮಚ, ಕರಿಬೇವು-ಸ್ವಲ್ಪ, ಸಾಸಿವೆ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಹುರುಳಿ ಕಾಳನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ನಲ್ಲಿ ಹಾಕಿ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರನ್ನು ಸೇರಿಸಿ ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಅದಕ್ಕೆ ಸಾಸಿವೆ, ಬೆಳ್ಳುಳ್ಳಿ, ಹಸಿಮೆಣಸು, ಒಣಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿ. ತದನಂತರ ಅದಕ್ಕೆ ಬೆಂದ ಹುರುಳಿ ಕಾಳನ್ನು ಸೇರಿಸಿ ಸ್ವಲ್ಪ ಹುಣಸೇ ಹುಳಿಯ ರಸವನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಿದರೆ ಆರೋಗ್ಯಕರವಾದ ಹುರುಳಿ ಕಾಳಿನ ಸಾರು ರೆಡಿ….
*ಶ್ರೀರಾಮ್ ಜಿ. ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.