ಕೈಗಾರಿಕಾ ವಲಯದ ನೌಕರರಿಗೆ ತಯಾರಾಗುತ್ತಿದೆ ಎಸಿ ಹೆಲ್ಮೆಟ್ | ವಿಶೇಷತೆ ಏನು.?ಇಲ್ಲಿದೆ ಮಾಹಿತಿ

ಜೆಸಿಬಿ ಸಂಸ್ಥೆಯೊಂದಿಗಿನ ಪಾಲುದಾರಿಕೆಯೊಂದಿಗೆ ಜಾರ್ಶ್ ಇನ್ನೋವೇಶನ್‌ ತಯಾರಿಸುತ್ತಿರುವ ಹೆಲ್ಮೆಟ್

Team Udayavani, Sep 8, 2021, 12:51 PM IST

ಹೈದರಾಬಾದ್ : ಈತ್ತೀಚಿನ ದಿನಗಳಲ್ಲಿ ಜನರಿಗೆ ಯಾವುದೂ ಕಷ್ಟವಾಗಬಾರದು. ಎಲ್ಲವೂ ಆತನ ಬಯಕೆಗೆ ಹಿತವಾಗಿರಬೇಕು. ಹಾಗಿದ್ದಲ್ಲಿ ಮಾತ್ರ ಮನುಷ್ಯ ತೃಪ್ತನಾಗುತ್ತಾನೆ ಅಂತನ್ನಿಸುತ್ತದೆ. ಹೌದು, ಎಲ್ಲವೂ ಅನುಕೂವಾಗಿರುವ ಹಾಗೆ ಇದ್ದರೇ, ದೆಹಕ್ಕೂ, ಮನಸ್ಸಿಗೂ, ವೃತ್ತಿಗೂ, ವೈಯಕ್ತಿಕ ಬದುಕಿಗೂ ಎಲ್ಲದಕ್ಕೂ ಒಳ್ಳೆಯದು ಎನ್ನುವ ಮನಸ್ಥಿತಿ ಜನರ ಮನಸ್ಸಿನಲ್ಲಿ ಬಂದು ಹೋಗಿದೆ. ಅದಕ್ಕೆ ಈಗಿನ ದುಬಾರಿ ಬದುಕು ಹಾಗೂ ಬದಲಾದ ಹವಾಮಾನವೂ ಕಾರಣ ಇರಬಹುದು.

ಅದೇನೇ ಇರಲಿ, ಇಂಡಸ್ಟ್ರಿ ಗಳಲ್ಲಿ ಕೆಲಸ ಮಾಡುವವರಿಗಾಗಿಯೇ ಎಸಿ ಹೆಲ್ಮೆಟ್ ತಯಾರಾಗುತ್ತಿದೆ ಎಂದರೇ, ನೀವು ಒಪ್ಪಲೇ ಬೇಕು. ಹೌದು, ಹೈದರಾಬಾದ್ ಮೂಲದ ಒಂದು ಕಂಪೆನಿ ಇಂಡಸ್ಟ್ರಿಯಲ್ಲಿ ಕೆಲಸಮಾಡುವವರಿಗಾಗಿಯೇ ಈ ವಿಶೇಷ ಹೆಲ್ಮೇಟ್ ನನ್ನು ತಯಾರಿಸಲು ಮುಂದಾಗಿದ್ದು, ಆ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ತಿಳಿಸುವ ಪ್ರಯತ್ನ ಈ ಲೇಖನದಲ್ಲಿ ಇದೆ.

ಇದನ್ನೂ ಓದಿ : ರಾಮ್ ಚರಣ್ ನಟನೆಯ ಮತ್ತೊಂದು ಸಿನಿಮಾ ಶೂಟಿಂಗ್ ಶುರು : ವಿಶೇಷವಾಗಿದೆ ಪೋಸ್ಟರ್

ಇಂಡಸ್ಟ್ರಿಗಳಲ್ಲಿ ಕಾರ್ಮಿಕರಿಗೆ ಪ್ರತಿಕೂಲ ವಾತಾವಾರಣವನ್ನು ಸೃಷ್ಟಿ ಮಾಡುವ ಉದ್ದೇಶವನ್ನು ಈ ಎಸಿ ಹೆಲ್ಮೆಟ್ ತಯಾರಕ ಕಂಪೆನಿ ಹೊಂದಿದೆ. ಈ ವಿನೂತನ ಯೋಜನೆಯ ಕುರಿತು ಮಾತನಾಡುತ್ತಾ, ಎಸಿ ಹೆಲ್ಮೆಟ್‌ ಗಳನ್ನು ತಯಾರಿಸುವ ಜಾರ್ಶ್ ಇನ್ನೋವೇಶನ್‌ ನ ಸಹ-ಸಂಸ್ಥಾಪಕ ಮತ್ತು ಸಿಇಒ ಕೌಸ್ತುಭ್ ಕೌಂಡಿನ್ಯ,  ಬೇಸಿಗೆಯಲ್ಲಿ ಒಂದೊಮ್ಮೆ ಅವರು ಮತ್ತು ಅವರ ಸಹ ಸಂಸ್ಥಾಪಕರು ಬೈಕ್ ರೈಡ್ ಹೋಗುತ್ತಿರುವಾಗ ಈ ಹೊಸ ಉತ್ಪನ್ನದ ಕಲ್ಪನೆಯು ನಮ್ಮಲ್ಲಿ ಮೂಡಿತು ಎಂದು ಅವರು ಹೇಳಿದ್ದಾರೆ.  “ನಮ್ಮದು 4 ವರ್ಷದ ಹಳೆಯ ಕಂಪನಿ ಹೆಲ್ಮೆಟ್ ಒಳಗೆ ಕೂಲಿಂಗ್ ಮೆಕ್ಯಾನಿಸಂ ಅಭಿವೃದ್ಧಿಪಡಿಸಲು, ನಾವು ಮುಂದಾಗಿದ್ದೇವೆ. ಈ ಪ್ರಯತ್ನ ನಮಗೆ ಯಶಸ್ಸನ್ನು ತಂದು ಕೊಡಲಿದೆ ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಅವರು ಹೇಳಿದ್ದಾರೆ.

“ಹೆಲ್ಮೆಟ್‌ ಗಳನ್ನು ಧರಿಸಬೇಕಾದ ಇಂಜಿನಿಯರ್‌ ಗಳಿಗೆ ಎರಡು ಗಂಟೆಗಳ ಸಾಮರ್ಥ್ಯವನ್ನು ಹೊಂದಿರುವ ಬ್ಯಾಟರಿಗಳನ್ನು ಅಳವಡಿಸುವುದರ ಮೂಲಕ ಹೆಲ್ಮೆಟ್ ಗಳನ್ನು (ಹೆಲ್ಮೆಟ್ ಇ ಮಾಡೇಲ್ ) ತಯಾರಿಸಲಾಗುತ್ತಿದೆ. ಎರಡನೇ ಮಾಡೆಲ್ (ಹೆಲ್ಮೇಟ್ ಎಸ್ ಮಾಡೆಲ್ ) ನನ್ನು 10 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಬಾಹ್ಯ ಬ್ಯಾಟರಿಯೊಂದಿಗೆ ನುರಿತ ಮತ್ತು ಅರೆ ಕೌಶಲ್ಯದ ತಂತ್ರಜ್ಞರಿಗಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಇನ್ನೊಂದು ಮೂರನೇ ಮಾದರಿಯ ಹೆಲ್ಮೆಟ್ ನನ್ನು ವಿಶೇಷವಾಗಿ ವೆಲ್ಡರ್‌ ಗಳಿಗಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಕೊನೆಯ ಮಾದರಿಯ ಹೆಲ್ಮೆಟ್ ಅಥವಾ ನಾಲ್ಕನೆಯ ಮಾದರಿಯ ಹೆಲ್ಮೆಟ್ ನನ್ನು ಜೆಸಿಬಿಯಂತಹ ಭಾರೀ ಯಂತ್ರದ ಚಾಲಕರಿಗೆ ಅಥವಾ ನಿಯಂತ್ರಕರಿಗಾಗಿಯೇ ಮಾಡಲಾಗುತ್ತಿದೆ.  ಎಂದಿದ್ದಾರೆ.

ಜೆಸಿಬಿ ಯೊಂದಿಗೆ ಪಾಲುದಾರಿಕೆ :

ಈ ಬಗ್ಗೆ ಪ್ರತಿಕ್ರಿಯಿಸಿದ ಕೌಂಡಿನ್ಯ, ನಮ್ಮ ಹೆಲ್ಮೆಟ್ ತಯಾರಿಕೆಗೆ ಹಾಗೂ ಅದರ ಉನ್ನತ ಮಟ್ಟದ ಮಾರಾಟಕ್ಕಾಗಿ ನಾವು ಜೆಸಿಬಿ ಯೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ನೈರುತ್ಯ ರೈಲ್ವೆಗೆ ಮೊದಲ ಹಂತದ ಉತ್ಪನ್ನಗಳು :

ಕಂಪೆನಿಯು ತನ್ನು ಮೊದಲ ಹಂತದ  ಹೆಲ್ಮೆಟ್ ಗಳನ್ನು ಶೀಘ್ರದಲ್ಲಿಯೇ ನೈರುತ್ಯ ರೈಲ್ವೆಗೆ  ಪೂರೈಸುತ್ತದೆ ಮತ್ತು ಮಧ್ಯಪ್ರಾಚ್ಯದಲ್ಲಿ ತನ್ನ ಮಾರುಕಟ್ಟೆ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಎದುರು ನೋಡುತ್ತಿದೆ. ವಾತಾವರಣದಲ್ಲಿರುವ ಸಹಜ ಗಾಳಿಯನ್ನು ಹೀರುವ ಮತ್ತು ಹೆಲ್ಮೆಟ್‌ ಗಳ ಮುಂಭಾಗದಲ್ಲಿರುವ ಕೂಲಿಂಗ್ ವ್ಯವಸ್ಥೆಗೆ ಪಂಪ್ ಮಾಡುವ ಕೂಲಿಂಗ್ ವ್ಯವಸ್ಥೆಯನ್ನು ಈ ಹೆಲ್ಮೆಟ್ ಗಳು ಹೊಂದಿರಲಿವೆ ಎಂದು ಕಂಪೆನಿ ಹೇಳಿದೆ.

ಒಟ್ಟಿನಲ್ಲಿ, ಉದ್ಯಮ ಕ್ಷೇತ್ರಕ್ಕೆ ಇತ್ತೀಚೆಗಿನ ಕೆಲವು ವರ್ಷಗಳ ಹಿಂದಷ್ಟೇ ಕಾಲಿಟ್ಟ ಯುವ ಉದ್ಯಮಿಗಳ ಸಾರಥ್ಯದ ಜಾರ್ಶ್ ಇನ್ನೋವೇಶನ್‌ ಈ ಹೊಸ ತಂತ್ರಜ್ಞಾನದ ಹೆಲ್ಮೆಟ್ ನನ್ನು ಮಾರುಕಟ್ಟೆಗೆ ಸದ್ಯದಲ್ಲೇ ಬಿಡುತ್ತಿದ್ದು, ಹೆಲ್ಮೇಟ್ ನ ಮಾರುಕಟ್ಟೆ ಬೆಲೆ ಹಾಗೂ ಲಭ್ಯತೆಯ ಬಗ್ಗೆ ಯಾವುದೇ ಸಂಪೂರ್ಣ ಮಾಹಿತಿಯನ್ನು ಹೇಳಿಕೊಂಡಿಲ್ಲ.

ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 38,875 ಕೋವಿಡ್ ಪ್ರಕರಣ ಪತ್ತೆ, 369 ಮಂದಿ ಸಾವು

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

From 5 Rs Concert to 5 Grammys…: Tabla Ustad Zakir Hussain

Zakir Hussain: ‌5 ರೂ ಕಾನ್ಸರ್ಟ್‌ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್‌ ನಾದಮಯ ಪಯಣ

Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್‌ ಆಗುತ್ತಿರುವ ಈ ಬಾಲಕ ಯಾರು?

Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್‌ ಆಗುತ್ತಿರುವ ಈ ಬಾಲಕ ಯಾರು?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.