ಭಾರತ: ದೇಶ ಒಂದು ನಾಮ ಹಲವು..!
ದಿನೇಶ ಎಂ, Oct 16, 2022, 5:45 PM IST
ದೇಶ, ಭಾಷೆ, ಅಧಿಕಾರ ಮತ್ತು ನೈಸರ್ಗಿಕ ಬದಲಾವಣೆಗಳು ಸ್ಥಳಗಳ ಹೆಸರನ್ನು ಬದಲಾಯಿಸುತ್ತವೆ, ಈ ಎಲ್ಲಾ ಪ್ರಭಾವಗಳನ್ನು ಮೀರಿ ಭಾರತದ ಹಲವು ಪ್ರದೇಶಗಳು ತಮ್ಮ ಮೂಲ ಹೆಸರು, ಇತಿಹಾಸಗಳನ್ನು ಉಳಿಸಿಕೊಂಡಿವೆ. ಆದರೆ, ಕೆಲ ಪ್ರದೇಶಗಳು ತಮ್ಮ ಹೆಸರುಗಳನ್ನು ಮೂಲ ರೂಪದಲ್ಲಿ ಉಳಿಸಿಕೊಳ್ಳದಿದ್ದರೂ ಎಲ್ಲೋ ಒಂದು ಕಡೆ ಮೂಲ ನಿವಾಸಿಗಳಿಗೆ ಅದರ ಮೂಲ ಹೆಸರಿನ ಪರಿಚಯವಿದೆ ಮತ್ತು ಕೆಲವು ಪೌರಾಣಿಕ ದಾಖಲೆಗಳಲ್ಲೂ ಅವುಗಳು ಉಳಿದುಕೊಂಡಿವೆ.
ಭಾರತವು ಇಂತಹ ಹಲವು ನಾಮಧೇಯಗಳನ್ನು ಒಳಗೊಂಡಿವೆ. ಜಂಬೂದ್ವೀಪ ಸಂಸ್ಕೃತದಲ್ಲಿ ‘ಜಂಬೂ ಫಲ’ ಅಂದರೆ ನೇರಳೆ ಹಣ್ಣು. ಪುರಾತನ ಭರತ ಖಂಡದ ನೇರಳೆ ಮರಗಳಲ್ಲಿ ಬೃಹತ್ ಗಾತ್ರದ ನೇರಳೆ ಹಣ್ಣುಗಳು ಬಿಡುತ್ತಿದ್ದರಿಂದ “ಜಂಬೂ ದ್ವೀಪ” ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ‘ಭಾರತ’ ಅಧಿಕೃತ ಹೆಸರಾಗುವ ಮೊದಲು ಪ್ರಾಚೀನ ಗ್ರಂಥಗಳಲ್ಲಿ ಮತ್ತು ಆಗ್ನೇಯ ಏಷ್ಯಾದ ಅನೇಕ ದೇಶಗಳಲ್ಲಿ ಭಾರತಕ್ಕೆ ಜಂಬೂದ್ವೀಪ ಎಂಬ ಹೆಸರು ಐತಿಹಾಸಿಕ ಪದವಾಗಿ ಬಳಸಲ್ಪಡುತ್ತಿತ್ತು. ವಿಷ್ಣು ಪುರಾಣದಲ್ಲಿ ‘ಸುದರ್ಶನ ದ್ವೀಪ’ ಎಂತಲೂ ಭಾರತವನ್ನು ಕರೆದಿದ್ದಾರೆ.
ಇನ್ನು ಭಾರತವನ್ನು ಸಂಸ್ಕೃತದಲ್ಲಿ “ಆರ್ಯಾವರ್ತ” ಎಂದರೆ ‘ಆರ್ಯರ ವಾಸಸ್ಥಾನ’ ಎಂದು ಕರೆಯಲಾಗುತ್ತಿತ್ತು. ಮನು ಸ್ಮೃತಿ “ಹಿಮಾಲಯ ಮತ್ತು ವಿಂಧ್ಯ ಶ್ರೇಣಿಗಳ ನಡುವಿನ ಪೂರ್ವ, ಬಂಗಾಳಕೊಲ್ಲಿಯಿಂದ ಹಿಡಿದು ಪಶ್ಚಿಮ ಸಮುದ್ರದ ಅಂದರೆ ಅರೇಬಿಯನ್ ಸಮುದ್ರ ವರೆಗಿನ ಭೂಭಾಗಕ್ಕೆ ಆರ್ಯಾವರ್ತ ಎಂದು ಪುರಾಣಗ್ರಂಥಗಳಲ್ಲಿ ಉಲ್ಲೇಖವಾಗಿವೆ.
ಹಿಂದೂಸ್ತಾನ ಎನ್ನುವ ಹೆಸರಿಗೆ ಕಾರಣ, ಪುರಾತನ ಕಾಲದಲ್ಲಿ ಅರಬ್ಬರು ಭಾರತವನ್ನು ‘ಹಿಂದ್’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಭಾರತದಲ್ಲಿ ಸಿಂಧು ನದಿ ಹರಿಯುತ್ತಿದ್ದರಿಂದ ‘ಸಿಂಧ್’ ಉಚ್ಚರಣೆಯೇ ಅರಬ್ಬರ ಬಾಯಲ್ಲಿ ‘ಹಿಂದ್’ ಎಂದಾಯಿತು. ಸುಮಾರು ಕ್ರಿ. ಶ. ಒಂದನೇ ಶತಮಾನದಿಂದ ಪರ್ಷಿಯನ್ನರು ಒಂದು ಪ್ರದೇಶವನ್ನು ಉಲ್ಲೇಖಿಸಲು ಬಳಸುವ ‘ಸ್ತಾನ್’ ಸೇರಿಸಿ ‘ಹಿಂದೂಸ್ತಾನ’ ಎಂದು ಕರೆಯಲು ಪ್ರಾರಂಭಿಸಿದರು ಎನ್ನಲಾಗಿದೆ. ಭಾರತ ನಮಗೆಲ್ಲ ತಿಳಿದಿರುವಂತೆ ಭರತ ಚಕ್ರವರ್ತಿ ಆಳಿದ ಭೂಮಿಯನ್ನೇ ಭಾರತ ಎಂದು ಕರೆಯುತ್ತಿದ್ದೇವೆ.
ಭಾರತದಲ್ಲಿನ ಅಂತಹ ಕೆಲವು ಪ್ರದೇಶಗಳು, ಮುಖ್ಯವಾಗಿ ದೇವಿಯ ಹೆಸರಿನ ಹಿನ್ನಲೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸ್ಥಳಗಳು ಬಹಳಷ್ಟಿವೆ, ಅವುಗಳು ದೇವಿಯ ಶಕ್ತಿ ಪೀಠ, ದೇವಾಲಯ, ಜನಾಂಗಗಳ ಆಧಾರದ ಮೇಲೂ ಭಾರತಹ ಹಲವು ನಗರಗಳಿಗೆ ವಿಭಿನ್ನ ಹೆಸರುಗಳು ಬಂದಿವೆ. ಅವುಗಳಲ್ಲಿ ಕೆಲವು ಇಂತಿವೆ.
- ಚಂಡೀಘಡ: ಪಂಜಾಬ್ – ಹರ್ಯಾಣ ನಗರದ ಹೊರವಲಯದಲ್ಲಿ ಚಂಡೀದೇವಿಯ ದೇವಾಲಯದಿಂದಾಗಿ ಈ ನಗರಕ್ಕೆ ಚಂಡೀಘಡ ಎನ್ನುವ ಹೆಸರು ಬಂದಿದೆ.
- ನೈನಿತಾಲ್ ಉತ್ತರಾಖಂಡ್ : ಉತ್ತರಾಖಂಡ್ ಪ್ರಸಿದ್ದ ಗಿರಿಧಾಮವಾದ ನೈನಿತಾಲ್. ಈ ಪ್ರದೇಶದ ಸುಪ್ರಸಿದ್ಧ ಸ್ಥಳದಲ್ಲಿ ಒಂದಾದ ದುರ್ಗಾ ಮಾತೆಯ ಅವತಾರವಾದ ನೈನಾ ದೇವಿಯ ದೇವಾಲಯದಿಂದಾಗಿ ಈ ನಗರಕ್ಕೆ ನೈನಿತಾಲ್ ಎಂಬ ಹೆಸರನ್ನು ನೀಡಲಾಗಿದೆ.
- ಮುಂಬೈ: ಮಹಾರಾಷ್ಟ್ರ ಮುಂಬೈನ ಮುಂಬಾದೇವಿ ದೇವಾಲಯದಿಂದಾಗಿ ಮುಂಬೈಗೆ ಆ ಹೆಸರು ಬಂದಿದೆ. ಈ ದೇವಾಲಯವನ್ನು ಆರಂಭದಲ್ಲಿ ಐದು ಶತಮಾನಗಳ ಹಿಂದೆ ಅಂಬಾ ದೇವಿಯ ಆರಾಧನೆಗಾಗಿ ನಿರ್ಮಿಸಲಾಯಿತು, ಆದರೆ ಕಾಲಾನಂತರದಲ್ಲಿ, ಈ ಹೆಸರು ಮುಂಬಾ ದೇವಿ ಎಂದು ಬದಲಾಯಿತು ಮತ್ತು ಇದರ ಪರಿಣಾಮವಾಗಿ ನಗರವು ಮುಂಬೈ ಎಂದು ಕರೆಯಲ್ಪಟ್ಟಿತು ಎನ್ನಲಾಗಿದೆ.
- ದೆಹಲಿ: ಮೆಹ್ರೌಲಿ ಜಿಲ್ಲೆಯಲ್ಲಿರುವ ಯೋಗಮಾಯಾ ದೇವಾಲಯದ ಕಾರಣ, ಮೊಘಲರು ಆಗಮಿಸುವ ಮುಂಚೆಯೇ ದೆಹಲಿಯ ಕೆಲವು ಪ್ರದೇಶಗಳನ್ನು ಯೊಗ್ನಿಪುರ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯವನ್ನು ಸುಮಾರು 5000 ವರ್ಷಗಳ ಹಿಂದೆ ಪಾಂಡವ ಸಹೋದರರಿಂದ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.
- ಪಾಟ್ನಾ: ಬಿಹಾರಿನ ರಾಜಧಾನಿ ಮತ್ತು ದೊಡ್ಡ ನಗರವಾಗಿರುವ ಪಾಟ್ನಾದಲ್ಲಿ, ಶಿವ ದೇವರ ಪತ್ನಿ ಸತಿ ದೇವಿಯ ಬಲ ತೊಡೆಯು ಹಳೆಯ ಪಾಟ್ನಾ ಇರುವ ನೆಲದ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶಕ್ತಿ ಪೀಠವನ್ನು ಸ್ಥಾಪಿಸಲಾಯಿತು ಮತ್ತು ಇಲ್ಲಿ ದೇವಿಯನ್ನು ಪಟನ್ ದೇವಿ ಎಂದು ಕರೆಯಲಾಗುತ್ತಿತ್ತು. ಈ ಹೆಸರಿನಿಂದಲೇ ಪಾಟ್ನಾ ನಗರಕ್ಕೆ ಈ ಹೆಸರು ಬಂದಿತು ಎನ್ನಲಾಗಿದೆ.
ಇಂತಹ ಹಲವು ಧರ್ಮ, ಜಾತಿ, ಆಚರಣೆ ಮತ್ತು ಹಲವು ಭಾಷೆಗಳ ತವರಾದ ಭಾರತದ ಈ ಭೂ ಭಾಗವನ್ನು ಕೆಲವರು ಪಾಂಡವ ಹಾಗೂ ಕೌರವರ ವಂಶಸ್ಥರಾದ ದುಷ್ಯಂತ ಮತ್ತು ಶಕುಂತಲೆಯರ ಮಗನಾದ ಭರತನು ಆಳುತ್ತಿದ್ದರಿಂದ ಭಾರತ ಎಂಬ ಹೆಸರು ಬಂತೆಂದೂ, ಕೆಲವರು ರಾಮ ಸಹೋದರ ಭರತ ಆಳುತ್ತಿದ್ದರಿಂದಲೂ ಈ ಹೆಸರು ಬಂತೆಂದೂ ಹೇಳುತ್ತಾರೆ. ಇಂಡಿಯಾ ಈ ಹೆಸರು ‘ಇಂಡಸ್’ ಎಂಬ ಪದದಿಂದ ಉತ್ಪತ್ತಿಗೊಂಡಿದೆ. ಇಂಡಸ್ ಅಥವಾ ಸಿಂಧು ನದಿ ಹರಿಯುತ್ತಿದ್ದ ನಾಡನ್ನು ‘ಇಂಡಿಯಾ’ ಎಂದು ಕರೆದರು. ಇವುಗಳು ಭಾರತದ ಮತ್ತು ಇದರ ಕೆಲವು ನಗರಗಳ ಹೆಸರಿನ ಹಿಂದಿನ ಕಾರಣಗಳ ವಿವರ.
ಬರಹ: ದಿನೇಶ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.