Indian films: ದೇವ್‌ದಾಸ್ To ದೃಶ್ಯಂ.. ಅತೀ ಹೆಚ್ಚು ರಿಮೇಕ್ ಆದ ಭಾರತೀಯ ಚಿತ್ರಗಳಿವು..
ಸುಹಾನ್ ಶೇಕ್, Aug 10, 2024, 5:56 PM IST
ಒಂದು ಕಾಲದಲ್ಲಿ ಸಿನಿಮಾರಂಗದಲ್ಲಿ ರಿಮೇಕ್ (Remake Movies) ಜಮಾನ ಹೆಚ್ಚಾಗಿತ್ತು. ಒಂದು ಭಾಷೆಯಲ್ಲಿ ಸಿನಿಮಾ ಬಂದರೆ, ಆ ಸಿನಿಮಾ ಆ ಭಾಷೆಯಲ್ಲಿ ಹಿಟ್ ಆದರೆ ಅದನ್ನು ಕೆಲ ಸಮಯದ ನಂತರ ಒಂದಷ್ಟು ಬದಲಾವಣೆ ಮಾಡಿಕೊಂಡು ಅಥವಾ ಆಯಾ ಭಾಷಾ ಶೈಲಿಗೆ ಒಗ್ಗಿಸಿಕೊಂಡು ತೆರೆಗೆ ತರಲಾಗುತ್ತಿತ್ತು.
ಇಂದಿಗೂ ರಿಮೇಕ್ ಕಾಲ ನಿಂತಿಲ್ಲ. ಪ್ಯಾನ್ ಇಂಡಿಯಾದಂತಹ(Pan india) ಕಾನ್ಸೆಪ್ಟ್ ಬಂದ ಬಳಿಕ ಅದು ಸ್ವಲ್ಪ ಮಟ್ಟಿಗೆ ಕಮ್ಮಿಯಾಗಿದೆ ಎನ್ನಬಹುದು. ಮೊದ ಮೊದಲು ಬರುತ್ತಿದ್ದ ರಿಮೇಕ್ ಸಿನಿಮಾಗಳು ಹಿಟ್ ಆಗುತ್ತಿತ್ತು. ಉದಾಹರಣೆಗೆ ಹಿಂದಿಯಲ್ಲಿ ಕೌಟುಂಬಿಕ ಕಥಾಹಂದರವುಳ್ಳ ಸಿನಿಮಾಗಳು 90 ಹಾಗೂ 2000 ದಶಕದ ಆರಂಭದಲ್ಲಿ ಹೆಚ್ಚಾಗಿ ಬರುತ್ತಿತ್ತು. ಇದೇ ರೀತಿಯ ಸಿನಿಮಾಗಳು ತಮಿಳು, ತೆಲುಗು ಹಾಗೂ ಕನ್ನಡದಲ್ಲೂ ಬರಲು ಶುರುವಾಯಿತು. ಇದರಲ್ಲಿ ಕೆಲ ಸಿನಿಮಾಗಳು ರಿಮೇಕ್ ಆದರೆ ಇನ್ನು ಕೆಲ ಸಿನಿಮಾಗಳು ಒಂದಷ್ಟು ಬದಲಾವಣೆ ಮಾಡಿಕೊಂಡು ತೆರೆಗೆ ಬಂದಿತ್ತು.
ಭಾರತೀಯ ಸಿನಿಮಾಗಳು ಮೂಲ ಭಾಷೆಯಲ್ಲಿ ಮಾತ್ರವಲ್ಲದೆ,ಪ್ರಾದೇಶಿಕ, ವಿದೇಶಿ ಭಾಷೆಯಲ್ಲೂ ರಿಮೇಕ್ ಆಗಿದೆ. ಅತೀ ಹೆಚ್ಚು ಬಾರಿ ರಿಮೇಕ್ ಆದ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ.
ದೇವ್‌ದಾಸ್: ನಮ್ಮೆಗೆಲ್ಲ ʼದೇವ್‌ದಾಸ್ʼ(Devdas Movie) ಎಂದರೆ ನೆನೆಪಿಗೆ ಬರುವುದ ಬಾಲಿವುಡ್‌ನಲ್ಲಿ(Bollywood) ಬಂದ ಎವರ್ ಗ್ರೀನ್ ಸಿನಿಮಾ. ಶಾರುಖ್ ಖಾನ್(Shah Rukh Khan), ಐಶ್ವರ್ಯಾ(Aishwarya Rai Bachchan), ಮಾಧುರಿ ದೀಕ್ಷಿತ್(Madhuri Dixit) ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನ ಮಾಡಿದ್ದರು.
ಶರತ್ ಚಂದ್ರ ಚಟ್ಟೋಪಾಧ್ಯಾಯ ಎಂಬ ಕವಿ 1917ರಲ್ಲಿ ಬರೆದ ಬೆಂಗಾಳಿ ರೊಮ್ಯಾಂಟಿಕ್ ಕಾದಂಬರಿಯ ಹೆಸರೇ ಈ ʼದೇವ್‌ದಾಸ್’. ಇದರ ಕಥೆಯನ್ನಿಟ್ಟುಕೊಂಡು ಬಂದ ಸಿನಿಮಾ ಶಾರುಖ್ ಖಾನ್ ಅವರ ʼದೇವ್ ದಾಸ್ʼ. ಈ ಸಿನಿಮಾ 2002ರಲ್ಲಿ ಬಂದಿತ್ತು. ಇದಕ್ಕಿಂತ ಮುನ್ನ 1953 ರಲ್ಲಿ ಅಕ್ಕಿನೇನಿ ನಾಗೇಶ್ವರ ಅಭಿನಯದಲ್ಲಿ ತೆಲುಗು ಭಾಷೆಯಲ್ಲಿ ʼದೇವ್ ದಾಸ್ʼ ತೆರೆ ಕಂಡಿತ್ತು. ಹಿಂದಿಯಲ್ಲಿ ಮೊದಲ ಸಲಿ ದಿಲೀಪ್ ಕುಮಾರ್ ಅಭಿನಯದ ʼದೇವ್‌ದಾಸ್ʼ 1955ರಲ್ಲಿ ಬಂದಿತ್ತು. ಆ ಬಳಿಕ 1979ರಲ್ಲಿ ದಿಲೀಪ್ ರಾಯ್ ನಿರ್ದೇಶನದಲ್ಲಿ ಬೆಂಗಾಳಿ ಭಾಷೆಯಲ್ಲೂ ʼದೇವ್‌ದಾಸ್ʼ ಬಂದಿತ್ತು.
ಒಟ್ಟು 16 ಸಲಿ ʼದೇವ್ ದಾಸ್ʼ ಹಿಂದಿ ,ಬಂಗಾಳಿ, ತಮಿಳು, ತೆಲುಗು ಸೇರಿದಂತೆ ಭಾಷೆಗಳಲ್ಲಿ 16 ಬಾರಿ ರೀಮೇಕ್ ಮಾಡಲಾಗಿದೆ.
ದೃಶ್ಯಂ: 2013ರಲ್ಲಿ ಜೀತು ಜೋಸೆಫ್ (Jeethu Joseph) ನಿರ್ದೇಶನದಲ್ಲಿ ಬಂದ ಮಲಯಾಳಂ ಥ್ರಿಲ್ಲರ್ ʼದೃಶ್ಯಂʼ (Drishyam ) 6 ಬಾರಿ ರಿಮೇಕ್ ಆಗಿದೆ. ತೆಲುಗು, ಕನ್ನಡ,ತಮಿಳು, ಹಿಂದಿ, ಶ್ರೀಲಂಕಾ, ಹಾಗೂ ಚೈನೀಸ್ ಭಾಷೆಯಲ್ಲಿ ʼದೃಶ್ಯಂʼ ಸಿನಿಮಾ ರಿಮೇಕ್ ಆಗಿದೆ.
2014ರಲ್ಲಿ ದಗ್ಗುಬಾಟಿ ವೆಂಕಟೇಶ್(Daggubati Venkatesh), ಮೀನಾ (Actress Meena) ಪ್ರಧಾನ ಪಾತ್ರದಲ್ಲಿ ತೆಲುಗಿನಲ್ಲಿ ದೃಶ್ಯಂ ಸಿನಿಮಾ ಬಂದಿತ್ತು. ಇದಕ್ಕೆ ʼದೃಶ್ಯಮ್ʼ ಎಂದು ಟೈಟಲ್ ಇಡಲಾಗಿತ್ತು. ಅದೇ ವರ್ಷ ಕನ್ನಡದಲ್ಲಿ ʼದೃಶ್ಯʼ ತೆರೆ ಕಂಡಿತ್ತು. ರವಿಚಂದ್ರನ್ (V. Ravichandran), ನವ್ಯ ನಾಯರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2015ರಲ್ಲಿ ತಮಿಳು ರಿಮೇಕ್ ಗೆ ʼ ಪಾಪನಾಶಂʼ ಎಂದು ಟೈಟಲ್ ಇಡಲಾಗಿತ್ತು. ಇದರಲ್ಲಿ ಕಮಲ್ ಹಾಸನ್(Kamal Hasan) ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. 2015ರಲ್ಲೇ ಹಿಂದಿಯಲ್ಲೂ ʼದೃಶ್ಯಂʼ ತೆರೆಕಂಡಿತ್ತು. ಅಜಯ್ ದೇವಗನ್ (Ajay Devgn) ಲೀಡ್ ರೋಲ್‌ಗೆ ಬಣ್ಣ ಹಚ್ಚಿದ್ದರು. 2017 ರಲ್ಲಿ ʼಧರ್ಮಯುಧಯʼ ಸಿಂಹಳೀಯ(ಶ್ರೀಲಂಕಾ) ಭಾಷೆಯಲ್ಲಿ ʼದೃಶ್ಯಂʼ ರಿಮೇಕ್ ಆಗಿ ಬಂದಿತ್ತು.
ವಿಶೇಷವೆಂದರೆ ಎಲ್ಲಾ ಭಾಷೆಯಲ್ಲೂ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಮಣಿಚಿತ್ರತಾಳ್: 1993 ರಲ್ಲಿ ಮಾಲಿವುಡ್ ನಲ್ಲಿ ಬಂದ ಸೈಕಲಾಜಿಕಲ್ ಥ್ರಿಲ್ಲರ್ ʼ ಮಣಿಚಿತ್ರತಾಳ್ʼ(Manichitrathazhu) 4 ಭಾಷೆಯಲ್ಲಿ ರಿಮೇಕ್ ಆಗಿದೆ. ಮೂಲ ಭಾಷೆಯಲ್ಲಿ ಮೋಹನ್ ಲಾಲ್ (Mohanlal), ಶೋಭನಾ ನಟಿಸಿದ್ದರು. 2005ರಲ್ಲಿ ಪಿ.ವಾಸು(P.Vasu) ಇದನ್ನು ತಮಿಳಿಗೆ ರಿಮೇಕ್ ಮಾಡಿದ್ದರು. ʼಚಂದ್ರಮುಖಿʼ (Chandramukhi) ಎನ್ನುವ ಟೈಟಲ್ ನಲ್ಲಿ ಈ ಸಿನಿಮಾ ಬಂದಿತ್ತು. ಕನ್ನಡದಲ್ಲಿ ಪಿ.ವಾಸು ಅವರೇ ʼಆಪ್ತಮಿತ್ರʼ ಎನ್ನುವ ಟೈಟಲ್ ನಲ್ಲಿ ಬಂದಿತ್ತು. ವಿಷ್ಣುವರ್ಧನ್, ಸೌಂದರ್ಯ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಬೆಂಗಾಳಿ ಭಾಷೆಯಲ್ಲಿ ʼರಾಜ್‌ಮೊಹೋಲ್ʼ, ಹಿಂದಿ ಭಾಷೆಯಲ್ಲಿ ʼಭೂಲ್ ಭುಲೈಯಾʼ (Bhool Bhulaiyaa) ಟೈಟಲ್ ನಲ್ಲಿ ಬಂದಿತ್ತು. ಅಕ್ಷಯ್ ಕುಮಾರ್ (Akshay Kumar) ವಿದ್ಯಾ ಬಾಲನ್ (Vidya Balan) ಹಿಂದಿಯಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದರು. ಈ ಸಿನಿಮಾಗಳ ಸೀಕ್ವೆಲ್ ಕೂಡ ರಿಲೀಸ್ ಆಗಿ ಸದ್ದು ಮಾಡಿತ್ತು.
ಸೇತು: 1999ರಲ್ಲಿ ಬಂದ ತಮಿಳು ಸಿನಿಮಾ ʼಸೇತುʼ (Sethu Movie) ರೊಮ್ಯಾಂಟಿಕ್ ಡ್ರಾಮಾದಲ್ಲಿ ನಟ ವಿಕ್ರಮ್ (Actor Vikram) ಅವರ ಅಭಿನಯ ಮನಗೆದ್ದಿತ್ತು. ಈ ಸೂಪರ್ ಹಿಟ್ ಸಿನಿಮಾ 4 ಭಾಷೆಗೆ ರಿಮೇಕ್ ಆಗಿತ್ತು. ಕನ್ನಡದಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರ ʼಹುಚ್ಚʼ(Huchcha Movie), ತೆಲುಗಿನಲ್ಲಿ ʼಸೇಸುʼ ಹಿಂದಿಯಲ್ಲಿ ಸಲ್ಮಾನ್ ಖಾನ್ (Salman Khan) ನಟಿಸಿದ್ದ ʼತೇರೆ ನಾಮ್ʼ(Tere Naam) ಹಾಗೂ ಬಾಂಗ್ಲಾದೇಶದಲ್ಲಿ ʼತೊರ್ ಕರೊಣೆ ಬೆಚೆ ಆಚಿʼ ʼಸೇತುʼ ಸಿನಿಮಾದ ರಿಮೇಕ್ ಸಿನಿಮಾವಾಗಿತ್ತು.
ಗೋಲ್ ಮಾಲ್: ಹೃಷಿಕೇಶ್ ಮುಖರ್ಜಿಯವರ 1979 ರಲ್ಲಿ ಬಂದ ಕಲ್ಟ್ ಕಾಮಿಡಿ ʼಗೋಲ್ ಮಾಲ್ʼ(Gol Maal Movie) 5 ಬಾರಿ ರಿಮೇಕ್ ಆಗಿದೆ. ತಮಿಳಿನಲ್ಲಿ ʼತಿಲ್ಲು ಮುಲ್ಲುʼ ಆಗಿ 1981ರಲ್ಲಿ ಬಂದಿತ್ತು. ಇದರಲ್ಲಿ ರಜಿನಿಕಾಂತ್ ನಟಿಸಿದ್ದರು. ಕನ್ನಡದಲ್ಲಿ ʼಆಸೆಗೊಬ್ಬ ಮೀಸೆಗೊಬ್ಬʼ ಆಗಿ 1990ರಲ್ಲಿ ಬಂದಿತ್ತು. ಶಿವರಾಜ್ ಕುಮಾರ್ (Shivaraj Kumar), ಸುಧಾರಾಣಿ(SudhaRani), ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. 1995ರಲ್ಲಿ ಮಾಲಿವುಡ್ ನಲ್ಲಿ ʼಸಿಂಹವಾಲನ್ ಮೆನನ್ʼ ಆಗಿ ರಿಲೀಸ್ ಆಗಿತ್ತು. ಶ್ರೀಲಂಕಾದ ಭಾಷೆಯಲ್ಲಿ ʼರಸ ರಾಹಸಕ್ʼ ಆಗಿ ತೆರೆ ಕಂಡಿತ್ತು.
ʼಬಾಡಿಗಾರ್ಡ್ʼ: 2010ರಲ್ಲಿ ಮಾಲಿವುಡ್‌ನಲ್ಲಿ ಬಂದ ʼಬಾಡಿಗಾರ್ಡ್ʼ(Body Guard Movie) 5 ರಿಮೇಕ್ ಆಗಿದೆ. 2011ರಲ್ಲಿ ದಳಪತಿ ವಿಜಯ್ (Thalapathy Vijay) ಅವರ ʼಕಾವಲನ್ʼ, ಹಿಂದಿ ʼಬಾಡಿಗಾರ್ಡ್ʼ ನಲ್ಲಿ ಸಲ್ಮಾನ್ ಖಾನ್, ಕರೀನಾ ಕಪೂರ್ ನಟಿಸಿದರೆ, ಕನ್ನಡದ ʼಬಾಡಿಗಾರ್ಡ್ʼ ನಲ್ಲಿ ಜಗ್ಗೇಶ್ (Jaggesh) ನಟಿಸಿದ್ದರು. ತೆಲುಗಿನಲ್ಲಿ ವೆಂಕಟೇಶ್ ನಟಿಸಿದ್ದರು. ಬೆಂಗಾಳಿ ಭಾಷೆಯಲ್ಲೂ ʼಬಾಡಿಗಾರ್ಡ್ʼ ರಿಮೇಕ್ ಆಗಿ ಬಂದಿತ್ತು.
ಪೋಕಿರಿ: ಮಹೇಶ್ ಬಾಬು(Mahesh Babu) ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಮಾಸ್ ಮಸಲಾ ʼಪೋಕಿರಿʼ(Pokiri) 2006ರಲ್ಲಿ ತೆಲುಗಿನಲ್ಲಿ ರಿಲೀಸ್ ಆಗಿತ್ತು. 2007 ರಲ್ಲಿ ದಳಪತಿ ವಿಜಯ್ ಅವರು ಇದರ ತಮಿಳು ರಿಮೇಕ್ ನಲ್ಲಿ ಕಾಣಿಸಿಕೊಂಡರು. 2009ರಲ್ಲಿ ಸಲ್ಮಾನ್ ಖಾನ್ ಅವರು ಹಿಂದಿ ರಿಮೇಕ್ ʼವಾಂಟೆಡ್ʼ ನಲ್ಲಿ ನಟಿಸಿದರೆ, ಕನ್ನಡದಲ್ಲಿ ದರ್ಶನ್ (Actor Darhshan) ʼಪೊರ್ಕಿʼಯಲ್ಲಿ ಕಾಣಿಸಿಕೊಂಡರು.
ನುವ್ವೋಸ್ತಾನಂತೇ ನೆನೊಡ್ಡಂತಾನ: 2005ರಲ್ಲಿ ಬಂದ ತೆಲುಗು ರೊಮ್ಯಾಂಟಿಕ್ ʼನುವ್ವೋಸ್ತಾನಂತೇ ನೆನೊಡ್ಡಂತಾನʼ(Nuvvostanante Nenoddantana) 7 ಬಾರಿ ರಿಮೇಕ್ ಆಗಿದೆ. 2006ರಲ್ಲಿ ಜಯಂ ರವಿ, ತ್ರಿಷಾ ಕೃಷ್ಣನ್ ಅವರು ಇದರ ತಮಿಳು ರಿಮೇಕ್ ʼಸಮ್ ಥಿಂಗ್ ಸಮ್ ಥಿಂಗ್… ಉನಕ್ಕುಂ ಎನಕ್ಕುಂʼನಲ್ಲಿ ಕಾಣಿಸಿಕೊಂಡರು. ಒರಿಯಾ ಭಾಷೆಯಲ್ಲಿ ʼಸುನಾ ಚಾಧೇಯಿ ಮೋ ರೂಪಾ ಚಾಧೇಯಿʼ, ಕನ್ನಡದಲ್ಲಿ ʼನೀನೆಲ್ಲೋ ನಾನಲ್ಲೇʼ( ವಿಷ್ಣುವರ್ಧನ್, ರವಿಚಂದ್ರನ್, ರಕ್ಷಿತಾ – ಲೀಡ್ ರೋಲ್) , ಪಂಜಾಬಿಯಲ್ಲಿ ʼತೇರಾ ಮೇರಾ ಕಿ ರಿಶ್ತಾʼ , ಬೆಂಗಾಲಿಯಲ್ಲಿ ʼಐ ಲವ್ ಯುʼ, ಬಾಂಗ್ಲಾದೇಶ ಬೆಂಗಾಲಿಯಲ್ಲಿ ʼನಿಸ್ಸಾಶ್ ಅಮರ್ ತುಮಿʼ, ನೇಪಾಳಿಯಲ್ಲಿʼಫ್ಲ್ಯಾಶ್ ಬ್ಯಾಕ್: ಫರ್ಕೆರಾ ಹೆರ್ಡಾʼ ಹಿಂದಿಯಲ್ಲಿ ʼರಾಮಯ್ಯ ವಸ್ತವಯ್ಯʼ ಆಗಿ ಈ ಸಿನಿಮಾ ರಿಮೇಕ್ ಆಗಿ ಬಂತು.
ಚಾರ್ಲಿ ಚಾಪ್ಲಿನ್: 2002ರಲ್ಲಿ ಬಂದ ತಮಿಳು ಕಾಮಿಡಿ ಸಿನಿಮಾ ʼಚಾರ್ಲಿ ಚಾಪ್ಲಿನ್ʼ(Charlie Chaplin Tamil Movie) 6 ಬಾರಿ ರಿಮೇಕ್ ಆಗಿದೆ. ಹಿಂದಿಯಲ್ಲಿ ʼನೋ ಎಂಟ್ರಿʼ, ತೆಲುಗಿನಲ್ಲಿ ʼಪೆಲ್ಲಂ ಊರೆಳಿತೆʼ, ಮಲಯಾಳಂನಲ್ಲಿ ʼಹ್ಯಾಪಿ ಹಸ್ಬೆಂಡ್ʼ, ಕನ್ನಡದಲ್ಲಿ ʼಕಳ್ಳ ಮಳ್ಳ ಸುಳ್ಳʼ, ಮರಾಠಿಯಲ್ಲಿ ʼನೋ ಎಂಟ್ರಿ ಪುಡೆ ಧೋಕಾ ಅಹೇʼ, ಬೆಂಗಾಲಿಯಲ್ಲಿ ʼಕೆಲೋರ್ ಕೀರ್ತಿʼ ಎನ್ನುವ ಟೈಟಲ್ ನಲ್ಲಿ ರಿಮೇಕ್ ಆಗಿ ಈ ಸಿನಿಮಾ ಬಂತು.
ಒಕ್ಕಡು: 2003ರಲ್ಲಿ ಬಂದ ತೆಲುಗು ಮಾಸ್ ಮೂವಿ ʼಒಕ್ಕಡುʼ(Okkadu) ತಮಿಳಿನಲ್ಲಿ ʼಗಿಲ್ಲಿʼ, ಬೆಂಗಾಲಿಯಲ್ಲಿ ʼಜೋರ್ʼ , ಹಿಂದಿಯಲ್ಲಿ ʼತೇವರ್ʼ(ಅರ್ಜುನ್ ಕಪೂರ್, ಸೋನಾಕ್ಷಿ ಸಿನ್ಹಾ), ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ʼಅಜಯ್ʼ ಒಡಿಯಾದಲ್ಲಿ ʼಮೇಟ್ ಆನಿದೇಲಾ ಲಖೆ ಫಗುನಾʼ ಆಗಿ ಸಿನಿಮಾ ರಿಮೇಕ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.