ನ್ಯೂಜಿಲ್ಯಾಂಡ್ ದೇಶದ ಪರವಾಗಿ ಆಡಿದ ಭಾರತೀಯ ಮೂಲದ ಆಟಗಾರರಿವರು..!


ಕೀರ್ತನ್ ಶೆಟ್ಟಿ ಬೋಳ, Jan 29, 2021, 6:00 PM IST

ನ್ಯೂಜಿಲ್ಯಾಂಡ್ ದೇಶದ ಪರವಾಗಿ ಆಡಿದ ಭಾರತೀಯ ಮೂಲದ ಆಟಗಾರರಿವರು..!

ಭಾರತದಲ್ಲಿ ಕ್ರಿಕೆಟ್ ಆಟವು ಗಲ್ಲಿ ಗಲ್ಲಿಗಳಲ್ಲಿಯೂ ಪಸರಿಸಿದೆ. ಭಾರತ ಪ್ರತಿಭಾನ್ವಿತ ಆಟಗಾರರ ಆಗರ. ಹಲವರು ತಮ್ಮ ಪ್ರತಿಭೆಯಿಂದ, ಅದೃಷ್ಟದ ಬಲದಿಂದ ಉನ್ನತ ಮಟ್ಟದಲ್ಲಿ ಆಡುವ ಅವಕಾಶ ಪಡೆದರೆ, ಬಹಳಷ್ಟು ಮಂದಿ ಈ ಅವಕಾಶದಿಂದ ವಂಚಿತರಾದವರಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗದ ಕಾರಣ ಬೇರೆ ದೇಶಕ್ಕೆ ವಲಸೆ ಹೋಗಿ ಆ ದೇಶದ ಪರವಾಗಿ ಆಡಿದ ಅದೆಷ್ಟೋ ಆಟಗಾರನ್ನು ನಾವು ಕಾಣಬಹುದು. ಇನ್ನೂ ಕೆಲವರು ಭಾರತೀಯ ಮೂಲದವರಾಗಿದ್ದರೂ, ಬೇರೆ ದೇಶಗಳಲ್ಲಿ ಹುಟ್ಟಿ ಬೆಳೆದ ಕಾರಣ ಆ ದೇಶದ ಪರವಾಗಿಯೇ ಆಡಿದವರಿದ್ದಾರೆ.

ನ್ಯೂಜಿಲೆಂಡ್‌ ಕ್ರಿಕೆಟ್ ಮಂಡಳಿ ಅನ್ಯ ದೇಶದ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ನೀಡುವಲ್ಲಿ ಸದಾ ಮುಂದಿದೆ. ಹೀಗೆ ಕಿವೀಸ್ ದೇಶದ ಪರವಾಗಿ ಆಡಿದ ಭಾರತೀಯ ಮೂಲದ ಐವರು ಆಟಗಾರರ ಪರಿಚಯ ಇಲ್ಲಿದೆ.

ದೀಪಕ್ ಪಟೇಲ್

ಭಾರತೀಯ ಮೂಲದ ದೀಪಕ್ ಪಟೇಲ್ ಜನಿಸಿದ್ದು ಕೀನ್ಯಾ ದೇಶದಲ್ಲಿ. ಆದರೆ ಹೆಚ್ಚಿನ ಕ್ರಿಕೆಟ್ ಆಡುವ ಉದ್ದೇಶದಿಂದ ಹತ್ತು ವರ್ಷ ಪ್ರಾಯದಲ್ಲೇ ಇಂಗ್ಲೆಂಡ್ ಗೆ ಆಗಮಿಸಿದ್ದ. ಹಲವು ವರ್ಷಗಳ ಕಾಲ ಕೌಂಟಿ ಕ್ರಿಕೆಟ್ ಆಡಿದರೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ. ಹೀಗಾಗಿ ಇಂಗ್ಲೆಂಡ್ ನಿಂದ ಕಿವೀಸ್ ನಾಡಿಗೆ ವಲಸೆ ಹೋದ.

ಉತ್ತಮ ಆಫ್ ಸ್ಪಿನ್ನರ್ ಆಗಿದ್ದ ದೀಪಕ್ ಪಟೇಲ್ ಕಿವೀಸ್ ಪರ ಹಲವು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 1992ರ ವಿಶ್ವ ಕಪ್ ನಲ್ಲಿ ಪಟೇಲ್ ತನ್ನ ಬೌಲಿಂಗ್ ಸಾಧನೆಯಿಂದ ಮಿಂಚಿದ್ದ.

ಜೀತನ್ ಪಟೇಲ್

ಈತ ಭಾರತೀಯ ಮೂಲದ ಮತ್ತೋರ್ವ ಆಫ್ ಸ್ಪಿನ್ನರ್. ನ್ಯೂಜಿಲ್ಯಾಂಡ್ ನ ವೆಲ್ಲಿಂಗ್ಟನ್ ನಲ್ಲಿ ಜನಿಸಿದ್ದ ಜೀತನ್ ಪಟೇಲ್ ಕಿವೀಸ್ ಪರ ಮೂರು ಮಾದರಿ ಕ್ರಿಕೆಟ್ ನಲ್ಲಿ ಮಿಂಚಿದ್ದ. ಲೆಜೆಂಡರಿ ಸ್ಪಿನ್ನರ್ ಡೇನಿಯಲ್‌ ವೆಟೋರಿ ಜೊತೆಗೆ ಜೀತನ್ ತಂಡದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ.

2005 ರಲ್ಲಿ ಅಂತಾರಾಷ್ಟ್ರೀಯ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ ಜೀತನ್  ಅದರ ಮರುವರ್ಷ ಟೆಸ್ಟ್‌ ತಂಡದಲ್ಲೂ ಸ್ಥಾನ ಪಡೆದ. 24 ಟೆಸ್ಟ್, 44 ಏಕದಿನ ಮತ್ತು 10 ಟಿ20 ಪಂದ್ಯಗಳಲ್ಲಿ ಜೀತನ್ ಪಟೇಲ್ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದಾನೆ. 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಜೀತನ್ 2019 ರಲ್ಲಿ ಇಂಗ್ಲೆಂಡ್ ತಂಡದ ಸ್ಪಿನ್‌ ಬೌಲಿಂಗ್ ಮಾರ್ಗದರ್ಶಕನಾಗಿ ನೇಮಕವಾಗಿದ್ದ.

ಇಶ್ ಸೋಧಿ

ಈ ಲೆಗ್ ಸ್ಪಿನ್ ಬೌಲರ್ ಜನಿಸಿದ್ದು ಭಾರತದಲ್ಲೇ . ಲೂಧಿಯಾನ ದ ಸೋಧಿ ಸಣ್ಣ ಪ್ರಾಯದಲ್ಲೇ ನ್ಯೂಜಿಲ್ಯಾಂಡ್ ಗೆ ತೆರಳಿದ್ದ. 19ನೇ ವಯಸ್ಸಿನಲ್ಲೇ ಕಿವೀಸ್ ಪರ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಪಡೆದ ಸೋಧಿ ಉತ್ತಮ ಪ್ರದರ್ಶನ ನೀಡದ ಕಾರಣದಿಂದ ತಂಡದಿಂದ ಹೊರಬಿದ್ದ.

ನಂತರ ನಿಗದಿತ ಓವರ್ ಮಾದರಿಯಲ್ಲಿ ಅವಕಾಶ ಪಡೆದ ನೀಳ ಕಾಯದ ಈ ಬೌಲರ್ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡ. ಟಿ 20 ಮಾದರಿಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸೋಧಿ ಐಪಿಎಲ್ ನಲ್ಲೂ ಆಡಿದ್ದಾರೆ.

ರಾನಿ ಹಿರಾ

ಭಾರತೀಯ ಮೂಲದವರಾಗಿ ನ್ಯೂಜಿಲ್ಯಾಂಡ್ ಪರವಾಗಿ ಆಡಿದ ಮತ್ತೋರ್ವ ಸ್ಪಿನ್ನರ್ ರಾನಿ ಹಿರಾ. ಎಡಗೈ ಸ್ಪಿನ್ನರ್ ಆದ ಹಿರಾ ಆಡಿದ್ದು ಕೇವಲ ಟಿ20 ಮಾದರಿ ಮಾತ್ರ. 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಹಿರಾ 14 ಟಿ20 ಪಂದ್ಯಗಳಲ್ಲಿ ಬ್ಲ್ಯಾಕ್‌ ಕ್ಯಾಪ್ಸ್ ತಂಡವನ್ನು ಪ್ರತಿನಿಧಿಸಿದ್ದ ರಾನಿ ಹಿರಾ 7.78ರ ಎಕಾನಮಿ ರೇಟ್ ನಲ್ಲಿ 9 ವಿಕೆಟ್ ಮಾತ್ರ ಕಿತ್ತಿದ್ದರು.

ರಾನಿ ಹಿರಾ ಭಾರತೀಯ ಮೂಲದವರಾದರೂ ಜನಿಸಿದ್ದು, ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನಲ್ಲಿ. ಅಲ್ಲೇ ದೇಶಿಯ ಕ್ರಿಕೆಟ್ ಆಡಿದ್ದರು. ದೇಶಿಯ ಟಿ20 ಕ್ರಿಕೆಟ್ ಕಪ್ ನಲ್ಲಿ ತೋರಿದ ಅಮೋಘ ಪ್ರದರ್ಶನದ ಕಾರಣದಿಂದ ರಾಷ್ಟ್ರೀಯ ತಂಡದ ಕರೆ ಪಡೆದಿದ್ದರು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದರು.

ಜೀತ್ ರಾವಲ್

ನ್ಯೂಜಿಲ್ಯಾಂಡ್ ಟೆಸ್ಟ್ ತಂಡದಲ್ಲಿ ಆರಂಭಿಕ ಬ್ಯಾಟ್ಸಮ್ ಆಗಿ ಆಡಿದ್ದ ಜೀತ್ ರಾವಲ್ ಮೂಲತಃ ಭಾರತದ ಗುಜರಾತ್ ನವರು. ಆರಂಭಿಕ ಕ್ರಿಕೆಟ್ ನ್ನು ಭಾರತದಲ್ಲಿ ಆಡಿದ್ದರು. ಮಾಜಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಪಾರ್ಥೀವ್ ಪಟೇಲ್ ಜೊತೆ ಆಡಿದ್ದ ಜೀತ್ ರಾವಲ್ ತನ್ನ 16ನೇ ವರ್ಷದಲ್ಲಿ ನ್ಯೂಜಿಲ್ಯಾಂಡ್ ಗೆ ವಲಸೆ ಹೋದರು.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತೋರಿದ ಅದ್ಭುತ ಆಟದ ಸಲುವಾಗಿ ಜೀತ್ ರಾವಲ್ ಸುಲಭವಾಗಿ ಕಿವೀಸ್ ತಂಡಕ್ಕೆ ಆಯ್ಕೆಯಾದರು. 2016ರಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ಜೀತ್, ಒಟ್ಟು 24 ಪಂದ್ಯಗಳನ್ನಾಡಿದ್ದಾರೆ. 30.08ರ ಸರಾಸರಿಯಲ್ಲಿ 1143 ರನ್ ಗಳಿಸಿದ್ದಾರೆ. ಆದರೆ ಸ್ಥಿತ ಪ್ರದರ್ಶನ ನೀಡಲು ವಿಫಲರಾದ ಜೀತ್, ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.