ಹೇಗಿತ್ತು ಭಾರತದ ಮೊದಲ ಗಣರಾಜ್ಯೋತ್ಸವ ಸಂಭ್ರಮ
Team Udayavani, Jan 26, 2021, 7:15 AM IST
ಜನವರಿ 26, 1950ರ ಮುಂಜಾವು 10:18 ನಿಮಿಷಕ್ಕೆ ಭಾರತ ಗಣರಾಜ್ಯವಾಗಿ ಬದಲಾಯಿತು. ಇದಾದ ಕೆಲವೇ ಸಮಯದಲ್ಲಿ, ಅಂದರೆ 10:24ಕ್ಕೆ ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದ ಮೊದಲ ರಾಷ್ಟ್ರಪತಿಯಾಗಿ ಪದಗ್ರಹಣ ಮಾಡಿದರು.
ಜನವರಿ 26 1950ರಂದು ಭಾರತದ ಸಂವಿಧಾನ ಜಾರಿಗೆ ಬಂದ ದಿನ. ಭಾರತದ ಸ್ವಾತಂತ್ರÂ ಚಳವಳಿಯ ಸಂದರ್ಭದಲ್ಲಿ, ಅಂದರೆ ಜನವರಿ 26, 1929 ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಲಾಹೋರ್‌ನಲ್ಲಿ ನಡೆದ ಅಧಿವೇಶನದಲ್ಲಿ “ಪೂರ್ಣ ಸ್ವರಾಜ್ಯ’ದ ಧ್ಯೇಯವನ್ನು ಹಾಕಿಕೊಂಡು, ಆ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು. ಅಂದಿನಿಂದಲೂ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುತ್ತಾ ಬರಲಾಗುತ್ತಿದೆ. ಆದರೆ ಅಂದಿನ ಆಚರಣೆಗಳಿಗೂ ಇಂದಿನ ಆಚರಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಈ ವ್ಯತ್ಯಾಸದಲ್ಲಿ ಸಾಮರಿಕವಾಗಿ, ಆರ್ಥಿಕವಾಗಿ ಹಾಗೂ ವಿವಿಧ ಆಯಾಮಗಳಲ್ಲಿ ಬೆಳೆಯುತ್ತಿರುವ ಭಾರತವೂ ಗೋಚರಿಸುತ್ತದೆ..
ಡಾ. ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರಪತಿ ಹುದ್ದೆಗೇರುತ್ತಿದ್ದಂತೆಯೇ, 31 ಗನ್ ಸೆಲ್ಯೂಟ್ ಮಾಡಿ ಗೌರವ ಸೂಚಿಸಲಾಯಿತು.
ಬುಲೆಟ್‌ಪ್ರೂಫ್ ಕಾರಿನಲ್ಲಲ್ಲ, ರಾಷ್ಟ್ರಪತಿಗಳನ್ನು ತೆರೆದ ಸಾರೋಟಿನಲ್ಲೇ ಇರ್ವಿನ್ ಸ್ಟೇಡಿಯಂಗೆ ಕರೆದೊಯ್ಯಲಾಯಿತು. ನಂತರ ರಾಜೇಂದ್ರ ಪ್ರಸಾದ್ ಸೇನಾ ಜೀಪನ್ನೇರಿ ಭದ್ರತಾ ಪಡೆಗಳಿಂದ ವಂದನೆ ಸ್ವೀಕರಿಸಿ, ಧ್ವಜಾರೋಹಣ ಮಾಡಿದರು.
ಮೊದಲ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಸುಕಾರ್ನೋರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ವಿದ್ಯಮಾನದ ನಂತರ ಇಂಡೊನೇಷ್ಯಾದೊಂದಿಗಿನ ಭಾರತದ ಮೈತ್ರಿ ಬಹಳ ಸುಧಾರಿಸುವಂತಾಯಿತು.
5ಗಣರಾಜ್ಯೋತ್ಸವ ಆಚರಣೆಯ ವಿರುದ್ಧ ದೇಶದ ಕೆಲ ಭಾಗಗಳಲ್ಲಿ ಪ್ರತಿರೋಧವೂ ಎದುರಾಗಿತ್ತು. ಕಲ್ಕತ್ತಾದಲ್ಲಿ ಕಮ್ಯುನಿಸ್ಟರು ಪೊಲೀಸರ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಬಾಂಬೆಯಲ್ಲಿ ಇದೇ ಪಕ್ಷ ಸಂವಿಧಾನದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಡೆಗಣಿಸಲಾಗಿದೆ ಎಂದು ಪ್ರತಿಭಟಿಸಿತ್ತು. ಇನ್ನು ಅದೇ ದಿನ, ಅನ್ಯ ಕಾರಣಕ್ಕಾಗಿ, ಹೈದ್ರಾಬಾದ್ ನಿಜಾಮನ ಹತ್ಯೆ ಪ್ರಯತ್ನದ ಘಟನೆ ನಡೆದು ಸುದ್ದಿಯಾಗಿತ್ತು.
ನಿರ್ದಿಷ್ಟ ಜಾಗವಿರಲಿಲ್ಲ… :
1950ರಿಂದ 1954ರವರೆಗೆ, ಗಣರಾಜ್ಯೋತ್ಸವ ಆಚರಣೆಗೆ ನಿರ್ದಿಷ್ಟ ಜಾಗ ಎನ್ನುವುದಿರಲಿಲ್ಲ. ಮೊದಲು ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವ ಆಚರಣೆಯಾಗಿತ್ತು, ನಂತರ ನ್ಯಾಷನಲ್ ಸ್ಟೇಡಿಯಂನಲ್ಲಿ, ಆಮೇಲೆ ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿ, ನಂತರದ ವರ್ಷದಲ್ಲಿ ರಾಮಲೀಲಾ ಮೈದಾನದಲ್ಲಿ ನಡೆದಿತ್ತು. ಕೊನೆಗೆ 1955ರಿಂದ ರಾಜಪಥವೇ ಗಣರಾಜ್ಯೋತ್ಸವ ಪಥಸಂಚಲನದ ವೇದಿಕೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Trump: ಗುಜರಾತ್ ಮೂಲದ ಪಟೇಲ್ CIA ನೂತನ ನಿರ್ದೇಶಕ: ಡೊನಾಲ್ಡ್ ಟ್ರಂಪ್ ಒಲವು
Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.