30 ಟಿವಿ ಚಾನೆಲ್‌, 2 ಕ್ರಿಕೆಟ್‌ ಟೀಮ್.. ಇವರೇ ನೋಡಿ ಭಾರತದ ಶ್ರೀಮಂತ ಸಿನಿಮಾ ನಿರ್ಮಾಪಕ


Team Udayavani, Sep 8, 2024, 11:03 AM IST

30 ಟಿವಿ ಚಾನೆಲ್‌, 2 ಕ್ರಿಕೆಟ್‌ ಟೀಮ್.. ಇವರೇ ನೋಡಿ ಭಾರತದ ಶ್ರೀಮಂತ ಸಿನಿಮಾ ನಿರ್ಮಾಪಕ

ಒಂದು ಸಿನಿಮಾವನ್ನು ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ. ಇಂದಿನ ಕಾಲದಲ್ಲಿ ಸಿನಿಮಾ ನಿರ್ಮಾಣಕ್ಕೆ ಕೋಟಿ ಕೋಟಿ ರೂ. ಸುರಿಯಬೇಕಾಗುತ್ತದೆ. ಒಟ್ಟಿ ಚಿತ್ರರಂಗದಲ್ಲಿ ನಿರ್ಮಾಪಕರು ಗಟ್ಟಿಯಾಗಿದ್ದರೆ ಸಿನಿಮಾ ಸಲೀಸಾಗಿ ಸೆಟ್ಟೇರುತ್ತದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯವೆಂದರೆ ತಪ್ಪಾಗದು.

ಭಾರತೀಯ ಚಿತ್ರರಂಗದಲ್ಲಿ ಕರಣ್ ಜೋಹರ್ ಮತ್ತು ಆದಿತ್ಯ ಚೋಪ್ರಾದಂತಹ ಶ್ರೀಮಂತ ನಿರ್ಮಾಪಕರಿದ್ದಾರೆ. ಬಾಲಿವುಡ್‌ ಸೂಪರ್‌ ಸ್ಟಾರ್‌ ಗಳಾದ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರನ್ನೇ ಮೀರಿಸಿರುವ ಅತ್ಯಂತ ಶ್ರೀಮಂತ ನಿರ್ಮಾಪಕರೊಬ್ಬರು ನಮ್ಮಲಿದ್ದಾರೆ.

ಕಲಾನಿಧಿ ಮಾರನ್.‌ ಕಾಲಿವುಡ್‌ ಸಿನಿಮಾ ಇಂಡಸ್ಟ್ರಿ ಹಾಗೂ ತಮಿಳುನಾಡಿನ ಮನರಂಜನಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರನ್ನು ಹೊಂದಿರುವ ಕೋಟಿ ಕುಳ ಈ ಕಲಾನಿಧಿ ಮಾರನ್.‌

ಯಾರು ಈ ಕಲಾನಿಧಿ ಮಾರನ್..?‌ ಪ್ರಭಾವಿ ರಾಜಕಾರಣಿ ಕುಟುಂಬದದಲ್ಲಿ ಹುಟ್ಟಿದ ಕಲಾನಿಧಿ, ಡಿಎಂಕೆ ಪಕ್ಷದಲ್ಲಿದ್ದ ಮುರಸೋಲಿ ಮಾರನ್ ಅವರ ಪುತ್ರ.

ಆರಂಭಿಕ ಜೀವನ: ಚೆನ್ನೈನಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಕಲಾನಿಧಿ ಯುಎಸ್‌ಎಯ ಪೆನ್ಸಿಲ್ವೇನಿಯಾದ ಸ್ಕ್ರ್ಯಾಂಟನ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪಡೆದರು.

ಕಲಾನಿಧಿ ಆರಂಭದಲ್ಲಿ ಅಂದರೆ 1990 ರಲ್ಲಿ ʼಪೂಮಾಲೈʼ ಎಂಬ ತಮಿಳು ನಿಯತಕಾಲಿಕವನ್ನು ಪ್ರಾರಂಭಿಸಿದರು. ಇದಾದ ಬಳಿಕ 1993 ಅವರು ʼಸನ್ ಟಿವಿʼಯನ್ನು ಪ್ರಾರಂಭಿಸಿದರು. ಈ ಸನ್‌ ಗ್ರೂಪ್‌ ಇಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ.

ಸಿನಿಮಾ ನಿರ್ಮಾಣ, ಕ್ರಿಕೆಟ್‌ ಟೀಮ್‌, ಟವಿ ಚಾನೆಲ್… ಆಸ್ತಿ ಎಷ್ಟು?:‌

2024ರ ʼಹುರುನ್ ಇಂಡಿಯಾ  ಶ್ರೀಮಂತರ ಪಟ್ಟಿʼ ಪ್ರಕಾರ ಕಲಾನಿಧಿ ಮಾರನ್ ಅವರ ನಿವ್ವಳ ಮೌಲ್ಯ 33,400 ಕೋಟಿ ರೂ. ಆಗಿದೆ. ಅವರು ಭಾರತದ 80ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಳೆದ ವರ್ಷದಿಂದ ಅವರ ಸಂಪತ್ತಿನಲ್ಲಿ 34% ಹೆಚ್ಚಳ ಕಂಡ ನಂತರವೂ ಅವರ ಶ್ರೇಯಾಂಕವು ಪಟ್ಟಿಯಲ್ಲಿ ಕುಸಿದಿದೆ. ಅವರು ಕಳೆದ ವರ್ಷ 75ನೇ ಶ್ರೀಮಂತ ಭಾರತೀಯರಾಗಿದ್ದರು.

ಮಾರನ್ ಕುಟುಂಬವು ಸನ್ ಟಿವಿಯಲ್ಲಿ 75% ಪಾಲನ್ನು ಹೊಂದಿದೆ. ಸನ್‌ ಪಿಕ್ಚರ್ಸ್‌ 6 ಭಾಷೆಗಳಲ್ಲಿ ಒಟ್ಟು 30 ಚಾನೆಲ್‌ ಗಳನ್ನು ಹೊಂದಿದೆ. ಇದರಲ್ಲಿ ಸನ್ NXT OTT, ಡಿಟಿಎಚ್ ಸೇವೆ ಸನ್ ಡೈರೆಕ್ಟ್, ಐಪಿಎಲ್‌ ತಂಡವಾದ ಸನ್‌ರೈಸರ್ಸ್ ಹೈದರಾಬಾದ್, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಮಾಲೀಕರಾಗಿದ್ದಾರೆ.

ಸೂಪರ್‌ ಹಿಟ್‌ ಸಿನಿಮಾಗಳ ನಿರ್ಮಾಣ:  2010ರಿಂದ ಸನ್‌ ಪಿಕ್ಚರ್ಸ್‌ ಸಿನಿಮಾ ನಿರ್ಮಾಕ್ಕೆ ಕೈಹಾಕಿತ್ತು. ಇದರಲ್ಲಿ ರಜಿನಿಕಾಂತ್‌ ಅವರ ʼಎಂದಿರನ್ʼ, ʼಪೆಟ್ಟಾʼ , ʼಜೈಲರ್ʼ ಸೇರಿದಂತೆ ದಳಪತಿ ವಿಜಯ್ ಅವರ ʼಬೀಸ್ಟ್‌ʼ ʼಸರ್ಕಾರ್ʼ ಮತ್ತು ಧನುಷ್ ಅವರ ʼತಿರುಚಿತ್ರಂಬಲಂʼ ಮತ್ತು ʼರಾಯನ್ʼ ಚಿತ್ರಗಳು ಒಳಗೊಂಡಿದೆ.

ಶಾರುಖ್, ಅಮಿತಾಬ್ ರನ್ನೇ ಮೀರಿಸಿದ ಮಾರನ್..

 2024ರ ಹುರನ್‌ ರಿಚ್‌ ಲಿಸ್ಟ್‌ ಪ್ರಕಾರ ಮಾರನ್‌ ಅವರ ನಿವ್ವಳ ಮೌಲ್ಯ ಶಾರುಖ್‌, ಅಮಿತಾಭ್‌, ಕರಣ್‌ ಜೋಹರ್‌ ಗಿಂತಲೂ ಹೆಚ್ಚಿದೆ. ಶಾರುಖ್ ಖಾನ್ ನಿವ್ವಳ ಮೌಲ್ಯ 7300 ಕೋಟಿ ರೂ. ಆಗಿದೆ. ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬ ಒಟ್ಟು 1600 ಕೋಟಿ ರೂ. ಅತ್ಯಂತ ಶ್ರೀಮಂತ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ನಿವ್ವಳ ಮೌಲ್ಯ 1400 ರೂ. ಆಗಿದೆ. ಮಾರನ್‌ ಅವರ ನಿವ್ವಳ ಮೌಲ್ಯ 33,400 ಕೋಟಿ ರೂ. ಆಗಿದೆ.

ಟಾಪ್ ನ್ಯೂಸ್

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

‌Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್

‌Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

OTT Release: ಚಿಯಾನ್‌ ವಿಕ್ರಮ್ ʼತಂಗಲಾನ್ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release: ಚಿಯಾನ್‌ ವಿಕ್ರಮ್ ʼತಂಗಲಾನ್ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.