ಮಂಕಿಗೇಟ್, ಕುಡಿತದ ಚಟ.. ವಿವಾದಗಳಿಂದಲೇ ಸುದ್ದಿಯಾಗಿದ್ದ ವರ್ಣರಂಜಿತ ಕ್ರಿಕೆಟರ್ ಸೈಮಂಡ್ಸ್
Team Udayavani, May 15, 2022, 2:25 PM IST
ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರಾದ ಕಾಂಗರೂ ನಾಡಿನ ಆ್ಯಂಡ್ರ್ಯೂ ಸೈಮಂಡ್ಸ್ ಇಂದು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್, ಆಫ್ ಸ್ಪಿನ್ ಮತ್ತು ಮಧ್ಯಮ ವೇಗದ ಬೌಲಿಂಗ್ ಎರಡೂ ಮಾಡುತ್ತಿದ್ದ ಸೈಮಂಡ್ಸ್ 1998 ರಿಂದ 2009ರವರೆಗೆ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡಿದ್ದಾರೆ.
ಕಾಂಗರೂ ನಾಡಿನ ಪರವಾಗಿ ಸೈಮಂಡ್ಸ್, 26 ಟೆಸ್ಟ್, 198 ಏಕದಿನ ಮತ್ತು 14 ಟಿ20 ಪಂದ್ಯಗಳನ್ನಾಡಿದ್ದಾರೆ. 2008ರಿಂದ 2011ರವರೆಗೆ ಐಪಿಎಲ್ ನಲ್ಲಿ ಆಡಿರುವ ಸೈಮಂಡ್ಸ್ 39 ಪಂದ್ಯಗಳನ್ನಾಡಿದ್ದಾರೆ. ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಪರ ಸೈಮಂಡ್ಸ್ ಆಡಿದ್ದರು.
ಭಿನ್ನ ಶೈಲಿಯ ಕೇಶ ಶೈಲಿ, ಮೈದಾನದಲ್ಲಿ ಸದಾ ಅಗ್ರೆಸಿವ್ ಆಟ, ಸ್ಲೆಡ್ಜಿಂಗ್ ನಿಂದಲೇ ಸೈಮಂಡ್ಸ್ ಗಮನ ಸೆಳೆಯುತ್ತಿದ್ದರು. ಬಲಿಷ್ಠ ದೇಹಕಾಯದ ಸೈಮಂಡ್ಸ್ ಆಟಕ್ಕಿಂತ ಹೆಚ್ಚಾಗಿ ನೆನಪಾಗುವುದು ವಿವಾದಗಳಿಂದ ಎನ್ನುವುದು ಅಷ್ಟೇ ಸತ್ಯ.
ಸೈಮಂಡ್ಸ್ ವಿವಾದಗಳು
ಮಂಕಿಗೇಟ್: ಇದು ಕ್ರಿಕೆಟ್ ಜಗತ್ತು ಎಂದೂ ಮರೆಯದ ವಿವಾದ. 2008 ರ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಮಂಕಿಗೇಟ್ ಘಟನೆ ಸಂಭವಿಸಿತ್ತು. ಸಿಡ್ನಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನನ್ನು “ಮಂಕಿ” ಎಂದು ಕರೆದಿದ್ದಾರೆ ಎಂದು ಸೈಮಂಡ್ಸ್ ಆರೋಪಿಸಿದ್ದರು. ಇದು ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ವಿವಾದವಾಗಿ ಹರ್ಭಜನ್ ಒಂದು ಟೆಸ್ಟ್‌ಗೆ ನಿಷೇಧವನ್ನು ಎದುರಿಸಲು ಕಾರಣವಾಯಿತು.
ತಂಡದ ಸದಸ್ಯನ ಜೊತೆ ಗಲಾಟೆ: ತಂಡದ ಸಹ ಸದಸ್ಯ ಮೈಕಲ್ ಕ್ಲಾರ್ಕ್ ಜೊತೆಗೆ ಸೈಮಂಡ್ಸ್ ಕಿರಿಕ್ ಮಾಡಿಕೊಂಡಿದ್ದರು. ತಂಡದ ಉಪ ನಾಯಕ ಸ್ಥಾನಕ್ಕೆ ಮೈಕಲ್ ಕ್ಲಾರ್ಕ್ ಆಯ್ಕೆಯಾದಾಗ ಇವರಿಬ್ಬರ ನಡುವೆ ಮನಸ್ಥಾಪ ಉಂಟಾಗಿತ್ತು.
ಇದನ್ನೂ ಓದಿ:ಆಸೀಸ್ ಗೆ ಮತ್ತೊಂದು ಆಘಾತ; ಮಾಜಿ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತಕ್ಕೆ ಬಲಿ
2008 ರಲ್ಲಿ ಡಾರ್ವಿನ್ ನಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಸಭೆಯಲ್ಲಿ ಪಾಲ್ಗೊಳ್ಳುವ ಬದಲು ಸೈಮಂಡ್ಸ್ ಫಿಶಿಂಗ್ ಮಾಡಲು ಹೋಗಿದ್ದರು. ಇದರಿಂದ ಅವರನ್ನು ಸರಣಿಯಿಂದ ಮನೆಗೆ ಕಳುಹಿಸಲಾಗಿತ್ತು. ವರ್ಷಗಳ ನಂತರ, ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ ಈ ಘಟನೆಯನ್ನು ಮೆಲುಕು ಹಾಕಿದ್ದ ಸೈಮಂಡ್ಸ್, ಐಪಿಎಲ್ ನಲ್ಲಿ ಪಡೆದ ದೊಡ್ಡ ಮಟ್ಟದ ಹಣವು ಅವರ ಬದಲಾದ ಸಂಬಂಧದ ಹಿಂದೆ ಕಾರಣವಾಗಿರಬಹುದು ಎಂದು ಬಹಿರಂಗಪಡಿಸಿದರು. ಆ ವರ್ಷ ಸೈಮಂಡ್ಸ್ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ 5.40 ಕೋಟಿ ರೂ. ಗೆ ಮಾರಾಟವಾಗಿದ್ದರು.
ಮದ್ಯ ಸೇವನೆ: 2005ರಲ್ಲಿ ಕಾರ್ಡಿಫ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ತ್ರಿಕೋನ ಸರಣಿಯ ಪಂದ್ಯಕ್ಕೆ ಮುನ್ನ ಸೈಮಂಡ್ಸ್‌ರನ್ನು ಆಸ್ಟ್ರೇಲಿಯನ್ ತಂಡದಿಂದ ಕೈಬಿಡಲಾಯಿತು. ಹಿಂದಿನ ಸಂಜೆ ಅವರು ಮದ್ಯ ಸೇವಿಸಿದ್ದರಿಂದ ಈ ನಿರ್ಧಾರಕ್ಕೆ ಬರಲಾಯಿತು.
ವಿಶ್ವಕಪ್ ನಿಂದ ಔಟ್: 2009ರ ಜೂನ್ ನಲ್ಲಿ, ಆಂಡ್ರ್ಯೂ ಸೈಮಂಡ್ಸ್ ಅವರು ಆಸ್ಟ್ರೇಲಿಯನ್ ತಂಡದಲ್ಲಿದ್ದಾಗ ಶಿಸ್ತಿನ ಮೂರನೇ ಪ್ರಮುಖ ಉಲ್ಲಂಘನೆಯ ನಂತರ ಟ್ವೆಂಟಿ20 ವಿಶ್ವಕಪ್‌ನಿಂದ ಮನೆಗೆ ಕಳುಹಿಸಲಾಗಿತ್ತು.
ಅವರ ಈ ಮನಸ್ಥಿತಿಯೇ ಬೃಹತ್ ಕ್ರಿಕೆಟ್ ಪ್ರತಿಭೆಯನ್ನು ದುರ್ಬಲಗೊಳಿಸಿತು ಎಂದೇ ಹೇಳಬಹುದು. ಸೈಮಂಡ್ಸ್ ಕ್ರಿಕೆಟ್ ಜಗತ್ತಿನಲ್ಲಿ ಅವರ ವೃತ್ತಿಜೀವನದ ಸಮಯದಲ್ಲಿ ಹಲವಾರು ವಿವಾದಗಳನ್ನು ಹೊಂದಿದ್ದರೂ, ಅವರ ಹೆಸರು ವಿಶ್ವದ ಶ್ರೇಷ್ಠ ಆಲ್-ರೌಂಡರ್‌ಗಳಲ್ಲಿ ಒಂದಾಗಿದೆ.
ಆಂಡ್ರ್ಯೂ ಸೈಮಂಡ್ಸ್ ಆಸ್ಟ್ರೇಲಿಯಾ ಪರ 26 ಟೆಸ್ಟ್, 198 ಏಕದಿನ ಮತ್ತು 14 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 1462 ರನ್, ಟೆಸ್ಟ್‌ನಲ್ಲಿ 5088 ಮತ್ತು ಟಿ20ಯಲ್ಲಿ 337 ರನ್ ಗಳಿಸಿದ್ದಾರೆ. ಆಂಡ್ರ್ಯೂ ಸೈಮಂಡ್ಸ್ 39 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.