Ramp Walk To Rank Holder : ಯುಪಿಎಸ್ಸಿಯಲ್ಲಿ 93 ನೇ ಸ್ಥಾನ ಪಡೆದ ಈಕೆ ಸಾಧನೆಗೆ ಸ್ಪೂರ್ತಿ
ಮಾಡೆಲಿಂಗ್ ನಲ್ಲಿ ಫೇಮ್ ಆದಾಕೆ ಯುವ ಜನತೆಗೆ ಮಾದರಿಯಾದ ಪಯಣ
ಸುಹಾನ್ ಶೇಕ್, Aug 12, 2020, 6:50 PM IST
ಜೀವನದಲ್ಲಿ ಗುರಿ ಇರಬೇಕು, ದಾರಿ ಕಾಣಿಸಿ, ಪೋಷಿಸುವ ಗುರು ಇರಬೇಕು. ನಾವು ನೀವೆಲ್ಲಾ ಬಾಲ್ಯ ಕಳೆದು ಹದಿ ಹರೆಯದ ಹಂತಕ್ಕೆ ಬಂದಾಗ ಭವಿಷ್ಯಕ್ಕೆ ಆಧಾರವಾಗುವ ಕೆಲಸದ ಬಗ್ಗೆ ಚಿಂತಿಸಲು ಶುರು ಮಾಡುತ್ತೇವೆ. ಪದವಿ ಮುಗಿದು ಕೈಗೆ ಸಿಕ್ಕ ಕೆಲಸದಲ್ಲಿ ತೃಪ್ತಿ ಪಟ್ಟುಕೊಳ್ಳುವ ವರ್ಗವೊಂದಿದ್ದರೆ, ಪರಿಶ್ರಮ ಪಟ್ಟು ಕನಸಿನ ಹಾದಿಯಲ್ಲೇ ನಡೆಯುವವರು ಇದ್ದಾರೆ. ಇಂಥ ವರ್ಗದಿಂದ ಬಂದವರೇ ದೇಶದ ಮಹಾನ್ ಸೇವೆಯಲ್ಲಿ ತಮ್ಮನ್ನು ತಾವು ನೋಡುವ ಇರಾದೆಯಿಂದ ನಿರಂತರ ಅಭ್ಯಾಸ ಮಾಡಿ ಒಂದು ದಿನ ದೇಶ ಗುರುತಿಸುವ ಪ್ರತಿಭೆ ಆಗಿ ಬೆಳೆಯುತ್ತಾರೆ.
ರಾಜಸ್ಥಾನದ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಐಶ್ವರ್ಯ ಶಿಯೋರನ್. ಅಪ್ಪ ಅಮ್ಮ ಹಾಗೂ ತಮ್ಮನೊಂದಿಗೆ ಮುಂಬಯಿಯಲ್ಲಿ ವಾಸವಾಗಿದ್ರು, ಹರೆಯದ ಶಿಕ್ಷಣ ಹಾಗೂ ವ್ಯಕ್ತಿತ್ವದ ಬೆಳವಣಿಗೆ ಆದದ್ದು ದೆಹಲಿಯಲ್ಲಿ. ದಿಲ್ಲಿಯ ಸಂಸ್ಕೃತಿ ಶಾಲೆಯಲ್ಲಿ ತನ್ನ ಹೈಸ್ಕೂಲ್ ಶಿಕ್ಷಣವನ್ನು ಪಡೆದು, ಮುಂದೆ ದೆಹಲಿಯ ಶ್ರಿರಾಮ್ ಕಾಲೇಜು ಆಫ್ ಕಾಮರ್ಸ್ ನಲ್ಲಿ ಪದವಿಯನ್ನು ಪೂರ್ತಿಗೊಳಿಸುತ್ತಾರೆ. ಕಲಿಕೆಯಲ್ಲಿ ಸದಾ ಆಸಕ್ತಿಯಿಂದ ತೂಡಗಿಕೊಳ್ಳುವ ಐಶ್ವರ್ಯ ಶೇ. 97.5 ರಷ್ಟು ಅಂಕಗಳಿಸಿ ಆಕಾಡೆಮಿಯ ಟಾಪರ್ ಆಗಿ ಹೊರ ಹೊಮ್ಮುತ್ತಾರೆ.
ಐಶ್ವರ್ಯ ರೈಯಂತೆ ಮಾಡೆಲ್ ಮಾಡುವ ಅಮ್ಮನ ಆಸೆ : 1994 ರಲ್ಲಿ ಬಾಲಿವುಡ್ ಮೋಹಕ ನಟಿ ಐಶ್ವರ್ಯ ರೈ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಐಶ್ವರ್ಯ ಶಿಯೋರನ್ ಅವರ ತಾಯಿ ಸುಮನ್ ಶಿಯೋರನ್ ತಮ್ಮ ಮಗಳನ್ನು ಇದೇ ರೀತಿ ಮಾಡೆಲ್ ಆಗಿ ಮಾಡಬೇಕೆನ್ನುವ ಕನಸನ್ನು ಮನಸ್ಸಿನಲ್ಲಿ ಕಟ್ಟಿಕೊಳ್ಳುತ್ತಾರೆ. ಅದರ ಮೊದಲ ಹಂತವಾಗಿ ಅವರಿಗೆ ಹುಟ್ಟಿದ ಮಗಳಿಗೆ ಐಶ್ವರ್ಯ ಎಂದು ನಾಮಕರಣ ಮಾಡುತ್ತಾರೆ. ಬಾಲ್ಯದಿಂದಲೇ ಕಲಿಯುವುದರಲ್ಲಿ ಚುರುಕಾಗಿ ಬೆಳೆದ ಹುಡುಗಿ ಐಶ್ವರ್ಯ ಬೆಳೆಯುತ್ತಾ ಹೋದಂತೆ ಅಮ್ಮನ ಆಸೆಯಂತೆ ಮಾಡೆಲಿಂಗ್ ಕ್ಷೇತ್ರ ಹಾಗೂ ನಾಗರಿಕ ಸೇವೆಯಲ್ಲಿ ಉತ್ತೀರ್ಣರಾಗುವ ತನ್ನ ಗುರಿಯನ್ನು ಇಟ್ಟುಕೊಂಡು ಸಾಗುತ್ತಾರೆ.
ಅಮ್ಮನ ಆಸೆಯಂತೆ ಐಶ್ವರ್ಯ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಕಾಲೇಜು ದಿನಗಳ್ಲಿ ಮಾಡೆಲಿಂಗ್ ನಲ್ಲಿ ಸಿಗುತ್ತಿದ್ದ ಸಣ್ಣ ಸಣ್ಣ ಅವಕಾಶವನ್ನು ಬಳಸಿಕೊಂಡು ವೇದಿಕೆಯಲ್ಲಿ ಆತ್ಮವಿಶ್ವಾಸದ ಹೆಜ್ಜೆಗಳನ್ನಿಟ್ಟು ನಡೆಯುತ್ತಾರೆ. ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳದೆ, ಮಾಡೆಲಿಂಗ್ ಕ್ಷೇತ್ರದಲ್ಲಿ ನಿಧಾನವಾಗಿ ಜನಪ್ರಿಯರಾಗುತ್ತಾರೆ. 2014 ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಹಾಗೂ ಕ್ಯಾಂಪಸ್ ಪ್ರಿನ್ಸೆಸ್ ಸ್ರರ್ಧೆಯ ವಿಜೇತರಾಗಿ ಕಿರೀಟವನ್ನು ಮುಡಿಗೇರಿಸಿಕೊಳ್ಳುತ್ತಾರೆ.2015 ರಲ್ಲಿ ಮಿಸ್ ದಿಲ್ಲಿಯಲ್ಲೂ ವಿಜೇತರಾಗಿ ಗುರುತಿಸಿಕೊಳ್ಳುತ್ತಾರೆ. ಇವರ ಮಾಡೆಲಿಂಗ್ ಕ್ಷೇತ್ರದಲ್ಲಿ ಅತೀ ದೊಡ್ಡ ಹಾಗೂ ಪ್ರಮುಖವಾದ ಸಾಧನೆ ಅಂದರೆ 2016 ರಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾದಲ್ಲಿ ಭಾಗವಹಿಸಿ ಅದೇ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಆಯ್ಕೆಯಾದ 21 ಸ್ಪರ್ಧಿಗಳಲ್ಲಿ ಐಶ್ವರ್ಯ ಅವರು ಕೂಡ ಒಬ್ಬರಾಗಿರುತ್ತಾರೆ. ಇದಲ್ಲದೆ ಇವರ ಹೆಜ್ಜೆಗೆ ಹತ್ತಾರು ಜಾಹೀರಾತು ಹಾಗೂ ಪ್ರಸಿದ್ಧ ಕಂಪೆನಿಗಳೊಂದಿಗೆ ಕೆಲಸ ಮಾಡುವ ಅವಕಾಶವೂ ಇವರನ್ನು ಆರಿಸಿಕೊಂಡು ಬರುತ್ತದೆ.
ಗುರುತು ಸಿಕ್ಕಿದ್ರು, ಗುರಿ ಮರೆತಿಲ್ಲ : ಐಶ್ವರ್ಯ ತಮ್ಮ 22 ವಯಸ್ಸಿನಲ್ಲಿ ಹತ್ತು ಹಲವಾರು ಕಡೆ ಮಿಂಚುತ್ತಾರೆ. ನಾನಾ ಕಡೆಗಳಿಂದ ಅವಕಾಶಗಳು ಹುಡುಕಿಕೊಂಡು ಬಂದರೂ, ಅವರು ಅಂದುಕೊಂಡಿದ್ದ ನಾಗರಿಕ ಸೇವಾ ಪರೀಕ್ಷೆಯ ಗುರಿಯನ್ನು ಮಾತ್ರ ಮರೆತಿಲ್ಲ. ಇದೇ ಕಾರಣಕ್ಕಾಗಿ ಐಶ್ವರ್ಯ 2018 ರಲ್ಲಿ ತಮ್ಮ ಹವ್ಯಾಸವಾಗಿದ್ದ ಮಾಡೆಲಿಂಗ್ ಕ್ಷೇತ್ರದಿಂದ ಬಿಡುವು ಕೊಟ್ಟು ಯುಪಿಎಸ್ಸಿ ಪರೀಕ್ಷೆಯ ಕಡೆ ಗಮನ ಹರಿಸುತ್ತಾರೆ. ಶ್ರದ್ಧೆಯಿಂದ ಕಲಿಯಲು ತ್ಯಾಗ ಮಾಡುವುದು ಅನಿವಾರ್ಯ. ಇದಕ್ಕಾಗಿ ಐಶ್ವರ್ಯ ಅವರು ಸೋಶಿಯಲ್ ನೆಟ್ವರ್ಕ್ ನಿಂದ ತಮ್ಮನು ತಾವು ದೂರ ಇರಿಸಿಕೊಂಡು, ಮೊಬೈಲ್ ಬಳಕೆಯನ್ನು ನಿಲ್ಲಿಸಿ ಓದಿನ ಕಡೆ ಸಂಪೂರ್ಣವಾಗಿ ಮಗ್ನರಾಗುತ್ತಾರೆ. ವಿಶೇಷ ಅಂದರೆ ಇವರ ಪರೀಕ್ಷಾ ತಯಾರಿ ಯಾವ ಕೋಚಿಂಗ್ ಕ್ಲಾಸ್ ನಲ್ಲಿ ನಡೆಯದೆ ಸ್ವತಃ ತಾವೇ ಎಲ್ಲವನ್ನೂ ತಯಾರಿ ಮಾಡಿಕೊಳ್ಳುತ್ತಾರೆ.
2019 ರ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯುತ್ತಾರೆ. ಇದರ ಫಲಿತಾಂಶ ಇತ್ತೀಚಿಕೆ ಹೊರ ಬಂದಿದ್ದು. ಐಶ್ವರ್ಯ ಶಿಯೋರನ್ ದೇಶ ಗುರುತಿಸುವ ಸಾಧನೆ ಮಾಡುತ್ತಾರೆ. ಅಲ್ ಇಂಡಿಯಾ ಶ್ರೇಣಿಯಲ್ಲಿ 93 ನೇ ಸ್ಥಾನವನ್ನು ಗಳಿಸುತ್ತಾರೆ. ತನ್ನ ಮೊದಲನೇ ಪ್ರಯತ್ನದಲ್ಲಿ ಇವರ ಈ ಸಾಧನೆ ಮೆಚ್ಚುವಂಥದ್ದು. ಮಾಡೆಲಿಂಗ್ ಕ್ಷೇತ್ರದಲ್ಲಿ ಮುಖ ಪರಿಚಯವನ್ನು ಪಡೆದುಕೊಂಡ ಐಶ್ವರ್ಯ ನಾಗರಿಕ ಸೇವಾ ಪರೀಕ್ಷೆ ಬರೆದು ಮಾಡಿದ ಸಾಧನೆ ಯುವ ಜನರಿಗೆ ಸ್ಫೂರ್ತಿ ಹಾಗೂ ಮಾದರಿ.. ಸದ್ಯ ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸನೀಯವಾಗಿ ಚರ್ಚೆಗಳು ನಡೆಯುತ್ತ ಇದೆ.
– ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.