ವಿಪತ್ತು ನಿರ್ವಹಣೆ; ಸ್ಥಳೀಯಾಡಳಿತ, ಸಮುದಾಯದ ಭಾಗೀದಾರಿಕೆ ಮುಖ್ಯ
ಇಂದು ಅಂತಾರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವ ದಿನ
Team Udayavani, Oct 13, 2021, 6:00 AM IST
ವಿಪತ್ತು ನಿರ್ವಹಣೆ ಕೇವಲ ಸರಕಾರದ ಜವಾಬ್ದಾರಿಯಲ್ಲದೆ ಪ್ರತಿಯೊಬ್ಬರ ಜವಾಬ್ದಾರಿ, ಹೀಗಿರುವಾಗ ವಿಪತ್ತು ನಿರ್ವಹಣೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಅತೀ ಮುಖ್ಯ. ತುರ್ತು ಪರಿಸ್ಥಿತಿಯಲ್ಲಿ ಮೊದಲು ಪ್ರತಿಕ್ರಿಯಿಸುವವರು ಸಮುದಾಯವೇ ಆದರೂ ಪೂರ್ವಭಾವಿ ತಯಾರಿಯಲ್ಲಿ ಸಮುದಾಯದ ಭಾಗವಹಿಸುವಿಕೆ ಇನ್ನೂ ವಿರಳ. ಹಾಗಾಗಿ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಮುದಾಯವಾಗಿ ವಿಪತ್ತಿನ ಪೂರ್ವಭಾವಿ ಸನ್ನದ್ಧತೆ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕ್ರಿಯಾತ್ಮಕವಾಗಿ ಮತ್ತು ಯೋಜನೆಯೊಂದಿಗೆ ಪ್ರತಿಕ್ರಿಯಿಸಿದರೆ ಪುನಶ್ಚೇತನ ಮತ್ತು ಪುನರ್ವಸತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ನಿರ್ವಹಿಸಲು ಸಾಧ್ಯ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಪತ್ತಿನ ಹಾನಿ ಯನ್ನು ತಗ್ಗಿಸುವುದು ಮತ್ತು ಸಂಭವನೀಯ ಅಪಾಯದ ಬಗ್ಗೆ ಜನರನ್ನು ಜಾಗೃತಗೊಳಿಸುವ ಉದ್ದೇಶದಿಂದ 1989ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷ ಅಕ್ಟೋಬರ್ 13ನ್ನು ಅಂತಾರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ವಿಪತ್ತುಗಳಿಗೆ ಒಳಗಾದಾಗ ಆಗುವ ಅನಾಹುತವನ್ನು ಕಡಿಮೆಗೊಳಿಸುವ ಬಗ್ಗೆ ಹಾಗೂ ವಿಪತ್ತನ್ನು ಸಮರ್ಪಕವಾಗಿ ಎದುರಿಸಲು ಸಿದ್ಧರಾಗುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಯಾವುದೇ ವಿಪತ್ತು ಸಂಭವಿಸಿ ದಾಗ ಸಾಮಾನ್ಯವಾಗಿ ಪ್ರಾಣ ಹಾನಿಯ ಜತೆಗೆ ಬದುಕುಳಿದವರಲ್ಲಿ ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಇದರ ಜತೆಗೆ ಆಸ್ತಿಪಾಸ್ತಿ ನಾಶವಾಗಿ ಸಾಮಾಜಿಕ ಮತ್ತು ಆರ್ಥಿಕ ಅಭದ್ರತೆಯನ್ನು ಉಂಟುಮಾಡುತ್ತದೆ. ಆದರೆ ವಿಪತ್ತನ್ನು ಎದುರಿಸಲು ಸನ್ನದ್ಧರಾಗಿದ್ದರೆ ಅನಾಹುತಗಳನ್ನು ತಡೆಗಟ್ಟಬಹುದು ಅಥವಾ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಬಹುದು.
ಭೂಕಂಪ, ಚಂಡಮಾರುತ, ಸುನಾಮಿ, ಭೂಕುಸಿತ ಇತ್ಯಾದಿ ವಿಪತ್ತುಗಳು ಪ್ರಾಕೃತಿಕವಾಗಿದ್ದರೆ ಪರಮಾಣು, ವಿಕಿರಣ, ಜೈವಿಕ ಹಾಗೂ ರಾಸಾಯನಿಕ ಸಂಬಂಧಿತ ಆಪತ್ತುಗಳು ಮಾನವ ನಿರ್ಮಿತ ಆಪತ್ತುಗಳು. ಆಪತ್ತು ವಿಪತ್ತಿಗೆ ಮೂಲ ಕಾರಣ. ಆದರೆ ಕೇವಲ ಆಪತ್ತು ವಿಪತ್ತನ್ನು ಆಹ್ವಾನಿಸುವುದಿಲ್ಲ, ಆಪತ್ತು ವಿಪತ್ತಾಗಿ ಪರಿವರ್ತನೆಗೊಳ್ಳಲು ನಮ್ಮ ದೌರ್ಬಲ್ಯಗಳೇ ಪ್ರಮುಖ ಕಾರಣವಾಗಿರುತ್ತವೆ.
ಸರಕಾರದ ಕಾರ್ಯವೈಖರಿ, ವಿಪತ್ತು ನಿರ್ವಹಣ ಕಾಯ್ದೆ, ಕಾನೂನು, ನೀತಿ, ಆಡಳಿತ ವ್ಯವಸ್ಥೆ, ಮುಖಂಡತ್ವ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ದೈಹಿಕ, ಸಾಂಸ್ಥಿಕ ಮತ್ತು ವೈಯಕ್ತಿಕ ಸಾಮರ್ಥ್ಯವು ವಿಪತ್ತಿನ ಅಪಾಯವನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉದಾಹರಣೆಗೆ ಜಪಾನ್ ದೇಶ ಅತಿಯಾದ ಪ್ರಾಕೃತಿಕ ಆಪತ್ತನ್ನು ಪದೇ ಪದೆ ಎದುರಿಸುತ್ತಿದ್ದರೂ ಯಾವುದೇ ಆಪತ್ತು ಎದುರಾದಾಗ ಅದು ವಿಪತ್ತಾಗಿ ಪರಿವರ್ತನೆ ಹೊಂದುವುದನ್ನು ತಡೆಯುವ ಸಾಮರ್ಥ್ಯವನ್ನು ಅಲ್ಲಿನ ಸರಕಾರ ಹೊಂದಿದೆ. ಹಾಗೆಯೇ 1999ರ ಸೂಪರ್ ಸೈಕ್ಲೋನ್ ಅನಂತರ ಕಳೆದೆರಡು ದಶಕಗಳಿಂದ ಒಡಿಶಾ ರಾಜ್ಯದ ವಿಪತ್ತು ನಿರ್ವಹಣ ಸಾಮರ್ಥ್ಯ ವೃದ್ಧಿಯಾಗಿದ್ದು ಪ್ರತೀ ವರ್ಷ ಕಾಡುವ ಚಂಡಮಾರುತದಿಂದ ಆಗುವ ಜೀವ ಮತ್ತು ಆಸ್ತಿ ಹಾನಿಯನ್ನು ಕಡಿಮೆಗೊಳಿಸಲು ಅಲ್ಲಿನ ಸರಕಾರಕ್ಕೆ ಸಾಧ್ಯವಾಗಿದೆ.
ವಿಶ್ವದ ಹತ್ತು ಅತೀ ಹೆಚ್ಚು ವಿಪತ್ತು ಪೀಡಿತ ದೇಶಗಳಲ್ಲಿ ಭಾರತವೂ ಒಂದಾಗಿದೆ. ನೈಸರ್ಗಿಕ ಮತ್ತು ಮಾನವ ಪ್ರೇರಿತ ಪ್ರತಿಕೂಲವಾದ ಭೌಗೋಳಿಕ ಪರಿಸ್ಥಿತಿಗಳು, ಭೌಗೋಳಿಕ ಲಕ್ಷಣಗಳು, ಪರಿಸರದ ಮೇಲಣ ದೌರ್ಜನ್ಯ, ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ, ಕೈಗಾರಿಕೀಕರಣ, ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳು ಇವೇ ಮೊದಲಾದ ಹಲವಾರು ಅಂಶಗಳಿಂದಾಗಿ ದೇಶವು ವಿಪತ್ತುಗಳಿಗೆ ಒಳಗಾಗುತ್ತಿದೆ. ಆದರೂ 1990 ರಿಂದ 2000 ನಡುವೆ ಮಹಾರಾಷ್ಟ್ರದ ಭೂಕಂಪ, ಒಡಿಶಾದ ಸೂಪರ್ ಸೈಕ್ಲೋನ್, ಗುಜರಾತ್ ಭೂಕಂಪ, ಅಸ್ಸಾಂ, ಬಿಹಾರ ರಾಜ್ಯಗಳಲ್ಲಿನ ಭೀಕರ ಪ್ರವಾಹ, ಸುನಾಮಿ ಇತ್ಯಾದಿಗಳಿಂದಾದ ಹಾನಿ, ಅಂತಾರಾಷ್ಟ್ರೀಯ ಒತ್ತಡಗಳು ಮತ್ತು ಭಾರತ ಸರಕಾರದ ಬದ್ಧತೆ ದೇಶದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸರಕಾರದ ಮಟ್ಟದಲ್ಲಿ ಮತ್ತು ಸಾರ್ವಜನಿಕವಾಗಿ ಆಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಯಿತು. ವಿಪತ್ತು ನಿರ್ವಹಣೆಯಲ್ಲಿನ ಸಾಂಪ್ರದಾಯಿಕವಾದ ಪ್ರತಿಕ್ರಿಯಾತ್ಮಕ ಸ್ಪಂದನೆಯಿಂದ ಪೂರ್ವಭಾವಿ ಸ್ಪಂದನೆಯ ಮಾದರಿ ಬದಲಾವಣೆಗೆ ಅನುವುಗೊಳಿ ಸಿತು. ವಿಪತ್ತು ನಿರ್ವಹಣ ಕಾಯ್ದೆ 2005, ರಾಷ್ಟೀಯ ವಿಪತ್ತು ನಿರ್ವಹಣ ಪ್ರಾಧಿಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣ ನೀತಿ 2009, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ, ರಾಷ್ಟ್ರೀಯ ವಿಪತ್ತು ನಿರ್ವಹಣ ಸಂಸ್ಥೆ, ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ, ವಿಪತ್ತು ನಿರ್ವಹಣ ವಾರ್ಷಿಕ ಯೋಜನೆ ಇತ್ಯಾದಿ ವಿಪತ್ತನ್ನು ಸಮಗ್ರವಾಗಿ ಪೂರ್ವಭಾವಿ ಹಾಗೂ ಪ್ರತಿಕ್ರಿಯಾತ್ಮಕವಾಗಿ ಸ್ಪಂದಿ ಸಲು ಆಡಳಿತಾತ್ಮಕವಾಗಿ ಸರಕಾರ ಜಾರಿಗೆ ತಂದ ಕಾನೂನು, ನಿಯಮಾವಳಿಗಳಾಗಿವೆ.
ಇದನ್ನೂ ಓದಿ:ನಮ್ಮ ಕೆಲಸ ಗುರುತಿಸಿ ಜೆಡಿಎಸ್‌ಗೆ ಮತ ಹಾಕುತ್ತಾರೆ : ಮಾಜಿ ಪ್ರಧಾನಿ ದೇವೆಗೌಡ
ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಪತ್ತು ನಿರ್ವಹಣ ಕಾಯ್ದೆಯ ಅನುಸರಣೆಗೆ ಸಂಬಂಧಿಸಿದಂತೆ ತೆಗದುಕೊಂಡ ಕ್ರಮಗಳು ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಾಂಸ್ಥಿಕ, ಆಡಳಿತಾತ್ಮಕ, ಜ್ಞಾನ, ತರಬೇತಿ, ವೈಜ್ಞಾನಿಕ ಸಾಮರ್ಥ್ಯವನ್ನು ಹೆಚ್ಚಿಸಿ ಸಮಗ್ರ ವಿಪತ್ತು ನಿರ್ವಹಣೆಯ ವ್ಯಾಪ್ತಿಯನ್ನು ಹೆಚ್ಚಿಸಿ ತ್ವರಿತಗತಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಹಕಾರಿಯಾಗಿದೆ. ಎಲ್ಲ ರಾಜ್ಯಗಳು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ, ರಾಜ್ಯ ವಿಪತ್ತು ನಿರ್ವಹಣ ಕಾರ್ಯ ಸಮಿತಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಮೂಲಕ ವಿಪತ್ತು ನಿರ್ವಹಣ ಕಾಯ್ದೆಯ ಅಂಶಗಳನ್ನು ಅನುಷ್ಠಾನ ಮಾಡಲು ಪ್ರಯತ್ನಿಸುತ್ತಿವೆ. ಹಾಗಾಗಿ ಪ್ರಸ್ತುತ ಹೆಚ್ಚಿನ ರಾಜ್ಯಗಳಲ್ಲಿ ರಾಜ್ಯ ವಿಪತ್ತು ನಿರ್ವಹಣ ವಾರ್ಷಿಕ ಯೋಜನೆ, ಇಲಾಖಾವಾರು ವಿಪತ್ತು ನಿರ್ವಹಣ ಯೋಜನೆ, ವಿಪತ್ತು ನಿರ್ವಹಣ ನೀತಿ ಇತ್ಯಾದಿಗಳನ್ನು ಅಭಿವೃದ್ಧಿ ಪಡಿಸಿದ್ದು ಇದು ಸಮಗ್ರ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಮತ್ತು ಪ್ರತಿಕ್ರಿಯಾ ತ್ಮಕ ಸನ್ನದ್ಧತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗಿದೆ.
ಸುವ್ಯವಸ್ಥಿತ ಮುಂಜಾಗ್ರತ ವ್ಯವಸ್ಥೆ, ಸಂವಹನ, ಮುಂಚಿತವಾಗಿ ಜನರ ಮತ್ತು ಜಾನುವಾರುಗಳ ಸ್ಥಳಾಂತರ, ತುರ್ತು ಸಂದರ್ಭದಲ್ಲಿ ರಕ್ಷಣ ಕಾರ್ಯಾಚರಣೆ, ನೀರು, ನೈರ್ಮಲ್ಯ, ಸ್ವತ್ಛತೆ, ಆಹಾರ, ಆರೋಗ್ಯ, ವಸತಿಯನ್ನೊಳಗೊಂಡ ತುರ್ತು ಪರಿಹಾರ ಕಾರ್ಯಾಚರಣೆ, ಪುನಶ್ಚೇತನ ಮತ್ತು ಪುನರ್ವಸತಿ ವಿಪತ್ತು ನಿರ್ವಹಣ ಕೇಂದ್ರಿತ ರಚನಾ ತ್ಮಕ ಬದಲಾವಣೆಗಳ ಪರಿಣಾಮದಿಂದಾಗಿ ಇದು ಸಾಧ್ಯವಾಗಿದೆ. ಆದರೂ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ, ನಗರಪಾಲಿಕೆ ಗಳನ್ನು ಒಳಗೊಂಡಂತೆ ಸ್ಥಳೀಯ ಆಡಳಿತ ವಿಪತ್ತು ನಿರ್ವಹಣೆಗೆ ಇನ್ನು ಹೆಚ್ಚಿನ ಪ್ರಾಮುಖ್ಯ ಕೊಡಬೇಕಾಗಿದೆ. ಪೂರ್ವಭಾವಿ ಸನ್ನದ್ಧತೆ ಮತ್ತು ಪ್ರತಿಕ್ರಿಯಾ ತ್ಮಕ ವಿಪತ್ತು ನಿರ್ವಹಣ ಯೋಜನೆಗಳು ಹೆಚ್ಚು ಸ್ಥಳೀಯ ಆಡಳಿತ ಕೇಂದ್ರೀಕೃತವಾದಾಗ ಮಾತ್ರ ಹೆಚ್ಚು ಪರಿಣಾ ಮಕಾರಿಯಾದ ಸಮಗ್ರ ವಿಪತ್ತು ನಿರ್ವಹಣೆ ಸಾಧ್ಯ.
ವಿಪತ್ತು ನಿರ್ವಹಣೆ ಕೇವಲ ಸರಕಾರದ ಜವಾಬ್ದಾರಿ ಯಲ್ಲದೆ ಪ್ರತಿಯೊಬ್ಬರ ಜವಾಬ್ದಾರಿ, ಹೀಗಿರುವಾಗ ವಿಪತ್ತು ನಿರ್ವಹಣೆಯಲ್ಲಿ ಸಮುದಾಯದ ಭಾಗ ವಹಿಸುವಿಕೆ ಅತೀ ಮುಖ್ಯ. ತುರ್ತು ಪರಿಸ್ಥಿಯಲ್ಲಿ ಮೊದಲು ಪ್ರತಿಕ್ರಿಯಿಸುವವರು ಸಮುದಾಯವೇ ಆದರೂ ಪೂರ್ವಭಾವಿ ತಯಾರಿಯಲ್ಲಿ ಸಮುದಾ ಯದ ಭಾಗವಹಿಸುವಿಕೆ ಇನ್ನೂ ವಿರಳ. ಹಾಗಾಗಿ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಮುದಾಯವಾಗಿ ವಿಪತ್ತಿನ ಪೂರ್ವಭಾವಿ ಸನ್ನದ್ಧತೆ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕ್ರಿಯಾತ್ಮಕವಾಗಿ ಮತ್ತು ಯೋಜನೆಯೊಂದಿಗೆ ಪ್ರತಿಕ್ರಿಯಿಸಿದರೆ ಪುನಶ್ಚೇ ತನ ಮತ್ತು ಪುನರ್ವಸತಿಯನ್ನು ಹೆಚ್ಚು ಪರಿಣಾಮಕಾರಿ ಯಾಗಿ ಮತ್ತು ತ್ವರಿತವಾಗಿ ನಿರ್ವಹಿಸಲು ಸಾಧ್ಯ.
ಪ್ರಸ್ತುತ ವಿಪತ್ತಿಗೆ ಉತ್ತಮ ಪ್ರತಿಕ್ರಿಯಾತ್ಮಕ ವ್ಯವಸ್ಥೆ ಮತ್ತು ಜಾಲವನ್ನು ಹೊಂದಿದ್ದರೂ ವಿಪತ್ತಿನ ಹಾನಿ ತಗ್ಗಿ ಸುವಲ್ಲಿ ನಾವಿನ್ನೂ ಯಶಸ್ಸು ಕಾಣಬೇಕಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಪತ್ತು ನಿರ್ವಹಣ ಪ್ರಾಧಿಕಾರದ ಮೂಲಕ ಸಂಬಂಧಿತ ಇಲಾಖೆಗಳನ್ನು ಒಳಗೊಂಡಂತೆ ರಚನಾತ್ಮಕವಾಗಿ ಕಾರ್ಯನಿರ್ವಹಿಸಿ ಎಲ್ಲ ಅಭಿವೃದ್ಧಿ ಯೋಜನೆಯಲ್ಲೂ ಅಪಾಯನ್ನು ಗುರುತಿಸಿ ಅದರ ಉಪಶಮನ ಯೋಜನೆಯ ಭಾಗವಾಗಿರಬೇಕು ಹಾಗೂ ಕಠಿನ ಕ್ರಮವನ್ನು ಜರಗಿಸಬೇಕು. ಇನ್ನು ಸ್ಥಳೀಯ ಆಡಳಿತ ಮತ್ತು ಸಮುದಾಯದ ಭಾಗವಹಿಸುವಿಕೆ ವಿಪತ್ತು ನಿರ್ವ ಹಣೆಯ ಯಶಸ್ಸಿಗೆ ಬಹಳ ಮುಖ್ಯ.
-ಡಾ| ಮಟಪಾಡಿ ಪ್ರಭಾತ್ ಕಲ್ಕೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.