ರಾತ್ರಿ ಹೊತ್ತು ಮೊಸರು ಸೇವಿಸುವುದು ಆರೋಗ್ಯಕರವೇ…
ಕಾವ್ಯಶ್ರೀ, Nov 14, 2022, 5:40 PM IST
ಶೇ.90ರಷ್ಟು ಜನರಿಗೆ ಊಟದ ಕೊನೆ ಹಂತದಲ್ಲಿ ಮೊಸರು ಸೇವಿಸದಿದ್ದರೆ ಊಟ ಪೂರ್ಣಗೊಳ್ಳುವುದಿಲ್ಲ. ಹೀಗೆ ಅಂದುಕೊಳ್ಳುವವರು ಬಹಳಷ್ಟು ಜನರಿದ್ದಾರೆ. ಏಕೆಂದರೆ ಮೊಸರು ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ.
ಜೀರ್ಣ ಕ್ರಿಯೆಗೆ ಮಾತ್ರವಲ್ಲದೇ ಮೊಸರಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ಇದು ಮೂಳೆ ಹಾಗೂ ಹಲ್ಲುಗಳಿಗೆ ಅಗತ್ಯವಾಗಿ ಬೇಕು. ಮೊಸರು ಒತ್ತಡ ಕಡಿಮೆ ಮಾಡುವುದಕ್ಕೂ ಸಹಾಯ ಮಾಡುತ್ತದೆ.
ಕೆಲವರು ಮೊಸರನ್ನು ಅನ್ನದೊಂದಿಗೆ ಬೆರೆಸಿ ಸೇವಿಸಿದರೆ ಇನ್ನೂ ಕೆಲವರು ಗಟ್ಟಿ ಮೊಸರಿಗೆ ಸಕ್ಕರೆ ಸೇರಿಸಿ ಸೇವಿಸುತ್ತಾರೆ. ಮೊಸರು ಆರೋಗ್ಯಕ್ಕೆ ಒಳ್ಳೆಯದಾದರೂ ಇದು ಕೆಲ ಅಡ್ಡ ಪರಿಣಾಮಗಳನ್ನು ಕೂಡಾ ಹೊಂದಿದೆ ಎನ್ನಬಹುದು. ಮೊಸರು ಎಲ್ಲಾ ಸಮಯದಲ್ಲೂ ಸೇವನೆ ಮಾಡಬಾರದು. ಅದರಲ್ಲೂ ಕಫ ಪ್ರವೃತ್ತಿ ಹೊಂದಿರುವವರು ಮೊಸರು ಸೇವನೆ ಮಾಡಬಾರದು.
ಆಯುರ್ವೇದದ ಪ್ರಕಾರ ರಾತ್ರಿ ಹೊತ್ತು ಮೊಸರು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ. ಮೊಸರು ಹುಳಿ ಮತ್ತು ಸಿಹಿ ಮಿಶ್ರಿತವಾಗಿದ್ದು, ಇದನ್ನು ರಾತ್ರಿ ಹೊತ್ತು ಸೇವಿಸುವುದರಿಂದ ಕೆಲವರಿಗೆ ಕಫವಾಗುವ ಸಾಧ್ಯತೆ ಇದೆ.
ಅದರಲ್ಲೂ ಅಸ್ತಮಾ, ಕೆಮ್ಮು, ಶೀತ ಮತ್ತು ಇತರ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರು ರಾತ್ರಿ ವೇಳೆ ಮೊಸರು ತಿನ್ನುವುದನ್ನು ತಪ್ಪಿಸಬೇಕು. ಕಫ ಪ್ರವೃತ್ತಿ ಹೊಂದಿರುವವರು ಮಾತ್ರವಲ್ಲದೇ ಮೂಳೆ ಸಮಸ್ಯೆ ಇರುವವರು ಕೂಡಾ ರಾತ್ರಿ ವೇಳೆ ಮೊಸರು ಸೇವಿಸಲೇಬಾರದು ಎಂಬುದು ಆಯುರ್ವೇದ ತಜ್ಞರ ಅಭಿಪ್ರಾಯ.
ಮೊಸರು ಲೋಳೆಯ ರಚನೆಗೆ ಕಾರಣವಾಗುತ್ತದೆ. ಮೊಸರು ಸಿಹಿ ಮತ್ತು ಹುಳಿ ಎರಡನ್ನೂ ಹೊಂದಿರುವುದರಿಂದ ರಾತ್ರಿ ಸಮಯ ಇದನ್ನು ತಿನ್ನುವುದರಿಂದ ಮೂಗಿನಲ್ಲಿ ಲೋಳೆಯ ರಚನೆಗೆ ಕಾರಣವಾಗುತ್ತದೆ.
ಸಂಧಿವಾತದಿಂದ ಬಳಲುತ್ತಿರುವವರು ಮೊಸರನ್ನು ಪ್ರತಿನಿತ್ಯ ಸೇವಿಸಬಾರದು. ಮೊಸರು ಒಂದು ಹುಳಿ ಆಹಾರವಾಗಿರುವುದರಿಂದ ಹುಳಿ ಆಹಾರಗಳು ಕೀಲು ನೋವಿನ ಹೆಚ್ಚಳಕ್ಕೆ ಕಾರಣವಾಗಬಹುದು. ದುರ್ಬಲ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವವರು ರಾತ್ರಿಯಲ್ಲಿ ಮೊಸರು ತಿನ್ನದಿರುವುದು ಒಳಿತು.
ಕೆಲವರಿಗೆ ಮೊಸರು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಯಾಗುತ್ತದೆ. ಮಲಬದ್ಧತೆ ಕೂಡಾ ಉಂಟಾಗಬಹುದು. ಮಿತಿಮೀರಿದ ಮೊಸರು ಸೇವನೆಯಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ರಾತ್ರಿ ವೇಳೆ ಮೊಸರು ಸೇವನೆ ಬೇಡ ಎನ್ನಬಹುದು.
ಆದರೆ ರಾತ್ರಿ ವೇಳೆ ಮಜ್ಜಿಗೆ ಸೇವಿಸಬಹುದು. ತಿಳಿ ಮಜ್ಜಿಗೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಹಿಂಗು, ಜೀರಿಗೆ ಸೇರಿಸಿ ಕುಡಿದರೆ ರಾತ್ರಿ ಸೇವಿಸಿದ ಆಹಾರ ಬೇಗನೆ ಜೀರ್ಣವಾಗುತ್ತದೆ.
ರಾತ್ರ ಸಮಯ ಮೊಸರಿನ ಜೀರ್ಣಕ್ರಿಯೆಯು ಹೆಚ್ಚು ಹೊತ್ತು ತೆಗೆದುಕೊಳ್ಳಲಿದ್ದು, ಜೀರ್ಣ ಕ್ರಿಯೆಯು ಇತರೆ ಆಹಾರಗಳ ಜೀರ್ಣ ಕ್ರಿಯೆಗಿಂತ ಸ್ವಲ್ಪ ಕಷ್ಟ. ಇದರಿಂದ ಬೊಜ್ಜು, ಕಫ, ಪಿತ್ತ ಹೆಚ್ಚಾಗಿ ಜೀರ್ಣದ ಸಾಮರ್ಥ್ಯವನ್ನೂ ಸಹ ಹೆಚ್ಚಿಸುತ್ತದೆ. ನಿಮಗೆ ಹೊಟ್ಟೆಯ ಊತ ಅಥವಾ ಹೊಟ್ಟೆ ಉರಿ ಬಂದ ಸಂದರ್ಭಗಳಲ್ಲಿ ಮೊಸರನ್ನು ಸೇವಿಸಿದರೆ ಸಮಸ್ಯೆ ಇನ್ನೂ ಬಿಗಡಾಯಿಸಲಿದೆ. ಈ ಗುಣಲಕ್ಷಣವು ಹುಳಿಯಾದ ಮೊಸರಿನಲ್ಲಿ ಅಧಿಕವಿರುತ್ತದೆ.
ಮೊಸರನ್ನು ಅಧಿಕವಾಗಿ ಸೇವಿಸದೆ ಪ್ರತಿದಿನವು ಒಂದು ಟೇಬಲ್ ಚಮಚದಷ್ಟು ಮಾತ್ರ ಸೇವಿಸುವುದು ಉತ್ತಮ. ಮೊಸರಿನಲ್ಲಿ ದೇಹಕ್ಕೆ ಮಾರಕವಾದ ಯಾವುದೇ ಅಂಶವಿಲ್ಲ. ಇದರಲ್ಲಿರುವ ಸಕಲ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ.
ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಈ ಕಣಗಳು ರೋಗಕಾರಕ ಕಣಗಳನ್ನು ಸದೆಬಡಿದು ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ಅಧ್ಯಾಯನದ ಪ್ರಕಾರ ಪ್ರತಿದಿನ ಒಂದು ಟೇಬಲ್ ಚಮಚದಷ್ಟು ಮೊಸರನ್ನು ಸೇವಿಸುತ್ತಿದ್ದಲ್ಲಿ, ಅದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ. ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ದೇಹದಲ್ಲಿರುವ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳ ಮೇಲೆ ಹೋರಾಡುತ್ತ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಯಾವುದೇ ಕಾರಣಕ್ಕೂ ಹುಳಿ ಮೊಸರನ್ನು ಬಿಸಿ ಮಾಡಿ ಸೇವಿಸಬಾರದು. ಇದನ್ನು ರಾತ್ರಿ ಸಮಯದಲ್ಲಿ, ವಸಂತ ಋತುವಿನಲ್ಲಿ ಮತ್ತು ಬೇಸಿಗೆಯಲ್ಲಿ ಸೇವಿಸುವುದು ನಿಷಿದ್ಧ. ಆದರೆ ಹುಳಿ ಮೊಸರಿಗೆ ಹೆಸರಿನ ಕಾಳಿನ ಸೂಪ್, ಜೇನು, ತುಪ್ಪ, ಸಕ್ಕರೆ ಮತ್ತು ಆಮ್ಲ ಬೆರೆಸಿಕೊಂಡು ಸೇವಿಸಿದರೆ ಉರಿಮೂತ್ರ ನಿವಾರಣೆ ಮತ್ತು ಅಜೀರ್ಣದ ಕಡಿಮೆಯಾಗುತ್ತದೆ.
-ಕಾವ್ಯಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Trump: ಗುಜರಾತ್ ಮೂಲದ ಪಟೇಲ್ CIA ನೂತನ ನಿರ್ದೇಶಕ: ಡೊನಾಲ್ಡ್ ಟ್ರಂಪ್ ಒಲವು
Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.