Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

ತಂಡದ ಆಟಗಾರರ ಲಿಸ್ಟ್‌ ನಿಂದಲೇ ರೋಹಿತ್‌ ಔಟ್!‌ ಮತ್ತೊಂದು ಚಾಪೆಲ್‌ ಆಗ್ತಾರಾ ಗೌತಮ್?

ಕೀರ್ತನ್ ಶೆಟ್ಟಿ ಬೋಳ, Jan 3, 2025, 1:14 PM IST

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

ಹಲವು ಪತ್ರಿಕಾ ವರದಿಗಳು, ಹಲವು ಅಂತೆ ಕಂತೆಗಳ ಬಳಿಕ ಕೊನೆಗೂ ಸಿಡ್ನಿ ಟೆಸ್ಟ್‌ ಪಂದ್ಯದಿಂದ ರೋಹಿತ್‌ ಶರ್ಮಾ (Rohit Sharma) ಹೊರಗುಳಿದಿದ್ದಾರೆ. ಕ್ಯಾಪ್ಟನ್‌ ಬ್ಲೇಜರ್‌ ಹಾಕಿಕೊಂಡು ಜಸ್ಪ್ರೀತ್‌ ಬುಮ್ರಾ ಟಾಸ್‌ ಗೆ ಬಂದಿದ್ದರು. ಆ ವೇಳೆ ಬುಮ್ರಾ ಹೇಳಿದ ಮಾತು, “ಈ ಪಂದ್ಯದಲ್ಲಿ ವಿಶ್ರಾಂತಿ ಪಡೆಯುವ ಮೂಲಕ ನಮ್ಮ ನಾಯಕ ನಾಯಕತ್ವವನ್ನು ತೋರಿದ್ದಾರೆ”. ಆದರೆ ಸಾಮಾನ್ಯ ಕ್ರಿಕೆಟ್‌ ಅಭಿಮಾನಿಗೂ ಇದರ ಸತ್ಯಾಸತ್ಯತೆ ಅರಿವಾಗುತ್ತದೆ. ಇದು ವಿಶ್ರಾಂತಿ ಅಲ್ಲ; ಇದು ಗೇಟ್‌ ಪಾಸ್!‌

ಸತತ ವೈಫಲ್ಯ ಕಾಣುತ್ತಿರುವ ರೋಹಿತ್‌ ಶರ್ಮಾ ಅವರ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನ ಅಂತ್ಯವಾಗುವಂತೆ ಕಾಣುತ್ತಿದೆ. ಸಿಡ್ನಿ ಟೆಸ್ಟ್‌ ಮುಗಿದ ಬಳಿಕ ಟೀಂ ಇಂಡಿಯಾಗೆ ಇನ್ನು ಆರು ತಿಂಗಳು ಯಾವುದೇ ಟೆಸ್ಟ್‌ ಪಂದ್ಯವಿಲ್ಲ. ಇನ್ನು ಜೂನ್‌ ನಲ್ಲಿ ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಆಡಲಿದೆ. ಆ ವೇಳೆ ರೋಹಿತ್‌ ಗೆ 38 ವರ್ಷ ವಯಸ್ಸಾಗುತ್ತದೆ. ಇದೆಲ್ಲಾ ಗಮನಿಸಿದರೆ ಮೆಲ್ಬರ್ನ್‌ ಟೆಸ್ಟ್‌ ಪಂದ್ಯವೇ ವೈಟ್‌ ಜೆರ್ಸಿಯಲ್ಲಿ ರೋಹಿತ್‌ ರ ಕೊನೆಯ ಆಟ.

ಎರಡು ತಿಂಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಸತತ ಪಂದ್ಯಗಳಲ್ಲಿ ಜಯಿಸಿದ್ದ ಭಾರತ ವಿಶ್ವ ಟೆಸ್ಟ್‌ ಫೈನಲ್‌ ಗೇರುವುದು ಬಹುತೇಕ ನಿಶ್ಚಿತವಾಗಿತ್ತು. ಆದರೆ ಯಾವಾಗ ಭಾರತದಲ್ಲಿಯೇ ನ್ಯೂಜಿಲ್ಯಾಂಡ್‌ ವಿರುದ್ದ ವೈಟ್‌ ವಾಶ್‌ ಅನುಭವಿಸಿತೋ ಅಲ್ಲಿಗೆ ಅಪಾಯದ ಮುನ್ಸೂಚನೆ ಎದುರಾಯಿತು. ಅದರಲ್ಲೂ ಆಸೀಸ್‌ ಸರಣಿಯ ಮೊದಲ ಪಂದ್ಯಕ್ಕೆ ಯಾವಾಗ ರೋಹಿತ್‌ ಅಲಭ್ಯರಾದರೋ ನಾಯಕತ್ವ ವಹಿಸಿಕೊಂಡ ಬುಮ್ರಾ ಗೆಲುವು ಕಂಡರು. ಎರಡನೇ ಪಂದ್ಯಕ್ಕೆ ಬಂದ ರೋಹಿತ್‌ ಗೆ ಎದುರಾಗಿದ್ದು ಸೋಲು. ಅಲ್ಲದೆ ಬ್ಯಾಟಿಂಗ್‌ ನಲ್ಲೂ ಭೀಕರ ವೈಫಲ್ಯ ಕಂಡ ರೋಹಿತ್‌ ಗೆ ಇದೀಗ ಜಾಗ ಬಿಡಬೇಕಾದ ಅನಿವಾರ್ಯತೆ ಎದುರಾಗಿದೆ.

ರೋಹಿತ್‌ ಗಾಗಿ ಉತ್ತಮ ಫಾರ್ಮ್‌ ನಲ್ಲಿದ್ದ ಕೆಎಲ್‌ ರಾಹುಲ್‌ ಜಾಗ ಬದಲಿಸಬೇಕಾಯಿತು, ಇದು ರಾಹುಲ್‌ ಫಾರ್ಮ್‌ ಗೂ ಸಂಚಕಾರ ತಂದಿತು. ಅಲ್ಲದೆ ಗಿಲ್‌ ಅವರನ್ನು ತಂಡದಿಂದ ಹೊರಗಿರಿಸಲಾಯಿತು. ಆದರೆ ರೋಹಿತ್‌ ಆಟ ಮಾತ್ರ ಅಷ್ಟಕ್ಕಷ್ಟೇ ಎಂಬಂತಾಯಿತು. ಸರಣಿಯಲ್ಲಿ ಐದು ಇನ್ನಿಂಗ್ಸ್‌ ಆಡಿರುವ ರೋಹಿತ್‌ ಗಳಿಸಿದ್ದು ಕೇವಲ 31 ರನ್.‌ ಅದರಲ್ಲೂ 37 ವರ್ಷ ವಯಸ್ಸಿನ ನಾಯಕ ಬ್ಯಾಟಿಂಗ್‌ ನಲ್ಲಿ ಸಂಪೂರ್ಣ ಮಸುಕಾಗಿದ್ದಾರೆ. ಟ್ರೇಡ್‌ಮಾರ್ಕ್ ಫ್ರಂಟ್ ಪುಲ್ ಸೇರಿದಂತೆ ಅವರ ಬ್ರೆಡ್ ಮತ್ತು ಬಟರ್ ಹೊಡೆತಗಳನ್ನು ಸಹ ಆಡಲು ಹೆಣಗಾಡುತ್ತಿದ್ದಾರೆ.

2024 ರ ವರ್ಷವು ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್‌ ಗೆ ಅತ್ಯಂತ ಕಳಪೆಯ ವರ್ಷವಾಗಿದೆ. ಕಳೆದ 26 ಇನ್ನಿಂಗ್ಸ್‌ಗಳಲ್ಲಿ 14 ಪಂದ್ಯಗಳಲ್ಲಿ 24.76 ಸರಾಸರಿಯಲ್ಲಿ 619 ರನ್ ಗಳಿಸಿದ್ದಾರೆ.

ತಂಡದ ಶೀಟ್‌ ನಿಂದಲೇ ರೋಹಿತ್‌ ಹೆಸರು ಮಾಯ!

ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಆಕಾಶ್‌ ದೀಪ್‌ ಮತ್ತು ರೋಹಿತ್‌ ಶರ್ಮಾ ಅವರನ್ನು ಹೊರಗಿಡಲಾಗಿದೆ. ವೇಗಿ ದೀಪ್‌ ಗಾಯಗೊಂಡಿದ್ದಾರೆ. ಅವರ ಬದಲಿಗೆ ಗಿಲ್‌ ಮತ್ತು ಪ್ರಸಿಧ್‌ ಕೃಷ್ಣ ಸ್ಥಾನ ಪಡೆದಿದ್ದಾರೆ. ಆದರೆ ಟಾಸ್‌ ಬಳಿಕ ಬಿಸಿಸಿಐ ಬಿಡುಗಡೆ ಮಾಡಿದ ಆಟಗಾರರ ಶೀಟ್‌ ನಲ್ಲಿ ರೋಹಿತ್‌ ಹೆಸರು ಮಾಯವಾಗಿದೆ! ಮೀಸಲು ಆಟಗಾರರ ಪಟ್ಟಿಯಲ್ಲೂ ಹೆಸರಿಲ್ಲ.

ಟೀಮ್ ಶೀಟ್‌ನಲ್ಲಿ ರೋಹಿತ್ ಶರ್ಮಾ ಹೊರತುಪಡಿಸಿ ಭಾರತದ ಅಧಿಕೃತ ತಂಡದ ಎಲ್ಲಾ ಫಿಟ್ ಸದಸ್ಯರ ಹೆಸರುಗಳಿವೆ. ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಅಭಿಮನ್ಯು ಈಶ್ವರನ್ ಮತ್ತು ಹರ್ಷಿತ್ ರಾಣಾ ಅವರು ಮೀಸಲು ಆಟಗಾರರ ಪಟ್ಟಿಯ ಭಾಗವಾಗಿದ್ದಾರೆ. ರೋಹಿತ್ ಹೊರತುಪಡಿಸಿ ತಂಡದ ಶೀಟ್‌ನ ಭಾಗವಾಗದ ಏಕೈಕ ಕ್ರಿಕೆಟಿಗನೆಂದರೆ ವೇಗಿ ಆಕಾಶ್ ದೀಪ್. ಯಾಕೆಂದರೆ ಗಾಯಗೊಂಡ ಅವರನ್ನು ಆಡಲು ಅನರ್ಹರು ಎಂದು ಘೋಷಿಸಲಾಗಿದೆ.

ಗಂಭೀರ್‌ ಜತೆ ಮನಸ್ಥಾಪ

ಈ ಮಧ್ಯೆ ನಾಯಕ ರೋಹಿತ್‌ ಶರ್ಮ ಮತ್ತು ಕೋಚ್‌ ಗೌತಮ್‌ ಗಂಭೀರ್‌ ನಡುವೆ ತೀವ್ರ ಜಟಾಪಟಿ ನಡೆದಿದೆ. ಇದರ ಪರಿಣಾಮ ರೋಹಿತ್‌ ಶರ್ಮ ಅವರಿಗೆ ಈ ಪಂದ್ಯದಲ್ಲಿ “ವಿಶ್ರಾಂತಿ” ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಪಂದ್ಯಪೂರ್ವ ಪತ್ರಿಕಾಗೋಷ್ಠಿಗೆ ಮಾಮೂಲಿಯಾಗಿ ನಾಯಕ ಬರುತ್ತಾರೆ. ಆದರೆ ರೋಹಿತ್‌ ಗೈರಾಗಿ ಗಂಭೀರ್‌ ಮಾತ್ರ ಬಂದಿದ್ದು ಅಚ್ಚರಿ ಮೂಡಿಸಿತು. ಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್‌, ರೋಹಿತ್‌ ಸ್ಥಾನದ ಬಗ್ಗೆ ಖಾತ್ರಿಯಾಗಿ ಏನೂ ಹೇಳಲಿಲ್ಲ. ರೋಹಿತ್‌ ಆಡುತ್ತಾರಾ ಎಂದು ಕೇಳಿದ ಪ್ರಶ್ನೆಗೆ, ಅವರದ್ದು ಯಾವುದೇ ಸಮಸ್ಯೆಯಿಲ್ಲ. ತಂಡದ 11ರ ಬಳಗದ ಬಗ್ಗೆ ಅಂಕಣ ನೋಡಿ ನಿರ್ಧರಿಸಲಾಗುವುದು ಎಂಬ ವಿಚಿತ್ರ ಉತ್ತರವನ್ನು ಗಂಭೀರ್‌ ನೀಡಿದರು!

ಮೆಲ್ಬೋರ್ನ್‌ ಟೆಸ್ಟ್‌ ಬಳಿಕ ಗಂಭೀರ್‌ ತಂಡದ ವಿರುದ್ದ ಕಿಡಿಕಾರಿದ್ದರು. ಇದುವರೆಗೆ ನಿಮಗೆ ಬೇಕಾದ ಹಾಗೆ ಆಡಿದ್ದೀರಿ, ಇನ್ನು ನನಗೆ ಬೇಕಾದ ಹಾಗೆ ಆಡಬೇಕು ಎಂದು ಕಿಡಿಕಾರಿದ್ದರು. ರೋಹಿತ್‌ ಅವರನ್ನು ಆಡಿಸಲೇಬಾರದು ಎಂದು ಗಂಭೀರ್‌ ಹಠಕ್ಕಿಳಿದಿದ್ದರು. ಆದಾಗ್ಯೂ ರೋಹಿತ್​ಗೆ ಸಿಡ್ನಿಯಲ್ಲಿ ಕೊನೆಯ ಟೆಸ್ಟ್ ಆಡಲು ಅವಕಾಶ ನೀಡಬೇಕು ಎಂಬುದು ಬಿಸಿಸಿಐನ ಅಭಿಪ್ರಾಯವಾಗಿತ್ತು. ಗಂಭೀರ್ ಯಾರ ಮಾತಿಗೂ ಸೊಪ್ಪು ಹಾಕಿಲ್ಲ ಎಂದು ವರದಿಯಾಗಿದೆ.

ಬಿಸಿಸಿಐನ ಹಿರಿಯ ಹಾಗೂ ಪ್ರಭಾವಿ ಅಧಿಕಾರಿಯೊಬ್ಬರು ಸ್ವತಃ ಅವರೇ ಟೀಂ ಇಂಡಿಯಾದ ಮುಖ್ಯ ಕೋಚ್ ಜೊತೆ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ರೋಹಿತ್‌ಗೆ ಸಿಡ್ನಿಯಲ್ಲಿ ಕೊನೆಯ ಟೆಸ್ಟ್ ಆಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಈ ಟೆಸ್ಟ್ ಪಂದ್ಯದ ನಂತರ ರೋಹಿತ್ ಟೆಸ್ಟ್‌ ಗೆ ನಿವೃತ್ತಿ ಘೋಷಿಸುವುದಾಗಿಯೂ ಹೇಳಿದರೂ ಗಂಭೀರ್ ತಮ್ಮ ನಿರ್ಧಾರವನ್ನು ಬದಲಿಸಿಲ್ಲ ಎಂದು ವರದಿಯಾಗಿದೆ.‌

ಸಿಡ್ನಿಯಲ್ಲೇ ನಿವೃತ್ತಿ?

ರೋಹಿತ್‌ ಶರ್ಮಾ ಅವರು ಸಿಡ್ನಿ ಪಂದ್ಯದ ಬಳಿಕ ನಿವೃತ್ತಿ ಘೋಷಣೆ ಮಾಡುತ್ತಾರೆ ಎನ್ನುತ್ತಿದೆ ವರದಿ. ಆದರೆ ಅದು ಆಗದೆಯೂ ಇರಬಹುದು. ಯಾಕೆಂದರೆ ಇನ್ನು ಟೆಸ್ಟ್‌ ಪಂದ್ಯವಿರುವುದು ಜೂನ್‌ ನಲ್ಲಿ ಅದಕ್ಕಿಂತ ಮೊದಲು ಚಾಂಪಿಯನ್ಸ್‌ ಟ್ರೋಫಿ ಕೂಟವಿದೆ. ಇದರ ಬಳಿಕ ರೋಹಿತ್‌ ಸಂಪೂರ್ಣ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆಯುವ ಸಾಧ್ಯತೆ ದಟ್ಟವಾಗಿದೆ.

ಮತ್ತೊಂದು ಚಾಪೆಲ್‌ ಆಗ್ತಾರಾ ಗಂಭೀರ್‌

ಟೀಂ ಇಂಡಿಯಾದಲ್ಲಿ ಈ ಶತಮಾನದ ಆರಂಭದಲ್ಲಿ ಕೋಚ್‌ ಆಗಿದ್ದ ಗ್ರೇಗ್‌ ಚಾಪೆಲ್‌ ಅವರು ಹಿರಿಯ ಆಟಗಾರರೊಂದಿಗೆ ಮನಸ್ಥಾಪ ಮಾಡಿಕೊಂಡಿದ್ದರು. ನಾಯಕ ಸೌರವ್‌ ಗಂಗೂಲಿ ಮತ್ತು ಚಾಪೆಲ್‌ ಆಂತರಿಕ ಯುದ್ದ ತಾರಕಕ್ಕೇರಿ ಗಂಗೂಲಿ ನಾಯಕತ್ವ ಕಳೆದುಕೊಂಡರು. ಜಿಂಬಾಬ್ವೆ ಸರಣಿಯ ಮಧ್ಯದಲ್ಲೇ ಗಂಗೂಲಿ ತಂಡದಿಂದ ಹೊರಬಿದ್ದಿದ್ದಾರೆ.

ಅಂದಹಾಗೆ ಹೊಸ ಚಾಪೆಲ್‌ ಆಗುವ ಪ್ರಯತ್ನದಲ್ಲಿರುವ ಗೌತಮನ ʼಗಂಭೀರʼಕ್ಕೆ ಇನ್ನೆಷ್ಟು ವಿಕೆಟ್‌ ಬೀಳುತ್ತದೋ ಕಾದು ನೋಡಬೇಕಿದೆ.

ಕೀರ್ತನ್‌ ಶೆಟ್ಟಿ ಬೋಳ

ಟಾಪ್ ನ್ಯೂಸ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

nucchinunde

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…

International: New Orleans-ದಾಳಿ ನಡೆಸಿದಾತ ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ

International: New Orleans-ದಾಳಿ ನಡೆಸಿದಾತ ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.