ಅಪಘಾತ ತಂದ ಆಪತ್ತು! ಮೆಡಿಕಲ್ ರೆಪ್ ಆಗಿದ್ದ ಜಗದಿ ಕಾಮಿಡಿ ಕಿಂಗ್ ಆಗಿದ್ದೇ ರೋಚಕ…

ಒಂದು ತಿಂಗಳ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದರು.

ನಾಗೇಂದ್ರ ತ್ರಾಸಿ, May 23, 2020, 8:34 PM IST

ಅಪಘಾತ ತಂದ ಆಪತ್ತು! ಮೆಡಿಕಲ್ ರೆಪ್ ಆಗಿದ್ದ ಜಗದಿ ಕಾಮಿಡಿ ಕಿಂಗ್ ಆಗಿದ್ದೇ ರೋಚಕ…

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಹಾಗೂ ನರಸಿಂಹರಾಜು ಅದ್ಭುತ ಜೋಡಿಯಾಗಿತ್ತು. ಅದರಲ್ಲಿಯೂ ನರಸಿಂಹರಾಜು, ಬಾಲಣ್ಣ ಇದ್ದರಂತೂ ಸಿನಿಮಾ ಯಶಸ್ಸಿನ ಮೆಟ್ಟಿಲೇರುತ್ತಿತ್ತು. ಅದೇ ರೀತಿ ಮಲಯಾಳಂ ಚಿತ್ರರಂಗದಲ್ಲಿ ತನ್ನ ಹಾಸ್ಯದ ಮೂಲಕವೇ ಮನೆಮಾತಾದವರು ಅಂಬಲಿಯೇಟಾ ಅಲಿಯಾಸ್ ಜಗದಿ ಶ್ರೀಕುಮಾರ್!

ಬಹುಶಃ ಮಲಯಾಳಂ ಸಿನಿಮಾ ಪ್ರೇಮಿಗಳಿಗೆ ಜಗದಿಯ ಹಾಸ್ಯ ನಟನೆ ನೆನಪಿಸಿಕೊಂಡರೆ ನಗು ಬರದಿರಲು ಸಾಧ್ಯವೇ ಇಲ್ಲ. ನನ್ನ ತಂದೆಯೇ ನನಗೆ ಹೀರೋ ಎಂದು ಜಗದಿ ಹೇಳಿದ್ದರು. ಅವರ ತಂದೆ ನಾಟಕಕಾರ, ಬರಹಗಾರ ಜಗದಿ ಎನ್ ಕೆ ಆಚಾರ್ಯ. ತಾಯಿ ಪ್ರಸನ್ನಾ. ಹೀಗೆ ತ್ರಿವೆಂಡ್ರಮ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಕಲಿತಿದ್ದ ಜಗದಿ ನಂತರ ಸಸ್ಯವಿಜ್ಞಾನ(ಬಾಟನಿ)ದಲ್ಲಿ ಪದವಿ ಪಡೆದಿದ್ದರು.

ಮೆಡಿಕಲ್ ರೆಪ್ ಆಗಿದ್ದ ಜಗದಿ ನಂತರ ಚಿತ್ರರಂಗಕ್ಕೆ ಎಂಟ್ರಿ…
ಪ್ರಾಥಮಿಕ ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ತಂದೆಯ ನಾಟಕಗಳಲ್ಲಿ ಜಗದಿ ಅಭಿನಯಿಸುತ್ತಿದ್ದರು. 5ನೇ ತರಗತಿಯಲ್ಲಿದ್ದಾಗಲೇ ಜಗದಿ ನಾಟಕದಲ್ಲಿ ನಟನೆಯ ಅವಕಾಶ ಪಡೆದಿದ್ದರು. ತ್ರಿವೆಂಡ್ರಮ್ ನಲ್ಲಿ ಕಾಲೇಜು ವಿದ್ಯಾಭ್ಯಾಸ ಪಡೆದ ನಂತರ ಜಗದಿ ಕೆಲ ಕಾಲ ಮೆಡಿಕಲ್ ರೆಪ್ರಸೆನ್ ಟೇಟಿವ್ ಆಗಿ ಕಾರ್ಯ ನಿರ್ವಹಿಸಿದ್ದರು. 1975ರಲ್ಲಿ ಜೆ.ಶಶಿಕುಮಾರ್ ನಿರ್ದೇಶನದ ಚಟ್ಟಾಂಬಿಕಾಕಲ್ಯಾಣಿ ಸಿನಿಮಾದಲ್ಲಿ ನಟಿಸುವ ಮೂಲಕ ಜಗದಿ ಬೆಳ್ಳಿತೆರೆಗೆ ಕಾಲಿರಿಸಿದ್ದರು. ಹೀಗೆ ಮಲಯಾಳಂ ಸಿನಿಮಾದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡ ಜಗದಿ ಆ ನಂತರ ತಮ್ಮ ಸಿನಿ ಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲಾ…ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಲಕ್ಷಾಂತರ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದು ಜಗದಿ!

ಭೀಕರ ಅಪಘಾತ ಜಗದಿ ಬದುಕನ್ನೇ ಕಂಗೆಡಿಸಿಬಿಟ್ಟಿತ್ತು:
2012ರ ಮಾರ್ಚ್ 10ರಂದು ನಿರ್ದೇಶಕ ಲೆನಿನ್ ರಾಜೇಂದ್ರನ್ ಅವರ ಈಡವುಪತಿ ಸಿನಿಮಾದ ಚಿತ್ರೀಕರಣಕ್ಕಾಗಿ ಮಲಪ್ಪುರಂನಿಂದ ತೆರಳಿದ್ದ ವೇಳೆ ಕ್ಯಾಲಿಕಟ್ ಸಮೀಪ ರಸ್ತೆ ಅಪಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಕ್ಯಾಲಿಕಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ತಿಂಗಳ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದರು. ಅಲ್ಲಿ ಜಗದಿ ಅವರಿಗೆ ಹಲವಾರು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಹೀಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದರು. 2013ರಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಜಗದಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲವಾಗಿತ್ತು. ತನ್ನ ಅದ್ಭುತ ನಟನೆಯ ಮೂಲಕ ಸಾವಿರಾರು ಜನರನ್ನು ನಗಿಸುತ್ತಿದ್ದ ಜಗದಿಯ ಸ್ಥಿತಿ ನೋಡಿ ಅಪಾರ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಅವರ ಆರೋಗ್ಯ ಚೇತರಿಕೆಯಾಗಿ, ಮೊದಲಿನಂತೆ ಅಭಿನಯಿಸುವಂತಾಗಲಿ ಎಂದು ಅಭಿಮಾನಿಗಳು ಹರಕೆ, ಪೂಜೆ, ಪುನಸ್ಕಾರ ಸಲ್ಲಿಸಿದ್ದರು. 2014ರಲ್ಲಿ ಮತ್ತೆ ಜಗದಿ ಆಸ್ಪತ್ರೆ ಪಾಲಾಗಿದ್ದರು.

ಮೂರು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಮುಚ್ಚಿಟ್ಟ ಸತ್ಯ ಬಹಿರಂಗಗೊಳಿಸಿದ್ದರು!
1974ರಲ್ಲಿ ಜಗದಿ ಮಲ್ಲಿಕಾ ಸುಕುಮಾರನ್ ಅವರನ್ನು ವಿವಾಹವಾಗಿದ್ದರು. 1976ರಲ್ಲಿ ಇಬ್ಬರು ವಿವಾಹ ವಿಚ್ಛೇದನ ಪಡೆದಿದ್ದರು. ನಂತರ ಜಗದಿ ಶೋಭಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಪುತ್ರ ರಾಜ್ ಕುಮಾರ್, ಪುತ್ರಿ ಪಾರ್ವತಿ ಸೇರಿ ಇಬ್ಬರು ಮಕ್ಕಳು. ಏತನ್ಮಧ್ಯೆ ಹಲವು ವರ್ಷಗಳಿಂದ ಅಂತೆ, ಕಂತೆ ಹರಿದಾಡುತ್ತಿತ್ತು. ಜಗದಿ ಅವರು ಗುಟ್ಟಾಗಿ ಮತ್ತೊಂದು ವಿವಾಹವಾಗಿದ್ದು, ಅವರಿಗೆ ಬೇಕಾದ ಎಲ್ಲಾ ರೀತಿಯ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂಬುದು. ಆದರೆ ಇದ್ಯಾವುದಕ್ಕೂ ಅಧಿಕೃತ ಮಾನ್ಯತೆ ಇರಲಿಲ್ಲವಾಗಿತ್ತು.

ಆದರೆ ಅಪಘಾತವಾಗಿ ಮೂರು ವರ್ಷಗಳ ಕಾಲ ಹೋರಾಟ ನಡೆಸಿ ಚೇತರಿಕೆ ಕಂಡ ನಂತರ ಕೊಟ್ಟಾಯಂನಲ್ಲಿ ಒಂದು ಸಮಾರಂಭವನ್ನು ಆಯೋಜಿಸಲಾಗಿತ್ತು. ಅಲ್ಲಿ ಜಗದಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಗದಿ ಅವರನ್ನು ವೀಲ್ ಚೇರ್ ಮೂಲಕ ಡಯಾಸ್ ಗೆ ಕರೆತಂದಾಗ ಒಬ್ಬಳು ಯುವತಿ ದಿಢೀರನೆ ವೇದಿಕೆ ಮೇಲೆ ಬಂದು ಜಗದಿ ಅವರನ್ನು ಅಪ್ಪಿ ಮುದ್ದಾಡಿದ್ದಳು. ಈ ವಿಚಾರದಲ್ಲಿ ಜಗದಿ ದೊಡ್ಡ ಮಗಳು ದೊಡ್ಡ ರಂಪಾಟ ನಡೆಸಿಬಿಟ್ಟಿದ್ದಳು. ಆದರೆ ಈ ಸಮಾರಂಭದಲ್ಲಿಯೇ ಜಗದಿ ಆಕೆ ತನ್ನ ಮಗಳು ಎಂಬುದನ್ನು ಬಹಿರಂಗಪಡಿಸಿದ್ದರು. ಹೌದು ಶ್ರೀಲಕ್ಷ್ಮಿ ನನ್ನ ಮಗಳು ಎಂದು ಹೇಳುವ ಮೂಲಕ ಎಲ್ಲಾ ಅನುಮಾನಗಳಿಗೂ ತೆರ ಎಳೆದಿದ್ದರು.

ಶೋಭಾ ಅವರನ್ನು ವಿವಾಹವಾಗಿದ್ದ ನಂತರ ಜಗದಿ ಅವರು ಜ್ಯೂನಿಯರ್ ನಟಿ ಕಲಾ ಅವರನ್ನು ಗುಟ್ಟಾಗಿ ವಿವಾಹವಾಗಿದ್ದು, ಆಕೆಯ ಮಗಳೇ ಶ್ರೀಲಕ್ಷ್ಮಿ. ಆದರೆ ಎಷ್ಟೋ ವರ್ಷಗಳವರೆಗೆ ಈ ವಿಷಯ ಬಹಿರಂಗವಾಗಿರಲಿಲ್ಲವಾಗಿತ್ತು. ಹೀಗೆ ಜೀವನದಲ್ಲಿ ಹಲವಾರು ತಿರುವುಗಳನ್ನು ಕಂಡಿದ್ದ ಜಗದಿ ಶ್ರೀಕುಮಾರ್ ಅಪಘಾತವಾಗಿ ಸುಮಾರು ಏಳು ವರ್ಷಗಳ ಬಳಿಕ 2019ರಲ್ಲಿ ಜಗದಿ ಶ್ರೀಕುಮಾರ್ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿ ಪ್ರೇಕ್ಷಕರನ್ನು ನಗಿಸುವ ಕಾಯಕ ಮುಂದುವರಿಸಿದ್ದರು.

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.