ಏನಿದು ಪ್ರಸವ ನಂತರದ ಖಿನ್ನತೆ? ಯಾವ ವೈದ್ಯರನ್ನು ಸಂಪರ್ಕಿಸಬೇಕು? ಇದಕ್ಕೆ ಚಿಕಿತ್ಸೆ ಏನು?
Team Udayavani, Jan 29, 2022, 11:17 AM IST
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. 30 ವರ್ಷ ಪ್ರಾಯದ ಸೌಂದರ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. 9 ತಿಂಗಳ ಮಗು ಹೊಂದಿದ್ದ ಸೌಂದರ್ಯ ಆತ್ಮಹತ್ಯೆಗೆ ‘ಪ್ರಸವ ನಂತರ ಖಿನ್ನತೆ’ ಕಾರಣ ಎಂದು ಹೇಳಲಾಗಿದೆ.
ಏನಿದು ಪ್ರಸವ ನಂತರದ ಖಿನ್ನತೆ, ಇದು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಿಗೆ ಕಾಣಿಸುತ್ತದೆಯೇ ಎನ್ನುವುದಕ್ಕೆ ಉತ್ತರ ಇಲ್ಲಿದೆ.
ಪ್ರಸವಾನಂತರದ ಖಿನ್ನತೆಯು ಗಂಭೀರವಾದ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ತಾಯಂದಿರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದರ ಬಗ್ಗೆ ತುಂಬಾ ವಿರಳವಾಗಿ ಮಾತನಾಡಲಾಗುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಮತ್ತು ನಂತರದ ಪ್ರಕ್ರಿಯೆಯ ಒಂದು ಭಾಗವೆಂದು ನಂಬುವ ಹೆಚ್ಚಿನ ಮಹಿಳೆಯರು ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದಾರೆ. ಪ್ರಸವಾ ನಂತರದ ಖಿನ್ನತೆಯು ಅಪಾಯಕಾರಿಯಾಗಿದ್ದು, ಆದರೆ ಚಿಕಿತ್ಸೆ ನೀಡಬಹುದಾಗಿದೆ. ಇದು ಮಹಿಳೆಯನ್ನು ಆತ್ಮಹತ್ಯೆಯಂತಹ ಅಪಾಯಕಾರಿ ನಡವಳಿಕೆಯತ್ತ ದೂಡುವ ಸಾಧ್ಯತೆಯೂ ಇದೆ.
ಪ್ರಸವಾನಂತರದ ಖಿನ್ನತೆಯು ತೀವ್ರವಾದ ದುಃಖ, ಉದಾಸೀನತೆ ಮತ್ತುಅಥವಾ ಆತಂಕದ ಭಾವನೆಗಳನ್ನು ಒಳಗೊಂಡಿರುವ ವೈದ್ಯಕೀಯ ಕಾಯಿಲೆಯಾಗಿದ್ದು, ಜೊತೆಗೆ ಶಕ್ತಿ, ನಿದ್ರೆ ಮತ್ತು ಹಸಿವಿನ ಬದಲಾವಣೆಗಳನ್ನು ಒಳಗೊಂಡಿರುತ್ತದೆ. ಇದು ತಾಯಿ ಮತ್ತು ಮಗುವಿಗೆ ಅಪಾಯವನ್ನುಂಟು ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯಾದ ಸ್ವಲ್ಪ ಸಮಯದ ನಂತರ, ತಾಯಂದಿರು ಸಾಕಷ್ಟು ದೈಹಿಕ, ಭಾವನಾತ್ಮಕ, ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಇದು ಕೆಲವು ಮಹಿಳೆಯರಿಗೆ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬೆಳೆಸುವ ಅಪಾಯವನ್ನುಂಟು ಮಾಡುತ್ತದೆ.
ಇದನ್ನೂ ಓದಿ:ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ
ಎಲ್ಲಾ ಹೊಸ ತಾಯಂದಿರಲ್ಲಿ ಅರ್ಧದಷ್ಟು ಮಂದಿ ‘ಬೇಬಿ ಬ್ಲೂಸ್’ ಅನ್ನು ಅನುಭವಿಸುತ್ತಾರೆ. ಇದು ಯಾವುದೇ ಕಾರಣವಿಲ್ಲದೆ ಅಳುವುದು, ಕಿರಿಕಿರಿ, ಚಡಪಡಿಕೆ ಮತ್ತು ಆತಂಕದಂತಹ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಆದರೆ ಬೇಬಿ ಬ್ಲೂಸ್ ಪ್ರಸವಾನಂತರದ ಖಿನ್ನತೆಗಿಂತ ಭಿನ್ನವಾಗಿದೆ, ಅಂದರೆ ಬೇಬಿ ಬ್ಲೂಸ್ ಕೇವಲ ಒಂದು ವಾರ ಅಥವಾ ಎರಡು ವಾರಗಳು ಮಾತ್ರ ಇರುತ್ತವೆ. ಈ ಭಾವನೆಗಳು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಪ್ರಸವಾನಂತರದ ಖಿನ್ನತೆಯಾಗಿರಬಹುದು.
ಪ್ರಸವಾನಂತರದ ಖಿನ್ನತೆಯು ತಾಯಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲವಾಗಬಹುದು, ಇದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರಿಯಬಹುದು.
“ಹೆರಿಗೆಯ ನಂತರ ಮೊದಲ ಎರಡು ವಾರಗಳವರೆಗೆ ಸಂಭವಿಸುವ ಬೇಬಿ ಬ್ಲೂಸ್ ತುಂಬಾ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಸುಮಾರು 50 ಪ್ರತಿಶತದಷ್ಟು ಹೊಸ ತಾಯಂದಿರ ಮೇಲೆ ಪರಿಣಾಮ ಬೀರುತ್ತದೆ. ಪ್ರಸವಾನಂತರದ ಖಿನ್ನತೆಯು ಸಾಮಾನ್ಯವಲ್ಲದಿದ್ದರೂ, ಆದರೆ ಭಾರತದಲ್ಲಿ ಇನ್ನೂ ಪ್ರಚಲಿತವಾಗಿದೆ. ಸರಿಸುಮಾರು, ಶೇ.5 ಬೇಬಿ ಬ್ಲೂಸ್ ನಿಂದ ಬಳಲುತ್ತಿರುವ ಮಹಿಳೆಯರು ಪ್ರಸವಾನಂತರದ ಖಿನ್ನತೆಗೆ ಒಳಗಾಗುತ್ತಾರೆ” ಎನ್ನುತ್ತಾರೆ ಫೋರ್ಟಿಸ್ ಹೆಲ್ತ್‌ಕೇರ್‌ನ ಹಿರಿಯ ಸಲಹೆಗಾರ ಮನೋವೈದ್ಯ ಡಾ ವಿಶಾಲ್ ಛಾಬ್ರಾ.
ಪ್ರಸವಾನಂತರದ ಖಿನ್ನತೆಯು ಮಗುವಿನ ಆರೈಕೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ನವಜಾತ ಮಗು ಸಂಪೂರ್ಣವಾಗಿ ತಾಯಿಯ ಮೇಲೆ ಅವಲಂಬಿತವಾಗಿದೆ. ತಾಯಿ ಖಿನ್ನತೆಗೆ ಒಳಗಾಗಿದ್ದರೆ, ಅದು ತನ್ನ ಮಗುವಿಗೆ ಸಾಕಷ್ಟು ಕಾಳಜಿಯನ್ನು ನೀಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಗುರುಗ್ರಾಮ್ ನ ಮಣಿಪಾಲ್ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ಶ್ವೇತಾ ಶರ್ಮಾ ಹೇಳುತ್ತಾರೆ.
ಚಿಕಿತ್ಸೆ ಇಲ್ಲವೇ?
ಹೌದು, ಪ್ರಸವಾನಂತರದ ಖಿನ್ನತೆಗೆ ಚಿಕಿತ್ಸೆಯಿದೆ. ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದು. “ಮಗುವಿನ ಮೇಲೆ ಪರಿಣಾಮ ಬೀರದಂತೆ ತಾಯಂದಿರಿಗೆ ಸಹಾಯ ಮಾಡುವ ಸುರಕ್ಷಿತ ಔಷಧಿಗಳಿವೆ. ಮನೋವೈದ್ಯಕೀಯ ಔಷಧದ ಸುತ್ತಲಿನ ಅಳುಕು ಗರ್ಭಾವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರನ್ನು ಚಿಕಿತ್ಸೆ ಪಡೆಯುವುದನ್ನು ತಡೆಯುತ್ತದೆ. ನಾವು ಈಗ ಸುರಕ್ಷಿತ ಔಷಧಿಗಳನ್ನು ಹೊಂದಿದ್ದೇವೆ ಎಂದು ಭರವಸೆ ನೀಡುತ್ತೇನೆ, ಅದು ಗರ್ಭಾವಸ್ಥೆ ಅಥವಾ ಹಾಲುಣಿಸುವ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ” ಎನ್ನುತ್ತಾರೆ ಡಾ ಛಾಬ್ರಾ.
“ ಚಿಕಿತ್ಸೆಯ ಜೊತೆಗೆ ತಾಯಂದಿರು ಮಾನಸಿಕ ಚಿಕತ್ಸೆ (ಸೈಕೋ ತೆರಪಿ) ಪಡೆಯುವುದು ಅಗತ್ಯವಾಗಿದೆ. ಇದರಿಂದ ಹೊಸ ತಾಯಂದಿರಿಗೆ ಅವರ ಭಾವನೆಗಳನ್ನು ಅರ್ಥ ಮಾಡಿಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಅವರು ತಮ್ಮನ್ನು ಮತ್ತೆ ಪ್ರೀತಿಸಲು ಆರಂಭಿಸುತ್ತಾರೆ, ಮತ್ತು ತಮ್ಮ ಮತ್ತು ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎನ್ನುತ್ತಾರೆ ಡಾ.ಶ್ವೇತಾ ಶರ್ಮಾ.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಹೊಸ ತಾಯಂದಿರಿಗೆ ಕೆಲವು ದಿನಗಳ ಕಾಲ ನಿದ್ದೆ ಮತ್ತು ಹಸಿವು ಕಡಿಮೆಯಾಗುತ್ತಿದ್ದರೆ, ನೆಗೆಟಿವ್ ಯೋಚನೆಗಳು ಬರಲಾರಂಭಿಸಿದರೆ ಅಂತವರು ಮನೋವೈದ್ಯರನ್ನು ಸಂಪರ್ಕಕಿಸಬೇಕು ಎನ್ನುತ್ತಾರೆ ಡಾ ಛಾಬ್ರಾ. ವೈದ್ಯರು ಒಳ್ಳೆಯವರಿದ್ದಾರೆ, ಚಿಕಿತ್ಸೆಯು ಒಳ್ಳೆಯದು. ಮನೋ ಚಿಕಿತ್ಸೆಯ ಬಗ್ಗೆ ಯಾವುದೇ ಅನುಮಾನ, ಆತಂಕ ಪಡುವ ಅವಶ್ಯಕತೆಯಿಲ್ಲ. ಇದು ಜನರು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ.
ಕೃಪೆ: ಇಂಡಿಯಾ ಟುಡೇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.