ಕರ್ನಾಟಕ ಕಾಂಗ್ರೆಸ್ ಗೆಲುವಿನ ಹೋರಾಟದಲ್ಲಿ ಸಸಿಕಾಂತ್ ಸೆಂಥಿಲ್ ಪಾತ್ರವೇನು?
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವೇಳೆ ದಿಢೀರ್ ರಾಜೀನಾಮೆ ಸಲ್ಲಿಸಿದ್ದರು...
Team Udayavani, May 15, 2023, 7:47 PM IST
ಕರ್ನಾಟಕದ ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶಗಳು ರಾಜಕೀಯದ ಪ್ರಸ್ತುತತೆ, ಧ್ರುವೀಕರಣ ಅನೇಕ ನಿರೂಪಣೆಗಳು ಮತ್ತು ತೀರ್ಮಾನಗಳನ್ನು ಹುಟ್ಟುಹಾಕಿದ್ದು, ಕಾಂಗ್ರೆಸ್ ಪಕ್ಷದ ಹೋರಾಟದಲ್ಲಿ ಮಾಜಿ ಐಎಎಸ್ ಅಧಿಕಾರಿಯೊಬ್ಬರ ಪಾತ್ರವೂ ಗಮನಾರ್ಹವಾಗಿದೆ.
ಕಾಂಗ್ರೆಸ್ ವಾರ್ ರೂಮ್ ಮುಖ್ಯಸ್ಥರಾಗಿ ಸಸಿಕಾಂತ್ ಸೆಂಥಿಲ್ ಅವರು ತನ್ನದೇ ಆದ ದೊಡ್ಡ ಕೊಡುಗೆಯನ್ನು ಕಾಂಗ್ರೆಸ್ ಗೆಲುವಿನಲ್ಲಿ ಕೊಟ್ಟು ಯಶಸ್ಸನ್ನು ಸಂಭ್ರಮಿಸಿದ್ದಾರೆ. ಸೆಂಥಿಲ್ ಮತ್ತು ಅನುಭವಿ ಯುವ ತಂಡ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಯಶಸ್ಸು ‘ಕೈ’ಗೆ ತಂದು ಕೊಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ತಮಿಳುನಾಡು ಮೂಲದ ಮಾಜಿ ಐಎಎಸ್ ಅಧಿಕಾರಿ (ಕರ್ನಾಟಕ ಕೇಡರ್) ಸಸಿಕಾಂತ್ ಸೆಂಥಿಲ್ ಅವರು ನಾಗರಿಕ ಸೇವೆಯನ್ನು ತೊರೆದು 2019 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು.
ಕಾಂಗ್ರೆಸ್ ವಾರ್ ರೂಮ್ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಸಸಿಕಾಂತ್ ಸೆಂಥಿಲ್ ಅವರು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಈ ದೊಡ್ಡ ಗೆಲುವಿನ ಮೂಲಕ ಮೀರಿ ನಿಂತಿದ್ದಾರೆ ಎಂದು ಹಲವರು ಅಭಿಪ್ರಾಯ ಹೊರ ಹಾಕಿದ್ದಾರೆ.
ಜನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಸೆಂಥಿಲ್ “ನಾವೆಲ್ಲರೂ ದೊಡ್ಡ ವ್ಯವಸ್ಥೆಯ ಒಂದು ಭಾಗವಾಗಿದ್ದೇವೆ. ಸರಕಾರವನ್ನು ಬದಲಾಯಿಸಲು ಜನರೇ ನಿರ್ಧರಿಸಿದ್ದಾರೆ. ನಾನು ಮತ್ತು ಅಣ್ಣಾಮಲೈ ನಮಗೆ ಸರಿ ಎನಿಸಿದ್ದನ್ನು ಮಾಡುತ್ತಿದ್ದೇವೆ. ನಾನು ಹಿಂದೆಂದೂ ಈ ರೀತಿ ಸಾರ್ವಜನಿಕ ಗಮನವನ್ನು ಕೇಂದ್ರೀಕರಿಸಿ ಇರಲಿಲ್ಲ, ”ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ವೈಯಕ್ತಿಕವಾಗಿ ತಮಿಳುನಾಡಿನಲ್ಲಿ ಕೆಲಸ ಮಾಡಲು ಬಯಸುತ್ತೇನೆ. ತಮಿಳುನಾಡು ನನ್ನ ನೆಲೆಯಾಗಲಿದೆ. ನಾನು ಐಎಎಸ್‌ನಲ್ಲಿದ್ದಾಗ ಸುಮಾರು 11 ವರ್ಷಗಳ ಕಾಲ ತಮಿಳುನಾಡಿ ನಲ್ಲಿ ಇರಲಿಲ್ಲ. ನಾನು ಮತ್ತೆ ರಾಜ್ಯವನ್ನು ಅರಿಯಬೇಕು. ಮೊದಲ ತಿಂಗಳಲ್ಲಿ ನಾನು ಸಾಕಷ್ಟು ಪ್ರಯಾಣ ಮಾಡುತ್ತೇನೆ. ಆದರೆ ನಾವು ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸುತ್ತೇವೆ” ಎಂದು ಹೇಳಿದ್ದಾರೆ.
“ನಾನು ಸೇವೆಯಿಂದ ಹೊರಬಂದಾಗ, ನಾನು ಕಾರ್ಯತಂತ್ರದಲ್ಲಿ ಕೆಲಸ ಮಾಡುತ್ತೇನೆ ಎಂದು ಭಾವಿಸಿದೆ. ನಾನು ತಮಿಳುನಾಡು ವಾರ್ ರೂಮ್‌ನ ನೇತೃತ್ವ ವಹಿಸಿದ್ದೆ ಮತ್ತು ‘ವಾಂಗ ಒರು ಕೈ ಪಾಪಂ’ ಅಭಿಯಾನವನ್ನು ನಡೆಸಿದೆ. ಭಾರತ್ ಜೋಡೋ ಯಾತ್ರೆಯ ನಂತರ, ನಾವು ಎದುರಿಸುತ್ತಿರುವ ಎರಡನೇ ಪ್ರಮುಖ ಚುನಾವಣೆ ಕರ್ನಾಟಕದ್ದಾಗಿತ್ತು. ನಾನು 11 ವರ್ಷಗಳ ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದರಿಂದ ಇಲ್ಲಿ ಕೆಲಸ ಮಾಡಬೇಕಾಯಿತು ಎಂಬುದು ಸ್ಪಷ್ಟವಾಗಿದೆ” ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವೇಳೆ ಸಸಿಕಾಂತ್ ಅವರು ತಮ್ಮ ಹುದ್ದೆಗೆ ರ ದಿಢೀರ್ ರಾಜೀನಾಮೆ ಸಲ್ಲಿಸಿದ್ದರು. 2009 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಅವರು 2009 ಮತ್ತು 2012ರ ಅವಧಿಯಲ್ಲಿ ಬಳ್ಳಾರಿಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದ್ದರು. ಬಳಿಕ ಎರಡು ಅವಧಿಗೆ ಶಿವಮೊಗ್ಗ ಜಿ. ಪಂ. ಸಿಇಓ ಆಗಿದ್ದರು. ಅನಂತರದ ವರ್ಷಗಳಲ್ಲಿ ಚಿತ್ರದುರ್ಗ ಮತ್ತು ರಾಯಾಚೂರು ಜಿಲ್ಲಾಧಿಕಾರಿಯಾಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿ 2016ರ ತನಕ ಸೇವೆ ಸಲ್ಲಿಸಿದ್ದರು.
ದ. ಕ ಜಿಲ್ಲೆಯಲ್ಲಿ 23 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಅಕ್ರಮ ಮರಳುಗಾರಿಕೆ ಮತ್ತು ಗೋ ಕಳ್ಳಸಾಗಟ ತಡೆಯಲು ಅ್ಯಪ್ ಆಧಾರಿತ ಸೇವೆಯನ್ನು ಪರಿಚಯಿಸಿದ್ದರು. ಬೆಳ್ತಂಗಡಿ ತಾಲೂಕು ಪ್ರವಾಹ ಪೀಡಿತವಾದಾಗ ಪರಿಹಾರ ಕಾರ್ಯಕ್ಕಾಗಿ ಶ್ರಮಿಸಿದ್ದರು. ದಕ್ಷ ಅಧಿಕಾರಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…
International: New Orleans-ದಾಳಿ ನಡೆಸಿದಾತ ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.