ಸೋಫಾ ಮಾರಲು ಹೋಗಿ 34 ಸಾವಿರ ಕಳೆದುಕೊಂಡ ಸಿಎಂ ಕೇಜ್ರಿವಾಲ್ ಮಗಳು: ಏನಿದು QR Code Scam ?
Team Udayavani, Feb 9, 2021, 8:01 PM IST
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮಗಳು ಹರ್ಷಿತಾ ಕೇಜ್ರಿವಾಲ್ ಇತ್ತೀಚೆಗಷ್ಟೇ ಆನ್ ಲೈನ್ ವಂಚನೆಯ ಜಾಲಕ್ಕೆ ಸಿಲುಕಿದ್ದಾರೆ. ಹಳೆಯ ಸೋಫಾ ಒಂದನ್ನು ಮಾರಲು ಹೋಗಿ 34 ಸಾವಿರ ರೂ. ಕಳೆದುಕೊಂಡಿದ್ದಾರೆ.
ದೆಹಲಿ ಮುಖ್ಯಮಂತ್ರಿಗಳ ಮಗಳಾದ ಹರ್ಷಿತಾ ಕೇಜ್ರಿವಾಲ್ ಡೆಲ್ಲಿ ಐಐಟಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಪ್ರಸಿದ್ದ ಇ-ಕಾಮರ್ಸ್ ವೇದಿಕೆಯೊಂದರಲ್ಲಿ ಹಳೆಯ ಸೋಫಾವೊಂದನ್ನು ಮಾರಲು ಮುಂದಾಗಿದ್ದರು. ಈ ವೇಳೆ ಸೋಫಾ ಖರೀದಿಸಲು ಆಸಕ್ತಿ ತೋರಿದ ಗ್ರಾಹಕನೋರ್ವ ಸಣ್ಣ ಮೊತ್ತದ ಹಣವನ್ನು ಹರ್ಷಿತಾ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದ. ನಂತರ ಹೆಚ್ಚಿನ ಪ್ರಮಾಣದಲ್ಲಿನ ಹಣ ಕಳುಹಿಸಬೇಕಾದರೆ ಕ್ಯೂಆರ್ ಕೋಡ್ ಅವಶ್ಯಕತೆಯಿದೆ, ಅದನ್ನು ಸ್ಕ್ಯಾನ್ ಮಾಡಿದ ಕೂಡಲೇ ಉಳಿದ ಹಣ ಜಮೆಯಾಗುತ್ತದೆ ಎಂದು ನಂಬಿಸಿ ಕೋಡ್ ಕಳುಹಿಸಿದ್ದ.
ಇತ್ತ ಹರ್ಷಿತಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ಮೊದಲು 20 ಸಾವಿರ ಹಣ ಆಕೆಯ ಬ್ಯಾಂಕಿನಿಂದ ಡ್ರಾ ಆಗಿದೆ. ಮತ್ತೊಮ್ಮೆ ಸ್ಕ್ಯಾನ್ ಮಾಡಿದಾಗ 12 ಸಾವಿರ ರೂ. ಗಳು ಗ್ರಾಹಕನ ಸೋಗಿನ ವಂಚಕನ ಬ್ಯಾಂಕ್ ಅಕೌಂಟ್ ಗೆ ಜಮೆಯಾಗಿದೆ.
ಕೂಡಲೇ ಮೋಸದ ಜಾಲವನ್ನು ಅರಿತ ಹರ್ಷಿತಾ ದೆಹಲಿ ಸಿಎಂ ನಿವಾಸದ ಬಳಿಯಿರುವ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಪೊಲೀಸರು ಆನ್ ಲೈನ್ ವಂಚಕನಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಆನ್ ಲೈನ್ ಡೇಟಾ ಸುರಕ್ಷತೆಗೆ ಯಾವೆಲ್ಲಾ ಕ್ರಮ ಅನುಸರಿಸಬಹುದು ? ಇಲ್ಲಿದೆ ಸರಳ ಉಪಾಯ
ಏನಿದು ಕ್ಯೂಆರ್ ಕೋಡ್ ಸ್ಕ್ಯಾಮ್:
ಈ ಸ್ಕ್ಯಾಮ್ ನಲ್ಲಿ ಗ್ರಾಹಕರ ಸೋಗಿನಲ್ಲಿರುವ ವಂಚಕರು UPI ಪೇಮೆಂಟ್ ವಿಧಾನವನ್ನೆ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಇಂದು ಗೂಗಲ್ ಪೇ, ಪೋನ್ ಪೇ ಮುಂತಾದವುಗಳ ಮೂಲಕ ಹಣವನ್ನು ಸುಲಭವಾಗಿ ವರ್ಗಾಯಿಸಬಹುದು. ಇದರಲ್ಲಿನ ಹಲವಾರು ತಾಂತ್ರಿಕ ಲೋಪದೋಷಗಳು ಅಥವಾ ಬಳಕೆದಾರರ ಅರಿವಿನ ಕೊರತೆಯಿಂದ ಆನ್ ಲೈನ್ ವಂಚಕರು ಸುಲಭವಾಗಿ ಹಣವನ್ನು ಎಗರಿಸುತ್ತಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಸೈಬರ್ ಕ್ರಿಮಿನಲ್ ಗಳು ಮೊದಲಿಗೆ ಯಾವುದಾದರೂ ವಸ್ತುವನ್ನು ಖರೀದಿಸುವ ಆಸಕ್ತಿ ತೋರಿ, ಕ್ಯೂಆರ್ ಕೋಡ್ ಒಂದನ್ನು ಕಳುಹಿಸಿಕೊಡುತ್ತಾರೆ. ಅಥವಾ payment accept ಮಾಡುವಂತೆ ಸಂದೇಶವೊಂದನ್ನು ಕಳುಹಿಸುತ್ತಾರೆ. ಈ ಸಮಯದಲ್ಲಿ ಗ್ರಾಹಕರ ಸೋಗಿನ ವಂಚಕರು ಸುಖಾಸುಮ್ಮನೇ ಆತುರತೆಯನ್ನು ತೋರ್ಪಡಿಸುತ್ತಾರೆ. ‘ನೀವು ಮಾರಾಟ ಮಾಡಲು ಮುಂದಾಗಿರುವ ವಸ್ತು ನಮಗೆ ತುಂಬಾ ಇಷ್ಟವಾಗಿದೆ. ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳುವುದಿಲ್ಲ’ ಎಂಬ ಉತ್ಪ್ರೇಕ್ಷೆಯ ಮಾತುಗಳನ್ನಾಡಲು ಆರಂಭಿಸುತ್ತಾರೆ. ಬಳಿಕ ಕ್ಯೂಆರ್ ಕೋಡ್ ಒಂದನ್ನು ಕಳುಹಿಸಿ ಇದನ್ನು ಸ್ಕ್ಯಾನ್ ಮಾಡಿದಾಕ್ಷಣ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ. ಇಲ್ಲವಾದಲ್ಲಿ Transaction fail ಆಗುವುದು ಎಂದು ನಂಬಿಸುತ್ತಾರೆ.
ಈ ವೇಳೆ ಅರಿವಿನ ಕೊರತೆಯಿಂದ ಬಳಕೆದಾರರು ಕೂಡಲೇ ತಮ್ಮ ವಸ್ತುವನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಮಾತ್ರವಲ್ಲದೆ ಹಣ ಪಡೆಯುವಾಗ ಯಾವುದೇ ಮಾದರಿಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತಿಲ್ಲ ಎಂಬ ವಿಚಾರವನ್ನೇ ಮರೆತುಬಿಡುತ್ತಾರೆ. ಬಳಿಕ ಕ್ಯೂಆರ್ ಸ್ಕ್ಯಾನ್ ಮಾಡಿದಾಗ ಅಥವಾ reguest accept ಮಾಡಿದಾಗ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಸಂದೇಶ ಬರುತ್ತದೆ.
ಇಂದು ಇ–ಕಾಮರ್ಸ್ ವೇದಿಕೆಗಳು ಸೈಬರ್ ಕ್ರಿಮಿನಲ್ ಗಳಿಗೆ ಮೃಷ್ಟಾನ್ನ ಭೋಜನವನ್ನು ಉಣಬಡಿಸುತ್ತಿದೆ. ದೇಶದ ಹಲವೆಡೆಯಿಂದ ಇದೇ ಮಾದರಿಯ ಹಲವು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶೀಘ್ರದಲ್ಲಿಯೇ ಕೇಂದ್ರದಿಂದ “ಸಂದೇಶ್” ಮೆಸೇಜಿಂಗ್ ಆ್ಯಪ್ ಬಿಡುಗಡೆ
ಈ ಸ್ಕ್ಯಾಮ್ ಅನ್ನು ಹೇಗೆ ತಡೆಗಟ್ಟಬಹುದು ?
ಇ- ಕಾಮರ್ಸ್ ವೇದಿಕೆಗಳಲ್ಲಿ ( ಅಮೇಜಾನ್, ಫ್ಲಿಫ್ ಕಾರ್ಟ್, ಓಎಲ್ ಎಕ್ಸ್ ಮುಂತಾದವು) ಆನ್ ಲೈನ್ ಪೇಮೆಂಟ್ ಮಾಡುವಾಗ ಜಾಗರೂಕರಾಗಿರಬೇಕು. ಪ್ರತಿಯೊಂದು ಅಂಶಗಳನ್ನು ಪರಿಶೀಲಿಸಿದ ನಂತರವೇ Pay ಬಟನ್ ಕ್ಲಿಕ್ ಮಾಡಬೇಕಾಗುತ್ತದೆ. ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೇ UPI ಆ್ಯಪ್ ಗಳು ನಾವು ಇತರರಿಗೆ ಪೇಮೆಂಟ್ ಮಾಡುವಾಗ ಮಾತ್ರ ಪಿನ್ ನಂಬರ್ ಕೇಳುತ್ತವೆ. ಆದರೇ ಇತರರು ನಮ್ಮ ಖಾತೆಗೆ ಹಣ ವರ್ಗಾಯಿಸುವಾಗ ಯಾವುದೇ ಕ್ಯೂಆರ್ ಕೋಡ್ ಸ್ಕ್ಯಾನ್ ಅಥವಾ ಪಿನ್ ನಂಬರ್ ಕಳುಹಿಸಿಕೊಡುವ ಅವಶ್ಯಕತೆ ಇರುವುದಿಲ್ಲ.
ಒಂದು ವೇಳೆ ಯಾರಾದರೂ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಕ್ಷಣ ಪಿನ್ ನಂಬರ್ ಕೇಳುತ್ತದೆಯೆಂದಾದರೆ ಅದು ಮೋಸದ ಜಾಲದ ಮೊದಲನೇ ಹಂತ. ಕೂಡಲೇ ಅನ್ನು ತಿರಸ್ಕರಿಸಿದರೆ ನಿಮ್ಮ ಖಾತೆಯಲ್ಲಿಯೇ ಹಣ ಉಳಿಯುತ್ತದೆ. ಇಲ್ಲವಾದಲ್ಲಿ ವಂಚಕರ ಖಾತೆಗೆ ವರ್ಗಾವಣೆಯಾಗುತ್ತದೆ.
ಇದನ್ನೂ ಓದಿ: “ಕ್ರಿಕೆಟ್ ವಿಲನ್’ ಹೆರಾಲ್ಡ್ ಲಾರ್‌ವುಡ್: ನಾಯಕನ ಮಾತು ಕೇಳಿ ವಿಲನ್ ಆದ ಹೆರಾಲ್ಡ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.