ಜ್ಞಾನಾಧಾರಿತ, ಕೌಶಲಾಧಾರಿತ ಶಿಕ್ಷಣ ಪದ್ಧತಿ

ಎನ್‌ಇಪಿ ಅನುಷ್ಠಾನದ ಅನಂತರ ಪಠ್ಯಕ್ರಮದಲ್ಲಿ ಆಗಬಹುದಾದ ಬದಲಾವಣೆ ಏನು?

Team Udayavani, Oct 4, 2021, 6:09 AM IST

ಜ್ಞಾನಾಧಾರಿತ, ಕೌಶಲಾಧಾರಿತ ಶಿಕ್ಷಣ ಪದ್ಧತಿ

ಪ್ರಸಕ್ತ ಸಾಲಿ ನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಸರಕಾರ‌ ನಿರ್ಧರಿಸಿದೆ. ಈ ಸಂಬಂಧ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಮಾಡಿಕೊಂಡಿರುವ ಸಿದ್ಧತೆ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿರುವ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು, ಪಠ್ಯಕ್ರಮದಲ್ಲಿನ ಹೊಸ ವಿಷಯಗಳ ಕುರಿತು “ಉದಯವಾಣಿ’ಯು ಮುಂದಿಟ್ಟಿರುವ ಪಂಚಪ್ರಶ್ನೆಗಳಿಗೆ ಕುಲಪತಿಗಳ ಉತ್ತರ ಇಲ್ಲಿದೆ..

ಮಕ್ಕಳ ಬದುಕು ಬದಲಿಸುವ ಶಿಕ್ಷಣ ವ್ಯವಸ್ಥೆ
ರಾಯಚೂರು ವಿವಿಯಿಂದ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಎನ್‌ಇಪಿ ಮಾಹಿತಿ ನೀಡಲು ನೋಡಲ್‌ ಆಫೀಸರ್‌ಗಳನ್ನು ನೇಮಿಸಲಾಗುತ್ತಿದೆ. ಕಾಲೇಜುಗಳ ಪ್ರಾಚಾರ್ಯರ ಜತೆ ಸಭೆ ನಡೆಸಲಾಗಿದೆ. ಹೆಲ್ಪ್ಲೈನ್‌ ಆರಂಭಿಸಿ ಅಗತ್ಯ ಮಾಹಿತಿ ನೀಡಲಾಗುತ್ತಿದೆ.

ರಾಯಚೂರು ವಿವಿಯಿಂದ ಅಂಬಾಸಿ­ಡರ್‌­ಗಳನ್ನು ನೇಮಿಸಿ ತಾಲೂಕು ಮಟ್ಟದಲ್ಲಿ ಹೋಗಿ ತರಬೇತಿ ನೀಡಲಾಗುತ್ತಿದೆ. ರಾಯಚೂರು ವಿವಿ ವ್ಯಾಪ್ತಿಗೆ 13 ತಾಲೂಕು ಬರುತ್ತವೆ. ಪ್ರತಿ ತಾಲೂಕಲ್ಲಿ ಲೀಡ್‌ ಕಾಲೇಜ್‌ಗಳನ್ನು ಮಾಡಲಾಗಿದೆ. ಉಳಿದ ಕಾಲೇಜುಗಳ ಸಿಬಂದಿ ಅಲ್ಲಿಗೆ ಬರುತ್ತಾರೆ. ಅವರಿಗೆ ಎನ್‌ಇಪಿ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗುತ್ತಿದೆ. ಪ್ರತೀ ದಿನ 4 ಹಂತಗಳ ತರಬೇತಿ ನೀಡಲಾಗುತ್ತಿದೆ. ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಜತೆಗೆ ಪಾಲಕರ ಸಭೆ ಮಾಡಲಾಗುತ್ತಿದೆ.

ತುಂಬಾ ಬದಲಾವಣೆ ಆಗಲಿದೆ. ಇಲ್ಲಿ ಒಬ್ಬ ವಿದ್ಯಾರ್ಥಿ ತನಗೆ ಬೇಕಾದ ವಿಷಯ ಆಯ್ಕೆ ಮಾಡಿಕೊಂಡು ಓದಬಹುದು. ಇದೇ ವಿಚಾರ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ­ಕೊಡಬೇಕಿದೆ. ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳ­ಬಹುದು. ಯಾವ ವಿಷಯದಲ್ಲಿ ಪರಿಣತಿ ಇರುತ್ತದೆಯೋ ಅದನ್ನು ಓದುವ ಅವಕಾಶ ಇಲ್ಲಿದೆ. ಇದರಿಂದಅಂತಾ­ರಾಜ್ಯ, ಅಂತಾ­ರಾಷ್ಟ್ರೀಯ ಮಟ್ಟದಲ್ಲಿ ಉದ್ಯೋ­ಗಾವಕಾಶಗಳು ತೆರೆದು­ಕೊಳ್ಳಲಿವೆ. ಯಾರು ಬೇಕಾ­ದರೂ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು ಎನ್ನುವ ವಾತಾವರಣ ತಯಾರಾಗಲಿದೆ.
ಶಿಕ್ಷಣದ ಗುಣಮಟ್ಟ ಖಂಡಿತ ಸುಧಾರಿ­ಸಲಿದೆ. ಇಲ್ಲಿ ವಿದ್ಯಾರ್ಥಿ ಆಯ್ಕೆಯೇ ಅಂತಿಮ. ಕಲಾ ವಿಭಾಗ ಓದುವವರು ಅದನ್ನೇ ಓದಬೇಕೆಂದಿಲ್ಲ. ಬೇಡ ಎನ್ನುವುದಾದರೆ ಕೌಶಲಾಧಾರಿತ ವಿಷಯ ಓದಬಹುದು. ಎನ್‌ಇಪಿ ಎನ್ನುವುದು ಜ್ಞಾನಾಧಾರಿತ, ಕೌಶಲಾಧಾರಿತ , ಮೌಲ್ಯಾಧಾರಿತ ಶಿಕ್ಷಣ ಪದ್ಧತಿ. ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಬದಲಿಸುವ ಪ್ರಕ್ರಿಯೆ ಎಂದರೆ ತಪ್ಪಾಗಲಿಕ್ಕಿಲ್ಲ.ಹಿಂದೆ ವಿದ್ಯಾರ್ಥಿಗಳ ಡ್ರಾಪ್‌ಔಟ್‌ ಪ್ರಮಾಣ ಶೇ.30­ರಿಂದ 70 ಇತ್ತು. ಆದರೀಗ ಸಂಪೂರ್ಣ ಬದಲಾವಣೆ ಆಗಲಿದೆ. ಒಬ್ಬ ವಿದ್ಯಾರ್ಥಿ ವ್ಯಾಸಂಗ ಮಧ್ಯದಲ್ಲಿ ಬಿಟ್ಟು ಹೋದರೂ ಏಳು ವರ್ಷಗಳ ಬಳಿಕ ಬಂದು ಮತ್ತೆ ಓದಲು ಅವಕಾಶ ಇದೆ. ಜೀವನವಿಡಿ ಕಲಿಕೆಗೆ ಅಡಚಣೆಯಾಗದ ರೀತಿಯಲ್ಲಿ ವ್ಯಾಸಂಗ ಮಾಡುವ ವ್ಯವಸ್ಥೆ ಇದಾಗಿರಲಿದೆ. ಇಲ್ಲಿ ಡ್ರಾಪ್‌ಔಟ್‌ ಎನ್ನುವುದು ಗಂಭೀರ ವಿಷಯ ಆಗಲ್ಲ.
-ಪ್ರೊ| ಹರೀಶ ರಾಮಸ್ವಾಮಿ
ಕುಲಪತಿ, ರಾಯಚೂರು ವಿವಿ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಎನ್‌ಇಪಿ ದಾರಿ
ದೇಶದ ಪ್ರತಿಷ್ಠಿತ ಕೃಷಿ ವಿವಿಗಳ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿರುವ ಧಾರ ವಾಡ ಕೃಷಿ ವಿವಿ ಈ ಹಿಂದಿನಿಂದಲೂ ಹೊಸತನ ಮತ್ತು ಹೊಸ ಆವಿಷ್ಕಾರಗಳನ್ನು ಸದಾ ಸ್ವಾಗತಿಸುತ್ತಲೇ ಬಂದಿದೆ. ಹೀಗಾಗಿ ಸರಕಾರ‌ದ ಉನ್ನತ ಶಿಕ್ಷಣ ನೀತಿಯನ್ನು ಕೂಡ ಸ್ವಾಗತಿಸಿ, ಅದರ ಅನುಷ್ಠಾನಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹೊಸ ವಿಚಾರಗಳ ಅನುಷ್ಠಾನ ಸಂದರ್ಭದಲ್ಲಿ ಎಲ್ಲರಿಗೂ ಅಲ್ಲದೇ ಹೋದರೂ ಕೆಲವರಿಗೆ ಗೊಂದಲಗಳು ಇದ್ದೇ ಇರುತ್ತವೆ. ಅದರಲ್ಲೂ ಕೃಷಿ ಪ್ರಾಯೋಗಿಕ ಮತ್ತು ಸಂಶೋಧನತ್ಮಕ ವಿಷಯ. ಇದರಲ್ಲಿ ಫಲಿತಾಂಶ ಪಡೆಯಲು ತಾಳ್ಮೆಯಿಂದ ಕಾಯಬೇಕು. ನೂತನ ಶಿಕ್ಷಣ ನೀತಿ ಕುರಿತು ಈಗಾಗಲೇ ಬೋಧಕರು, ವಿವಿಯಲ್ಲಿ ಸಂಶೋಧನ ವಿದ್ಯಾರ್ಥಿ­ಗಳು ಹಾಗೂ ಸಂಶೋಧಕರೊಂದಿಗೆ ಅನೇಕ ಬಾರಿ ಸಂವಾದ ನಡೆಸಿ ಈಗಿರುವ ಕಲಿಕಾ ವ್ಯವಸ್ಥೆ ಮತ್ತು ಪಠ್ಯ, ಎನ್‌ಇಪಿ ಅನುಷ್ಠಾನದ ಅನಂತರ ಆಗುವ ಬದಲಾ ವಣೆಗಳ ಕುರಿತು ಚರ್ಚಿಸಲಾಗಿದೆ.

ಕೃಷಿ ಯಾವಾಗಿದ್ದರೂ ಪಠ್ಯಕ್ಕಿಂತ ಪ್ರಾಯೋಗಿಕ­ದಲ್ಲಿಯೇ ವಿದ್ಯಾರ್ಥಿಗಳಿಗೆ ಮನ ಮುಟ್ಟುತ್ತದೆ. ಪಠ್ಯದ ಸ್ವರೂಪದಲ್ಲಿ ಬದ­ಲಾವಣೆಯಾ­ದರೂ ವಿಷಯ ಮತ್ತು ವಿಚಾರಗಳು ಅವೇ ಇರುತ್ತವೆ. ಕಲಿ­ಕೆಯ ವಿಧಾನಗ­ಳಲ್ಲಿ ಕೊಂಚ ಬದಲಾ­ವಣೆ ತರಬೇಕಾಗ­ಬಹುದು. ಆಯಾ ವಿಷಯಗಳಿಗೆ ತಕ್ಕಂತೆ ಹೊಸ ಪರಿಭಾಷಿಕೆಗಳನ್ನು ಕಾಲಾನುಕ್ರಮದಲ್ಲಿ ಕಂಡುಕೊಳ್ಳುವ ಅನಿವಾರ್ಯತೆ­ಯಂತೂ ಇದ್ದೇ ಇದೆ.

ಬದಲಾವಣೆ ಜಗದ ನಿಯಮ. ಶಿಕ್ಷಣದಲ್ಲಿ ಹೊಸತನ ಬರುವುದ­ರಿಂದ ಹೊಸ ವಿಚಾರಗಳನ್ನು ಕಲಿಸುವ ಮತ್ತು ಕಲಿಯುವ ಇಬ್ಬರೂ ಆಸಕ್ತಿಯಿಂದ ನೋಡುತ್ತಾರೆನ್ನುವ ಭರವಸೆ ಇದೆ. ಉಪನ್ಯಾಸಕರ ಕೊರತೆ ಸದ್ಯಕ್ಕೆ ಇರಬಹುದು. ಇದು ನೀಗಿದರೆ, ಎನ್‌ಇಪಿ ಶೇ.100 ಯಶಸ್ವಿ ಅನುಷ್ಠಾನಕ್ಕೆ ಸಹಾಯಕವಾಗುತ್ತದೆ.ಸದ್ಯಕ್ಕೆ ಹಾಗೇನು ಅನ್ನಿಸುವುದಿಲ್ಲ. ಆದರೆ ಎನ್‌ಇಪಿ ಅನುಷ್ಠಾನಗೊಂಡ ಅನಂತರ ಅದರಲ್ಲಿನ ಸಾಧಕ-ಬಾಧಕಗಳು ನೇರವಾಗಿ ಎದುರಾಗುತ್ತವೆ. ಈಗಲೇ ಡ್ರಾಪ್‌ಔಟ್‌ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎನ್‌ಇಪಿ ಉತ್ತಮ ಭವಿಷ್ಯಕ್ಕೆ ದಾರಿ­ಯಾ­ಗಲಿದೆ.
-ಡಾ| ಎಂ.ಬಿ.ಚೆಟ್ಟಿ
ಕುಲಪತಿಗಳು,ಕೃಷಿ ವಿವಿ ಧಾರವಾಡ

ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚಿದೆ
ಅನುಷ್ಠಾನಕ್ಕೆ ಬೇಕಾದ ಪಠ್ಯ­ಕ್ರಮ ಸಿದ್ಧವಿದೆ. ವಿದ್ಯಾ­ವಿಷಯಕ ಪರಿಷತ್‌ ಸಭೆ, ಪ್ರಾಂಶು­ಪಾಲರ ಸಭೆ ಹಮ್ಮಿಕೊಂಡಿದ್ದೇವೆ. ಕಾಲೇಜು ಹಂತದಲ್ಲಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಸೂಚನೆ ನೀಡಿದ್ದೇವೆ. ತರಗತಿ ಆರಂ­ಭಕ್ಕೂ ಪೂರ್ವದಲ್ಲಿ ಕಾಲೇಜುಗಳಿಗೆ ಸೂಚನೆ ನೀಡಲಿದ್ದೇವೆ.

ಎನ್‌ಇಪಿ ಅನುಷ್ಠಾನದಲ್ಲಿ ಉಪನ್ಯಾಸಕರಿಗೆ ಸ್ವಲ್ಪ ಕಷ್ಟ ವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚಿದೆ. ಗೊಂದಲ ನಿವಾರಣೆಗೆ ಕಾಲೇಜುಗಳ ಹಂತದಲ್ಲಿ ಬೇಕಾದ ಎಲ್ಲ ಕ್ರಮ ಆಗಿದೆ. ಸಾರ್ವಜ ನಿಕವಾಗಿ ಚರ್ಚೆ ನಡೆದಿರುವುದರಿಂದ ಬಹುತೇಕ ಸಂಶಯಗಳು ಈಗಾಗಲೇ ಬಗೆಹರಿದಿದೆ.
ಮುಕ್ತ ಆಯ್ಕೆ, ಕೌಶಲ, ಮುಖ್ಯ ವಿಷಯ, ಮೈನರ್‌ ವಿಷಯಗಳು, ಬಹುಶಿಸ್ತೀಯ ಕೋರ್ಸ್‌ ಇತ್ಯಾದಿ ಪ್ರಥಮ ವರ್ಷಕ್ಕೆ ಒಂದೇ ರೀತಿ ಇರುತ್ತದೆ. ಮೇಜರ್‌ ಮತ್ತು ಮೈನರ್‌ ಎರಡೂ ಓದಲು ಅವಕಾಶ ಇರಲಿದೆ. ಆರಂಭದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗ­ದಂತೆ ಕ್ರಮ ತೆಗೆದು ಕೊಂಡಿದ್ದೇವೆ. ಮೂರು ವರ್ಷ ಪದವಿ ಮುಗಿಸುವ ವ್ಯವಸ್ಥೆ ಹಾಗೆ ಇರಲಿದೆ. ಈ ಮಧ್ಯೆ ಒಂದೇ ವರ್ಷದಲ್ಲಿ ಎಕ್ಸಿಟ್‌ಗೂ ಅವಕಾಶವಿದೆ. ಪದವಿ ಅನಂತರವೂ ಆನರ್ಸ್‌ ಓದಲು ಅವಕಾಶವಿದೆ.

ಉಪನ್ಯಾಸಕರ ಕೊರತೆ ಇದೆ. ಎನ್‌ಇಪಿ ಅನುಷ್ಠಾನಕ್ಕೆ ಉಪನ್ಯಾಸಕರು ಹೆಚ್ಚು ಬೇಕಾಗು­ತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಆಯ್ಕೆ ನೀಡಲು ಹೆಚ್ಚೆಚ್ಚು ಉಪನ್ಯಾಸಕರು ಬೇಕಾಗುತ್ತದೆ. ಎಲ್ಲವನ್ನೂ ಅತಿಥಿ ಉಪನ್ಯಾಸಕರಿಂದ ಮಾಡಲು ಸಾಧ್ಯವಿಲ್ಲ.

ಡ್ರಾಪ್‌ಔಟ್‌ ಕಡಿಮೆ ಆಗಲಿದೆ. ಒಂದು ವರ್ಷದ ಪದವಿ ಓದಿ ಕೆಲಸ ಸಿಕ್ಕರೆ, ಅಭ್ಯರ್ಥಿಗೆ ಅನುಕೂಲ ಹೆಚ್ಚಿದೆ. ಉದ್ಯೋಗ ಸಿಗದಿದ್ದಾಗ ಪುನಃ ಬಂದು ಪದವಿ ಮುಂದು ವರಿಸಲು ಅವಕಾಶವಿದೆ. ಓದಲು ಮತ್ತು ಉದ್ಯೋಗ ಎರಡಕ್ಕೂ ಮುಕ್ತ ಅವಕಾಶವಿದೆ.
ಆನ್‌ಲೈನ್‌ ಮೂಲಕ ಓದಲು ಅವಕಾಶ ಮಾಡಿಕೊಡಬೇಕು.
-ಪ್ರೊ.ಕೆ.ಆರ್‌.ವೇಣುಗೋಪಾಲ್‌,
ಕುಲಪತಿ, ಬೆಂಗಳೂರು ವಿವಿ

ಪಂಚ ಪ್ರಶ್ನೆಗಳು
1. ಎನ್‌ಇಪಿ ಅನುಷ್ಠಾನಕ್ಕೆ ಸಿದ್ಧತೆ ಹೇಗಿದೆ?
2.ಎನ್‌ಇಪಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಉಪನ್ಯಾಸಕರಲ್ಲಿಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು ಯಾವುವು?

3. ಎನ್‌ಇಪಿ ಅನುಷ್ಠಾನದ ಅನಂತರ ಪಠ್ಯಕ್ರಮದಲ್ಲಿ ಆಗಬಹುದಾದ ಬದಲಾವಣೆ ಏನು?

4.ಎನ್‌ಇಪಿ ಅನುಷ್ಠಾನದ ಅನಂತರ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೇಗೆ ಸುಧಾರಿಸ ಲಿದೆ ಮತ್ತು ಉಪನ್ಯಾಸಕರ ಕೊರತೆ ಅನುಷ್ಠಾನಕ್ಕೆ ಅಡ್ಡಿಯಾಗಲಿದೆಯೇ?

5.ಎನ್‌ಇಪಿಯಿಂದ ಮೂರು ವರ್ಷವೂ ಎಕ್ಸಿಟ್‌ ಇರುವುದರಿಂದ ಉನ್ನತ ಶಿಕ್ಷಣದಲ್ಲಿ ಡ್ರಾಪ್‌ಔಟ್‌ ಹೆಚ್ಚಾಗುವ ಆತಂಕ ಇದೆಯೇ?

ಟಾಪ್ ನ್ಯೂಸ್

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.