Web Exclusive: ಮೂರು ಬಣ್ಣಗಳಲ್ಲಿ ಮೂರು ಶ್ರೇಣಿಗಳಲ್ಲಿ ಪುನರ್ಪುಳಿ ರಸಂ…..

ಇದರ ಎಲೆ, ಬೀಜ ಮತ್ತು ಸಿಪ್ಪೆಯಲ್ಲೂ ಔಷಧೀಯ  ಗುಣಗಳಿವೆ.

ಶ್ರೀರಾಮ್ ನಾಯಕ್, Mar 3, 2023, 5:42 PM IST

ಮೂರು ಬಣ್ಣಗಳಲ್ಲಿ ಮೂರು ಶ್ರೇಣಿಗಳಲ್ಲಿ ಪುನರ್ಪುಳಿ ರಸಂ…..

ಪುನರ್ಪುಳಿ ಸಾಮಾನ್ಯವಾಗಿ ರುಚಿಯಲ್ಲಿ ಹುಳಿ ಮತ್ತು ಸ್ವಲ್ಪ ಸಿಹಿಯಾಗಿರುತ್ತದೆ. ಇದರಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ಇದನ್ನು ಮುರುಗಲು, ಪುನರ್ಪುಳಿ, ಕೋಕಂ ಸೇರಿದಂತೆ ಇನ್ನಿತರ ಹೆಸರುಗಳಿಂದಲೂ ಕರೆಯುತ್ತಾರೆ. ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಹೆಚ್ಚು ಕಾಣಸಿಗುತ್ತದೆ ಈ ಹಣ್ಣು. ಇದರ ಎಲೆ, ಬೀಜ ಮತ್ತು ಸಿಪ್ಪೆಯಲ್ಲೂ ಔಷಧೀಯ  ಗುಣಗಳಿವೆ.

ಪುನರ್ಪುಳಿಯು ಅಧಿಕ ಪೋಷಕಾಂಶಗಳನ್ನು ಒಳಗೊಂಡ ಹಣ್ಣಾಗಿದೆ. ಇದರಲ್ಲಿ ವಿಟಮಿನ್‌ ಬಿ, ವಿಟಮಿನ್‌ ಬಿ3, ಸಿ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಮುಂತಾದ ಖನಿಜಾಂಶಗಳನ್ನು ಹೊಂದಿದೆ.

ಆಯುರ್ವೇದಲ್ಲಿ ಪುನರ್ಪುಳಿಯನ್ನು ಪಿತ್ತಹರ ಎಂದು ಹೇಳುತ್ತಾರೆ. ಅಂದರೆ ಪಿತ್ತದ ಸಮಸ್ಯೆ ಇದ್ದವರು ಸೇವಿಸಿದರೆ ಆ ಸಂಕಟದಿಂದ ಪಾರಾಗಬಹುದು.

ಪುನರ್ಪುಳಿಯಿಂದ ಮಾಡುವ ಜ್ಯೂಸ್‌ ಎಷ್ಟು ರುಚಿಕರವಾಗಿರುತ್ತದೆ. ಅಷ್ಟೇ ರುಚಿ ಪುನರ್ಪುಳಿಯ ಸಿಪ್ಪೆಯನ್ನು ಒಣಗಿಸಿ ಮಾಡುವಂತಹ ಸಾರುಕೂಡ ಅಷ್ಟೇ ರುಚಿಕರ.

ಹಾಗಾದರೆ ಪುನರ್ಪುಳಿಯ 3 ಬಗೆಯ ಸಾರನ್ನು ಹೇಗೆ ತಯಾರಿಸುವುದು ನೋಡೋಣ ಬನ್ನಿ…..

ಪುನರ್ಪುಳಿ ಸಿಪ್ಪೆಯ ರಸಂ-1 ಬೇಕಾಗುವ ಸಾಮಗ್ರಿಗಳು
ಪುನರ್ಪುಳಿ ಸಿಪ್ಪೆ-10 ರಿಂದ 15, ಹಸಿಮೆಣಸು-3, ಬೆಲ್ಲ-1ಚಮಚ,ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ತೆಂಗಿನ ಎಣ್ಣೆ-2ಚಮಚ, ಸಾಸಿವೆ, ಜೀರಿಗೆ, ಒಣಮೆಣಸು 2, ಕರಿಬೇವು-ಸ್ವಲ್ಪ.

ತಯಾರಿಸುವ ವಿಧಾನ
ಪುನರ್ಪುಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಒಂದು ಕಪ್‌ ನೀರನ್ನು ಹಾಕಿ ಸುಮಾರು 1ಗಂಟೆಗಳ ಕಾಲ ನೆನೆ ಹಾಕಿ ನಂತರ ಸಿಪ್ಪೆಯನ್ನು ಚೆನ್ನಾಗಿ ಕಿವುಚಿ ರಸ ತೆಗೆದು ಇಟ್ಟುಕೊಳ್ಳಿ. ನಂತರ ಪುನರ್ಪುಳಿಯ ರಸವನ್ನು ಕುದಿಯಲು ಇಡಿ ಅದಕ್ಕೆ ಒಂದು ಕಪ್‌ ನೀರು ಹಾಕಿ ಹಸಿಮೆಣಸು, ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸುಮಾರು 10 ನಿಮಿಷಗಳ ಕಾಲ ಕುದಿಯಲು ಬಿಡಿ. ತದನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಒಣಮೆಣಸು ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬಿಸಿ-ಬಿಸಿಯಾದ ಪುನರ್ಪುಳಿ ರಸಂ ಸವಿಯಲು ಸಿದ್ಧ.

ಪುನರ್ಪುಳಿ ಸಿಪ್ಪೆಯ ರಸಂ-2 ಬೇಕಾಗುವ ಸಾಮಗ್ರಿಗಳು
ಪುನರ್ಪುಳಿ ಸಿಪ್ಪೆ-10 ರಿಂದ 15, ಹಸಿಮೆಣಸು-2, ಬೆಲ್ಲ-1ಚಮಚ,ಶುಂಠಿ-ಸ್ವಲ್ಪ, ತೆಂಗಿನ ಹಾಲು-ಅರ್ಧಕಪ್‌,ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ತೆಂಗಿನ ಎಣ್ಣೆ-3ಚಮಚ,ಜೀರಿಗೆ-ಅರ್ಧ ಚಮಚ, ಬೆಳ್ಳುಳ್ಳಿ -3 ಎಸಳು, ಒಣಮೆಣಸು 2, ಕರಿಬೇವು-ಸ್ವಲ್ಪ.

ತಯಾರಿಸುವ ವಿಧಾನ
ಪುನರ್ಪುಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಒಂದು ಕಪ್‌ ನೀರನ್ನು ಹಾಕಿ ಸುಮಾರು 1ಗಂಟೆಗಳ ಕಾಲ ನೆನೆ ಹಾಕಿ ನಂತರ ಸಿಪ್ಪೆಯನ್ನು ಚೆನ್ನಾಗಿ ಕಿವುಚಿ ರಸ ತೆಗೆದು ಇಟ್ಟುಕೊಳ್ಳಿ. ನಂತರ ಪುನರ್ಪುಳಿಯ ರಸವನ್ನು ಕುದಿಯಲು ಇಡಿ ಅದಕ್ಕೆ ಒಂದು ಕಪ್‌ ನೀರು ಹಾಕಿ ಹಸಿಮೆಣಸು, ಬೆಲ್ಲ ,ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3 ರಿಂದ 5 ನಿಮಿಷಗಳ ಚೆನ್ನಾಗಿ ಕುದಿಸಿರಿ.ನಂತರ ಅದಕ್ಕೆ ತೆಂಗಿನ ಹಾಲು ಸೇರಿಸಿ ಸ್ವಲ್ಪ ಹೊತ್ತು ಕುದಿಸಿರಿ.ತದನಂತರ ಎಣ್ಣೆಯಲ್ಲಿ ಜೀರಿಗೆ,ಬೆಳ್ಳುಳ್ಳಿ,ಕರಿಬೇವು ಮತ್ತು ಒಣಮೆಣಸು ಹಾಕಿ ಒಗ್ಗರಣೆ ಕೊಟ್ಟರೆ ರುಚಿಕರವಾದ ಪುನರ್ಪುಳಿ ರಸಂ ರೆಡಿ.

ಪುನರ್ಪುಳಿ ಸಿಪ್ಪೆಯ ರಸಂ-3 ಬೇಕಾಗುವ ಸಾಮಗ್ರಿಗಳು
ಪುನರ್ಪುಳಿ ಸಿಪ್ಪೆ-10 ರಿಂದ 15,ಬೆಲ್ಲ-1ಚಮಚ,ಕೊತ್ತಂಬರಿ-2ಚಮಚ,ತೆಂಗಿನ ತುರಿ-4ಚಮಚ,ಹಸಿಮೆಣಸು-2, ಜೀರಿಗೆ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಹಿಂದಿನ ಕ್ರಮದಂತೆ ನೆನೆಸಿಟ್ಟ ಪುನರ್ಪುಳಿಯ ರಸವನ್ನು ಕುದಿಯಲು ಇಡಿ ಅದಕ್ಕೆ ಒಂದು ಕಪ್‌ ನೀರು ಸೇರಿಸಿ ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸುಮಾರು 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿರಿ.ನಂತರ ಮಿಕ್ಸ್‌ ಜಾರಿಗೆ ತೆಂಗಿನ ತುರಿ, ಕೊತ್ತಂಬರಿ, ಹಸಿಮೆಣಸು, ಜೀರಿಗೆ ಹಾಕಿ ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿರಿ. ತದನಂತರ ರುಬ್ಬಿದ ಮಸಾಲೆಯನ್ನು ಸಾರಿಗೆ ಸೇರಿಸಿ ಚೆನ್ನಾಗಿ ಕಲಸಿ 3ರಿಂದ 5 ನಿಮಿಷಗಳ ಕಾಲ ಕುದಿಯಲು ಬಿಡಿ.ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಒಣಮೆಣಸು ಮತ್ತು ಕರಿಬೇವಿನ ಎಸಳು ಹಾಕಿ ಒಗ್ಗರಣೆ ಕೊಡಿ.ಸ್ವಾದಿಷ್ಟಕರವಾದ ಪುನರ್ಪುಳಿ ಸಾರು ಸವಿಯಿರಿ.

-ಶ್ರೀರಾಮ್‌ ಜಿ.ನಾಯಕ್‌

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.