ಧರ್ಮಸ್ಥಳ ದೀಪೋತ್ಸವದಲ್ಲಿ ಮೆರುಗು ಹೆಚ್ಚಿಸಿದ್ಧ ‘ಲತಾ ‘ ಮತ್ತು ‘ಗಿರೀಶ ‘…
ಒಟ್ಟಿನಲ್ಲಿ ಮಾವುತನ ಮಾತನ್ನು ಚೆನ್ನಾಗಿ ಕೇಳುತ್ತವೆ. ಹಾಗೂ ಉತ್ಸವಕ್ಕೆ ಮೆರುಗನ್ನು ನೀಡುತ್ತದೆ.
Team Udayavani, Dec 6, 2021, 1:52 PM IST
ನವೆಂಬರ್ 28 ರಿಂದ ಡಿಸೆಂಬರ್ 2 ರ ವರೆಗೆ ವಿಜೃಂಭಣೆಯಿಂದ ಸಂಪನ್ನಗೊಂಡ ಈ ಬಾರಿಯ ಧರ್ಮಸ್ಥಳದ ಲಕ್ಷದೀಪೋತ್ಸವ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು. ಮೊದಲಿನ ದಿನ ಸಹಸ್ರಾರು ಭಕ್ತರ ಪಾದಯಾತ್ರೆ ಜೊತೆಗೆ ಪ್ರತಿ ನಿತ್ಯವು ನಡೆಯುವ ಉತ್ಸವವು ನೆರೆದಿದ್ದ ಭಕ್ತರನ್ನು ರೋಮಾಂಚನಗೊಳಿಸಿತು. 5 ದಿನವೂ ವಿಜೃಂಭಣೆಯಿಂದ ನಡೆದ ಉತ್ಸವದಲ್ಲಿ ಭಕ್ತರು ಯಾವ ರೀತಿಯಾಗಿ ಭಾಗಿಗೊಂಡಿದ್ದರೋ ಅದೇ ರೀತಿ ಈ ಉತ್ಸವಕ್ಕೆ ಮೆರುಗು ನೀಡಿದ್ದು ಆನೆ ಮತ್ತು ಬಸವ.
ಉತ್ಸವದಲ್ಲಿ ಮುಂದಾಳತ್ವ ವಹಿಸಿದ್ದ ಆನೆ ಮತ್ತು ಬಸವ ಎಲ್ಲರ ಕಣ್ಮನ ಸೆಳೆಯಿತು. ಜೊತೆಗೆ ಉತ್ಸವದ ಸಮಯದಲ್ಲಿ ಅವುಗಳ ಪ್ರತಿಕ್ರಿಯೆಯನ್ನು ನೋಡಿ ಪ್ರತಿಯೊಬ್ಬರು ಮಂತ್ರಮುಗ್ಧರಾಗಿದ್ದರು.ಕೇವಲ ಉತ್ಸವಕ್ಕೆ ಆನೆ ಮತ್ತು ಬಸವ ಬಂದಿರುವುದನ್ನು ಜನರು ಕಾಣಬಹುದು. ಆದರೆ ಅದರ ಹಿಂದೆ ಪ್ರಾಣಿಗಳನ್ನು ಯಾವ ರೀತಿಯಾಗಿ ತಯಾರು ಮಾಡುತ್ತಾರೆ ಹಾಗೂ ಉತ್ಸವಕ್ಕೆ ಬರುವ ಮೊದಲು ಹೇಗೆ ಸಿದ್ಧಗೊಳಿಸುತ್ತಾರೆ ಎಂಬುದನ್ನು ತಿಳಿದಿರುವುದಿಲ್ಲ.ಇದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದಾಗ ನನಗೆ ಹಲವಾರು ಸಂಗತಿಗಳು ನನಗೆ ದೊರೆಯಿತು, ಜೊತೆಗೆ ಆಶ್ಚರ್ಯಚಕಿತಳಾದೆ.
ಆನೆ:-ಈ ಆನೆಯ ಹೆಸರು ‘ ಲತಾ ‘. ಉತ್ಸವದ ಮುಂಭಾಗದಲ್ಲಿ ನಡೆಯುವ ಲತಾ ಅತೀ ಉತ್ಸಾಹದಿಂದ ಭಾಗಿಯಾಗಿರುತ್ತದೆ. ಮಾವುತನ ಪ್ರತಿಯೊಂದು ಮಾತನ್ನು ಕೇಳುತ್ತಾ ಉತ್ಸವದ ಸಮಯದಲ್ಲಿ ಸೊಂಡಿಲನ್ನು ಎತ್ತಿ ನಮಸ್ಕರಿಸುತ್ತದೆ. ಸುತ್ತಲೂ ನೆರೆದಿರುವ ಭಕ್ತಾದಿಗಳಿಂದ ಏನನ್ನೂ ಅಪೇಕ್ಷಿಸದೆ ಪ್ರತಿಯೋರ್ವರಿಗೂ ಆಶೀರ್ವದಿಸುತ್ತದೆ. ಇದು ಧರ್ಮಸ್ಥಳದಲ್ಲಿ ಹುಟ್ಟಿ ಬೆಳೆದಿರುವ ಆನೆ. ಹಿರಿಯ ವಯಸ್ಕಳಾದರೂ ಕೂಡ ಲತಾ ದೇವಸ್ಥಾನದಲ್ಲಿ ನಡೆಯುವ ಪ್ರತಿ ಉತ್ಸವಕ್ಕೂ ಇವಳ ಆಗಮನ ಇದ್ದೇ ಇರುತ್ತದೆ. ಇದನ್ನು ನೋಡಿಕೊಳ್ಳುವವರು ಮಾವುತರಾದ ಮಂಜುನಾಥ ಮತ್ತು ಅವರ ಮಗ ಕೃಷ್ಣ. ಲತಾ ಕೇವಲ ಧರ್ಮಸ್ಥಳ ಮಾತ್ರವಲ್ಲದೆ ಹಲವಾರು ಪ್ರದೇಶಗಳಲ್ಲಿ ನಡೆಯುವ ಉತ್ಸವಗಳಲ್ಲಿ ಕೂಡ ಭಾಗಿಯಾಗಿದ್ದಾಳೆ.
ಉತ್ಸವಕ್ಕೆ ಬರುವ ಮೊದಲು ಆಕೆಗೆ ತೋಡಿಸುವ ಬಟ್ಟೆ, ಗಂಟೆಯಿಂದಲೇ ಆಕೆಗೆ ಗೊತ್ತಾಗುತ್ತದೆ ನಾನು ಉತ್ಸವಕ್ಕೆ ಹೊರಡುತ್ತಿದ್ದೇನೆ ಎಂದು. ಸಾವಿರಾರು ಜನರು ನೆರೆದಿದ್ದರು ಕೂಡ ಭಯ ಪಡುವುದಿಲ್ಲ. ಈಕೆಯೊಂದಿಗೆ ಇರುವುದು ಎರಡು ಮುದ್ದಾದ ಆನೆಗಳು. ಮರಿ ಆನೆ ಶಿವಾನಿ ಮತ್ತು ಆಕೆಯ ತಾಯಿ. ಶಿವಾನಿ ಹುಟ್ಟಿದ ನಂತರ ಆಕೆಯ ತಾಯಿ ಉತ್ಸವಕ್ಕೆ ಹೋಗುತ್ತಿಲ್ಲ. ಲತಾ ಹಿರಿಯವಳು ಈಕೆಯನ್ನು ನೋಡಿ ಉಳಿದ ಎರಡು ಆನೆಗಳು ಇವಳ ಜೀವನ ಶೈಲಿಯನ್ನು ಅವು ಕಲಿಯುತ್ತವೆ. ಒಟ್ಟಿನಲ್ಲಿ ಮಾವುತನ ಮಾತನ್ನು ಚೆನ್ನಾಗಿ ಕೇಳುತ್ತವೆ. ಹಾಗೂ ಉತ್ಸವಕ್ಕೆ ಮೆರುಗನ್ನು ನೀಡುತ್ತದೆ.
ಬಸವ: ಬಸವನ ಹೆಸರು ‘ ಗಿರೀಶ ‘. ಇದು ಧರ್ಮಸ್ಥಳದ ಗೋಶಾಲೆಯಲ್ಲಿರುವ ಬಸವ. ಪ್ರತಿಯೊಂದು ಉತ್ಸವಕ್ಕೂ ಇವನೇ ಮುಖ್ಯ ಪಾತ್ರವನ್ನುವಹಿಸುತ್ತಾನೆ. ಅತೀ ಸಾಧು ಈ ಬಸವ. ಗಿರೀಶನನ್ನು ವೀಕ್ಷಣೆ ಮಾಡಲು ಬಂದವರೆಲ್ಲರನ್ನೂ ಕೂಡ ಪ್ರೀತಿಯಿಂದ ಕಾಣುತ್ತಾನೆ. ಜೊತೆಗೆ ಖಾವಂದರ ಮನೆತನದವರು ಯಾರು ಕೂಡ ಕರೆಯನ್ನು ಮಾಡಿದಾಗ ಮೊಬೈಲಿಂದ ಮಾತನಾಡುವಾಗಲೂ ಗಿರೀಶ ‘ ಅಂಬಾ ಅಂಬಾ ‘ ಎಂದು ಸಂಬೋಧಿಸುತ್ತಾನೆ. ಜೊತೆಗೆ ಇದನ್ನು ನೋಡಿಕೊಳ್ಳುವವರು ಕೂಡ ಇದಕ್ಕೆ ಗುಟ್ಟನ್ನು ಹೇಳುತ್ತಾರೆ ಅದನ್ನು ಕೇಳಿದಾಗ ಇದು ಹೌದು ಹೌದು ಎಂದು ತಲೆ ಆಡಿಸುತ್ತದೆ. ಉತ್ಸವಕ್ಕೆ ಹೋಗುವ ಸಮಯದಲ್ಲಿ ಇದಕ್ಕೆ ತೊಡಿಸುವ ಬಟ್ಟೆಯಿಂದಲೇ ತಿಳಿಯುತ್ತದೆ ತಾನು ಸಂಭ್ರಮಕ್ಕೆ ತೆರಳುತ್ತಿದ್ದೇನೆ ಎಂದು. ಆನೆ ‘ ಲತಾ ‘ ಹೋಗುತ್ತಿದ್ದರೆ ಅದರ ಪಕ್ಕದಲ್ಲೇ ಗಿರೀಶ ನು ಕೂಡ ದೇವಸ್ಥಾನದ ಆವರಣಕ್ಕೆ ಸಂಭ್ರಮದಿಂದ ಬರುತ್ತಾನೆ. ಭಕ್ತಾದಿಗಳು ಫೋಟೋ ಬಂದು ತೆಗೆಯುವ ಸಮಯದಲ್ಲಿ ಕೂಡ ಯಾರಿಗೂ ಹಾನಿಯನ್ನು ಮಾಡದೆ ಅತಿ ಸೌಮ್ಯತೆಯಿಂದ ನಿಂತಿರುತ್ತದೆ.
ಒಟ್ಟಿನಲ್ಲಿ’ ಲತಾ ‘ಮತ್ತು ‘ ಗಿರೀಶ ‘ಉತ್ಸವದ ಮೆರಗು ಹೆಚ್ಚಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ.
ಹರ್ಷಿತಾ ಹೆಬ್ಬಾರ್
ಅಂತಿಮ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿನಿ.
ಎಸ್ ಡಿ ಎಂ ಕಾಲೇಜು ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.