ಇಲ್ಲಿ ಎಲ್ಲದಕ್ಕೂ “ಅರ್ಥ” ನಮ್ಮ ಇರುವಿಕೆಯನ್ನು ಆಧರಿಸಿರುತ್ತದೆ..!

ಅರ್ಥ ಮಾಡಿಕೊಳ್ಳಬೇಕು ಎಂಬ ಮಾತಿನ ಒಳಗೆಯೇ “ಹೇಗೆ ಮತ್ತು ಯಾವುದನ್ನು” ಅವಿತಿದೆ

ಶ್ರೀರಾಜ್ ವಕ್ವಾಡಿ, Jun 18, 2021, 9:00 AM IST

Life is a characteristic that distinguishes physical entities that have biological processes, such as signaling and self-sustaining processes, from those that do not, either because such functions have ceased (they have died), or because they never had such functions and are classified as inanimate.

ತೋಟದಲ್ಲಿ ಬೆಳೆಯುವ ಹೂವೊಂದಕ್ಕೆ ಪರಿಮಳವಿದ್ದಂತೆ, ಮಾನವರಿಗೆ ವ್ಯಕ್ತಿತ್ವ ಅಷ್ಟೇ ಮುಖ್ಯ. ಪ್ರತಿಯೊಬ್ಬರ ಜೀವನದ ಒಳಿತು ಕೆಡಕುಗಳಿಗೆ ಅವರೇ ಶಿಲ್ಪಿಗಳಾಗಿರುತ್ತಾರೆ. ಈ ಆಧಾರದ ಮೇಲೆ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಮೊದಲು ನಮಗೆ ನಮ್ಮ ವ್ಯಕ್ತಿತ್ವದ ಬಗ್ಗೆ ಸ್ಪಷ್ಟನೆ ಇರುವುದು ನಮ್ಮ ಬೆಳವಣಿಗೆಗೆ ನಾಂದಿ ಹಾಡುತ್ತದೆ.

ನಮ್ಮ ಬೆಳವಣಿಗೆ ಹೇಗೆ..?

ಇನ್ನೊಬ್ಬರಿಗೆ ಕಿವಿಯಾದಾಗ ಮಾತ್ರ ಒಬ್ಬಾತ ಬೆಳೆಯುವುದಕ್ಕೆ ಅಗಾಧವಾದ ಅವಕಾಶ ಎದುರಿಗೆ ಬಂದೊದಗುತ್ತದೆ. ಇನ್ನೊಬ್ಬರ ಮಾತನ್ನು ಕೇಳುವ ತಾಳ್ಮೆ ಹಾಗೂ ವಿಧೇಯತೆ ಬಹಳ ಮುಖ್ಯ ಎನ್ನುವುದು ಈ ಮಾತಿನ ತಾತ್ಪರ್ಯ.

ಆದರ್ಶ, ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ, ಸನ್ನಿವೇಶಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿ ಪ್ರಿಯತೆ, ಪರೋಪಕಾರದ ಬುದ್ಧಿ, ಪ್ರಾಮಾಣಿಕತೆಗಳು ವ್ಯಕ್ತಿತ್ವ ವಿಕಸನದ ಶಕ್ತಿ ಬಿಂದುಗಳು.

ಇಬ್ಬರ ನಡುವೆ ಇರುವ ಅಭಿಪ್ರಾಯಗಳನ್ನು ಹಾಗೂ ಅನಿಸಿಕೆಗಳನ್ನುಏಕೀಕರಣಗೊಳಿಸುವುದಕ್ಕೆ ಸಾಧ್ಯವಿಲ್ಲ. ಕಾಲ, ಸ್ಥಿತಿ, ಸಂಬಂಧಗಳು ಇಲ್ಲಿ ಬಹಳ ಮುಖ್ಯವಾಗುತ್ತದೆ. ಬೆಳೆಯುವ ಗುರುತು ನಮ್ಮನ್ನು ನಾವು ಕಾಲಕ್ಕೆ, ಸ್ಥಿತಿಗೆ ಹಾಗೂ ಸಂಬಂಕ್ಕೆ ಹೊಂದಿಸಿಕೊಂಡಾಗ ಮಾತ್ರ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಬೆಳವಣಿಗೆಯಾಗುವುದಕ್ಕೆ ಸಾಧ್ಯವಾಗುತ್ತದೆ.

ಸಂಬಂಧಗಳ ನಡುವೆ ಇರುವ ಸಲುಗೆ ಅದು ಸಂಪೂರ್ಣ ಸ್ವಾತಂತ್ರ್ಯವಲ್ಲ. ಅದು ನಂಬಿಕೆ ಹಾಗೂ ವಿಶ್ವಾಸಗಳ ಮೇಲೆ ಒಂದಿಂಚು ಎತ್ತರದಲ್ಲಿ ಇರುವ ಒಳ್ಳೆಯ ಅಭಿಪ್ರಾಯವಷ್ಟೇ. ಸಲುಗೆಯನ್ನು ದುರುಪಯೋಗಪಡಿಸಿಕೊಂಡರೇ, ಆ ಸಂಬಂಧವನ್ನೇ ಕಳೆದುಕೊಳ್ಳುವ ಸಾಧ್ಯತೆಯೂ ಬಹಳವಾಗಿ ಇದೆ. ಹಾಗಾಗಿ ನಾವು ನಮ್ಮನ್ನು ನಾವು ಅಳೆದುಕೊಂಡು, ಇನ್ನೊಬ್ಬರನ್ನೂ ಕೂಡ ಅಳೆದುಕೊಂಡು ಬದುಕುವುದು ನಮ್ಮ ಜೀವನದಲ್ಲಿ ಬಹಳ ಮಹತ್ತರದಾಗಿರುತ್ತದೆ ಎನ್ನುವುದನ್ನು ಬೆಳವಣಿಗೆಯನ್ನು ಬಯಸುವ ಪ್ರತಿಯೊಬ್ಬನು ಪಾಲಿಸಬೇಕಾಗುತ್ತದೆ. ಅದು ಒಬ್ಬಾತನ ಬದುಕಿನ ಸಂಪೂರ್ಣ ವಿಕಾಸಕ್ಕೆ ಮೆಟ್ಟಿಲಾಗುತ್ತದೆ.

ಬೆಳವಣಿಗೆಗೆ ಮಿತಿಯಿಲ್ಲ 

ಒಳ್ಳೆಯದ್ದನ್ನು ಯೋಚಿಸುವುದಕ್ಕೆ ಗಡಿಯಿಲ್ಲ. ಕೆಟ್ಟದಕ್ಕೆ ಗಡಿ ಇದೆ. ಮಿತಿ ಇದೆ. ಹಾಗೆಯೇ, ನಮ್ಮ ಬದುಕಿನಲ್ಲಿ ಬೆಳವಣಿಗೆಗೆ ಎಲ್ಲೆ ಇಲ್ಲ. ನಾವು ಎಷ್ಟು ಬೇಕಾದರೂ ಬೆಳೆಯುವುದಕ್ಕೆ ಸಾಧ್ಯವಿದೆ. ಆದರೇ, ಮೊದಲು ನಾವು ಬದುಕಿಗೆ, ಭವಿಷ್ಯಕ್ಕೆ ಶರಣಾಗಬೇಕು ಅಷ್ಟೇ.

ಬದುಕನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಮಾತಿನ ಒಳಗೆಯೇ “ಹೇಗೆ ಮತ್ತು ಯಾವುದನ್ನು” ಎನ್ನುವುದು ಅವಿತಿರುತ್ತದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

“ಹೇಗೆ ಮತ್ತು ಯಾವುದನ್ನು”

ನಮ್ಮನ್ನು ನಾವು ಬಹಳವಾಗಿ ನಂಬುವುದೇ ಇದಕ್ಕೆ ಉತ್ತರ ನೀಡುತ್ತದೆ. ಎಲ್ಲವನ್ನು ಸಾಧ್ಯವಾಗಿಸುತ್ತದೆ. ಯಾವ ನಿರೀಕ್ಷೆಯಿಲ್ಲದೇ ನಮ್ಮೊಳಗೆ ನಾವು ಸಂವಾದಕ್ಕೆ ತೊಡಗಿಕೊಂಡಾಗ ನಮ್ಮಲ್ಲಿ ಹುಟ್ಟುವ…. ಹೇಗೆ..? ಯಾಕೆ..? ಯಾರಿಗೆ..? ಎಲ್ಲಿಂದ..? ಯಾವುದಕ್ಕೆ..? ಹೀಗೆ ಇತ್ಯಾದಿ ಪ್ರಶ್ನೆಗಳಿಗೆ ನಾವು ಉತ್ತರ ಹುಡುಕಿಕೊಳ್ಳುವ ಪ್ರಯತ್ನ ಮಾಡುವುದಕ್ಕೆ ಪ್ರಯತ್ನಿಸಿದಾಗ ಸಿಗುವ ಒಳ್ಳೆಯ ಫಲಿತಾಂಶವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದಕ್ಕೆ  ಸ್ವಲ್ಪ ಮಟ್ಟಿಗಾದರೂ ಪ್ರಯತ್ನ ಪಟ್ಟಾಗ ಬದುಕು ನಾವು ಅಂದುಕೊಂಡ ಹಾಗೆ ಇರುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ಅರ್ಥ ಮಾಡಿಕೊಳ್ಳುವುದು “ಹೇಗೆ ಮತ್ತು ಯಾವುದನ್ನು” ಎನ್ನುವುದಕ್ಕೆ ನಾವು ನಮ್ಮನ್ನೇ ಪ್ರಶ್ನೆ ಮಾಡಿಕೊಂಡಾಗ ಸಿಗುವ ಉತ್ತಮ ಉತ್ತರವೇ ನಮ್ಮ ಬೆಳವಣಿಗೆಯನ್ನು ನಿರ್ಧರಿಸುತ್ತದೆ ಎನ್ನುವುದಕ್ಕೆ ಅನುಮಾನ ಇಲ್ಲ.

ಬದಕಿನಲ್ಲಿ ಸಂಪೂರ್ಣವಾಗಿ ಎಲ್ಲವೂ ಅರ್ಥವಾಯಿತು ಎನ್ನುವ ಸ್ಥಿತಿಯನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಬದುಕು ಎನ್ನುವುದು ಪ್ರತಿ ಕ್ಷಣ ಕ್ಷಣಕ್ಕೂ ಹೊಸತನದಿಂದಿರುವ ಕಾರಣದಿಂದಾಗಿ ಪ್ರತಿ ಹಂತದಲ್ಲಿಯೂ ಬದುಕನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗಬೇಕಾಗುತ್ತದೆ. ಮತ್ತೊಂದೇನಂದರೇ, ಬದುಕಿನಲ್ಲಿ ಅರ್ಥಕ್ಕೆ ನಾವು ಸ್ವೀಕರಿಸಿಕೊಂಡ ಹಾಗೆ, ನಾವು ಅರ್ಥ ಮಾಡಿಕೊಂಡ ಹಾಗೆ ಅರ್ಥ ದೊರಕುತ್ತಾ ಹೋಗುತ್ತದೆ. ಅದೇ  ಮಾನವನ ಬದುಕಿನ ಸಹಜ ಗುಣ ಧರ್ಮ.

ಇನ್ನು, ಕೊರಗುವವರಿಗೆ, ತನ್ನನ್ನು ತಾನು ತುಂಬಾ ಸಮರ್ಥಿಸಿಕೊಳ್ಳುವವರಿಗೆ, ತಮ್ಮ ಮೂಗಿನ ನೇರಕ್ಕೆ ಮಾತಾಡುವವರಿಗೆ ನಿಜಕ್ಕೂ ಬದುಕಿನ ಅರ್ಥವೇ ಗೊತ್ತಿರುವುದಿಲ್ಲ. ಬದುಕೆಂದರೇ, ತನ್ನ ಇರುವಿಕೆ ಮಾತ್ರ ಎಂದು ಅರ್ಥ ಮಾಡಿಕೊಂಡವರಿಗೆ ಯಾರಿಂದಲೂ ಔಷಧಿ ಇಲ್ಲ. ಮನಃಶಾಸ್ತ್ರದ ಪ್ರಕಾರ ಅದೊಂದು ಮಾನಸಿಕ ವಿಕೃತಿ.

ಯಾರು ಬದುಕನ್ನು ಸ್ವೀಕರಿಸುವ, ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇರುತ್ತಾರೋ ಅಂತವರಿಗೆ ಬದುಕು ಅಂದರೇ ಏನು ಎನ್ನುವ ಬಗ್ಗೆ ತುಡಿತವಿರುತ್ತದೆ. ಇನ್ನೊಬ್ಬರ ಬದುಕು ನೋಡಿ ಗೊತ್ತಿರುತ್ತದೆ.  ಬಹಳ ಮುಖ್ಯವಾಗಿ ಇನ್ನೊಬ್ಬರಿಗೆ ಕಿವಿಯಾದ ಅನುಭವ ಇರುತ್ತದೆ.  ಕಿವಿಯಾಗುವ ಬಯಕೆಯೂ ಇರುತ್ತದೆ.

ಇಲ್ಲಿ ಎಲ್ಲದಕ್ಕೂ “ಅರ್ಥ” ನಮ್ಮ ಇರುವಿಕೆ ಹೇಗಿರುತ್ತದೆ, ನಮ್ಮ ಸ್ವೀಕೃತಿ ಹೇಗಿರುತ್ತದೆ ಎನ್ನವುದನ್ನು ಆಧರಿಸಿ ಸಿಗುತ್ತದೆ.

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ : ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಹಾಂಗ್ ಕಾಂಗ್ ನಲ್ಲಿ ಐವರು ಸಂಪಾದಕರ ಬಂಧನ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.