MahaKumbh Mela: ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿ ಮಲ್ಲಿಕಾರ್ಜುನ ಖರ್ಗೆ ಸಾಧಿಸಿದ್ದೇನು?

ಧಾರ್ಮಿಕ ಪ್ರವಾಸೋದ್ಯಮದಿಂದ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಜೊತೆಗೆ ಆದಾಯವೂ ಬರುತ್ತಿಲ್ಲವೇ?

Team Udayavani, Jan 29, 2025, 10:05 AM IST

Mahakumbha–Kharge-Bjp

– ಈಶಪ್ರಸನ್ನ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಾರೀ ಜನಾಕರ್ಷಣೆಯಿಂದ ಮುನ್ನಡೆಯುತ್ತಿರುವ ಮಹಾಕುಂಭ ಮೇಳವು ಭಾರತೀಯ ಹಿಂದೂ ಸನಾತನ ಸಂಸ್ಕೃತಿಯ ಪ್ರತೀಕ ಹಾಗೂ ಈಗ ಪ್ರಚಲಿತವಾಗಿ ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿರುವ ವಿಷಯ ವಸ್ತುವಾಗಿದೆ. ಕೈಯಲ್ಲಿ ಮೊಬೈಲ್‌ ಹಿಡಿದರೆ ಅಂತರ್ಜಾಲ, ಸಾಮಾಜಿಕ ಜಾಲತಾಣ, ಮಾಧ್ಯಮದಲ್ಲಿ ಹರಿದಾಡುತ್ತಿರುವ ಮಹಾಕುಂಭ ಮೇಳದ ಚರ್ಚೆ ಈಗ ರಾಜಕೀಯ ಕೆಸರೆರಾಚಾಟಕ್ಕೂ ಕಾರಣವಾಗಿದೆ.

ಮಹಾಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಹಿಂದೂ ಧರ್ಮದಲ್ಲಿ ಶ್ರದ್ಧೆಯ ಹೊಂದಿರುವವರು ಪವಿತ್ರ ಸ್ನಾನ ಮಾಡುತ್ತಿರುವಂತೆಯೇ, ಸೋಮವಾರ (ಜ.27) ಕೇಂದ್ರ ಗೃಹ ಸಚಿವ ಅಮಿತ್‌  ಶಾ,  ಪತ್ನಿ, ಪುತ್ರ, ಐಸಿಸಿ ಅಧ್ಯಕ್ಷ ಜಯ್‌ ಶಾ ಗಂಗಾ, ಯಮುನಾ, ಗುಪ್ತಗಾಮಿನಿಯಾಗಿ ಹರಿಯುವ ಸರಸ್ವತಿ ನದಿಯ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಗೈದರು. ಇತ್ತ  ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಆಯೋಜಿಸಿರುವ “ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ್‌’ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಪುಣ್ಯಸ್ನಾನಕ್ಕೆ ಕಾಂಗ್ರೆಸ್‌ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ಟೀಕಿಸುವ ಭರದಲ್ಲಿ  “ಗಂಗೆಯಲ್ಲಿ ಮುಳುಗಿದರೆ ಬಡತನ ಹೋಗುತ್ತಾ’ ಎಂದು ಪ್ರಶ್ನಿಸಿ  ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಅವರು, ಗಂಗಾನದಿಯಲ್ಲಿ ಮುಳುಗುವುದರಿಂದ ಬಡತನ ನಿರ್ಮೂಲನೆ ಆಗುತ್ತದಾ? ಹಸಿದ ಹೊಟ್ಟೆಗಳನ್ನು ತುಂಬಿಸುತ್ತಾ ಎಂದು ಪ್ರಶ್ನಿಸಿದ್ದಾರೆ. ಆ ಕೂಡಲೇ  “ನಾನು ಯಾರಿಗೂ ನೋವು ಉಂಟು ಮಾಡಲು ಬಯಸಲ್ಲ. ಯಾರದ್ದೇ ನಂಬಿಕೆಯ ಪ್ರಶ್ನಿಸುವುದಿಲ್ಲ. ಯಾರಿಗಾದರೂ ನೋವಾದರೆ ಕ್ಷಮೆ ಕೇಳುತ್ತೇನೆ. ಮಗುವೊಂದು ಹಸಿವಿನಿಂದ ಸಾಯುತ್ತಿರುವಾಗ, ಶಾಲೆಗೆ ಹೋಗಲು ಆಗದಿರುವಾಗ, ನೌಕರರು ವೇತನ ಪಡೆದುಕೊಳ್ಳಲಾಗದಿರುವಂತಹ ಪರಿಸ್ಥಿತಿಯಲ್ಲಿ ಈ ಜನರು ಗಂಗಾನದಿಯಲ್ಲಿ ಮುಳುಗಲು ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದರಿಂದ ಹೊಟ್ಟೆ ತುಂಬುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ನಮ್ಮ ಜನ ನಂಬಿಕೆಯಿಂದ ಪ್ರತಿನಿತ್ಯ ಪೂಜೆ ಮಾಡುತ್ತಾರೆ. ಪೂಜೆ ಮಾಡದೇ ನಮ್ಮ ಹೆಣ್ಣು ಮಕ್ಕಳು ಮನೆಯಿಂದ ಕಾಲು ಹೊರಗಿಡುವುದಿಲ್ಲ. ಆದರೆ ಇಲ್ಲಿ ಧರ್ಮದ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡುವುದು ಸರಿಯಲ್ಲ. ಬಿಜೆಪಿಯವರು ಫೋಟೋಗಾಗಿ, ಪ್ರಚಾರಕ್ಕಾಗಿ ಗಂಗೆಯಲ್ಲಿ ಮುಳುಗುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯಿಂದ ತಿರುಗೇಟು:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ಹೇಳಿದೆ. “ಸಾವಿರಾರು ವರ್ಷಗಳಿಂದ ಮಹಾಕುಂಭ ಎನ್ನುವುದು ಜನರ ನಂಬಿಕೆಯಾಗಿದೆ. ಇಡೀ ವಿಶ್ವವೇ ಇದನ್ನು ನಂಬುತ್ತದೆ. ಖರ್ಗೆ ಇದನ್ನು ವ್ಯಂಗ್ಯ ಮಾಡುತ್ತಿದ್ದಾರೆ. ಧೈರ್ಯವಿದ್ದರೆ ಇದೇ ಮಾತುಗಳನ್ನು ಬೇರೆ ಧರ್ಮದ ಬಗ್ಗೆ ಆಡಲಿ. ಇಫ್ತಾರ್‌ ಕೂಟದಲ್ಲಿ ಪಾಲ್ಗೊಳ್ಳುವುದರಿಂದ ಬಡತನ ನಿವಾರಣೆಯಾಗುವುದೇ? ಎಂದು ಬಿಜೆಪಿ ಪ್ರಶ್ನಿಸಿದೆ. ಖರ್ಗೆ ಹೇಳಿಕೆಗೆ ಸ್ವತಃ  ಅಮಿತ್‌ ಶಾ ಕೂಡ ಪ್ರತಿಕ್ರಿಯೆ ನೀಡಿ  ಮಹಾಕುಂಭ ಮೇಳದಲ್ಲಿ ನಂಬಿಕೆ ಇರದಿದ್ದರೆ ಪವಿತ್ರ ಸ್ನಾನ ಮಾಡುವುದು ಬೇಡ ಆದರೆ ಮತ್ತೊಬ್ಬರ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಕೇಂದ್ರ ಗೃಹ ಸಚಿವ ತಿರುಗೇಟು ನೀಡಿದ್ದಾರೆ.

ಹಿಂದೂ ಧರ್ಮದ ನಂಬಿಕೆ, ಆಚರಣೆಗಳ ಬಗ್ಗೆ ಕಾಂಗ್ರೆಸ್‌ಗೆ ಏಕೆ ಅಸಹಿಷ್ಣುತೆ?
ಸದಾ ಜಾತ್ಯಾತೀತ, ಸಮಾಜವಾದಿ, ಎಲ್ಲ ಧರ್ಮದವರೂ ಸಮಾನ ಎನ್ನುವ ಕಾಂಗ್ರೆಸ್‌ ಪಕ್ಷವು ಹಿಂದೂಗಳ ಶ್ರದ್ಧೆ, ನಂಬಿಕೆಗಳ ಮೇಲೆ ಘಾಸಿ ಉಂಟು ಮಾಡುವ ಪರಿಪಾಠವೇಕೆ ಇಟ್ಟುಕೊಂಡಿದೆ ಎಂಬುದೇ ಅರ್ಥವಾಗದ ವಿಚಾರ. ಕೇಂದ್ರ ಸರಕಾರ , ಪ್ರಧಾನಿ ಮೋದಿ, ಅಮಿತ್‌ ಶಾ  ವಿರುದ್ಧ ಮಾತನಾಡುವ ಭರದಲ್ಲಿ ದೇಶದ ಭದ್ರತೆ, ಸಂಸ್ಕೃತಿಗೆ ಹಾನಿ ಉಂಟಾಗದಂತೆ ಟೀಕಿಸಬೇಕು ಎಂಬ ಸ್ವಾತಂತ್ರ್ಯ ಬಂದ ನಂತರ ಹೆಚ್ಚು ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್‌ ಪಕ್ಷದ ಜವಾಬ್ದಾರಿಯಲ್ಲವೇ? ಇಂತಹ ವಿಷಯಗಳಿಂದ ಜನರು ಹಾಗೂ ಪಕ್ಷದ ಮೇಲೆ ಬೀರುವ ಪರಿಣಾಮಗಳೇನು ಈ ವರೆಗಿನ ಚುನಾವಣೆಯಲ್ಲಿ ಸೋಲಿಗೆ ಇಂತಹ ವಿಚಾರಗಳು ಎಷ್ಟರ ಮಟ್ಟಿಗೆ ಹಾನಿ ಉಂಟು ಮಾಡಿದೆ ಎಂಬ ಬಗ್ಗೆ ಕಾಂಗ್ರೆಸ್‌ ಅವಲೋಕನ ಮಾಡಬೇಕಲ್ಲವೇ?. ಇಂತಹ ಹೇಳಿಕೆಗಳು ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರಿಗೆ ಅಸ್ತ್ರ ಕೊಟ್ಟಂತೆ ಆಗುತ್ತದೆ ಅಲ್ಲವೇ?  ಅದೇ ರೀತಿ ಅನ್ಯಧರ್ಮಗಳ ಯಾತ್ರೆ, ಆಚರಣೆಗಳ ಬಗ್ಗೆಯೂ ಪ್ರಶ್ನಿಸುವ ಧೈರ್ಯವನ್ನು ತೋರಿಸಬೇಕಿಲ್ಲವೇ?

ದಿಲ್ಲಿ ಚುನಾವಣೆ ವೇಳೆಯೇ ಅಸ್ತ್ರ ಕೊಟ್ಟಂತೆ:
ಈಗಾಗಲೇ ದಿಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆ ಚಾಲ್ತಿಯಲಿದ್ದು, ಖರ್ಗೆಯವರ ಹೇಳಿಕೆ ಸರಕು ಆಗಿ ಬದಲಾದರೂ ಆಶ್ಚರ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರವೇ ಕಾಂಗ್ರೆಸ್‌ ನಾಯಕರಿಗೆ ದೇವಾಲಯಗಳಿಗೆ ಭೇಟಿ ನೀಡಲು ನೆನಪಾಗುತ್ತದೆ. ಪ್ರಸ್ತುತ ದಿಲ್ಲಿ ಚುನಾವಣೆಯ ಪ್ರಚಾರ ವೇಳೆ ಲೋಕಸಭೆ ವಿಪಕ್ಷ ನಾಯಕ  ರಾಹುಲ್‌ ಗಾಂಧಿ ಹೊಸದಿಲ್ಲಿ ಕ್ಷೇತ್ರದಲ್ಲಿರುವ ವಾಲ್ಮೀಕಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಕ್ಷೇತ್ರದಲ್ಲಿ ದಲಿತರ ಮತಗಳು ಅಧಿಕವಿರುವುದರಿಂದ ಇಲ್ಲಿಗೆ ಭೇಟಿ ನೀಡಿದರು ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ಕೂಡ ದಿಲ್ಲಿ ಚುನಾವಣೆ ದಿನವೇ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ ಎಂಬುದು ಉಲ್ಲೇಖನೀಯ.

ಕಾಂಗ್ರೆಸ್‌ ಸೇರಿ ಮೈತ್ರಿ ಕೂಟದ ನಾಯಕರು ಪವಿತ್ರ ಸ್ನಾನದಲ್ಲಿ ಭಾಗಿಯಾಗಿಲ್ಲವೇ?
ಮಹಾಕುಂಭದ ತ್ರಿವೇಣಿ ಸಂಗಮದಲ್ಲಿ ಈಗಾಗಲೇ ಇಂಡಿಯಾ ಕೂಟದ ಪ್ರಮುಖ ನಾಯಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಪವಿತ್ರ ಸ್ನಾನ ಮಾಡಿದ್ದಾರೆ. ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಹಾಕುಂಭದಲ್ಲಿ ಭಾಗವಹಿಸಿ ಪವಿತ್ರ ಸ್ನಾನ ಮಾಡುವೆ ಎಂದಿದ್ದಾರೆ. ಅವರಿಗೆ ಹೋಗಬೇಡಿ ಅಥವಾ ಕಾಂಗ್ರೆಸ್‌ನವರು ಯಾರೂ ಪ್ರಯಾಗ್‌ರಾಜ್‌ಗೆ ಹೋಗಬೇಡಿ ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಆದೇಶ ಹೊರಡಿಸುತ್ತಾರೆಯೇ?. ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಕೂಡ ಸಂಗಮ ಘಾಟ್‌ಗೆ ಭೇಟಿ ನೀಡಿ ನಾಗಸಾಧುಗಳ ಸಂದರ್ಶಿಸಿದ್ದಾರೆ.

ಮಹಾಕುಂಭ ಮೇಳ ಬಡವರ ಹೊಟ್ಟೆ ತುಂಬಿಸುತ್ತಿಲ್ಲವೇ?
ನಮ್ಮ ಇತಿಹಾಸವನ್ನು ಗಮನಿಸಿ, ನಮ್ಮ ಹಬ್ಬಗಳು, ಮೇಳಗಳು, ಧಾರ್ಮಿಕ ರಿವಾಜುಗಳು ಕೇವಲ ಧಾರ್ಮಿಕತೆ ಮಾತ್ರ ಬೋಧಿಸುತ್ತಿರಲಿಲ್ಲ, ಅದರ ಜೊತೆ ಜೊತೆಗೆ ಅದು ರಾಜ್ಯದ, ಜನರ ಆರ್ಥಿಕತೆಯನ್ನು ಕೂಡ ವೃದ್ಧಿಸುವ ಕೆಲಸ ಮಾಡಿವೆ. ಹಾಗೆಯೇ ಮಹಾಕುಂಭ ಮೇಳಕ್ಕೆ ಭಕ್ತರು, ಶ್ರದ್ಧೆ ಇರುವವರು ಸ್ವಂತ ಖರ್ಚಿನಲ್ಲಿ ಬರುತ್ತಿದ್ದಾರೆ. ಈ ಮೇಳದ ಆಯೋಜನೆಗೆ ಅಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿ, ರಸ್ತೆ, ಸೇತುವೆ ನಿರ್ಮಾಣಕ್ಕಾಗಿ  ಉತ್ತರಪ್ರದೇಶ ಸರಕಾರವು 12,670 ಕೋಟಿ ರೂ.ಬಜೆಟ್‌ನ್ನು ಮೀಸಲಿಟ್ಟಿದೆ.

ಮಹಾಕುಂಭ ಮೇಳದಿಂದ ಸರಕಾರಕ್ಕೆ ಆದಾಯ ಹರಿದು ಬರುತ್ತಿರುವುದು ಹಾಗೂ ಅಲ್ಲಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೂಸ್ಟರ್‌ ನೀಡುತ್ತಿದೆ. ವಿಶ್ವದೆಲ್ಲೆಡೆಯಿಂದ ಆಗಮಿಸುವ ಜನರು ಅಲ್ಲಿ ವಾಸ್ತವ್ಯ, ಊಟ, ತಿಂಡಿ, ಬಟ್ಟೆ, ಇತರ ಖರೀದಿಗಳಿಗಾಗಿ ಅಲ್ಲಿ ವೆಚ್ಚ ಮಾಡುತ್ತಿರುವುದು ಅಲ್ಲಿನ ಹಲವು ಮಂದಿ ಸ್ಥಳೀಯರಿಗೆ ಉದ್ಯೋಗ ಹಾಗೂ ಆದಾಯ ಸಿಕ್ಕಿದಂತೆ ಅಲ್ಲವೇ?  ಈ ಧಾರ್ಮಿಕ ಕ್ಷೇತ್ರಗಳಲ್ಲಿ ಹಣೆಗೆ (ಓಂಕಾರ, ತ್ರಿಶೂಲ ಚಿತ್ರ) ಗಂಧ ಹಚ್ಚುವವರು ದಿನಕ್ಕೆ 30ರಿಂದ 6೦ ಸಾವಿರ ದುಡಿಮೆ ಮಾಡುತ್ತಿದ್ದಾರೆ. ರುದ್ರಾಕ್ಷಿ  ಮಾರಾಟ ಮಾಡುವವರಿಗೂ ಕುಂಭದ ವೇಳೆ ಹೆಚ್ಚಿನ ಆದಾಯ ಬರುತ್ತದೆ ಅಲ್ಲವೇ ಇದು ಬಡವರಿಗೆ ಅನುಕೂಲವಾಗುವುದಿಲ್ಲವೇ?



ಖಾತೆಗೆ ಹಣ ಹಾಕುವುದರಿಂದ ಬಡತನ ತೊಲಗುತ್ತಾ?
ಕಾಂಗ್ರೆಸ್‌ ಸರಕಾರವಿರುವ ರಾಜ್ಯಗಳಲ್ಲಿ ಮಹಿಳೆಯರಿಗೆ, ಇತರ ಯೋಜನೆಗಳ ಮೂಲಕ ಬ್ಯಾಂಕ್‌ ಖಾತೆಗೆ ಹಣವನ್ನು ಹಾಕಿ ಬಡವರಿಗೆ ಸಹಾಯ ಮಾಡುತ್ತಿದ್ದೇವೆ ಎನ್ನುತ್ತಿದೆ. ಇದರಿಂದ ಬಡತನ ನಿರ್ಮೂಲನೆಯಾಗುತ್ತ ಎಂಬುದು ರಾಜಕೀಯ ಪಕ್ಷಗಳು ಪ್ರಶ್ನೆ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ಮಾತ್ರವಲ್ಲದೇ ಬಿಜೆಪಿ, ಆಪ್‌ ಸೇರಿ ಎಲ್ಲ ಪಕ್ಷಗಳು ಖಾತೆಗೆ ಹಣ ಹಾಕುವ ಪರಿಪಾಠ ಹುಟ್ಟು ಹಾಕಿವೆ.

ಈ ವರೆಗೆ 15 ಕೋಟಿ ಮಂದಿಯಿಂದ ಪುಣ್ಯಸ್ನಾನ: 
ಮಹಾಕುಂಭಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರ ಸರಾಸರಿ ಖರ್ಚು 5ರಿಂದ 6 ಸಾವಿರ ರೂಪಾಯಿ ಎಂದಿಟ್ಟುಕೊಂಡರು ಕೂಡ ಈ 45 ದಿನಗಳಲ್ಲಿ ಆಗುವ ಒಟ್ಟು ವಹಿವಾಟು ಎರಡೂವರೆ ಲಕ್ಷ ಕೋಟಿ ರೂಪಾಯಿ ಮೀರುತ್ತದೆ ಇದು ಸರಕಾರಕ್ಕೆ ಬಂದ ಆದಾಯವಲ್ಲವೇ? ಹಾಗೂ ಅಲ್ಲಿನ ಸ್ಥಳೀಯರಿಗೂ ನೇರವಾಗಿ ಅಥವಾ ಪರೋಕ್ಷವಾಗಿ ಈ ಧಾರ್ಮಿಕ ಪ್ರವಾಸೋದ್ಯಮದಿಂದ ಆದಾಯ ಪಡೆಯುತ್ತಿದ್ದಾರೆ ಎಂಬುದು ಖಚಿತ. ರಾಜ್ಯ ಸರಕಾರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದು 12,670 ಕೋಟಿ ರೂ., ಎರಡೂವರೆ ಲಕ್ಷ ಕೋಟಿ ರೂಪಾಯಿ ಆದಾಯ ಹರಿದು ಬರುವ ನಿರೀಕ್ಷೆ ಇದೆ. ಮಹಾಕುಂಭಮೇಳ ಜ.13ರಿಂದ ಶುರುವಾದ ಬಳಿಕ ಇದುವರೆಗೆ 15 ಕೋಟಿ ಮಂದಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.

 

ಟಾಪ್ ನ್ಯೂಸ್

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stampede-Railway

Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!

Akhilesh-Yadav

Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್‌ ಯಾದವ್‌

Mahakumbh-fire

Maha Kumbh: ಕುಂಭಮೇಳದ ಸೆಕ್ಟರ್ 18, 19ರಲ್ಲಿ ಭಾರೀ ಅಗ್ನಿ ಅನಾಹುತ!

Maha Kumbh Mela: ಮಹಾಕುಂಭ ಮೇಳಕ್ಕೆ ಶಿರ್ವದ ಅಪ್ಪ -ಮಗನ ಬೈಕ್‌ ಯಾತ್ರೆ!

Maha Kumbh Mela: ಮಹಾಕುಂಭ ಮೇಳಕ್ಕೆ ಶಿರ್ವದ ಅಪ್ಪ -ಮಗನ ಬೈಕ್‌ ಯಾತ್ರೆ!

Mahakumbh: ಮಾಘ ಹುಣ್ಣಿಮೆ ದಿನ 2 ಕೋಟಿ ಮಂದಿ ಸ್ನಾನ, ಮಿಂದವರ ಸಂಖ್ಯೆ 47ಕೋಟಿಗೆ ಏರಿಕೆ

Mahakumbh: ಮಾಘ ಹುಣ್ಣಿಮೆ ದಿನ 2 ಕೋಟಿ ಮಂದಿ ಸ್ನಾನ, ಮಿಂದವರ ಸಂಖ್ಯೆ 47ಕೋಟಿಗೆ ಏರಿಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.