Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?

ಜಿದ್ದಾ ಜಿದ್ದಿನ ಸ್ಪರ್ಧೆಯಲ್ಲಿ ಎರಡೂ ಮೈತ್ರಿಕೂಟಗಳಿಗೂ ತಲೆನೋವು... ಹಲವು ಕ್ಷೇತ್ರಗಳಲ್ಲಿ ಸವಾಲು!!

ವಿಷ್ಣುದಾಸ್ ಪಾಟೀಲ್, Nov 6, 2024, 1:26 PM IST

voter

ಮಹಾರಾಷ್ಟ್ರದ 288 ಸ್ಥಾನಗಳಿಗೆ ನವೆಂಬರ್ 20 ರಂದು ಚುನಾವಣೆ(Maharashtra polls)ನಡೆಯಲಿದ್ದು, ಸೋಮವಾರ(ನ4) ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿತ್ತು. ಮಹಾರಾಷ್ಟ್ರದಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಭಿನ್ನಾಭಿಪ್ರಾಯದಿಂದಾಗಿ ಹಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು(Rebels) ಕಣದಲ್ಲಿದ್ದು ಮತ ವಿಭಜನೆ ನಡೆಸುವ ಆತಂಕ ಪ್ರಮುಖ ಪಕ್ಷಗಳಿಗೆ ಎದುರಾಗಿದೆ.

ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಕನಿಷ್ಠ 25 ಪ್ರಬಲ ಬಂಡಾಯ ಅಭ್ಯರ್ಥಿಗಳನ್ನು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದೆಯಾದರೂ ಕನಿಷ್ಠ 18 ಮಂದಿ ಕಣದಲ್ಲಿ ಉಳಿದು ಕೊಂಡು ಸವಾಲಾಗಿ ಪರಿಣಮಿಸಿದ್ದಾರೆ. 288 ಸದಸ್ಯರ ಅಸೆಂಬ್ಲಿಯಲ್ಲಿ 148 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಗೆ 13 ಮಂದಿ, ಪಾಲುದಾರ ಪಕ್ಷಗಳ ಪೈಕಿ 83ರಲ್ಲಿ ಸ್ಪರ್ಧಿಸಿರುವ ಶಿಂಧೆ ಶಿವಸೇನೆಗೆ ಮತ್ತು 54 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ತಲಾ 6 ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳ ಹೋರಾಟ ಚಿಂತೆಗೀಡು ಮಾಡುವಂತೆ ಮಾಡಿದೆ.

ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಹಾಯುತಿ ಮಿತ್ರಪಕ್ಷಗಳ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟದ ನಡುವೆ, ಬಿಜೆಪಿ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಹೋದ 37 ವಿಧಾನಸಭಾ ಕ್ಷೇತ್ರಗಳ 40 ಮಂದಿ ಮುಖಂಡರು ಮತ್ತು ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಚಾಟಿಸಿದೆ.

ವಿಪಕ್ಷವಾದ ಮಹಾರಾಷ್ಟ್ರ ವಿಕಾಸ್ ಅಘಾಡಿ 20 ಬಂಡಾಯ ಅಭ್ಯರ್ಥಿಗಳನ್ನು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸುವಲ್ಲಿ ಸಫಲವಾಗಿದ್ದು, ಇನ್ನೂ 22 ಕ್ಷೇತ್ರದಲ್ಲಿ ಪ್ರಬಲ ಬಂಡಾಯ ಅಭ್ಯರ್ಥಿಗಳು ಉಳಿದಿರುವುದು ಲೆಕ್ಕಾಚಾರಕ್ಕೆ ಕಾರಣವಾಗಿದೆ. 103 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ಗೆ 9, 94 ರಲ್ಲಿ ಸ್ಪರ್ಧಿಸುತ್ತಿರುವ ಶಿವಸೇನೆ (ಯುಬಿಟಿ) 7 ಮತ್ತು 87 ರಲ್ಲಿ ಸ್ಪರ್ಧಿಸುತ್ತಿರುವ ಎನ್‌ಸಿಪಿ ಗೆ (ಶರದ್ ಪವಾರ್ ) 4 ಮಂದಿ ಅಭ್ಯರ್ಥಿಗಳ ಸವಾಲು ಎದುರಾಗಿದೆ.

ನವಾಬ್ ಮಲಿಕ್ ಗೆ ಬೆಂಬಲವಿಲ್ಲ
ಮುಂಬೈ ಕ್ಷೇತ್ರವಾದ ಮಂಖುರ್ದ್ ಶಿವಾಜಿನಗರ ಕೂಡ ಮೈತ್ರಿಕೂಟಕ್ಕೆ ತಲೆನೋವಾಗಿ ಉಳಿದಿದೆ. ಮನ್ಖುರ್ದ್ ಶಿವಾಜಿ ನಗರದಲ್ಲಿ, ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಬೆಂಬಲಿಸಲು ಬಿಜೆಪಿ ನಿರಾಕರಿಸಿದೆ ಮತ್ತು ಬದಲಿಗೆ ಪಕ್ಷವು ಶಿವಸೇನಾ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ಘೋಷಿಸಿದೆ.

ಸೋಮವಾರ ಸಂಜೆಯ ವೇಳೆಗೆ ಮಹಾ ವಿಕಾಸ್ ಅಘಾಡಿಗೆ ಸವಾಲುಗಳು ಕಠಿನವಾಗಿದ್ದು ಮೂರು ಪ್ರಮುಖ ಪಕ್ಷಗಳು ಎರಡು ಸಣ್ಣ ಮಿತ್ರಪಕ್ಷಗಳೊಂದಿಗೆ ಕನಿಷ್ಠ 10 ಸ್ಥಾನಗಳಲ್ಲಿ ವಿವಾದವನ್ನು ಬಗೆಹರಿಸುವಲ್ಲಿ ವಿಫಲವಾಗಿವೆ. ಪ್ರಮುಖವಾಗಿ ಸಮಾಜವಾದಿ ಪಕ್ಷ ಮಿತ್ರಪಕ್ಷಗಳ ವಿರುದ್ಧ ಆರು ಕ್ಷೇತ್ರಗಳಲ್ಲಿ ತಮ್ಮ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಮಾಜವಾದಿ ಪಕ್ಷ ಆರು ಸ್ಥಾನಗಳಲ್ಲಿ ಸೌಹಾರ್ದ ಹೋರಾಟ ನಡೆಸಲಿದೆ ಎಂದು ಹೇಳಿದೆಯಾದರೂ ಎಸ್‌ಪಿ ಶಾಸಕ ಮತ್ತು ರಾಜ್ಯ ಅಧ್ಯಕ್ಷ ಅಬು ಅಸಿಮ್ ಅಜ್ಮಿ ಅವರು ಪರಿಸ್ಥಿತಿಗೆ ವಿಕಾಸ್ ಅಘಾಡಿಯ ಹಿರಿಯ ನಾಯಕರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.

ಅಪ್ಪ ಅಭ್ಯರ್ಥಿ, ಮಗಳಿಂದ ಬಂಡಾಯ

ಕುಟುಂಬ ರಾಜಕಾರಣದ ಸವಾಲು ಎಂಬಂತೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ಹಾಗೂ ಮಾಜಿ ಸಂಸದೆ ಹಿನಾ ಗಾವಿತ್‌ ತಮ್ಮ ಬಂಡಾಯ  ಮುಂದುವರಿಸುವುದರೊಂದಿಗೆ ಬಿಜೆಪಿಯಿಂದ ಹೊರ ನಡೆದಿದ್ದಾರೆ. ಹಿನಾ ಅಕ್ಕಲ್ಕುವಾ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಅಚ್ಚರಿಯೆಂದರೆ ಹಿನಾ ಅವರ ತಂದೆ ರಾಜ್ಯ ಬುಡಕಟ್ಟು ಅಭಿವೃದ್ಧಿ ಸಚಿವ ವಿಜಯ್‌ ಕುಮಾರ್‌ ಗಾವಿತ್‌. ವಿಜಯಕುಮಾರ್‌ ಅವರು ದೂರಬಾರ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಟಿಕೆಟ್ ಹಂಚಿಕೆಯಲ್ಲೂ ಭಾರೀ ಗೊಂದಲ
ಮಹಾಯುತಿಯ ಮಿತ್ರ ಪಕ್ಷಗಳಾದ ಅಜಿತ್ ಅವರ ಎನ್‌ಸಿಪಿ ಮತ್ತು ಶಿಂಧೆ ಶಿವಸೇನೆಯ ನಡುವೆ ಶ್ರೀರಾಮಪುರ ಕ್ಷೇತ್ರದಲ್ಲಿ ಭಾರೀ ಗೊಂದಲ ನಿರ್ಮಾಣವಾಗಿ ಬಿಕ್ಕಟ್ಟಿಗೆ ಕಾರಣವಾಗಿದೆ. ಎನ್‌ಸಿಪಿ ಹಾಲಿ ಶಾಸಕ ಲಹು ಕಾನಡೆ ಅವರಿಗೆ ಟಿಕೆಟ್‌ ನೀಡಿದ್ದು, ಇನ್ನೊಂದೆಡೆ ಮಾಜಿ ಶಾಸಕ, ಶಿವಸೇನೆ ಶಿಂಧೆ ಬಣದ ಬಾವುಸಾಹೇಬ್‌ ಕಾಂಬ್ಳೆ ಅವರಿಗೂ ಎಬಿ ಫಾರ್ಮ್ ನೀಡಲಾಗಿದೆ. ಇಬ್ಬರೂ ಕಣಕ್ಕಿಳಿದು ಪಟ್ಟು ಬಿಡದೆ ಕೊನೆ ಕ್ಷಣದವರೆಗೂ ಯಾರೂ ನಾಮಪತ್ರ ಹಿಂಪಡೆಯದ ಕಾರಣ ಮೈತ್ರಿಕೂಟದ ಮತ ವಿಭಜನೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಹರಿಯಾಣದಲ್ಲಿ ಆದಂತಾಗುವುದೇ?
ಹರಿಯಾಣದಲ್ಲಿ ಬಿಜೆಪಿಯಿಂದ ಅಧಿಕಾರ ಕಸಿಯುವ ರಣತಂತ್ರ ಮಾಡಿದ್ದ ಕಾಂಗ್ರೆಸ್ ಗೆ ಬಂಡಾಯ ಅಭ್ಯರ್ಥಿಗಳು ಅಡ್ಡಿಯಾಗಿ ಚಿತ್ರಣ ಬದಲಿಸಿದ್ದು ಚುನಾವಣ ಫಲಿತಾಂಶದ ಬಳಿಕ ಸ್ಪಷ್ಟವಾಗಿತ್ತು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು 13 ಕ್ಷೇತ್ರಗಲ್ಲಿ ಅಧಿಕೃತ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದರು. ಕೆಲ ಪಕ್ಷೇತರರು 30 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರು. ಬಿಜೆಪಿಗೂ 2 ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿ ಸೋಲು ಕಾಣಬೇಕಾಗಿತ್ತು. ಆದರೂ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಏರುವಲ್ಲಿ ಅಡ್ಡಿಯಾಗಲಿಲ್ಲ.

ಮಹಾರಾಷ್ಟ್ರದಲ್ಲಿ ಹಲವು ಗೊಂದಲಗಳ ನಡುವೆಯೇ ಚುನಾವಣ ಕಣ ರಂಗೇರಿದ್ದು ಮತದಾರ ಯಾರಿಗೆ ನಿಷ್ಠೆ ತೋರುತ್ತಾನೆ ಎನ್ನುವುದು ಯಾವ ಲೆಕ್ಕಾಚಾರದಿಂದಲೂ ಅರಿಯುವುದು ಅಸಾಧ್ಯ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮಹಾಯುತಿಗೆ ಶಾಕ್ ನೀಡಿದ್ದ ವಿಕಾಸ್ ಅಘಾಡಿ ಈಗಲೂ ಅದೇ ಫಲಿತಾಂಶ ಪಡೆಯಲಿದೆಯೇ ಎನ್ನುವುದನ್ನೂ ನಿರ್ಣಯಿಸಲು ಸಾಧ್ಯವಿಲ್ಲ.

ಟಾಪ್ ನ್ಯೂಸ್

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

SM Krishna: ಪ್ರೊಫೆಸರ್‌ ಟು ಸಿಎಂ, ಗವರ್ನರ್‌, ವಿದೇಶಾಂಗ ಸಚಿವ…SMK ರಾಜಕೀಯ ಯಶೋಗಾಥೆ…

SM Krishna: ಪ್ರೊಫೆಸರ್‌ ಟು ಸಿಎಂ, ಗವರ್ನರ್‌, ವಿದೇಶಾಂಗ ಸಚಿವ…SMK ರಾಜಕೀಯ ಯಶೋಗಾಥೆ…

Exclusive: ಭಾರತ-ಮ್ಯಾನ್ಮಾರ್‌ ಗಡಿ; ಮೋದಿ ಸರ್ಕಾರದ Fence ನಿರ್ಮಾಣ ಯೋಜನೆಗೆ ವಿರೋಧವೇಕೆ!

Exclusive: ಭಾರತ-ಮ್ಯಾನ್ಮಾರ್‌ ಗಡಿ; ಮೋದಿ ಸರ್ಕಾರದ Fence ನಿರ್ಮಾಣ ಯೋಜನೆಗೆ ವಿರೋಧವೇಕೆ!

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ

Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.