ಮಣ್ಣಿನ ಕನಸು- ನನಸಾಗುವ ಸಮಯ


Team Udayavani, Mar 14, 2022, 11:45 AM IST

ಮಣ್ಣಿನ ಕನಸು- ನನಸಾಗುವ ಸಮಯ

ಶತವಧಾನಿ ಡಾ| ಆರ್‌. ಗಣೇಶ ಅವರು ಅವರು ಬರೆದಿರುವ ಮೊದಲ ಕಾದಂಬರಿ ಮಣ್ಣಿನ ಕನಸು, ಇದೇ 18ರಂದು ಬಿಡುಗಡೆಯಾಗಲಿದೆ. ನಾಡೋಜ ಎಸ್‌.ಆರ್‌.ರಾಮಸ್ವಾಮಿಯವರು ಬಿಡುಗಡೆ ಮಾಡಲಿದ್ದು, ಈ ಕಾದಂಬರಿಯ ಪುಟ್ಟ ಪರಿಚಯ ಇಲ್ಲಿದೆ.

ಸುಮಾರು “ಎರಡೂವರೆ ಸಾವಿರ ವರ್ಷಗಳ ಹಿಂದೆ ಭಾರತ ದೇಶ ಹೇಗಿತ್ತು?’ ಎಂದು ಯಾರಾದರೂ ಕೇಳಿದರೆ, ಎಂತಹ ಅಧ್ಯಯನಶೀಲರಿಗೂ  “ಇದಮಿತ್ಥಂ’- ಇದು ಹೀಗೇ- ಎಂದು ಹೇಳುವ ಧೈರ್ಯವಾಗುವುದಿಲ್ಲ. ಏಕೆಂದರೆ ಇತಿಹಾಸವನ್ನು ಬಲ್ಲವರು ಆ ಕಾಲದಲ್ಲಿ ಇದ್ದ ರಾಜರ ಬಗ್ಗೆ ಹೇಳಬಹುದು. ಧರ್ಮಶಾಸ್ತ್ರಗಳನ್ನು ಅಧ್ಯಯನ ಮಾಡಿದವರು ಆ ಕಾಲದ ಸಾಮಾಜಿಕ ಪದ್ಧತಿಗಳನ್ನು ಕುರಿತು ಹೇಳಬಹುದು. ಸಂಗೀತ ನೃತ್ಯಗಳ ಇತಿಹಾಸವನ್ನು ಅಧ್ಯಯನ ಮಾಡಿದವರು ಆ ಕಾಲದ ಕಲೆಯ ಕುರಿತು ಹೇಳಬಹುದು. ಭಾರತದ ಪರಂಪರೆಯ ಅರ್ಥಶಾಸ್ತ್ರವನ್ನು ಬಲ್ಲವರು ವಾಣಿಜ್ಯವನ್ನು ಕುರಿತು ಹೇಳಬಹುದು. ಜನಜೀವನವನ್ನು ಕುರಿತು, ದೈನಂದಿನ ವ್ಯವಹಾರಗಳ ಕುರಿತು, ಊಟ-ಉಪಾಹಾರಗಳನ್ನು ಕುರಿತು, ರಾಜರ ದಿನಚರಿಯನ್ನು ಕುರಿತು, ಅರಮನೆಯ ವ್ಯವಹಾರಗಳನ್ನು ಕುರಿತು, ಅಂದು ನಗರಗಳಲ್ಲಿ ನಡೆಯುತ್ತಿದ್ದ ಹಬ್ಬ-ಹರಿದಿನಗಳನ್ನು ಕುರಿತು, ಜಾತ್ರೆ -ಉತ್ಸವಗಳನ್ನು ಕುರಿತು ಹೀಗೇ -ಈ ಎಲ್ಲ ವಿಷಯಗಳನ್ನು ಕುರಿತು ಬಲ್ಲವರು- ಬೆರಳೆಣಿಕೆಗೂ ಸಿಗುವಷ್ಟು ಜನರಿದ್ದಂತಿಲ್ಲ. ಆದರೆ ಈ ಎಲ್ಲ ವಿಷಯಗಳಲ್ಲೂ ಅಧಿಕಾರಯುತವಾಗಿ “ಹೀಗೇ ಇತ್ತು’ ಎಂದು ಸ್ಪಷ್ಟವಾಗಿ ಹೇಳಬಲ್ಲವರು ಶತಾವಧಾನಿ ಡಾ| ಗಣೇಶ ಅವರೊಬ್ಬರೇ ಎಂದು ಅವರ ಅಸೀಮ ಜ್ಞಾನರಾಶಿಯನ್ನು ಬಲ್ಲವರು ಧೈರ್ಯವಾಗಿ ಹೇಳುತ್ತಾರೆ. ಅಂತಹ ಗಣೇಶರು, ಜನಪ್ರಿಯವೂ ಪ್ರಸಿದ್ಧವೂ ಆದ ಐತಿಹಾಸಿಕ ಕಥೆಯೊಂದನ್ನು ಬಳಸಿಕೊಂಡು ಆ ಕಾಲದ ಸಮಗ್ರವಾದ ಭಾರತದ ಚಿತ್ರಣವನ್ನೂ ಈ ಎಲ್ಲ ವಿವರಗಳೊಂದಿಗೆ ಚಿತ್ರಿಸಿದರೆ ಅದು ಹೇಗಿದ್ದೀತು! ಅದೇ ಶತಾವಧಾನಿಗಳ ಲೇಖನಿಯ ಮೂಲಕ ನಮ್ಮೆದುರು ಇಂದು “ಮಣ್ಣಿನ ಕನಸು” ಎಂಬ ಕಾದಂಬರಿಯಾಗಿ ರೂಪುಗೊಂಡಿದೆ.

ಮಣ್ಣಿನ ಕನಸು- ಕಾದಂಬರಿ ಸಂಸ್ಕೃತ ಸಾಹಿತ್ಯದಲ್ಲಿ ಬಹುಪ್ರಸಿದ್ಧವಾದ ಭಾಸ-ಕವಿಯ ಸ್ವಪ್ನವಾಸವದತ್ತ ಹಾಗೂ ಶೂದ್ರಕ-ಕವಿಯ ಮೃತ್ಛಕಟಿಕ ಎಂಬ ಎರಡು ನಾಟಕಗಳ ಕಥೆಯ ಸೂತ್ರವನ್ನು ಸೊಗಸಾಗಿ ಬೆಸೆದ ಕಥಾನಕ. ಮಣ್ಣಿನ ಕನಸು ಎಂಬ ಹೆಸರೂ “ಮೃತ್‌’ ಹಾಗೂ “ಸ್ವಪ್ನ’ ಎಂಬ ಹೆಸರುಗಳನ್ನು ಹೆಣೆದು ಮಾಡಿದ್ದೇ ಆಗಿದೆ. ಕತೆಗೆ ಇವೆರಡು ನಾಟಕಗಳಷ್ಟೇ ಅಲ್ಲದೇ ಇನ್ನೂ ಅನೇಕ ನಾಟಕಗಳೂ ಕಾವ್ಯಗಳೂ ಹಾಗೆಯೇ ಸಾಹಿತ್ಯೇತರವಾದ ಶಾಸ್ತ್ರಗ್ರಂಥಗಳೂ ಅಸಂಖ್ಯ ಪ್ರಮಾಣದಲ್ಲಿ ಅನುವಾಗಿವೆ ಎಂದು ಶತಾವಧಾನಿಗಳೇ ಹೇಳಿದ್ದಾರೆ.

ಸುಮಾರು ಎರಡು ವರ್ಷಗಳಷ್ಟು ಕಾಲಾವಧಿಯಲ್ಲಿ ನಡೆಯುವ ಕತೆ. ವತ್ಸದೇಶದ ರಾಜನಾಗಿದ್ದ ಉದಯನ ಸುಂದರ ಯುವಕ, ಸ್ವಯಂ ವೀಣಾವಾದನದಲ್ಲಿ ಕುಶಲ, ಎಂತಹ ಆನೆಯನ್ನಾದರೂ ತನ್ನ ಘೋಷವತಿ ಎಂಬ ವೀಣಾವಾದನದಿಂದ ಪಳಗಿಸುತ್ತಾನೆ ಎಂಬುದು ಲೋಕವಿಖ್ಯಾತ. ಅವನ ರಾಜ್ಯದಲ್ಲಿ ವಸಂತೋತ್ಸವ, ಅಶೋಕಾಷ್ಟಮಿಯೇ ಮೊದಲಾದ ಉತ್ಸವದಲ್ಲಿ ಸಂತಸದಿಂದ ಇರುವಾಗ ಕಥೆ ಪ್ರಾರಂಭವಾಗುತ್ತದೆ. ಅವನಿಗೆ ಶತ್ರುವಲ್ಲದಿದ್ದರೂ ಸ್ನೇಹವೂ ಅಷ್ಟಾಗಿ ಇಲ್ಲದ ಉಜ್ಜಯಿನಿಯ ರಾಜ ಚಂಡಮಹಾಸೇನ ಉದಯನನ್ನು ಮಣಿಸಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿ ಕುಟಿಲತಂತ್ರಗಳನ್ನು ಮಾಡುವುದರಿಂದ ಕಥೆ ಬೆಳೆಯತೊಡಗುತ್ತದೆ. ಉದಯನನ ಮಂತ್ರಿ ಯೌಗಂಧರಾಯಣ ಎಂತಹದೇ ಸಂದರ್ಭದಲ್ಲಿಯೂ ತನ್ನ ಪ್ರಾಣವನ್ನಾದರೂ ಕೊಟ್ಟು ಪ್ರಭುವನ್ನು ಉಳಿಸಿಕೊಳ್ಳುವ ಸಮರ್ಥ. ಅಲ್ಲದೇ, ತನ್ನ ಪ್ರಭು ಏಕತ್ಛತ್ರಾಧಿಪತಿಯಾಗಿ ಭೂಮಿಯನ್ನು ಆಳಬೇಕು, ಎಲ್ಲೆಡೆಯಲ್ಲಿಯೂ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ತನ್ನ ವೃದ್ಧಾಪ್ಯದಲ್ಲಿಯೂ ನಿರಂತರ ಪರಿಶ್ರಮವನ್ನು ಪಡುವವನು. ಉಜ್ಜಯಿನಿಯ ಸಾರ್ಥವಾಹ ಚಾರುದತ್ತ ಉದಯನನಿಗೆ ಆಪ್ತ. ಎಂತಹ ಬಡತನ ಬಂದರೂ ತನ್ನ ಒಳ್ಳೆಯತನವನ್ನು ಬಿಡುವುದಿಲ್ಲ. ಮನೆಗೆ ಕನ್ನ ಹಾಕಿದ ಕಳ್ಳನ ಕೌಶಲವನ್ನೂ ಮೆಚ್ಚಿಕೊಳ್ಳುವ ರಸಿಕ. ಉದಯನನಲ್ಲಿ ಅನುರಕ್ತೆಯಾಗಿ ನಿಂತ ನಿಲುವಿನಲ್ಲೇ ತನ್ನವರನ್ನೆಲ್ಲ ತೊರೆದು ಬಂದ ವಾಸವದತ್ತೆ ಗಂಡನ ಅಭ್ಯುದಯಕ್ಕಾಗಿ ಮದುವೆಯಾಗಿ ಕೆಲವೇ ದಿನಗಳಲ್ಲಿಯೇ ಅವನಿಂದ ದೂರವಾಗುವಂತಹ ಕಠಿನ ನಿರ್ಧಾರವನ್ನೂ ತೆಗೆದುಕೊಳ್ಳುತ್ತಾಳೆ. ಚಾರುದತ್ತನ ಸದ್ಗುಣದಿಂದ ಮೆಚ್ಚಿಕೊಂಡ ವಸಂತಸೇನೆ ಎಂಬ ವೇಶ್ಯೆ, ದರಿದ್ರನಾದರೂ ಅವನಲ್ಲಿ ಅನುರಕ್ತೆಯಾಗುತ್ತಾಳೆ.

ಹೀಗೆ ಅನೇಕ ಪ್ರೇಮಪ್ರಸಂಗಗಳು. ಅವರೆಲ್ಲರಿಗೂ ಅಂತರಂಗದಲ್ಲಿ ಹೇಳಲಾಗದ ಕಷ್ಟಗಳ ಪರಂಪರೆ, ಮೊದಲು ಇದ್ದ ನೆಮ್ಮದಿ ನಾಶವಾಗಿ ಎತ್ತೆತ್ತಲೋ ಹರಿದುಕೊಂಡು ಕಂಡುಕೇಳರಿಯದ ಕಷ್ಟಗಳನ್ನು ದಾಟಿಕೊಂಡು ಕೊನೆಯಲ್ಲಿ ಹೇಗೋ ನೆಮ್ಮದಿಯನ್ನು ಕಾಣುತ್ತೇವೆ ಎಂಬ ವಿಶ್ವಾಸದಲ್ಲಿ ಆ ಸಮಯವನ್ನು ಎದುರಿಸುವುದು- ಇವೆಲ್ಲವೂ ಒಂದು ದಿಕ್ಕಿನಲ್ಲಿ ಹರಿಯುತ್ತಿರುವ ಕಥೆಯ ಸ್ರೋತಸ್ಸಾದರೆ, ಚಂಡಮಹಾಸೇನನ ಕುಟಿಲತೆ, ಅವನ ಮಗ ಪಾಲಕನ ದೌಷ್ಟ್ಯ, ಅವರ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೂಡುವ ಯೌಗಂಧರಾಯಣ- ಹೀಗೆ ಇನ್ನೊಂದು ದಿಕ್ಕಿನ ಹರಿವು. ರಾಜರುಗಳೇ ಆಳುತ್ತಿದ್ದ ರಾಜ್ಯಗಳ ಕಥೆಯ ನಡುವೆ ಆ ಕಾಲದಲ್ಲೇ ಇದ್ದ ಗಣತಂತ್ರವ್ಯವಸ್ಥೆಯ ಇನ್ನೊಂದು ದಿಕ್ಕು. ಅಲ್ಲಿ ಗಣಭೋಗೆಯಾಗಿ ತನ್ನ ಸೌಂದರ್ಯದಿಂದ ಹಾಗೂ ಕಲಾಕುಶಲತೆಯಿಂದ ಪ್ರಸಿದ್ಧಳಾದ ಆಮ್ರಪಾಲಿಯ ಕಥೆಯ ಇನ್ನೊಂದು ಕವಲು. ಇಷ್ಟೆಲ್ಲ ಕಥೆಗಳು ನಡೆಯುತ್ತಿರುವಾಗ ಸಾಮಾಜಿಕವಾಗಿ ನಡೆಯುತ್ತಿದ್ದ ಬದಲಾವಣೆಗಳು- ಗೌತಮಬುದ್ಧನಿಂದ ಆರಂಭವಾದ ಬೌದ್ಧಮತ, ಅದರ ಪ್ರಭಾವ, ಜನರ ಜೀವನ, ರಾಜ್ಯಗಳ ಬಲಾಬಲಗಳಲ್ಲಿ ರಾಜಕೀಯವಾದ ಏರಿಳಿತಗಳು- ಒಂದೇ ಎರಡೇ! ಇಷ್ಟೆಲ್ಲ ದೊಡ್ಡ ಮಟ್ಟದಲ್ಲಿ ಕಥೆ ಸಾಗುತ್ತಾ ಓದುಗರ ಎದೆಯಲ್ಲಿ ಭಾವತರಂಗಗಳು ಏಳುತ್ತಾ ಸಾಗುತ್ತಿದ್ದರೆ, ಇನ್ನೊಂದೆಡೆಯಲ್ಲಿ ಆ ಕಾಲದ ಜನರ ಊಟದಲ್ಲಿನ ಸ್ವಾರಸ್ಯಗಳು- ತೇಮನ ಪತ್ರಶಾಕ ಮಾಷಾಪೂಪ ಮುದ್ಗಾನ್ನ- ಮೊದಲಾದ ಹತ್ತುಹಲವು ಬಗೆಯ ಭೋಜನದ ವಿವರಗಳು, ಅಶೋಕವೃಕ್ಷದ ಹೊಸ ಚಿಗುರನ್ನು ಬೆರೆಸಿ ಮಾಡಿದ ಷಾಡವ ಪಾನಕ- ಇವೆಲ್ಲವೂ ಆ ಕಾಲದ ಅಡುಗೆಯ ಪರಿಮಳವನ್ನು ಸೂಸಿ ನಮ್ಮನ್ನೂ ಅತ್ತ ಸೆಳೆಯುತ್ತವೆ.

ಇವುಗಳ ಜತೆಯಲ್ಲಿ ವಸಂತೋತ್ಸವದ ಆಚರಣೆ, ಮದುವೆಯ ಸಂಭ್ರಮ, ಕಗ್ಗೊಲೆಯ ಕೋಲಾಹಲ, ಆಟವಿಕರ ಬೇಟೆ, ಆನೆಯನ್ನು ಪಳಗಿಸುವ ತಂತ್ರಗಳು ಹೀಗೆ ಧರ್ಮಶಾಸ್ತ್ರಗಳ ಸೂಕ್ಷಗಳಿಂದ ಹಿಡಿದು ಗಜಶಾಸ್ತ್ರದ ತನಕ ಹತ್ತು ಹಲವು ವಿಷಯಗಳ ಕುಸುರಿ ಚಿತ್ರಣ. ಹೀಗೆ ಭಾವ-ಬುದ್ಧಿ-ಮನಸ್ಸುಗಳಿಗೆ ಭೂರಿಭೋಜನವಾಗುವಂತಹ ವಿಶಿಷ್ಟ ಕಾದಂಬರಿ ಮಣ್ಣಿನ ಕನಸು. ಕಾದಂಬರಿಯ ಕ್ಷೇತ್ರದಲ್ಲಿ ಶತಾವಧಾನಿಗಳ ಮೊದಲ ಪ್ರಯೋಗ ಇದು. ಅವರ ಉಳಿದ ಅನೇಕ ಲೇಖನಗಳನ್ನೂ ಪುಸ್ತಕಗಳನ್ನೂ ಓದಿದವರಿಗೆ ಇದು ಬೇರೆಯದೇ ರುಚಿ. ಇಲ್ಲಿಯ ಭಾಷೆ, ಅವರದ್ದೇ ಉಳಿದ ಪುಸ್ತಕಗಳಷ್ಟು ಜಟಿಲವಿಲ್ಲ. ಕಠಿನವೆನಿಸುವ ಆಗಿನ ಕಾಲದ ಪಾರಭಾಷಿಕ ಶಬ್ದಗಳಿಗೆ ಅರ್ಥವನ್ನೂ ಟಿಪ್ಪಣಿಗಳನ್ನೂ ಕೊಟ್ಟಿದ್ದಾರೆ. ಈ ಕಾದಂಬರಿಯ ಭಾಷೆ-ಶೈಲಿಗಳಲ್ಲಿ ಕುವೆಂಪು- ದೇವುಡು ಅವರುಗಳೇ ಮಾರ್ಗದರ್ಶಕರು ಎಂದು ಹೇಳಿದ್ದಾರೆ. ಕಥನ ತಂತ್ರದಲ್ಲಿ ಭಾರತೀಯ- ಪಾಶ್ಚಾತ್ಯರಾದ ಹಲವಾರು ಲೇಖಕರ ಪ್ರಭಾವವನ್ನೂ ಗಣೇಶರೇ ಹೇಳಿದ್ದಾರೆ. ಕಾದಂಬರಿ ಪ್ರಪಂಚದ ದಿಗ್ಧಂತಿಯಾದ ಡಾ| ಎಸ್‌. ಎಲ್‌. ಭೈರಪ್ಪನವರಿಗೆ ಈ ಕಾದಂಬರಿಯನ್ನು ಸಮರ್ಪಿಸಿದ್ದಾರೆ.

ಈ ಕಾದಂಬರಿಯ ಓದು ಕೇವಲ ರಂಜನೆಯಷ್ಟೇ ಅಲ್ಲದೇ, ಅದೆಷ್ಟೋ ವಿಷಯಗಳಲ್ಲಿ ಹೊಸ ಜ್ಞಾನವನ್ನೂ ಕೊಡುತ್ತದೆ. ಎಷ್ಟೋ ವಿಷಯಗಳಲ್ಲಿ ನಮಗೆ ಸ್ಪಷ್ಟವಾದ ವಿವರವನ್ನು ಕೊಡುತ್ತದೆ. ಸುಮಾರು ನಲವತ್ತು ವರ್ಷಗಳ ಕಾಲ ನಡೆಸಿದ ಶತಾವಧಾನಿಗಳ ಬಹುಮುಖವಾದ ಅಧ್ಯಯನದ ಬೃಹತ್‌ಸ್ವರೂಪವೇ ಈ ಕಾದಂಬರಿಯಲ್ಲಿ ಘನೀಭವಿಸಿದೆ ಎಂದು ಹೇಳಬಹುದು. ಮಹಾ ಕವಿ ಕಾಳಿದಾಸ ಮೇಘದೂತದಲ್ಲಿ ಉಜ್ಜಯಿನಿ ನಗರವನ್ನು ವರ್ಣಿ ಸುವಾಗ “ಅಲ್ಲಿ ಉದಯನನ ಕಥೆಯಲ್ಲಿ ಕೋವಿದರಾದ ಗ್ರಾಮ ವೃದ್ಧರು ಇರುತ್ತಾರೆ’ ಎಂದು ಹೇಳುತ್ತಾನೆ. ಮಣ್ಣಿನ ಕನಸನ್ನು ಓದಿ ಮುಗಿಸುವ ಹೊತ್ತಿಗೆ ಅಪ್ಪಿ-ತಪ್ಪಿ ಕಾಳಿದಾಸನೇನಾದರೂ ಗಣೇಶರ ಬಗ್ಗೆಯೇ ಹೇಳಿದ್ದಾನೆಯೇ ಎಂದೆನಿಸುತ್ತದೆ! ನಿಜಕ್ಕೂ ಕನ್ನಡದಲ್ಲಿ ಇಂತಹ ಕಾದಂಬರಿ ಬರುತ್ತಿರುವುದು ಕನಸು ನನಸಾಗುವ ಸಮಯ. ಮಣ್ಣಿನ ಕನಸು ಹೆಚ್ಚು ಹೆಚ್ಚು ಓದುಗರನ್ನು ಆಕರ್ಷಿಸಿ ಜನಪ್ರಿಯವಾಗಲಿ ಎಂದು ಆಶಿಸುತ್ತೇನೆ.

– ಗಣೇಶ ಭಟ್ಟ ಕೊಪ್ಪಲತೋಟ

ಟಾಪ್ ನ್ಯೂಸ್

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

15-dk

Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ

BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!

BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.