Recipe: ಭಿನ್ನ ರುಚಿಯ ದೋಸೆ ತಿನ್ನಬೇಕು ಅನ್ನಿಸಿದ್ರೆ ಈ ತರ ದೋಸೆ ಟ್ರೈ ಮಾಡಿ…
ಮಕ್ಕಳಿಗೂ ಇಷ್ಟ ಆಗುತ್ತೆ ಈ ರೆಸಿಪಿ...
ಶ್ರೀರಾಮ್ ನಾಯಕ್, Oct 21, 2024, 6:23 PM IST
ದಿನಾ ಒಂದೇ ರೀತಿಯ ತಿಂಡಿ ಮಾಡಿ ಮಾಡಿ ಬೇಜಾರಾಗಿದ್ದರೆ ಚಿಂತಿಸ್ಬೇಡಿ ನಾವೊಂದು ನಿಮಗೆ ಸಿಂಪಲ್ ಆಗಿ ಸ್ಪೆಷಲ್ ದೋಸೆಯೊಂದನ್ನು ಮಾಡುವ ವಿಧಾನ ಹೇಳ್ತೇವೆ. ದೋಸೆ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವರಿಗೆ ಮಸಾಲಾ ದೋಸೆ ,ರವೆ ದೋಸೆ ಇಷ್ಟವಾದರೆ ಇನ್ನು ಕೆಲವರಿಗೆ ಈರುಳ್ಳಿ ದೋಸೆ ಇಷ್ಟವಾಗುತ್ತದೆ. ಆದರೆ ನಾವು ಇಂದು ಹತ್ತರಿಂದ ಹದಿನೈದು ನಿಮಿಷದಲ್ಲಿ ಸುಲಭದಲ್ಲಿ ಮಾಡಬಹುದಾದ ಮಸಾಲ ನೀರ್ ದೋಸೆ ಮಾಡುವುದು ಹೇಗೆ ಎಂಬುದನ್ನು ಸುಲಭ ರೀತಿಯಲ್ಲಿ ಹೇಳಿಕೊಡುತ್ತೇವೆ.
ಬನ್ನಿ ಹಾಗಾದರೆ ಮತ್ಯಾಕೆ ತಡ “ಮಸಾಲ ನೀರ್ ದೋಸೆ” ಮಾಡುವುದು ಹೇಗೆಂಬುದನ್ನು ತಿಳಿದುಕೊಂಡು ಬರೋಣ…
ಮಸಾಲ ನೀರ್ ದೋಸೆ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-2ಕಪ್,ಒಣಮೆಣಸು-4,ಕೊತ್ತಂಬರಿ ಬೀಜ-1ಚಮಚ,ಜೀರಿಗೆ-ಅರ್ಧ ಚಮಚ, ಹುಳಿ-ಸ್ವಲ್ಪ,ಬೆಲ್ಲ-ಸ್ವಲ್ಪ,ತೆಂಗಿನ ತುರಿ-ಅರ್ಧ ಕಪ್,ತೆಂಗಿನೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಬೆಳ್ತಿಗೆ ಅಕ್ಕಿಯನ್ನು 3ರಿಂದ4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಮಿಕ್ಸಿಜಾರಿಗೆ ಹಾಕಿ,ಅದಕ್ಕೆ ಕೊತ್ತಂಬರಿ ಬೀಜ, ಜೀರಿಗೆ, ಹುಳಿ, ಬೆಲ್ಲ, ಒಣಮೆಣಸು ಮತ್ತು ತುರಿದಿಟ್ಟ ತೆಂಗಿನ ತುರಿಯನ್ನು ಹಾಕಿ,ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.ತದನಂತರ ಉಪ್ಪನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿರಿ.ಆಬಳಿಕ ಹಿಟ್ಟನ್ನು 5ರಿಂದ10ನಿಮಿಷಗಳ ಕಾಲ ಹಾಗೆ ಬಿಡಿ.ನಂತರ ದೋಸೆ ಕಾವಲಿಗೆ ತೆಂಗಿನೆಣ್ಣೆಯನ್ನು ಸವರಿ ಮಾಡಿಟ್ಟ ಹಿಟ್ಟನ್ನು ಹಾಕಿ ಚೆನ್ನಾಗಿ ಕಾಯಿಸಿರಿ.
ಈಗ ನಿಮ್ಮ ಇಷ್ಟದ ಮಸಾಲ ನೀರ್ ದೋಸೆ ಸವಿಯಲು ಸಿದ್ದ. ಇದನ್ನು ಯಾವುದೇ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿಯಾಗುತ್ತದೆ.
-ಶ್ರೀರಾಮ್ ಜಿ . ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Copper:ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದೀರಾ? ಹಾಗಾದರೆ ನೀವು ಇದನ್ನು ಓದಲೇಬೇಕು…
NavIC ಶಕ್ತಿ ವೃದ್ಧಿಸಲಿದೆ NVS-02: ಇಸ್ರೋ ಶತಕದ ಸಾಧನೆ ನಿರ್ಮಿಸಲಿದೆ ಜಿಎಸ್ಎಲ್‌ವಿ ಎಫ್15
Republic Day ಪೆರೇಡ್ 2025:ಭಾರತೀಯ ರಕ್ಷಣಾ ಸಾಮರ್ಥ್ಯ ಪ್ರದರ್ಶನ;ಆಗಸದಲ್ಲಿ ಭಾರತದ ಪಾರಮ್ಯ
ಸ್ವಾತಂತ್ರ್ಯ ಹಾಗೂ ಆಂತರಿಕ ದಂಗೆ: ಚಿಕ್ಕ ರಾಷ್ಟ್ರದಲ್ಲೂ ಹಲವು ಪ್ರವಾಸಿ ಆಕರ್ಷಣೆಗಳು
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
MUST WATCH
ಹೊಸ ಸೇರ್ಪಡೆ
Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ
Ullala: ಬಿದ್ದು ಸಿಕ್ಕಿದ್ದ 2.5 ಲ.ರೂ. ಮೌಲ್ಯದ ಚಿನ್ನಾಭರಣ ಮರಳಿಸಿದ ಯುವಕ!
Mangaluru:ವಿಮಾನ ನಿಲ್ದಾಣದಲ್ಲಿ ಕಳೆದು ಹೋದ ಚಿನ್ನದ ಸರ; ಮಾಲಕರಿಗೆ ಒಪ್ಪಿಸಿದ ಸಿಐಎಸ್‌ಎಫ್
ಇಂದು ರಾಜ್‌ಕೋಟ್ ಫೈಟ್ ; ಸರಣಿ ಗೆಲುವಿಗೆ ಒಂದೇ ಮೆಟ್ಟಿಲು; ಒತ್ತಡದಲ್ಲಿ ಇಂಗ್ಲೆಂಡ್