Maha Kumbh; ಐಐಟಿ ಬಾಂಬೆಯಲ್ಲಿ ಕಲಿತ ಏರೋಸ್ಪೇಸ್ ಇಂಜಿನಿಯರ್ ಈಗ ಬಾಬಾ!

ಆಧ್ಯಾತ್ಮಿಕ ಲೋಕದಲ್ಲಿ ಎದ್ದು ಕಾಣುವ ವಿಶಿಷ್ಟ ಕಥೆ...

ವಿಷ್ಣುದಾಸ್ ಪಾಟೀಲ್, Jan 15, 2025, 2:01 PM IST

1-baba

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಐತಿಹಾಸಿಕ  ಮಹಾಕುಂಭವು ಹಲವು ವಿಚಾರಕ್ಕಾಗಿ ವಿಶ್ವದ ಗಮನಸೆಳೆದಿದ್ದು, ಅದರಲ್ಲಿ ಲಕ್ಷಾಂತರ ಮಂದಿ ಸಾಧು, ಸಂತರು ಭಿನ್ನ ,ವಿಭಿನ್ನ ವೇಷಭೂಷಣಗಳೊಂದಿಗೆ ಭಾಗಿಯಾಗುತ್ತಿದ್ದಾರೆ.ಎಲ್ಲರ ಪೈಕಿ ಐಐಟಿ ಬಾಂಬೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದ ಸಾಧಕರೊಬ್ಬರು ಈಗ ಬಾಬಾ ಆಗಿ ಬದಲಾಗಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ.

ಹರಿಯಾಣ ಮೂಲದ ಅಭಯ್ ಸಿಂಗ್ ಅವರು ಆಧ್ಯಾತ್ಮಿಕತೆಗೆ ಮೀಸಲಾದ ಜೀವನಕ್ಕಾಗಿ ತಮ್ಮ ವೈಜ್ಞಾನಿಕ ಲೋಕದಿಂದ ಹೊರಬಂದಿದ್ದಾರೆ. ಕುಂಭದಲ್ಲಿ ಪಾಲ್ಗೊಂಡ ಬಳಿಕ ‘ಇಂಜಿನಿಯರ್ ಬಾಬಾ’ ಎಂದು ಕರೆಯಲ್ಪಡುತ್ತಿರುವ ಸಿಂಗ್ ಅವರು ಆಧ್ಯಾತ್ಮಿಕ ಲೋಕದಲ್ಲಿ ಎದ್ದು ಕಾಣುವ ವಿಶಿಷ್ಟ ಕಥೆಯನ್ನು ಹೊಂದಿದ್ದಾರೆ.

ಮಹಾ ಕುಂಭದಲ್ಲಿ ಅವರ ಉಪಸ್ಥಿತಿ ಕುತೂಹಲವನ್ನು ಕೆರಳಿಸಲು ಕಾರಣವಾಗಿದ್ದು, ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ತನ್ನ ಸಾಮರ್ಥ್ಯ ಪ್ರಕಟ ಪಡಿಸಿದರು. ಅವರನ್ನು ಮಾತನಾಡಿಸಿದ ಪತ್ರಕರ್ತರೂ ಮುಂದೇನು ಪ್ರಶ್ನೆ ಕೇಳುವುದು ಎಂದು ಚಕಿತರಾದರು. ವೈಜ್ಞಾನಿಕ ಜ್ಞಾನ ಮತ್ತು ಆಧ್ಯಾತ್ಮಿಕ ಬುದ್ಧಿವಂತಿಕೆಯ ಮಿಶ್ರಣ, ತಪಸ್ವಿಗಳ ಸಾಂಪ್ರದಾಯಿಕ ಚಿತ್ರಣ ಅವರನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗಿ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಲು ಕಾರಣವಾಗಿದೆ.

ಅಧ್ಯಾತ್ಮಕ್ಕಾಗಿ ವಿಜ್ಞಾನದ ಹಾದಿಯನ್ನು ತೊರೆದು ವಿಭಿನ್ನ ಲೋಕದಲ್ಲಿ ಪಯಣಿಸುತ್ತಿರುವ ಅಭಯ್ ಸಿಂಗ್ ನಾನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಿಂದ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

‘ಮುಂಬೈನಲ್ಲಿ ನಾಲ್ಕು ವರ್ಷ ಇದ್ದೆ, ನಿಧಾನವಾಗಿ ನನ್ನ ಆಸಕ್ತಿ ಫೋಟೋಗ್ರಫಿ ಕಡೆಗೆ ಹೊರಳಿತು. ಕಲೆಗಳ ಕುರಿತೂ ನಾನು ಆಸಕ್ತ . ಕ್ಯಾಂಪಸ್ ಪ್ಲೇಸ್ ಮೆಂಟ್ ಮೂಲಕವೇ ಉತ್ತಮ ಉದ್ಯೋಗವನ್ನು ಗಳಿಸಿದ್ದೆ,ಕಾರ್ಪೊರೇಟ್ ಲೋಕದಲ್ಲಿ ಕೆಲಸ ಮಾಡಿದೆ. ಈಗ ಆಧ್ಯಾತ್ಮಿಕ ಲೋಕದಲ್ಲಿ ಬೇರೆಲ್ಲೂ ಕಾಣದ ಸಂತೋಷ ಅನುಭವಿಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಸಿಂಗ್ ” ನಾನು ಪ್ರಾಧ್ಯಾಪಕನಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಕೈಯಾಡಿಸಿದೆ. ಕೋಚಿಂಗ್ ಸೆಂಟರ್ ಒಂದನ್ನು ತೆರೆದು, ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಪಾಠ ಮಾಡಿದೆ. ಆದಾಗ್ಯೂ, ಅವರ ಶೈಕ್ಷಣಿಕ ಯಶಸ್ಸಿನ ಹೊರತಾಗಿಯೂ,ಆ ವೃತ್ತಿ ಮಾರ್ಗ ತಾನು ಬಯಸಿದ ನೆರವೇರಿಕೆಯನ್ನು ತರಲಿಲ್ಲ” ಎಂದು ಹೇಳಿಕೊಂಡರು.

”ಟ್ರಾವೆಲ್ ಫೋಟೋಗ್ರಫಿ ಮಾಡುತ್ತಿದ್ದುದು ನಾನು  ಇಂಜಿನಿಯರಿಂಗ್ ವೃತ್ತಿ ತೊರೆಯಲು ಕಾರಣವಾಯಿತು. ಟ್ರಾವೆಲ್ ಫೋಟೋಗ್ರಫಿಯಲ್ಲಿ ವೃತ್ತಿಪರ ಕೋರ್ಸ್ ಮಾಡಿದೆ . ಇದು ನನ್ನ ಜೀವನದ ಮಹತ್ವದ ತಿರುವು ಎಂದು ಸಾಬೀತಾಯಿತು. ಆ ಅವಧಿಯಲ್ಲಿ, ಜೀವನದ ಬಗ್ಗೆ ನನ್ನ ಗುರಿ ಬದಲಾಗಲಾರಂಭಿಸಿತು.ಕ್ರಮೇಣ, ಆಸಕ್ತಿಗಳು ಆಧ್ಯಾತ್ಮಿಕತೆಯ ಕಡೆಗೆ ಬದಲಾಯಿತು. ಆಳವಾದ ಆಧ್ಯಾತ್ಮಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲು, ಅನುಭವಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟೆ” ಎಂದು ಹೇಳಿಕೊಂಡಿದ್ದಾರೆ.

”ಇಂದು ನಾನು ಭಗವಾನ್ ಶಿವನ ಭಕ್ತ ಎಂದು ಗುರುತಿಸಿಕೊಳ್ಳುತ್ತೇನೆ. ಧರ್ಮ ಜಾಗೃತಿಯನ್ನು ಪ್ರತಿಬಿಂಬಿಸುತ್ತಾ ಆಧ್ಯಾತ್ಮಿಕತೆಯನ್ನು ಆನಂದಿಸುತ್ತಿದ್ದೇನೆ. ನಾನು ವಿಜ್ಞಾನದ ಮೂಲಕ ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳುತ್ತೇನೆ. ನಾನು ಅದರ ಆಳಕ್ಕೆ ಹೋಗುತ್ತಿದ್ದೇನೆ. ಎಲ್ಲವೂ ಶಿವನೇ. ಸತ್ಯವೇ ಶಿವ, ಮತ್ತು ಶಿವ ಸುಂದರ” ಎಂದು ಅನುಭವಗಳನ್ನು ಅಭಯ್ ಸಿಂಗ್ ಬಿಚ್ಚಿಟ್ಟಿದ್ದಾರೆ.

ಸದ್ಯ ಮಹಾ ಕುಂಭದಲ್ಲಿ ಅಭಯ್ ಸಿಂಗ್ ಅವರ ಉಪಸ್ಥಿತಿಯು ಅನೇಕ ಪತ್ರಕರ್ತರ ಕುತೂಹಲವನ್ನು ಕೆರಳಿಸಿದ್ದು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಪತ್ರಕರ್ತರೊಂದಿಗೆ ತೊಡಗಿಸಿಕೊಳ್ಳುವ ಅವರ ಸಾಮರ್ಥ್ಯ ಗಮನ ಸೆಳೆದಿದೆ. ಅನೇಕರು ಅವರನ್ನು ಹುಡುಕಿಕೊಂಡು ಬರುವಂತೆ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯವಾಗಿದ್ದು, Instagram ನಲ್ಲಿ ಈಗಾಗಲೇ ಸುಮಾರು 29,000 ಹಿಂಬಾಲಕರನ್ನು ಹೊಂದಿದ್ದಾರೆ, ಆ ಸಂಖ್ಯೆ ಏಕಾಏಕಿ ಹೆಚ್ಚಾಗುವ ಸಾಧ್ಯತೆಗಳಿವೆ. ಅಭಯ್ ಸಿಂಗ್ ಅವರ ವಿಚಾರಗಳು ಪ್ರಮುಖವಾಗಿ ಧ್ಯಾನ, ಯೋಗ, ಪ್ರಾಚೀನ ಸೂತ್ರಗಳು ಮತ್ತು ಆಧ್ಯಾತ್ಮಿಕ ವಿಚಾರಗಳ ಕುರಿತಾಗಿದೆ.

ಮಹಾಕುಂಭದ ಕುರಿತಾಗಿ ಅನುಭವ ಹಂಚಿಕೊಂಡ ಅಭಯ್ ಸಿಂಗ್ ”ಇಲ್ಲಿರುವುದು ಮನಸ್ಸಿಗೆ ಅತೀವ ನೆಮ್ಮದಿ ತಂದಿದೆ’ ಎಂದು ಸಂತಸ ಹೊರ ಹಾಕಿದ್ದಾರೆ.

ಟಾಪ್ ನ್ಯೂಸ್

Karkala: ಯಕ್ಷಗಾನ ಪ್ರದರ್ಶನ ನಿಲ್ಲಿಸಲು ಮುಂದಾದ ಪೊಲೀಸರು… ಆಕ್ರೋಶ, ಎಸ್ಪಿ ಸ್ಪಷ್ಟನೆ

Karkala: ಯಕ್ಷಗಾನ ಪ್ರದರ್ಶನ ನಿಲ್ಲಿಸಲು ಮುಂದಾದ ಪೊಲೀಸರು… ಆಕ್ರೋಶ, ಎಸ್ಪಿ ಸ್ಪಷ್ಟನೆ

1-ssss

ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

11-betel-leaf-1

Betel leaf: ಮೈಸೂರ ಚಿಗುರೆಲೆ

10-bike

ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

rasaleele

Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-tender-coconut

Tender Coconut: ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ….

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

23

UV Fusion: ಹೊಸ ಅಧ್ಯಾಯ 2025

22

UV Fusion: ಹೊಸವರ್ಷದ ಹೊಸ್ತಿಲಲ್ಲಿ ನವ ಸಂಕಲ್ಪ ನಮ್ಮದಾಗಲಿ

21

UV Fusion: ಹೊಸ ವರ್ಷದ ಹೊಸ್ತಿಲಲ್ಲಿ ಭರವಸೆಗಳ ಬುತ್ತಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Karkala: ಯಕ್ಷಗಾನ ಪ್ರದರ್ಶನ ನಿಲ್ಲಿಸಲು ಮುಂದಾದ ಪೊಲೀಸರು… ಆಕ್ರೋಶ, ಎಸ್ಪಿ ಸ್ಪಷ್ಟನೆ

Karkala: ಯಕ್ಷಗಾನ ಪ್ರದರ್ಶನ ನಿಲ್ಲಿಸಲು ಮುಂದಾದ ಪೊಲೀಸರು… ಆಕ್ರೋಶ, ಎಸ್ಪಿ ಸ್ಪಷ್ಟನೆ

1-ssss

ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ

13-uv-fusion

Bharatanatyam: ನಾಟ್ಯಗಳ ರಾಣಿ ಭರತನಾಟ್ಯ

12-uv-fusion

Education: ಮಾನವನ ಸುಸ್ಥಿರತೆಗೆ ಶಿಕ್ಷಣ ಮೂಲ ಮಂತ್ರ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.