ಜನಪ್ರಿಯವಾಗಿದ್ದ ನಟನೆ ಬಿಟ್ಟು ಡಾಬಾದಲ್ಲಿ ತಟ್ಟೆ ತೊಳೆಯುವ ಕೆಲಸಕ್ಕೆ ಸೇರಿದ್ದ ಖ್ಯಾತ ನಟ
ಸುಹಾನ್ ಶೇಕ್, Feb 26, 2024, 3:24 PM IST
ಬಣ್ಣದ ಲೋಕ ಎಂದರೆ ಹಾಗೆಯೇ ಇಲ್ಲಿ ಇಂದು ಮಿಂಚುತ್ತಿರುವ ಕಲಾವಿದರು ನಾಳೆ ಮಾಯಾವಾಗಬಹುದು. ಇಂದು ಸತತ ಸೋಲು ಕಾಣುತ್ತಿರುವ ಕಲಾವಿದ ನಾಳೆಯ ದಿನ ದೊಡ್ಡ ಸೆಲೆಬ್ರಿಟಿಯೂ ಆಗಬಹುದು. ನಮಗೆಲ್ಲರಿಗೂ ಸಿನಿಮಾರಂಗ ಎಂದರೆ ಇಂದು ಪ್ರಮುಖ ಕಲಾವಿದರು ಮಾತ್ರ ಕಣ್ಮುಂದೆ ಬರುತ್ತಾರೆ. ಆದರೆ ಸಹ ಕಲಾವಿದರಾಗಿ ಬಣ್ಣ ಹಚ್ಚುವ ನಟರು ಹಾಗೂ ಅವರ ಹಿಂದಿನ ಕಥೆಯನ್ನು ನಾವು ಅಷ್ಟಾಗಿ ಕೇಳಿರುವುದಿಲ್ಲ.
ಇಂದು ಬಾಲಿವುಡ್ ನಲ್ಲಿ ತನ್ನ ಅಭಿನಯದಿಂದಲೇ ಗಮನ ಸೆಳೆದಿರುವ ಹಾಗೂ ಎಲ್ಲಾ ಪಾತ್ರಗಳಿಗೂ ಜೀವ ತುಂಬುವ ಸಹ ಕಲಾವಿದರೊಬ್ಬರ ಕಥೆಯಿದು..
30 ಹರೆಯದಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ನಟ ಸಂಜಯ್ ಮಿಶ್ರಾ. ಒಂದು ಕಾಲದಲ್ಲಿ ಸಿನಿಮಾವನ್ನೇ ಬಿಟ್ಟು ಅಪರಿಚಿತ ವ್ಯಕ್ತಿಯಂತೆ ರಸ್ತೆ ಬದಿಯ ಅಂಗಡಿಯಲ್ಲಿ ಕೆಲಸ ಮಾಡುವ ಸ್ಥಿತಿಗೆ ಬಂದಿದ್ದರು. ಹಾಗಾದರೆ ಬನ್ನಿ ಅವರ ಜೀವನದಲ್ಲಿ ಅಂಥದ್ದೇನಾಯಿತು ಎನ್ನುವುದನ್ನು ತಿಳಿಯೋಣಾ..
ಇಂದು ಬಾಲಿವುಡ್ ಸಿನಿಮಾರಂಗದಲ್ಲಿ ಸಂಜಯ್ ಮಿಶ್ರಾ ಅವರಿಗೆ ಗೌರವ ಹಾಗೂ ಮನ್ನಣೆ ಎರಡೂ ಇದೆ. ಆದರೆ ಸಿನಿಮಾರಂಗಕ್ಕೆ ಬರುವ ಮುನ್ನ ಅವರು ಕಟ್ಟಡ ಕೆಲಸವನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದರು. ಶಾಲೆಗೆ ಸರಿಯಾಗಿ ಹಾಜರಾಗದೆ ಕಟ್ಟಡ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ ಅವರಿಗೆ ನಟನೆಯ ಹುಚ್ಚು ಹತ್ತಿದ್ದು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸಂಸ್ಥೆಗೆ ಸೇರಿದ ಬಳಿಕ. ಇಲ್ಲೇ ಅವರು 1989 ರಲ್ಲಿ ಪದವಿ ಪಡೆದರು.
ಜಾಹೀರಾತಿನಿಂದ ಆರಂಭವಾದ ಹೊಸ ಬದುಕು.. ಕಟ್ಟಡ ಕೆಲಸದಿಂದ ಡ್ರಾಮಾ ಶಾಲೆಗೆ ಸೇರಿ ನಟನೆಯನ್ನೇ ಹವ್ಯಾಸವಾಗಿಸಿಕೊಂಡ ಸಂಜಯ್ ಅವರು, ನಿಧಾನವಾಗಿ ಬಣ್ಣದ ಲೋಕದತ್ತ ಹೊಸ ಹೆಜ್ಜೆಯನ್ನಿಡಲು ಆರಂಭಿಸಿದರು. ಸಣ್ಣಪುಟ್ಟ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಂತರ, ಕಿರುತೆರೆಯಲ್ಲಿ ಪಾತ್ರ ಮಾಡುವ ಅವಕಾಶ ಅವರನ್ನು ಹುಡುಕಿಕೊಂಡು ಬಂತು. 1991 ರಲ್ಲಿ ಅವರು ʼಚಾಣಕ್ಯʼ ಎನ್ನುವ ಧಾರಾವಾಹಿಯಲ್ಲಿ ಕೆಲಸ ಮಾಡುವ ಮೂಲಕ ಮೊದಲ ಬಾರಿ ದೂರದರ್ಶನದಲ್ಲಿ ಕಾಣಿಸಿಕೊಂಡರು. ಆದರೆ ನಟನೆ ಅವರಿಗಿಲ್ಲಿ ಅಷ್ಟು ಸುಲಭವಾಗಿರಲಿಲ್ಲ. ಕ್ಯಾಮರಾದ ಮುಂದೆ ಮೊದಲ ದಿನವೇ ಅವರು ಒಂದೇ ಒಂದು ಸೀನ್ ಗಾಗಿ 28 ರೀಟೇಕ್ ಗಳನ್ನು ತೆಗೆದುಕೊಂಡಿದ್ದರು.
ಇದಾದ ಬಳಿಕ ಅವರಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂತು 1995 ರಲ್ಲಿ ಬಂದ ʼಓ ಡಾರ್ಲಿಂಗ್! ಯೇ ಹೈ ಇಂಡಿಯಾ!ʼ ಸಿನಿಮಾದಲ್ಲಿ ಹಾರ್ಮೋನಿಯಂ ವಾದಕರಾಗಿ ಸಣ್ಣ ಪಾತ್ರವನ್ನು ನಿರ್ವಹಿಸಿದರು.
ಸಾಲು ಸಾಲು ಚಿತ್ರಗಳಲ್ಲಿ ನಟನೆ: ಒಬ್ಬ ಕಲಾವಿದನ ಪಾತ್ರಕ್ಕೆ ಪ್ರೇಕ್ಷಕರಿಂದ ಪ್ರಶಂಸೆ ಸಿಕ್ಕರೆ ಆತನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಅದೇ ರೀತಿ ಸಂಜಯ್ ಅವರೊಂದಿಗೂ ಆಗಿತ್ತು. ʼಓ ಡಾರ್ಲಿಂಗ್! ಯೇ ಹೈ ಇಂಡಿಯಾ!ʼ ಸಿನಿಮಾದ ಬಳಿಕ ಸಂಜಯ್ ಅವರು ʼಸತ್ಯʼ, ಶಾರುಖ್ ಖಾನ್ ಅವರ ʼದಿಲ್ ಸೇʼ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ʼಬಂಟಿ ಔರ್ ಬಬ್ಲಿʼ ,ʼಅಪ್ನಾ ಸಪ್ನಾ ಮನಿ ಮನಿʼ ಗೋಲ್ಮಾಲ್, ಧಮಾಲ್, ವೆಲ್ ಕಮ್ ಸಿನಿಮಾದಲ್ಲಿನ ಅವರ ಹಾಸ್ಯ ಪಾತ್ರದ ಅಭಿನಯಕ್ಕೆ ಪ್ರಶಂಸೆ ದೊರೆಯಿತು.
ತಂದೆಯ ನಿಧನದಿಂದ ಕಾಡಿದ ನೋವು.., ಚಿತ್ರರಂಗದಿಂದ ದೂರ: ಬಾಲಿವುಡ್ ನಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಸಂಜಯ್ ಮಿಶ್ರಾ ಅವರಿಗೆ ಅವರ ತಂದೆ ನಿಧನ ಯಾವುದು ಬೇಡ ಎನ್ನುವಷ್ಟರ ಮಟ್ಟಿಗೆ ನೋವಾಗಿ ಕಾಡುತ್ತದೆ. ಈ ಕಾರಣದಿಂದ ಅವರು ಒಂಟಿಯಾಗಿ ಬಾಲಿವುಡ್ ತೊರೆದು ರಿಷಿಕೇಶ್‌ಗೆ ತೆರಳುತ್ತಾರೆ. ಒಂದಷ್ಟು ದಿನ ಅತ್ತಿತ್ತ ತಿರಗಾಡಿದ ಬಳಿಕ ಅವರಿಗೆ ದಿನ ಸಾಗಿಸಲು ಏನಾದರು ಕೆಲಸ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಡಾಬಾವೊಂದರಲ್ಲಿ ಕೆಲಸಕ್ಕೆ ಸೇರಿ ಅವರು ಅಲ್ಲಿ ಮ್ಯಾಗಿ, ಆಮ್ಲೇಟ್ ಗಳನ್ನು ಮಾಡಿ ಮಾರಾಟ ಮಾಡುತ್ತಾರೆ. ಬಿಡುವಿನ ವೇಳೆ ಅವರು ಅಲ್ಲಿ ತಟ್ಟೆಗಳನ್ನು ತೊಳೆಯುವ ಕೆಲಸವನ್ನೂ ಮಾಡುತ್ತಿದ್ದರು.
“ಆ ಸಮಯ ಬಹಳ ಕಷ್ಟವಾಗಿತ್ತು. ಸಿನಿಮಾ ಉದ್ಯಮದ ಬಗ್ಗೆ ನನಗೆ ಯಾವುದೇ ದೂರು ಇರಲಿಲ್ಲ. ನನ್ನ ಜೀವನದ ಬಗ್ಗೆ ನನಗೆ ದೂರುಗಳಿದ್ದವು. ಆ ಸಮಯದಲ್ಲಿ ನನ್ನ ತಂದೆ ತೀರಿಕೊಂಡರು. ನಾನು ಸಹ ಅನಾರೋಗ್ಯದಿಂದ ಹೋರಾಡುತ್ತಿದ್ದೆ. ವೈದ್ಯರು ನನ್ನ ಹೊಟ್ಟೆಯಿಂದ 15 ಲೀಟರ್ ಕೀವು ತೆಗೆದರು. ಅದು ವಾಸಿಯಾದ ನಂತರ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ನಾನು ನನ್ನ ಜೀವನವನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ. ಹಾಗಾಗಿ, ನಾನು ಋಷಿಕೇಶಕ್ಕೆ ಹೋಗಿ ಗಂಗಾ ತೀರದ ಬಳಿಯ ಡಾಬಾದಲ್ಲಿ ಆಮ್ಲೇಟ್ ಮಾಡಲು ಪ್ರಾರಂಭಿಸಿದೆ. ನಾನು ದಿನಕ್ಕೆ 50 ಕಪ್‌ಗಳನ್ನು ತೊಳೆಯಬೇಕು ಮತ್ತು ನನಗೆ 150 ರೂ ಸಿಗುತ್ತದೆ ಎಂದು ಡಾಬಾ ಮಾಲೀಕರು ನನಗೆ ಹೇಳಿದರು. ಆದರೆ ನನ್ನ ಉಳಿವಿಗಾಗಿ ನನಗೆ ಹಣ ಬೇಕು ಎಂದು ನಾನು ಭಾವಿಸಿದೆ” ಎಂದು ಸಂಜಯ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಆದರೆ ಈ ಕಷ್ಟದ ಸಮಯದಲ್ಲಿ ಬಂದ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಸಂಜಯ್ ಅವರಿಗೆ ಕರೆ ಮಾಡಿ ಮುಂಬಯಿಗೆ ಬನ್ನಿ ಎನ್ನುತ್ತಾರೆ. ʼಆಲ್ ದಿ ಬೆಸ್ಟ್: ಫನ್ ಅನ್‌ಲಿಮಿಟೆಡ್ʼ ಎನ್ನುವ ಸಿನಿಮಾದಲ್ಲಿ ಪಾತ್ರವೊಂದನ್ನು ಸಂಜಯ್ ಮಾಡುವ ಮೂಲಕ ಸಿನಿಮಾಕ್ಕೆ ರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಾರೆ. ಆ ಬಳಿಕ ʼಜಾಲಿ LLBʼ, ʼಗೋಲ್ಮಾಲ್ 3ʼ, ʼಸನ್ ಆಫ್ ಸರ್ದಾರ್ ʼ ಹೀಗೆ ಸಾಲು ಸಾಲು ಸಿನಿಮಾದಲ್ಲಿ ಕಾಣಿಸಿಕೊಂಡು ಬಾಲಿವುಡ್ ನಲ್ಲಿ ಬಹು ಬೇಡಿಕೆಯ ಸಹನಟನಾಗಿ ಕಾಣಿಸಿಕೊಳ್ಳುತ್ತಾರೆ. ಇಂದು ಬಿಟೌನ್ ನಲ್ಲಿ ಸಂಜಯ್ ಮಿಶ್ರಾ ಅವರು ಮಾಡದ ಪಾತ್ರಗಳಿಲ್ಲ. ಇತ್ತೀಚೆಗೆ ಅವರು ಭೂಮಿ ಪಡ್ನೇಕರ್ ಅವರ ʼಭಕ್ಷಕ್ʼ ನಲ್ಲಿ ಕಾಣಿಸಿಕೊಂಡಿದ್ದಾರೆ.
-ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.