ಗ್ರೀನ್‌ ಮ್ಯಾನ್‌; ಎರಡೇ ವರ್ಷದಲ್ಲಿ 25 ಕಿರು ಅರಣ್ಯ ನಿರ್ಮಿಸಿದ ಕಂದಾಯ ಅಧಿಕಾರಿ

ಮಾಲಿನ್ಯದ ಪರಿಸ್ಥಿತಿ ಅರಿವಾಗಿದ್ದು ಹಾಗೂ ಅವರ ಮೇಲೆ ಇದು ಗಾಢ ಪರಿಣಾಮವನ್ನು ಬೀರಿತ್ತು.

Team Udayavani, Aug 28, 2021, 4:22 PM IST

ಗ್ರೀನ್‌ ಮ್ಯಾನ್‌; ಎರಡೇ ವರ್ಷದಲ್ಲಿ 25 ಕಿರು ಅರಣ್ಯ ನಿರ್ಮಿಸಿದ ಕಂದಾಯ ಅಧಿಕಾರಿ

ಸರಕಾರಿ ಅಧಿಕಾರಿಗಳೆಂದರೆ ತಮ್ಮ ಪಾಲಿಗೆ ಬಂದ ಕೆಲಸವನ್ನು ಮಾತ್ರ ಮಾಡಿ ಮುಗಿಸುವವರು ಎಂಬ ಮಾತಿದೆ. ಇಂಥವರ ನಡುವೆಯೂ ಸರಕಾರಿ ಅಧಿಕಾರಿಗಳು ಈ ರೀತಿಯಲ್ಲೂ ಕಾರ್ಯನಿರ್ವಹಿಸಬಹುದು ಎನ್ನುವುದಕ್ಕೆ ಮಾದರಿ ಪಂಜಾಬ್‌ ಲೂಧಿಯಾನದ ಭಾರತೀಯ ಕಂದಾಯ ಸೇವೆಯ ಅಧಿಕಾರಿ ರೋಹಿತ್‌ ಮೆಹ್ರಾ.

ಗ್ರೀನ್‌ ಮ್ಯಾನ್‌ ಆಫ್ ಲೂಧಿಯಾನ ಎಂದೇ ಖ್ಯಾತರಾಗಿರುವ 41 ವರ್ಷದ ರೋಹಿತ್‌ ಮೆಹ್ರಾ ಎರಡೇ ವರ್ಷದಲ್ಲಿ 500 ಅಡಿಯಿಂದ 4 ಎಕ್ರೆ ಪ್ರದೇಶಗಳಲ್ಲಿ 25 ಮಿನಿ ಕಾಡುಗಳನ್ನು ನಿರ್ಮಿಸಿದ್ದಾರೆ. ಪಂಜಾಬ್‌ನಾದ್ಯಂತ ಇಲ್ಲಿಯವರೆಗೆ 75 ಲಂಬ ಉದ್ಯಾನವನಗಳನ್ನು ನಿರ್ಮಿಸಿದ ಖ್ಯಾತಿ ಇವರದ್ದಾಗಿದೆ.

ಹೇಳಿ ಕೇಳಿ ಲೂಧಿಯಾನ ಕೈಗಾರಿಕೆಗಳ ಕೇಂದ್ರ ಇಂತಹ ಪ್ರದೇಶದಲ್ಲಿ ಕಾಡು ಬೆಳೆಸುವುದು ಸವಾಲಿನ ಕೆಲಸವೇ ಸರಿ. ಇಲ್ಲಿನ ವಿಪರೀತ ಮಾಲಿನ್ಯ ವಾತಾವರಣದಿಂದಾಗಿ ಶಾಲಾ-ಕಾಲೇಜುಗಳಿಗೆ ನಾಲ್ಕೈದು ದಿನ ರಜೆ ನೀಡಲಾಗುತ್ತದೆ. ಶಾಲಾ ವಿದ್ಯಾರ್ಥಿಯಾಗಿದ್ದ ರೋಹಿತ್‌ ಮೆಹ್ರಾ ಮಗನಿಗೂ ಹೀಗೆ ನಾಲ್ಕೈದು ದಿನ ರಜೆ ನೀಡಲಾಗಿದ್ದು ಆವಾಗಲೇ ರೋಹಿತ್‌ ಮೆಹ್ರಾಗೆ ಇಲ್ಲಿನ ಪರಿಸರ ಮಾಲಿನ್ಯದ ಪರಿಸ್ಥಿತಿ ಅರಿವಾಗಿದ್ದು ಹಾಗೂ ಅವರ ಮೇಲೆ ಇದು ಗಾಢ ಪರಿಣಾಮವನ್ನು ಬೀರಿತ್ತು.

ಪ್ರಾಚೀನ ತಂತ್ರಜ್ಞಾನ
ಎರಡೇ ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸುವುದು ಸುಲಭದ ಮಾತಲ್ಲ. ಇದರ ಅನುಭವ ಕೂಡ ಇವರಿಗೆ ಇರಲಿಲ್ಲ. ಇದಕ್ಕಾಗಿ ಸಾಕಷ್ಟು ಅಧ್ಯಯನವನ್ನು ನಡೆಸಿದರು. ಪ್ರಾಚೀನ ವಿಜ್ಞಾನವನ್ನು ಅರಿಯಲು ಮುಂದಾದರೂ ವೃಕ್ಷಾಯುರ್ವೇದ ಕೃತಿ ಆಧಾರದಲ್ಲಿ ಅರಣ್ಯ ನಿರ್ಮಿಸಿದರು. ಆಶ್ಚರ್ಯವೆಂದರೆ ಈ ಕೃತಿಯಲ್ಲಿ ಮಿಯಾವಕಿ ಮಾದರಿಯ ಉಲ್ಲೇಖವಿತ್ತು.

ಕೈಗಾರಿಕ ಪ್ರದೇಶವೀಗ ಹಚ್ಚ ಹಸುರು
ಲೂಧಿಯಾನದಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿನ ತೆರೆದ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಮಾಲಿನ್ಯವನ್ನು ತಗ್ಗಿಸುವ ರೋಹಿತ್‌ ಅವರ ಕಾರ್ಯಕ್ಕೆ ಕಾನ್ಫಿಡರೇಷನ್‌ ಆಫ್ ಇಂಡಿಯನ್‌ ಇಂಡಸ್ಟ್ರಿ (ಸಿಐಐ) ಕೂಡ ಕೈಜೋಡಿಸಿದೆ. ರೋಹಿತ್‌ ಅವರ ಮಾರ್ಗದರ್ಶನದಲ್ಲಿ ಸೃಷ್ಟಿಯಾದ 15 ಅರಣ್ಯಗಳಲ್ಲಿ ಎಂಟು ಕಾಡುಗಳು ಕೈಗಾರಿಕಾ ಪ್ರದೇಶಗಳಲ್ಲಿಯೇ ಇವೆ.

ವರ್ಟಿಕಲ್‌ ಗಾರ್ಡನ್‌
ಲೂಧಿಯಾನ ಆಯುಕ್ತರ ಭವನದಲ್ಲಿ ನಗರದ ಮೊದಲ ವರ್ಟಿಕಲ್‌ ಗಾರ್ಡನ್‌ ಸೃಷ್ಟಿಸಿದ ಖ್ಯಾತಿ ಇವರದ್ದು. ಕೈಗಾರಿಕೋದ್ಯಮಿಯೊಬ್ಬರು ತಮ್ಮ 6,000 ಚದರ ಅಡಿ ಅಗಲದ ನಿವೇಶನವನ್ನು ಅರಣ್ಯವನ್ನಾಗಿ ಪರಿವರ್ತಿಸುವಂತೆ ಮೆಹ್ರಾ ಅವರನ್ನು ಕೋರಿದ್ದರು ಎಂದರೆ ಅವರು ಬೀರಿರುವ ಪ್ರಭಾವ ಎಂಥದ್ದು ಎಂದು ಅರಿವಾಗುತ್ತದೆ. ಜನರು ಈ ವರ್ಟಿಕಲ್‌ ಗಾರ್ಡನ್‌ ಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ, ತಮ್ಮ ಜಮೀನುಗಳಲ್ಲಿನ ಉಳಿದ ಭಾಗಗಳನ್ನು ಅರಣ್ಯವನ್ನಾಗಿ ಪರಿವರ್ತಿಸಿಕೊಡವಂತೆಯೂ ಕೋರುತ್ತಿದ್ದಾರೆ ಎಂದು ರೋಹಿತ್‌ ಹೇಳುತ್ತಾರೆ. ಇದೀಗ ಅನೇಕ ಸಂಘ,ಸಂಸ್ಥೆಗಳು ರೋಹಿತ್‌ ಮೆಹ್ರಾ ಜತೆ ಕೈಜೋಡಿಸಿದೆ.

*ಧನ್ಯಾ

ಟಾಪ್ ನ್ಯೂಸ್

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.