Dev Raturi: ಹಾಲು ಮಾರುತ್ತಿದ್ದ ಭಾರತೀಯ ಹುಡುಗ ಚೀನಾದಲ್ಲಿ ಸೂಪರ್‌ ಸ್ಟಾರ್‌ ಆದ ಕಥೆ


ಸುಹಾನ್ ಶೇಕ್, Aug 17, 2024, 6:00 PM IST

1

ಅಂದುಕೊಂಡಂತೆ ಎಲ್ಲರ ಕನಸು ಸುಲಭವಾಗಿ ನನಸಾಗುತ್ತಿದ್ದರೆ ಇಂದು ನಾವೆಲ್ಲ ನಮ್ಮ ಕನಸುಗಳಲ್ಲೇ ನೆಲೆಸಿಕೊಂಡು ಹಾಯಾಗಿ ಜೀವನದಲ್ಲಿ ಇರುತ್ತಿದ್ದೇವೇನೋ.. ಭಗವಂತ ನಿಮ್ಮ ಕನಸು ನನಸಾಗಿಸಲು ಪರಿಶ್ರಮಪಡಬೇಕೆನ್ನುವ ನಿಯಮದ ರೇಖೆಯನ್ನು ಎಲ್ಲರಿಗೂ ಹಾಕಿದ್ದಾನೆ.

ಸಿನಿಮಾರಂಗದಲ್ಲಿ (Film Industry) ಇಂದು ಉನ್ನತಮಟ್ಟದಲ್ಲಿ ಮಿಂಚಿರುವವರು ಒಂದಲ್ಲ ಒಂದು ಕಾಲದಲ್ಲಿ ಟಿವಿಯ ಮುಂದೆಯೋ ಅಥವಾ ಥಿಯೇಟರ್‌ನಲ್ಲಿ ಪ್ರದರ್ಶನವಾಗುತ್ತಿದ್ದ ಸಿನಿಮಾ ದೃಶ್ಯದ ಮುಂದೆಯೋ ಕೂತು ತಾನು ಕೂಡ ಒಂದು ದಿನ ಹೀಗೆಯೇ ಆಗಬೇಕೆಂದು ಕನಸು ಕಾಣುತ್ತಿದ್ದವರೇ ಆಗಿದ್ದರು.

ಇಂದು ಸೂಪರ್‌ ಸ್ಟಾರ್‌ ಆಗಿದ್ದವರು ಸಾಗಿಬಂದ ಹಿಂದಿನ ದಿನಗಳಲ್ಲಿ ಯಾವುದೋ ಉದ್ಯೋಗದಲ್ಲಿ, ಯಾರಾನ್ನೋ ತನ್ನ ಗುರುವಾಗಿ ನೆನೆಸಿಕೊಂಡು ಅವರಂತೆ ಆಗುವ ಕನಸನ್ನು ಕಾಣುತ್ತಿದ್ದರು.

ಇಂಥದ್ದೇ ಭವಿಷ್ಯದ ಕನಸನ್ನು ಕಾಣುತ್ತಿದ್ದ ಮಧ್ಯಮ ವರ್ಗದ ರೈತ ಕುಟುಂಬದ ಹುಡುಗನೊಬ್ಬನ ಸ್ಪೂರ್ತಿದಾಯಕ ಜರ್ನಿಯ ಕಥೆಯಿದು.

ದೇವ್ ರತುರಿ (Dev Raturi) 1976 ರಲ್ಲಿ ಉತ್ತರಾಖಂಡ್‌ನ ತೆಹ್ರಿ ಗರ್ವಾಲ್‌ನಲ್ಲಿರುವ ಕೆಮ್ರಿಯಾ-ಸೌರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ರೈತ ಕುಟುಂಬದ ಸಾಮಾನ್ಯ ಹುಡುಗ. ಅಪ್ಪ- ಅಮ್ಮ, ಐವರು ಒಡಹುಟ್ಟಿದವರ ಜತೆ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಸ್ವಂತ ಜಮೀನಿಲ್ಲದ ಕಷ್ಟ, ಹಣಕಾಸು ಸಂಕಷ್ಟ ಈ ನಡುವೆಯೇ ಸಾಗಿದ ದಿನಗಳಲ್ಲಿ ಬಾಲ್ಯವನ್ನು ಕಳೆದವರು ದೇವ್‌ ರತುರಿ.

ಎಲ್ಲ ಮಕ್ಕಳಂತೆ ದೇವ್‌ ರತುರಿಗೆ ಆಟೋಟಗಳಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದ್ದ ಆತನಿಗೆ ಇಂಗ್ಲೀಷ್‌ ಪದಗಳು ತಲೆಗೆ ಹತ್ತಿ ಅರ್ಥವಾಗಲು 6ನೇ ತರಗತಿವರೆಗೂ ಕಾಯಬೇಕಾಯಿತು. ಆದರೆ ಪ್ರತಿನಿತ್ಯ ಬಾಡಿಗೆ ರೂಪದಲ್ಲಿ ತನ್ನ ಮೆಚ್ಚಿನ ಹೀರೋ ಬ್ರೂಸ್ಲಿ ಅವರ ಸಿನಿಮಾಗಳನ್ನು ನೋಡಲು ವಿಡಿಯೋ ಕ್ಯಾಸೆಟ್‌ ಗಳನ್ನು ತರುವುದನ್ನು ಮಾತ್ರ ದೇವ್‌ ಮರೆಯುತ್ತಿರಲಿಲ್ಲ.

ಯಾವುದೇ ಸಾಧನಗಳನ್ನು ಬಳಸದೆ ಮಾರ್ಷಲ್‌ ಆರ್ಟ್ಸ್‌ ಕಲೆಯಲ್ಲಿ( Martial arts) ನಿಪುಣತೆ ಪಡೆದು ಸಿನಿಮಾಗಳಲ್ಲಿ ನಟಿಸುತ್ತಿದ್ದ ಬ್ರೂಸ್‌ ಲೀ (Bruce Lee) ಬಾಲ್ಯದಿಂದಲೇ ದೇವ್‌ ಅವರ ಲೈಫ್‌ಗೆ ಹೀರೋ ಆಗಿ ಕಾಣ ತೊಡಗಿದರು.  ಬ್ರೂಸ್‌ ಲೀ ಸಿನಿಮಾಗಳನ್ನು ನೋಡುತ್ತಲೇ ಅವರಂತೆ ತಾನೂ ಕೂಡ ಮಾರ್ಷಲ್‌ ಆರ್ಟ್ಸ್‌ ಕಲೆಯನ್ನು ಕರಗತ ಮಾಡಿಕೊಳ್ಳಬೇಕೆನ್ನುವ ಒಂದು ಸಣ್ಣ ಆಸೆ, ಬೆಳೆಯುತ್ತಾ ಹೋದಂತೆ ಕನಸಾಗಿ ಬದಲಾಗುತ್ತದೆ.  ಏನಾದರೂ ಸರಿ ತಾನೂ ಬ್ರೂಸ್‌ ಲೀ ಅಂತೆಯೇ ಆಗಬೇಕೆಂದು ದೇವ್‌ ಅವರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುತ್ತದೆ.

ಬ್ರೂಸ್‌ ಲೀಯೇ ಮಾದರಿ.. ಸಾಧನೆಗೆ ಸಾಧನವಾದ ಮಾರ್ಷಲ್‌ ಆರ್ಟ್ಸ್..:‌ ಇಂದು ದೇವ್‌ ರತುರಿ ಸಿನಿಮಾರಂಗದಲ್ಲಿ ಜನಪ್ರಿಯ ಹೆಸರು. ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ ನಿಜ ಆದರೆ ಸ್ಪೂರ್ತಿದಾಯಕವಾಗಿತ್ತು.

ಸಿನಿಮಾರಂಗದಲ್ಲಿ ತೊಡಗಿಕೊಳ್ಳುವ ಮೊದಲು, ದೇವ್ ತನ್ನ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕಲಿಕೆಯನ್ನು ಮುಂದುವರೆಸಿ ಆ ಬಳಿಕ ಶಾಲೆ ಬಿಟ್ಟು ಇತರೆ ಕೆಲಸಗಳನ್ನು ಮಾಡುತ್ತಾರೆ. ದಿನನಿತ್ಯದ ಖರ್ಚು ವೆಚ್ಚಕ್ಕಾಗಿ ಹಾಲು ಮಾರುವುದು, ಕಾರು ಓಡಿಸುವುದು, ಹೊಟೇಲ್‌ನಲ್ಲಿ ವೇಟರ್‌ ಆಗಿ.. ಹೀಗೆ ನಾನಾ ಕೆಲಸಗಳನ್ನು ನಿರ್ವಹಿಸಿ ಕುಟುಂಬಕ್ಕೆ ನೆರವಾಗುತ್ತಾರೆ.

1998ರಲ್ಲಿ ಅವರು ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಣ್ಣನೊಂದಿಗೆ ವಾಸಿಸಲು ಮುಂಬೈಗೆ ಹೋಗುತ್ತಾರೆ. ಅಲ್ಲಿ ಕೆಲ ಸಮಯ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾರೆ. ಆಗಾಗ ತನ್ನ ಅಣ್ಣನ ಸೆಟ್‌ಗೆ ಭೇಟಿ ನೀಡುತ್ತಿದ್ದರು. ಇದೇ ಸಮಯದಲ್ಲಿ ದೇವ್‌ ಮೊದಲ ಬಾರಿಗೆ ನಟನೊಬ್ಬನನ್ನು ಭೇಟಿ ಆಗುತ್ತಾರೆ.  ಪುನೀತ್ ಇಸ್ಸಾರ್ (ಅವರು ಮಹಾಭಾರತದ ಮಹಾಕಾವ್ಯದ ಟಿವಿ ಸರಣಿಯಲ್ಲಿ ದುರ್ಯೋಧನನ ಪಾತ್ರವನ್ನು ನಿರ್ವಹಿಸಿದ್ದಾರೆ) ಆಗ ಹಿಂದೂಸ್ತಾನಿ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದರು. ಕೆಲ ಸಮಯದ ಬಳಿಕ ಪುನೀತ್‌ ಅವರು ದೇವ್‌ಗೆ ಕ್ಯಾಮರಾ ಮುಂದೆ ಕೆಲವು ಡೈಲಾಗ್‌ಗಳನ್ನು ಓದಲು ಹೇಳುತ್ತಾರೆ. ಇದ್ದಕ್ಕಿದ್ದಂತೆ ಈ ಅವಕಾಶ ಒದಗಿಬಂದಾಗ ದೇವ್‌ ಅವರಿಗೆ ಸಂತಸದ ಜತೆಯೂ ಭಯ ಕಾಡುತ್ತದೆ. ‘ಲೈಟ್ಸ್, ಕ್ಯಾಮೆರಾ ಮತ್ತು ಆಕ್ಷನ್’ ಎಂದು ಹೇಳಿದಾಗ ಬೆಳಕು ಬಂದು ಮುಖಕ್ಕೆ ಬಿದ್ದಾಗ ದೇವ್‌ ಅವರ ಬಾಯಿಯಿಂದ ಯಾವ ಡೈಲಾಗ್ಸ್‌ ಹೊರಬಾರದೆ ಕಾಲುಗಳು ನಡುಗಲು ಶುರುವಾಗುತ್ತದೆ. ಅದೇ ದಿನ ದೇವ್‌ ಅವರಿಗೆ ಮನವರಿಕೆ ಆಗುತ್ತದೆ ತಾನು ನಟನಾ ಕ್ಷೇತ್ರಕ್ಕೆ ಹೇಳಿ ಮಾಡಿಸಿದವನಲ್ಲವೆಂದು.

ಎದೆಗುಂದದ ದೇವ್ ದೆಹಲಿಗೆ ಹಿಂತಿರುಗಿ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸಕ್ಕೆ ಸೇರುತ್ತಾರೆ. ಒಂದು ದಿನ ಅವರ ಸ್ನೇಹಿತ ‘ನಿನ್ನ ಕನಸುಗಳಿಗೆ ಏನಾಯಿತು? ನೀನು ಚೀನಾಕ್ಕೆ ಹೋಗಿ ಮಾರ್ಷಲ್‌ ಆರ್ಟ್ಸ್‌ ಕಲಿಯಬೇಕೆಂದು ಕೊಂಡಿದ್ದಿಯಲ್ವಾ ಏನಾಯಿತು ಅದು?ʼ ಎಂದು ಕೇಳುತ್ತಾರೆ.

ಚೀನಾದಲ್ಲಿ ಭಾರತೀಯ ರೆಸ್ಟೊರೆಂಟ್‌ಗಳನ್ನು ಹೊಂದಿರುವ ಮಾಲೀಕರು ದೇವ್‌ ಅವರನ್ನು ಪರಿಚಯ ಮಾಡಿಕೊಡಲಾಗುತ್ತದೆ. ಅವರಿಂದ ವೇಟರ್‌ ಆಗಿ ಚೀನಾದ ರೆಸ್ಟೋರೆಂಟ್‌ ಗೆ ಸೇರುವ ಆಫರ್‌ ಬರುತ್ತದೆ. ಇದಕ್ಕೆ ದೇವ್‌ ಒಪ್ಪಿಕೊಂಡು ಚೀನಾದ ರೆಸ್ಟೋರೆಂಟ್‌ಗೆ ವೇಟರ್‌ ಆಗಿ ಸೇರುತ್ತಾರೆ.

ವೇಟರ್‌ ಆಗಿ ಚೀನಾಕ್ಕೆ ಹೋದ ಬಳಿಕ ಅವರ ಮಾರ್ಷಲ್‌ ಆರ್ಟ್ಸ್‌ ಕಲೆಯ ಕನಸು ಮತ್ತಷ್ಟು ಚಿಗುರಲು ಶುರುವಾಗುತ್ತದೆ. ಈ ಕಾರಣದಿಂದ ಬೆಳಗ್ಗೆ ವೇಟರ್‌ ಕೆಲಸ ಮಾಡಿ ರಾತ್ರಿ ಸಮಯದಲ್ಲಿ ಅವರು ಮಾರ್ಷಲ್‌ ಆರ್ಟ್ಸ್‌ ತರಬೇತಿಯನ್ನು ಪಡೆಯುತ್ತಾರೆ. ಬ್ರೂಸ್‌ ಲೀ ಕೂಡ  ಚೈನೀಸ್ ರೆಸ್ಟೊರೆಂಟ್‌ನಲ್ಲಿ ಡಿಶ್‌ವಾಶರ್ ಆಗಿ ಹೇಗೆ ಕೆಲಸ ಮಾಡುತ್ತಿದ್ದರು.

ವೇಟರ್‌ ಕೆಲಸಕ್ಕೆ ಸೇರಿದ ಐದೇ ವರ್ಷದಲ್ಲಿ ಸೂಪರ್ ವೈಸರ್‌ ಆಗಿ, ಜನರಲ್ ಮ್ಯಾನೇಜರ್‌ ಆಗುತ್ತಾರೆ. 2011ರಲ್ಲಿ ಚೀನಾದಿಂದ ಭಾರತಕ್ಕೆ ಬಂದು ಮದುವೆಯ ಬಳಿಕ ಮತ್ತೆ ಚೀನಾಕ್ಕೆ ತೆರಳುತ್ತಾರೆ. ಕೆಲಸದ ಅನುಭದ ಹಾಗೂ ಒಂದಷ್ಟು ಲಾಭದಿಂದಾಗಿ ದೇವ್‌ ಚೀನಾದಲ್ಲಿ  2013 ರಲ್ಲಿ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ನಗರದಲ್ಲಿ ತಮ್ಮದೇ ಸ್ವಂತ ಹಣದಲ್ಲಿ ರೆಡ್ ಫೋರ್ಟ್ ಎಂಬ ಭಾರತೀಯ ರೆಸ್ಟೋರೆಂಟ್ ನ್ನು ತೆರೆಯುತ್ತಾರೆ. 2015ರಲ್ಲಿ ಎರಡನೇ ರೆಸ್ಟೋರೆಂಟ್‌ನ್ನು ತೆರೆಯುತ್ತಾರೆ. ಯಶಸ್ಸಿನ ಹಾದಿಯಲ್ಲಿ ನಡೆಯುವಾಗಲೇ ಅವರಿಗೆ ಸಿನಿಮಾರಂಗದಲ್ಲಿ ನಟಿಸುವ ಅವಕಾಶವೊಂದು ಹುಡುಕಿಕೊಂಡು ಬರುತ್ತದೆ.

ಚೀನೀ ನಿರ್ದೇಶಕ ಟ್ಯಾಂಗ್ ಎನ್ನುವವರು ದೇವ್‌ ಅವರ ರೆಸ್ಟೋರೆಂಟ್‌ನಲ್ಲಿ ತನ್ನ ಸಿನಿಮಾದ ದೃಶ್ಯವೊಂದನ್ನು ಚಿತ್ರೀಕರಿಸಲು ಇಚ್ಛಿಸಿ ಅವರ ಬಳಿ ಅನುಮತಿ ಕೇಳುತ್ತಾರೆ. ಇದಲ್ಲದೆ ಭಾರತೀಯ ಪಾತ್ರವೊಂದನ್ನು ನಿಭಾಯಿಸಲು ನಿರ್ದೇಶಕ ದೇವ್‌ ಅವರಿಗೆ ಅವಕಾಶವನ್ನು ನೀಡುತ್ತಾರೆ.

“ಸ್ವಾಟ್” ಎನ್ನುವ ಸಿನಿಮಾದಲ್ಲಿ ದೇವ್‌ ರತುರಿ ಅವರಿಗೆ ನೆಗೆಟಿವ್ ರೋಲ್‌ ನೀಡಲಾಗುತ್ತದೆ. ಈ ಪಾತ್ರದಿಂದ ಅವರು ಮೊದಲ ಬಾರಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ. ಭಾರತೀಯ ನಟ ಚೀನಾದ ಸಿನಿಮಾರಂಗಕ್ಕೆ ಪ್ರವೇಶ ಪಡೆಯುತ್ತಾನೆ. ಈ ಪಾತ್ರದ ಬಳಿಕ ಅವರಿಗೆ ಚೈನೀಸ್ ಚಲನಚಿತ್ರಗಳು, ಟಿವಿ ಮತ್ತು ವೆಬ್ ಸರಣಿಗಳಿಂದ ಅವಕಾಶ ಹುಡುಕಿಕೊಂಡು ಬರುತ್ತದೆ.

‘ರಿಪಬ್ಲಿಕ್ ಆಫ್ ಚೀನಾ ಏಜೆಂಟ್’ ,’ಬಿಗ್ ಹಾರ್ಬರ್’, ʼದಿ ಆರ್ಕ್ʼ ಹೀಗೆ 20ಕ್ಕೂ ಹೆಚ್ಚಿನ ಚೀನಾದ ಸಿನಿಮಾ ಹಾಗೂ ಟಿವಿ ಶೋಗಳಲ್ಲಿ ದೇವ್‌ ನಟಿಸಿದ್ದಾರೆ.

ದೇವ್‌ ಅವರ ಲೈಫ್‌ ಸ್ಟೋರಿ ಚೀನಾ ಮಂದಿಗೆ ಸ್ಪೂರ್ತಿದಾಯಕವಾಗಿದೆ. ಎಲ್ಲಿಯವರೆಗೆ ಅಂದರೆ ಚೀನಾದ 7ನೇ ತರಗತಿ ಪಠ್ಯ ಪುಸ್ತಕದಲ್ಲಿ ದೇವ್‌ ರತುರಿ ಅವರ ಜೀವನದ ಬಗ್ಗೆ ಪಾಠವಿದೆ.

“ದೇವ್ ಅವರ ಕಥೆಯು ನಮ್ಮ ವಿದ್ಯಾರ್ಥಿಗಳ ಮೇಲೆ ಬಹಳ ಮುಖ್ಯವಾದ ಪ್ರಭಾವವನ್ನು ಬೀರಿದೆ. ರೆಸ್ಟೊರೆಂಟ್ ತೆರೆಯಲು, ವಿದೇಶಿಗರಾಗಿ ಚೀನಾದಲ್ಲಿ ಚಿತ್ರ ನಿರ್ಮಿಸಲು ಮತ್ತು ಯಶಸ್ವಿಯಾಗಲು ಅವರಿಗೆ ಸಾಕಷ್ಟು ಶ್ರಮ ಮತ್ತು ಪರಿಶ್ರಮ ಬೇಕಾಯಿತು. ಅವರ ಯಶೋಗಾಥೆಯು ಚಿಕ್ಕ ಮಕ್ಕಳಿಗೆ ತಮ್ಮ ಕನಸುಗಳನ್ನು ಮುಂದುವರಿಸಲು, ಕಷ್ಟಗಳನ್ನು ಧಿಕ್ಕರಿಸಿ ಮತ್ತು ಕಷ್ಟಪಟ್ಟು ಕೆಲಸ ಮಾಡಲು ಧೈರ್ಯವನ್ನು ಹೊಂದಲು ಪ್ರೇರೇಪಿಸುತ್ತದೆ” ಎಂದು ಕ್ಸಿಯಾನ್ ಇಂಟರ್ನ್ಯಾಷನಲ್ ಸ್ಟಡೀಸ್ ವಿಶ್ವವಿದ್ಯಾಲಯದ ಶಿಕ್ಷಕಿ ಟೀನಾ ಹೇಳುತ್ತಾರೆ.

ಯಾವ ಹೊಟೇಲ್‌ ಮ್ಯಾನೇಜ್‌ ಮೆಂಟ್‌ ಕಲಿಯದೆ ಇಂದು ದೇವ್‌ ಚೀನಾದಲ್ಲಿ 13 ರೆಸ್ಟೋರೆಂಟ್‌ ಗಳನ್ನು ಹೊಂದಿದ್ದಾರೆ. ಒಬ್ಬ ಯಶಸ್ವಿ ಸಿನಿಮಾ ನಟರಾಗಿದ್ದಾರೆ.

“ದೇವ್ ತನ್ನ ರೆಸ್ಟೋರೆಂಟ್‌ ನಲ್ಲಿ ಭಾರತೀಯ ಆಹಾರ ಸಂಸ್ಕೃತಿಯನ್ನು ಚೀನಾಕ್ಕೆ ಪರಿಚಯಿಸಿದ್ದಾರೆ. ಮಾತ್ರವಲ್ಲದೆ ಚಲನಚಿತ್ರಗಳು ಮತ್ತು ಇತರ ವಿಧಾನಗಳ ಮೂಲಕ ಚೀನಾದ ಸಂಸ್ಕೃತಿಯನ್ನು ಭಾರತಕ್ಕೆ ಹರಡಿದ್ದಾರೆ.

“ಇಂದು, ನಾನು ಚೀನಾ ಮತ್ತು ಭಾರತೀಯ ಕಾರ್ಮಿಕರು ಸೇರಿದಂತೆ ಸುಮಾರು 100 ಜನರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದೇನೆ. ನಾನು ಗಳಿಸುವ 30 ಪ್ರತಿಶತ ಹಣವು ಭಾರತ ಅಥವಾ ಚೀನಾದಲ್ಲಿ ಚಾರಿಟಿಗೆ ಹೋಗುತ್ತದೆ” ಎಂದು ದೇವ್‌ ಹೇಳುತ್ತಾರೆ.

*ಸುಹಾನ್‌ ಶೇಕ್

ಟಾಪ್ ನ್ಯೂಸ್

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

3

UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

prashanth-Kishore

Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.