Monsoon Special Recipes; ನಿಮಗೆಷ್ಟು ಗೊತ್ತು ತಗತೆ ಸೊಪ್ಪಿನ ಮಹತ್ವ ..ಇಲ್ಲಿದೆ ರೆಸಿಪಿ

ಈ ಸೊಪ್ಪು ಸೇವನೆಯಿಂದ ನಮ್ಮ ಆರೋಗ್ಯ ಹೇಗಿರುತ್ತೆ ಗೊತ್ತಾ .. !

Team Udayavani, Jul 30, 2024, 9:15 AM IST

Monsoon Special Recipes; ನಿಮಗೆಷ್ಟು ಗೊತ್ತು ತಗತೆ ಸೊಪ್ಪಿನ ಮಹತ್ವ ..ಇಲ್ಲಿದೆ ರೆಸಿಪಿ

ಮಳೆಗಾಲ ಶುರುವಾಯ್ತು ಅಂದ್ರೆ ಕರಾವಳಿ ಹಾಗೂ ಮಲೆನಾಡು ಭಾಗದ ಆಹಾರದಲ್ಲಿ ತನ್ನದೇ ಆದ ಛಾಪು ಮೂಡಿದೆ. ಯಾಕೆಂದರೆ ಮಳೆಗಾಲದಲ್ಲಿ ಮನೆಯ ಸುತ್ತ ಮುತ್ತಲು ಸಿಗುವ ಪೌಷ್ಟಿಕಾಂಶಯುಕ್ತ ಸೊಪ್ಪುಗಳನ್ನು ಬಳಕೆ ಮಾಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಅದರಂತೆ ಮಳೆಗಾಲದಲ್ಲಿ ನಮ್ಮ ಪರಿಸರದಲ್ಲೇ ಯಥೇಚ್ಛವಾಗಿ ಬೆಳೆದಿರುವ ತಗತೆ(ಟೆ)ಸೊಪ್ಪು ಕಾಣಸಿಗುತ್ತದೆ. ಇದನ್ನು ತುಳುವಿನಲ್ಲಿ ತಜಂಕ್‌, ತೊಜಂಕ್ ಹೀಗೆ ಆಡುಭಾಷೆಯಲ್ಲಿ ನಾನಾ ರೀತಿಯಲ್ಲಿ ಕರೆಯುತ್ತಾರೆ. ಕರಾವಳಿಯಲ್ಲಿ ಆಷಾಢಮಾಸದಲ್ಲಿ ಇದನ್ನು ಅಡುಗೆ ಮಾಡಿ ತಿನ್ನಬೇಕೆಂಬ ಸಂಪ್ರದಾಯವೂ ನಮ್ಮ ತುಳುನಾಡಿನಲ್ಲಿ ಇವತ್ತಿಗೂ ಜನಪ್ರಿಯವಾಗಿದೆ.

ಈ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಲ್ಲದೇ ಇದರಲ್ಲಿ ಜೌಷಧೀಯ ಗುಣಗಳನ್ನು ಹೊಂದಿದ್ದು ಆಯುರ್ವೇದದಲ್ಲಿ ಇದನ್ನು ಉಪಯೋಗಿಸುತ್ತಾರೆ. ಈ ಸೊಪ್ಪಿನಿಂದ ದೋಸೆ, ಪ್ರತೋಡೆ, ವಡೆ, ಸುಕ್ಕ, ಪಲ್ಯ… ಹೀಗೆ ನಾನಾ ಬಗೆಯ ತಿಂಡಿ-ತಿನಿಸುಗಳನ್ನು ಮಾಡುತ್ತಾರೆ.

ಹಾಗಾದರೆ ಬನ್ನಿ ನಾವಿಂದು ನಿಮಗಾಗಿ ವಿಭಿನ್ನ ಟೇಸ್ಟ್‌ ನ ತಗತೆ ಸೊಪ್ಪಿನ ವಡೆ ಹಾಗೂ ದೋಸೆಯನ್ನು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದು.

ತಗತೆ ಸೊಪ್ಪಿನ ವಡೆ
ಬೇಕಾಗುವ ಸಾಮಗ್ರಿಗಳು
ತಗತೆ ಸೊಪ್ಪು(ಚಿಗುರು ಎಲೆ)-4 ಕಪ್‌(ಸಣ್ಣದಾಗಿ ಹೆಚ್ಚಿದ್ದು),ಬೆಳ್ತಿಗೆ ಅಕ್ಕಿ-ಅರ್ಧ ಕಪ್‌(2ಗಂಟೆ ನೆನೆಸಿದ ಅಕ್ಕಿ),ತೊಗರಿ ಬೇಳೆ-1/4 ಕಪ್‌(2 ಗಂಟೆ ನೆನೆಸಿದ ಬೇಳೆ), ಒಣಮೆಣಸು (ಬ್ಯಾಡಗಿಮೆಣಸು)-6ರಿಂದ8, ತೆಂಗಿನ ತುರಿ-1/4ಕಪ್‌, ಕೊತ್ತಂಬರಿ-2ಚಮಚ, ಹುಣಸೇ ಹಣ್ಣು(ಲಿಂಬೆ ಗಾತ್ರದಷ್ಟು), ಹಿಂಗಿನ ನೀರು ಸ್ವಲ್ಪ, ಎಣ್ಣೆ-ಕರಿಯಲು,ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಚಿಗುರಿದ ತಗತೆ ಎಲೆಗಳನ್ನು ಬಿಡಿಸಿ ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿಜಾರಿಗೆ ನೆನೆಸಿದ ಅಕ್ಕಿ,ತೊಗರಿ ಬೇಳೆ, ಒಣಮೆಣಸು, ಕೊತ್ತಂಬರಿ, ಹುಣಸೇ ಹಣ್ಣು ಹಾಗೂ ತೆಂಗಿನ ತುರಿಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿಕೊಳ್ಳಿ (ನುಣ್ಣಗೆ ರುಬ್ಬಬಾರದು). ರುಬ್ಬಿಟ್ಟ ಮಸಾಲೆಗೆ ಸ್ವಲ್ಪ ಹಿಂಗಿನ ನೀರನ್ನು ಬೆರೆಸಿ ಅದಕ್ಕೆ ತಗತೆ ಸೊಪ್ಪನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತದನಂತರ ಒಲೆಯ ಮೇಲೆ ಒಂದು ಬಾಣಲೆಯಿಟ್ಟು ಎಣ್ಣೆ ಹಾಕಿ ಕಾದನಂತರ ಮಾಡಿಟ್ಟ ಹಿಟ್ಟನ್ನು ಚಿಕ್ಕ-ಚಿಕ್ಟ ಉಂಡೆಗಳನ್ನಾಗಿ ಮಾಡಿ ತೆಳ್ಳಗೆ ತಟ್ಟಿ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಆರೋಗ್ಯಭರಿತ ತಗತೆ ಸೊಪ್ಪಿನ ವಡೆ ಸವಿಯಲು ಸಿದ್ಧ.

ತಗತೆ ಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-2ಕಪ್‌, ತಗತೆ ಸೊಪ್ಪು-1ಕಪ್‌, ಕಡ್ಲೆಬೇಳೆ-2ಚಮಚ, ಉದ್ದಿನ ಬೇಳೆ-2ಚಮಚ, ಮೆಂತೆ-1/4ಚಮಚ, ಕೊತ್ತಂಬರಿ-2ಚಮಚ, ಜೀರಿಗೆ-1ಚಮಚ, ಒಣಮೆಣಸು-7ರಿಂದ8, ಎಣ್ಣೆ-3ಚಮಚ, ಹುಣಸೇ ಹಣ್ಣು-ಬೆಲ್ಲ(ನೆಲ್ಲಿ ಗಾತ್ರದಷ್ಟು), ಕರಿಬೇವು-2ಎಸಳು, ತೆಂಗಿನ ತುರಿ-ಅರ್ಧಕಪ್‌, ಹಿಂಗು-ಸ್ವಲ್ಪ, ಅರಿಶಿನ ಪುಡಿ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ತಗತೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ 3 ಚಮಚ ಎಣ್ಣೆ ಹಾಕಿ ಅದಕ್ಕೆ ಕಡ್ಲೆಬೇಳೆ, ಉದ್ದಿನಬೇಳೆ, ಮೆಂತೆ ಹಾಕಿ ಸ್ವಲ್ಪ ಕೆಂಪಾಗುವ ತನಕ ಹುರಿಯಿರಿ. ತದನಂತರ ಕೊತ್ತಂಬರಿ, ಜೀರಿಗೆ, ಒಣಮೆಣಸು, ಕರಿಬೇವಿನ ಎಸಳು ಹಾಕಿ ಪುನಃ ಸ್ವಲ್ಪ ಹುರಿಯಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿಜಾರಿಗೆ ತೆಂಗಿನ ತುರಿ, ಹಿಂಗು, ಹುಣಸೇ ಹಣ್ಣು, ಬೆಲ್ಲ, ಅರಿಶಿನ, ನೆನೆಸಿಟ್ಟ ಅಕ್ಕಿ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಾಡಿಟ್ಟ ಮಸಾಲೆಯನ್ನು ಹಾಕಿ,ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತದನಂತರ ಹೆಚ್ಚಿಟ್ಟ ತಗತೆ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.ನಂತರ ಒಲೆಯ ಮೇಲೆ ಕಾವಲಿ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ,ಸೌಟಿನಲ್ಲಿ ಮಾಡಿಟ್ಟ ತಗತೆ ಸೊಪ್ಪಿನ ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕಿ ಎರಡು ಕಡೆ ಎಣ್ಣೆ ಹಾಕಿ ಬೇಯಿಸಿದರೆ ಸ್ವಾದಿಷ್ಟಕರವಾದ ತಗತೆ ಸೊಪ್ಪಿನ ದೋಸೆ ಸವಿಯಲು ಸಿದ್ಧ.

-ಶ್ರೀರಾಮ್ ಜಿ ನಾಯಕ್

ಟಾಪ್ ನ್ಯೂಸ್

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

30 ಟಿವಿ ಚಾನೆಲ್‌, 2 ಕ್ರಿಕೆಟ್‌ ಟೀಮ್.. ಇವರೇ ನೋಡಿ ಭಾರತದ ಶ್ರೀಮಂತ ಸಿನಿಮಾ ನಿರ್ಮಾಪಕ

30 ಟಿವಿ ಚಾನೆಲ್‌, 2 ಕ್ರಿಕೆಟ್‌ ಟೀಮ್.. ಇವರೇ ನೋಡಿ ಭಾರತದ ಶ್ರೀಮಂತ ಸಿನಿಮಾ ನಿರ್ಮಾಪಕ

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

1-asaasas

Haryana ಗೆಲ್ಲಲು ಕೈ ಕಸರತ್ತು: ರಾಹುಲ್ ಭೇಟಿಯಾದ ವಿನೇಶ್, ಬಜರಂಗ್ !

6-WLD

Weight Loss Drinks: ತೂಕ, ಕೊಬ್ಬು ಕಡಿಮೆ ಮಾಡಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

arrested

Ganesh Chaturthi ಪೋಸ್ಟ್‌ ಡಿಲೀಟ್‌: ಪ್ರಾಂಶುಪಾಲ ಸೆರೆ

1-tkp

Union Finance Secretary ಹುದ್ದೆಗೆ ತುಹಿನ್‌ ಕಾಂತಾ ಪಾಂಡೆ ನೇಮಕ

1-aaaaaaaa

Train ಚಲಿಸುವಾಗ ಕೊಂಡಿ ತುಂಡು: ಬೇರ್ಪಟ್ಟ ಬೋಗಿ

ED

Amtech Group 5 ಸಾವಿರ ಕೋಟಿ ರೂ. ಆಸ್ತಿ ಜಪ್ತಿ: 27,000 ಕೋಟಿ ವಂಚನೆ

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.