Food recipes ಈ ಪರೋಟ ಮಾಡೋದೂ ಸಿಂಪಲ್ ಆರೋಗ್ಯಕ್ಕೂ ಸೂಪರ್
ಶ್ರೀರಾಮ್ ನಾಯಕ್, Oct 15, 2023, 10:30 AM IST
ಸಾಮಾನ್ಯವಾಗಿ ಪರೋಟ ಎಂದ ಕ್ಷಣ ನಮ್ಮ ಮನ್ಸಸಿಗೆ ಬರುವುದು ಆಲೂ ಪರೋಟ, ಗೋಬಿ ಪರೋಟ, ಪನ್ನೀರ್ ಪರೋಟ ಹೀಗೆ ವಿವಿಧ ರೀತಿಯಲ್ಲಿ ಪರೋಟವನ್ನು ನೀವು ತಿಂದಿರಬಹುದು ಆದರೆ ನುಗ್ಗೆಕಾಯಿಂದ ಮಾಡುವ ಪರೋಟದ ರುಚಿಯನ್ನು ಸವಿದು ನೋಡಿದ್ದಿರಾ ? ಇಲ್ಲವೆಂದರೆ ನೀವೇ ಮನೆಯಲ್ಲಿ ಅತಿ ಸುಲಭ ವಿಧಾನದಲ್ಲಿ ನುಗ್ಗೆಕಾಯಿ ಪರೋಟ ಮಾಡಬಹುದು.
ನುಗ್ಗೆಕಾಯಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ ಆಹಾರ. ಇದರಲ್ಲಿರುವ ಔಷಧೀಯ ಗುಣಗಳ ಕಾರಣದಿಂದಾಗಿ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ನುಗ್ಗೆಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಕ್ಯಾಲ್ಸಿಯಂ ಅಂಶವು ಹೆಚ್ಚಾಗಿದೆ.
ಬನ್ನಿ ಹಾಗಾದರೆ ಅತೀ ಸರಳ ವಿಧಾನದಲ್ಲಿ ನುಗ್ಗೆಕಾಯಿ ಪರೋಟ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ…
ನುಗ್ಗೆಕಾಯಿ ಪರೋಟ
ಬೇಕಾಗುವ ಸಾಮಗ್ರಿಗಳು
ನುಗ್ಗೆ ಕಾಯಿ-2,ಗೋಧಿ ಹಿಟ್ಟು-1ಕಪ್, ಬಿಳಿ ಎಳ್ಳು-2 ಚಮಚ,ಕೊತ್ತಂಬರಿ ಪುಡಿ-1ಚಮಚ, ಮೆಣಸಿನ ಪುಡಿ(ಖಾರದ ಪುಡಿ)-2 ಚಮಚ, ಹಿಂಗು- ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ, ಸಣ್ಣಗೆ ಹೆಚ್ಚಿದ ಮೆಣಸಿನ ಕಾಯಿ-1, ಕೊತ್ತಂಬರಿ ಸೊಪ್ಪು-ಸ್ವಲ್ಪ, ಎಣ್ಣೆ, ಆಮ್ಚೂರ್ ಪುಡಿ-ಸ್ವಲ್ಪ, ಅರಶಿನ ಪುಡಿ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
-ಮೊದಲಿಗೆ ನುಗ್ಗೆಯನ್ನು ಸ್ವಚ್ಛವಾಗಿ ತೊಳೆದು,ಚೆನ್ನಾಗಿ ಬೇಯಿಸಿಕೊಳ್ಳಿ.ನಂತರ ಬೇಯಿಸಿದ ನುಗ್ಗೆಯನ್ನು ಹಿಸುಕಿ ರಸವನ್ನು ತೆಗೆದುಕೊಳ್ಳಿ.
-ಒಂದು ಪಾತ್ರೆಗೆ ನುಗ್ಗೆಯ ರಸವನ್ನು ಹಾಕಿ ಅದಕ್ಕೆ ಗೋಧಿ ಹಿಟ್ಟು,ಮೆಣಸಿನ ಪುಡಿ,ಕೊತ್ತಂಬರಿ ಪುಡಿ,ಆಮ್ಚೂರ್ ಪುಡಿ, ಹಿಂಗು,ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
-ನಂತರ ಸಣ್ಣಗೆ ಹೆಚ್ಚಿದ ಮೆಣಸಿನ ಕಾಯಿ,ಬಿಳಿ ಎಳ್ಳು ,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಪುನಃ ಮಿಶ್ರಣ ಮಾಡಿಕೊಳ್ಳಿ.
-ಆಬಳಿಕ ಅಗತ್ಯಕ್ಕೆ ಅನುಗುಣವಾಗಿ ನೀರು ಸೇರಿಸಿ(ಬೇಕಿದ್ದರೆ ಮಾತ್ರ) ಹಿಟ್ಟನ್ನು ಮೃದುವಾಗಿ ಬೆರೆಸಿಕೊಳ್ಳಿ ನಂತರ ಸ್ವಲ್ಪ ಸಮಯ ಹಾಗೇ ಬಿಡಿ.
-ತದನಂತರ ಹಿಟ್ಟನ್ನು ಉಂಡೆ ಮಾಡಿ ನಿಮಗೆ ಬೇಕಾಗುವ ಆಕಾರದಲ್ಲಿ ಲಟ್ಟಿಸಿರಿ.ಲಟ್ಟಿಸುವಾಗ ಸ್ವಲ್ಪ ಎಣ್ಣೆಯನ್ನು ಹಾಕಿ ಲಟ್ಟಿಸಿರಿ.
-ನಂತರ ಕಾದ ತವಾದ ಮೇಲೆ ಹಾಕಿಕೊಂಡು ಎಣ್ಣೆಯಿಂದ ಕಾಯಿಸಿರಿ.ಪರೋಟ ಕೆಂಪಗಾದ ಮೇಲೆ ತವಾದ ಮೇಲಿಂದ ತೆಗೆಯಿರಿ.
-ಬಿಸಿ-ಬಿಸಿ ಇರುವಾಗಲೇ ತಿನ್ನಲು ಬಲು ರುಚಿಯಾಗಿರುತ್ತದೆ ನುಗ್ಗೆಕಾಯಿ ಪರೋಟ.
-ಶ್ರೀರಾಮ್ ಜಿ. ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.